ದಿನಕ್ಕೊಂದು ಕಥೆ ಮಕ್ಕಳಿಗಾಗಿ ಅನುಪಮಾ ನಿರಂಜನರವರು ಬರೆದ ಕಥಾ ಮಾಲಿಕೆ. ಸರಳ, ಪುಟ್ಟ ಕಥೆಗಳನ್ನೊಳಗೊಂಡ ೧೨ ಸಂಪುಟಗಳಲ್ಲಿ ಇದು ಪ್ರಕಾಶಿತಗೊಂಡಿತು. ಮೈಸೂರಿನ ಡಿ ವಿ ಕೆ ಮೂರ್ತಿ ಇದರ ಪ್ರಕಾಶಕರು.

ದಿನಕ್ಕೊಂದು ಕಥೆ
ಲೇಖಕರುಅನುಪಮಾ ನಿರಂಜನ
ದೇಶಭಾರತ
ಭಾಷೆಕನ್ನಡ
ಪ್ರಕಾರಶಿಶು ಸಾಹಿತ್ಯ
ಪ್ರಕಾಶಕರುಡಿ. ವಿ. ಕೆ. ಮೂರ್ತಿ

ಪ್ರಾಮುಖ್ಯತೆ

ಬದಲಾಯಿಸಿ

ದಿನಕ್ಕೊಂದು ಕಥೆ ಕನ್ನಡದಲ್ಲಿ ಪುರಾಣ ಕಥೆಗಳನ್ನು, ಇತರ ದೇಶಗಳ ಕಥೆಗಳನ್ನು, ಜಾನಪದ ಕಥೆಗಳನ್ನು ಒಟ್ಟುಗೂಡಿಸಿ ಸರಳವಾಗಿ ಹೆಣೆಯಲಾದ ಸಂಪುಟಗಳ ಮಾಲಿಕೆ. ವರ್ಷವಿಡೀ ದಿನಕ್ಕೊಂದು ಕಥೆಯಂತೆ ಓದಿಕೊಂಡು ಹೋಗಬಲ್ಲಂತೆ ೩೬೫ ಕಥೆಗಳಿವೆ ಈ ಸಂಪುಟಗಳಲ್ಲಿ. ಪುಸ್ತಕದ ತಮ್ಮ ಮುನ್ನುಡಿಯಲ್ಲಿ ಸ್ವತಃ ಅನುಪಮಾ ನಿರಂಜನ ಈ ವಿಷಯವನ್ನು: "ಹೇಗೂ ನೂರಾರು ಕಥೆ ಬರೀತೀರಿ. ಮುನ್ನೂರ ಅರವತ್ತೈದೇ ಬರೆದ್ಬಿಡಿ. ದಿನಕ್ಕೊಂದು ಕಥೆಯಾಗ್ತದೆ" ಎಂದರು ಶ್ರೀ ನಿರಂಜನ, ಈ‌ ರೀತಿ 'ದಿನಕ್ಕೊಂದು ಕಥೆ'ಯ ಉದಯವಾಯಿತು. ಎಂದು ತಿಳಿಸುತ್ತಾರೆ.

ಸಾಹಿತ್ಯ

ಬದಲಾಯಿಸಿ

ಈ ಸಂಪುಟಗಳಲ್ಲಿ ಮೂಡುವ ಸಾಹಿತ್ಯ ಅತ್ಯಂತ ಸರಳವಾದದ್ದು. ಸಣ್ಣ ಮಕ್ಕಳಿಗೆ ಬಹು ಬೇಗ ಅರ್ಥೈಸಿಕೊಳ್ಳಲು ಸಾಧ್ಯವಾಗುವಂತಹ ಭಾಷಾ ಬಳಕೆ ಈ ಸಾಹಿತ್ಯದ ವಿಶಿಷ್ಟತೆ. ಆದರೂ ಹಲವು ಅಕ್ಬರ್ ಬೀರ್ಬಲ್ ಕಥೆಗಳು, ತೆನಾಲಿ ರಾಮನ ಕಥೆಗಳನ್ನು ಹೊಂದುವಂತೆ ಬದಲಾಯಿಸಿರುವ ಪ್ರಯೋಗ ಪುಸ್ತಕದಲ್ಲಿದೆ. ಹೆಚ್ಚೇನೂ ವಿವರಗಳಿಲ್ಲದೆ, ಪಂಚತಂತ್ರಗಳಂತೆ ಯಾವುದೇ ನೀತಿಗೂ‌ ಕಟ್ಟಿಕೊಂಡಿಲ್ಲದ ಕಥೆಗಳು ಈ ಪುಸ್ತಕದಲ್ಲಿ ಕಂಡುಬರುತ್ತವೆ.

ಈ‌ ಲೇಖನಗಳನ್ನೂ ನೋಡಿ

ಬದಲಾಯಿಸಿ