ದಾನಶಾಲಾ ಮಠದ ಚಂದ್ರಪ್ರಭ ಸ್ವಾಮಿ ಬಸದಿ

ಒಳಾಂಗಣ ವಿನ್ಯಾಸ ಬದಲಾಯಿಸಿ

ಶ್ರೀ ದಾನಶಾಲ ಮಠದ ಈ ಬಸದಿಯು ಮಠದ ಒಳಗಡೆ ಪ್ರಾಂಗಣದಲ್ಲಿಉತ್ತಾರಾಭಿಮುಖವಾಗಿ ನಿರ್ಮಾಣವಾಗಿದೆ. ಅದುದರಿಂದ ಇದಕ್ಕೆ ವಿಶೇಷವಾದ ಭದ್ರತೆ ಇದೆ.

ಇತಿಹಾಸ ಬದಲಾಯಿಸಿ

ಇತಿಹಾಸವು ತಿಳಿಸುವಂತೆ ಸ್ಥಳೀಯ ಭೈರರಸ ಒಡೆಯನು ಪನಸೋಗೆಯ ಧರ್ಮಪೀಠದಲ್ಲಿ ಪಟ್ಟಾಭಿಷಿಕ್ತರಾಗಿದ್ದ ಲಲಿತಕೀರ್ತಿ ಭಟ್ಟಾರಕರನ್ನು ಕಾರ್ಕಳಕ್ಕೆ ಆಹ್ವಾನಿಸಿ ಮಠವನ್ನು ನಿರ್ಮಿಸಿ ಅದರೊಳಗೆ ಚಿಕ್ಕದಾದ ಈ ಸುಂದರ ಬಸದಿಯನ್ನು ನಿರ್ಮಿಸಿದ. ಈ ಬಸದಿಗೆ ನಮಸ್ಕಾರ ಮಂಟಪ ಮತ್ತು ಗರ್ಭಗೃಹಗಳೆಂಬ ಎರಡು ಮಂಟಪಗಳಿವೆ. ಎದುರಿನ ನಮಸ್ಕಾರ ಮಂಟಪಕ್ಕೆ ಮತ್ತು ಗರ್ಭಗೃಹಕ್ಕೆ ಸುತ್ತುವರಿದು ಒಂದು ಪ್ರಕ್ಷಿಣಾ ಪಥವಿದೆ. ಇದಕ್ಕೆ ಅಮೃತಶೀಲೆಯ ಫಲಕಗಳನ್ನು ಹಾಕಿ ಆಕರ್ಷಕಗೊಳಿಸಲಾಗಿದೆ. ಹಾಗೆಯೇ ನಮಸ್ಕಾರ ಮಂಟಪದ ಮಧ್ಯದಲ್ಲಿ ಚೈನಿಸ್ ಹೆಂಚುಗಳನ್ನು ಹಾಸಲಾಗಿದೆ. ಗರ್ಭಗೃಹದಲ್ಲಿ ಪಂಚಲೋಹದಿಂದ ಮಾಡಿದ ಖಡ್ಗಾಸನ ಭಂಗಿಯ ವಿಗ್ರಹದಲ್ಲಿ ಭಗವಾನ್ ‌ಚಂದ್ರನಾಥ್ ಸ್ವಾಮಿಯು ವಿರಾಜಮಾನರಾಗಿದ್ದಾರೆ. ಕಾಲುಗಳ ಪ್ರದೇಶದಲ್ಲಿ ವಿಜಯಯಕ್ಷ ಮತ್ತು ಜ್ವಾಲಾಮಾಲಿನಿಯಕ್ಷಿ ನಿಂತ ಭಂಗಿಯಲ್ಲಿ ಕಂಗೊಳಿಸುತ್ತಿದ್ದಾಳೆ. ಮಾತೆ ಕೂಷ್ಮಾಂಡಿನಿ ದೇವಿಯು ಸನ್ನಿಹಿತರಾಗಿ ಈ ಸಮಗ್ರ ಭಗವತ್ ಮಂಟಪವನ್ನು ಪವಿತ್ರೀಕರಿಸಿದ್ದಾರೆ. ಹಾಗೂ ಈ ಸಮಗ್ರ ರಾಜ್ಯದ ಹಿತರಕ್ಷಣೆಯನ್ನು ನೋಡುತ್ತಿದ್ದಾರೆ.[೧]

