ದರಗ
ದರಗ ಎಂದರೆ ಒಬ್ಬ ಪೂಜ್ಯ ಧಾರ್ಮಿಕ ವ್ಯಕ್ತಿಯ, ಹಲವುವೇಳೆ ಸೂಫ಼ಿ ಸಂತ ಅಥವಾ ಫಕೀರನ ಗೋರಿಯ ಮೇಲೆ ಕಟ್ಟಲಾದ ಸ್ಮಾರಕ. ಸೂಫಿಗಳು ಹಲವುವೇಳೆ ಈ ಸ್ಮಾರಕವನ್ನು ಜ಼ಿಯಾರತ್‍ಗಾಗಿ (ಧಾರ್ಮಿಕ ಭೇಟಿಗಳು ಮತ್ತು ಯಾತ್ರೆಗಳಿಗೆ ಸಂಬಂಧಿಸಿದ ಪದ) ಭೇಟಿನೀಡುತ್ತಾರೆ. ದರಗಗಳನ್ನು ಹಲವುವೇಳೆ ಖಂಗಾ ಅಥವಾ ಸತ್ರಗಳೆಂದು ಕರೆಯಲ್ಪಡುವ ಸೂಫಿಯರ ತಿನ್ನುವ ಮತ್ತು ಸಭಾ ಕೋಣೆಗಳು ಹಾಗೂ ತಂಗುಮನೆಗಳೊಂದಿಗೆ ಸಂಬಂಧಿಸಲಾಗುತ್ತದೆ. ಇವು ಸಾಮಾನ್ಯವಾಗಿ ಮಸೀದಿ, ಸಭಾ ಕೋಣೆಗಳು, ಇಸ್ಲಾಮೀ ಧಾರ್ಮಿಕ ಶಾಲೆಗಳು (ಮದ್ರಸಾಗಳು), ಶಿಕ್ಷಕ ಅಥವಾ ಉಸ್ತುವಾರಿಗಾರರಿಗಾಗಿ ನಿವಾಸಗಳು, ಆಸ್ಪತ್ರೆಗಳು ಮತ್ತು ಸಮುದಾಯ ಉದ್ದೇಶಗಳಿಗಾಗಿ ಇತರ ಕಟ್ಟಡಗಳನ್ನು ಹೊಂದಿರುತ್ತವೆ.
ದರ್ಗಾಗಳು ಮೃತ ಸಂತನ ಮಧ್ಯಸ್ಥಿಕೆ ಮತ್ತು ಆಶೀರ್ವಾದವನ್ನು ಆವಾಹಿಸಬಲ್ಲ ಪ್ರವೇಶದ್ವಾರಗಳು (ತವಸ್ಸುಲ್ ಅಥವಾ ದಾವತ್-ಎ-ಗಬೂರ್ ಪ್ರಕಾರ) ಎಂದು ಕೆಲವು ಸೂಫಿಗಳು ಮತ್ತು ಇತರ ಮುಸಲ್ಮಾನರು ನಂಬುತ್ತಾರೆ.[೧] ಇತರರು ದರ್ಗಾಗಳ ಬಗ್ಗೆ ಕಡಿಮೆ ಮಹತ್ವದ ಅಭಿಪ್ರಾಯವನ್ನು ಹೊಂದಿದ್ದು, ಕೇವಲ ಧರ್ಮಶ್ರದ್ಧೆಯುಳ್ಳ ಮೃತ ವ್ಯಕ್ತಿಗಳಿಗೆ ತಮ್ಮ ಗೌರವವನ್ನು ಸಲ್ಲಿಸುವ ಸಾಧನವಾಗಿ ಅಥವಾ ಆಧ್ಯಾತ್ಮಿಕ ಪ್ರಯೋಜನಗಳು ಸಿಗುತ್ತವೆ ಎಂದು ಪರಿಗಣಿಸಿ ಆ ಸ್ಥಳಗಳಲ್ಲಿ ಪ್ರಾರ್ಥಿಸಲು ಭೇಟಿನೀಡುತ್ತಾರೆ.
ಉಲ್ಲೇಖಗಳು
ಬದಲಾಯಿಸಿ- ↑ Mohammad Najib ur Rehman, Hazrat Sakhi Sultan. The knowledge of communication with the sacred souls (1st ed.). Sultan ul Faqr Publications Regd. p. 337. ISBN 9789699795183.