ದಾತಿವಾರ ಕೋಟೆ
ದಾತಿವಾರ ಕೋಟೆಯನ್ನು ಹಿರಾಡೊಂಗರ ಎಂದೂ ಕರೆಯುತ್ತಾರೆ. ಇದು ಮಹಾರಾಷ್ಟ್ರದ ಪಾಲ್ಘರ ಜಿಲ್ಲೆಯ ವಸೈನಿಂದ ೭೨ ಕಿಮೀ ದೊರದಲ್ಲಿದೆ. ಈ ಕೋಟೆಯು ವೈತರ್ಣಾನದಿಯ ಪಕ್ಕದಲ್ಲಿರುವ ಸಣ್ಣ ಬೆಟ್ಟದ ಮೇಲೆ ಕಮಾಂಡಿಂಗ್ ತುದಿಯಲ್ಲಿದೆ .ಇದು ಅರ್ನಾಲಾ ಕೋಟೆಯವರೆಗೆ ಸಾಗುತ್ತದೆ
ದಾತಿವಾರ ಕೋಟೆ | |
---|---|
ಮಲಬಾರ್ ಸಮುದ್ರ ತೀರ ಇದರ ಭಾಗ | |
ಪಾಲ್ಘರ್ ಜಿಲ್ಲೆ, ಮಹಾರಾಷ್ಟ್ರ | |
ನಿರ್ದೇಶಾಂಕಗಳು | 19°30′51″N 72°46′20″E / 19.51417°N 72.77222°E |
ಶೈಲಿ | ಸಮುದ್ರದ ಕೋಟೆ |
ಎತ್ತರ | ೩೦೦ ಅಡಿ. |
ಸ್ಥಳದ ಮಾಹಿತಿ | |
ಒಡೆಯ | India,Government of India |
ಇವರ ಹಿಡಿತದಲ್ಲಿದೆ | (೧೫೪೮-೧೬೯೯) ಯುನೈಟೆಡ್ ಕಿಂಗ್ಡಮ್
|
ಇವರಿಗೆ ಮುಕ್ತವಾಗಿದೆ ಸಾರ್ವಜನಿಕರಿಗೆ | Yes |
ಪರಿಸ್ಥಿತಿ | ಅವಶೇಷ |
ಸ್ಥಳದ ಇತಿಹಾಸ | |
ಸಾಮಗ್ರಿಗಳು | ಕಲ್ಲು |
ಇತಿಹಾಸ
ಬದಲಾಯಿಸಿಕೋಟೆಯ ಇತಿಹಾಸದ ಹೆಚ್ಚಿನ ವಿವರಣೆಗಳೇನೂ ದೊರೆತಿಲ್ಲ. ಇದನ್ನು ಪೋರ್ಚುಗೀಸರು ನಿರ್ಮಿಸಿರಬಹುದೆಂದು ಅಂದಾಜಿಸಲಾಗಿದೆ. [೧]
ತಲುಪುವುದು ಹೇಗೆ
ಬದಲಾಯಿಸಿಇದರ ಹತ್ತಿರದ ಪಟ್ಟಣ ಸಫಲೆ. ಇದು ಮುಂಬೈನಿಂದ ರೈಲಿನ ಮೂಲಕ ೧೦೭ ಕಿಮೀ (೬೬ ಮೈಲಿ) ಇದೆ. ಕೋಟೆಯ ಮೂಲ ಗ್ರಾಮವು ದಾತಿವೇರ್ ಅಥವಾ ದಾಂತಿವೇರ್ ಆಗಿದೆ. ಇದು ರಸ್ತೆಯ ಮೂಲಕ ಸಫಲೆಯಿಂದ ೧೫-೨೦ ಕಿಮೀ (೯-೧೨ ಮೈಲಿ) ದೂರದಲ್ಲಿದೆ. ಸಫಲೆ ಮತ್ತು ಎಡ್ವಾನ್‌ನಲ್ಲಿ ಉತ್ತಮ ಹೋಟೆಲ್‌ಗಳಿವೆ. ಟ್ರೆಕ್ಕಿಂಗ್ ಮಾರ್ಗವು ದಾತಿವಾರೆ ಗ್ರಾಮದ ಉತ್ತರದ ಗುಡ್ಡದಿಂದ ಪ್ರಾರಂಭವಾಗುತ್ತದೆ. ಈಗ ಕೋಟೆಯವರೆಗೆ ಅತ್ಯಂತ ಸುರಕ್ಷಿತ ಮತ್ತು ವಿಶಾಲವಾದ ರಸ್ತೆ ಇದೆ. ಕೋಟೆಯ ಪ್ರವೇಶ ದ್ವಾರವನ್ನು ತಲುಪಲು ಸುಮಾರು ಅರ್ಧ ಗಂಟೆ ತೆಗೆದುಕೊಳ್ಳುತ್ತದೆ. [೨]
ನೋಡಬೇಕಾದ ಸ್ಥಳ
ಬದಲಾಯಿಸಿಕೋಟೆಯ ಕೆಲವು ಗೋಡೆಗಳು ಮತ್ತು ಪಾಳುಬಿದ್ದ ಬುರುಜುಗಳು ಬೇಟಿ ನೀಡಲು ಸೂಕ್ತವಾಗಿವೆ. 19°30′51″N 72°46′20″E / 19.51417°N 72.77222°E
ಉಲ್ಲೇಖಗಳು
ಬದಲಾಯಿಸಿ- ↑ Executive Editor and secretary. "Gazetteer of Bombay presidency". www.gazetteers.maharashtra.gov.in. Government of Maharashtra. Retrieved 23 March 2020.
{{cite web}}
:|last=
has generic name (help) - ↑ Young Zingaro Trekkers (June 1995). Sangati Sahyadri cha (First ed.). Mumbai: Sahyadri Prakashan. p. 212.