ವಿನ್ಯಾಸ ಬದಲಾಯಿಸಿ

ಶ್ರೀ ಚಂದ್ರಪ್ರಭ ಸ್ವಾಮಿಯ ಹಿಂದೆ ಲೋಹದ ಸುಂದರವಾದ ಪ್ರಭಾವಳಿ ಇದೆ. ಅದರಲ್ಲಿ ಸ್ವಾಮಿಯ ಎರಡೂ ಬದಿಗಳಲ್ಲಿ ಅಂಕಣಗಳನ್ನು ಹೊಂದಿದ ಕಂಬದಂತಹ ರಚನೆಗಳಿದ್ದು ಅವುಗಳ ಮೇಲ್ಗಡೆ ಮಕರ ಮೃಗಗಳೂ ಅವುಗಳ ಬಾಯಿಗಳಿಂದ ಹೊರಟ ಮಕರತೋರಣವೂ ಈ ಫ್ರಭಾವಳಿಯನ್ನು ಅಲಂಕಾರಗೊಳಿಸಿವೆ. ಇದರ ಹೊರ ಭಾಗದಲ್ಲಿಎರಟು ಹಂತದ ಅಲಂಕಾರಿಕ ರಚನೆಗಳು ಇವೆ. ಸ್ವಾಮಿಯ ಇಕ್ಕೆಲೆಗಳಲ್ಲಿ ಫ್ರಭಾವಳಿಯಲ್ಲಿ ಚಾಮರಗಳಿವೆ. ಶಿರಸ್ಸಿನ ಮೇಲ್ಗಡೆ ಮುಕ್ಕೋಡೆ ಇದೆ. ಫ್ರಭಾವಳಿಯ ಮಧ್ಯದಲ್ಲಿ ಎಲ್ಲಕ್ಕಿಂತ ಮೇಲೆ ಕೀರ್ತಿ ಮುಖವಿದೆ. ಇವೆಲ್ಲವೂ ವಿಜಯನಗರಕಾಲದ ಪ್ರತಿಮಾಶಾಸ್ತ್ರಕ್ಕೆ ಕೊಟ್ಟ ಆದರ್ಶ ಕೊಡುಗೆಯಾಗಿದೆ.

ಶಿಕ್ಷಣ ಬದಲಾಯಿಸಿ

ಶ್ರೀ ಜೈನ ಮಠವು ಹಿಂದೆ ದಾನಧರ್ಮಗಳಿಗೆ ಹೆಸರುವಾಸಿಯಾಗಿದ್ದಂತೆ ಶಿಕ್ಷಣವನ್ನು ಒದಗಿಸುವ ಮೂಲಕೇಂದ್ರವೂ ಆಗಿತ್ತು. ಈ ಮಠದ ಭಟ್ಟಾರಕರಾದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ರಾಜಯೋಗಿಗಳೂ ಆಗಿ ಸ್ಥಳೀಯ ಭೈರವ ಅರಸರಿಗೆ ರಾಜ ಗುರುಗಳೂ ಆಗಿದ್ದರು .ಕಾಲಕಾಲಕ್ಕೆ ಅರಸರಿಗೆ ಮಾರ್ಗದರ್ಶನವನ್ನುಕೊಟ್ಟು ಮುನ್ನಡೆಸುತ್ತಿದ್ದರು. ಶ್ರೀ ಚಂದ್ರಪ್ರಭ ಸ್ವಾಮಿಯು ಸನ್ನಿಹಿತರಾಗಿರುವ ಈ ಮಠವುಇತಿಹಾಸ ಕಾಲದಲ್ಲಿ ಪಸಿದ್ಧವಾದ ಒಂದುಆಧ್ಯಾತ್ಮಿಕ ಕೇಂದ್ರವಾಗಿತ್ತು. ಇಲ್ಲಿಯ ಭಟ್ಟರಕರು ರಾಜ ತಾಂತ್ರಿಕತೆಯಲ್ಲಿ ಮಾರ್ಗದರ್ಶಕರಾಗಿದ್ದರಂತೆ ಧ್ಯಾನಯೋಗಿಗಳು ಆಗಿ ಸಾಹಿತ್ಯ ಕಲೆಗಳ ಪುರೋಭಿವೃದ್ಧಿಗೆ ಆಶ್ರಯದಾತರೂ ಆಗಿದ್ದರು. ಸ್ವತಃ ವಿದ್ವಾಂಸರಾಗಿದ್ದಇಲ್ಲಿಯ ಭಟ್ಟಾರಕರೊಬ್ಬರು ಜೈನ ಮಹಾಪುರಾಣಕ್ಕೆ ಶಬ್ದಾರ್ಥ ವಿವರಣೆಯನ್ನು ಸಮಗ್ರ ವ್ಯಾಖ್ಯಾನವನ್ನೂ ರಚಿಸಿದ್ದರು. ಈ ಮಹದ್ಗ್ರಂಥವು ತಾಡಪತ್ರಗಳ ರೂಪದಲ್ಲಿ ಇಂದಿಗೂ ಮೂಡುಬಿದಿರೆಯ ಶ್ರೀ ರಮಾರಾಣ ಜೈನ ಸಂಶೋಧನಾ ಕೇಂದ್ರದಲ್ಲಿಇದೆ. ಅದರಂತೆ ಇಲ್ಲಿಯ ಹಲವಾರು ಜಿನ ಚೈತ್ಯಾಲಯಗಳ ನಿರ್ಮಾಣಕ್ಕೆ ಮಾರ್ಗದರ್ಶನ ಕೊಡುತ್ತಿದ್ದರು. ಆ ಪರಂಪರೆ ಇಂದಿಗೂ ಮುಂದುವರೆದುಕೊಂಡು ಬಂದಿದೆ.

ಉಲ್ಲೇಖಗಳು ಬದಲಾಯಿಸಿ

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. pp. ೧೭.