ದರ್ಜಿ
ದರ್ಜಿಯು (ಚಿಪ್ಪಿಗ) ಉಡುಪುಗಳನ್ನು ವೃತ್ತಿಪರವಾಗಿ ತಯಾರಿಸುವ, ದುರಸ್ತಿಮಾಡುವ ಅಥವಾ ಮಾರ್ಪಡಿಸುವ ವ್ಯಕ್ತಿ, ವಿಶೇಷವಾಗಿ ಸೂಟ್‍ಗಳು ಮತ್ತು ಪುರುಷರ ಉಡುಪುಗಳು.
ದರ್ಜಿಗಳು ಪುರುಷರ ಮತ್ತು ಸ್ತ್ರೀಯರ ಸೂಟ್‍ಗಳು, ಕೋಟ್ಗಳು, ಷರಾಯಿಗಳು ಮತ್ತು ಹೋಲುವ ಉಡುಪುಗಳನ್ನು ತಯಾರಿಸುತ್ತಾರೆ, ಸಾಮಾನ್ಯವಾಗಿ ಉಣ್ಣೆ, ನಾರುಬಟ್ಟೆ ಅಥವಾ ರೇಷ್ಮೆಯದ್ದು.
ಸ್ಥಳೀಯ ದರ್ಜಿ ಕೆಲಸದಲ್ಲಿ ಸಾಮಾನ್ಯವಾಗಿ ಗ್ರಾಹಕರು ದರ್ಜಿಯನ್ನು ಸ್ಥಳೀಯವಾಗಿ ಭೇಟಿಯಾಗುತ್ತಾರೆ ಮತ್ತು ಉಡುಪನ್ನು ಸ್ಥಳೀಯವಾಗಿ ತಯಾರಿಸಲಾಗುತ್ತದೆ. ಈ ವಿಧಾನವು ವೃತ್ತಿಪರ ಅಳತೆಗಳನ್ನು ತೆಗೆದುಕೊಳ್ಳುವುದನ್ನು, ಉಡುಪಿಗೆ ಅನನ್ಯವಾದ ಮಾರ್ಪಾಡುಗಳನ್ನು ಮಾಡಲು ಭಂಗಿ ಹಾಗೂ ದೇಹದ ಆಕಾರವನ್ನು ಅಳೆಯುವುದನ್ನು ದರ್ಜಿಗೆ ಸಾಧ್ಯವಾಗಿಸುತ್ತದೆ. ಸ್ಥಳೀಯ ದರ್ಜಿಗಳು ಸಾಮಾನ್ಯವಾಗಿ ಪ್ರದರ್ಶನ ಕೊಠಡಿ ಅಥವಾ ಅಂಗಡಿ ಮುಂಭಾಗವನ್ನು ಹೊಂದಿದ್ದು ಇದರಿಂದ ಗ್ರಾಹಕರು ಮಾದರಿಗಳಿಂದ ಬಟ್ಟೆಗಳನ್ನು ಆಯ್ಕೆಮಾಡುವುದು ಅಥವಾ ಹೆಚ್ಚಿನ ಮಾರ್ಪಾಡು ಬೇಕಾದಾಗ ಉಡುಪನ್ನು ವಾಪಸು ಮಾಡುವುದು ಸಾಧ್ಯವಾಗುತ್ತದೆ. ಇದು ದರ್ಜಿ ಕೆಲಸದ ಅತ್ಯಂತ ಸಾಂಪ್ರದಾಯಿಕ ರೂಪವಾಗಿದೆ.
ಉಲ್ಲೇಖಗಳು
ಬದಲಾಯಿಸಿ- Deckert, Barbara: Sewing for Plus Sizes: Design, Fit and Construction for Ample Apparel, Taunton, 1999, Appendix B: How to Find, Select, and Work With a Custom Clothier, pp. 142-143.'Meru'(Merollu_plural)(Telugu language of Telangana in A.P.)