ದಯಾನಂದ ಕಾಮತ್
ಕರ್ನಾಟಕದ ಮಾಜಿ ರಣಜಿ ಆಟಗಾರ ದಯಾನಂದ ಕಾಮತ್, ಇವರು ಉಪೇಂದ್ರ ಕಾಮತ್ ಮತ್ತು ಇಂದಿರಾ ಬಾಯಿ ರವರ ಮಗ. ಹುಟ್ಟಿದು ೧೯೪೩, ನವೆಂಬರ್ ೪ ರಂದು. ಇವರು ಜನವರಿ ೧೯ ೨೦೧೧ ರಂದು ತೀರಿಕೋಂಡರು. ಇವರು ೬೭ ವರ್ಷ ೭೬ ದಿನಗಳು ಜೀವನ ನಡೆಸಿದರು. ೧೯೬೩-೬೪ರಣಜಿಗೆ ಆಯ್ಕೆ, ೧೯೬೯ರ ತನಕ ಅವಕಾಶ. ೧೯೬೬-೬೯ರ ತನಕ ದಕ್ಷಿಣ ವಲಯ ತಂಡವನ್ನು ಪ್ರತಿನಿಧಿಸಿದರು. ಬರೋಡದಲ್ಲಿ ನಡೆದ ಪಂದ್ಯದಲ್ಲಿ ಪಶ್ಚಿಮ ವಲಯದ ವಿರುದ್ಧ ಪದ್ಮಾಕರ್ ಶಿವಾಲ್ಕರ್ ಓವರ್‌ನಲ್ಲಿ ೫ ಸಿಕ್ಸ್‌ರ್ ಸಿಡಿಸಿದ್ದು ಕಾಮತ್ ಅವರ ಅಮೋಘ ಸಾಧನೆಗಳಲ್ಲೊಂದು. ಅದು ಇಂದಿಗೂ ದಾಖಲೆಯಾಗಿ ಉಳಿದಿದೆ. ಖ್ಯಾತ ರಣಜಿ ಆಟಗಾರರಾದ ಪಟೌಡಿ, ಎಂ.ಎಲ್. ಜಯಸಿಂಹ, ಅಬಿದ್ ಅಲಿ, ಬುಧಿ ಕುಂದರನ್ ಕೂಡ ಇವರ ಸಹ ಆಟಗಾರರಾಗಿದ್ದರು.
ದಯಾನಂದ ಕಾಮತ್ | |
---|---|
ಜನ್ಮನಾಮ | ದಯಾನಂದ |
ಅಡ್ಡಹೆಸರು | ಮಂಗಳೂರು ದಯಾನಂದ ಕಾಮತ್, ಭಾರತದ ಗ್ಯಾರಿ ಸೋಬರ್ಸ್ |
ಮೂಲಸ್ಥಳ | ಮಂಗಳೂರು, ಕರ್ನಾಟಕ, |
ವೃತ್ತಿ | ಕ್ರಿಕೆಟ್ |