ದೊಣ್ಣೆ ಮೆಣಸಿನಕಾಯಿ

(ದಪ್ಪ ಮೆಣಸಿನಕಾಯಿ ಇಂದ ಪುನರ್ನಿರ್ದೇಶಿತ)

ದೊಣ್ಣೆ ಮೆಣಸಿನಕಾಯಿಯು ಕ್ಯಾಪ್ಸಿಕಮ್ ಆನ್ಯುವಮ್ ಜಾತಿಯ ಒಂದು ಗುಂಪು. ಸಸ್ಯದ ಸಾಗುವಳಿ ಮಾಡಲಾಗುವ ಪ್ರಭೇದಗಳು, ಕೆಂಪು, ಹಳದಿ, ಹಸುರು ಹಾಗೂ ಕೇಸರಿಯನ್ನು ಒಳಗೊಂಡಂತೆ, ವಿಭಿನ್ನ ಬಣ್ಣಗಳಲ್ಲಿ ಹಣ್ಣುಗಳನ್ನು ಉತ್ಪಾದಿಸುತ್ತವೆ. ದೊಣ್ಣೆ ಮೆಣಸಿನಕಾಯಿಗಳನ್ನು ಕೆಲವೊಮ್ಮೆ ಕಡಿಮೆ ಖಾರದ ಮೆಣಸು ಪ್ರಭೇದಗಳೊಂದಿಗೆ "ಸಿಹಿ ಮೆಣಸು" ಎಂದು ಗುಂಪುಮಾಡಲಾಗುತ್ತದೆ. ಕ್ಯಾಪ್ಸಿಕಂ ಪ್ರೋಟೀನ್, ಕಾರ್ಬೋಹೈಡ್ರೇಟ್, ಸಕ್ಕರೆ, ಫೈಬರ್ ಮತ್ತು ಕೊಬ್ಬಿನಿಂದ ಸಮೃದ್ಧವಾಗಿದೆ. ಈ ಗುಣಲಕ್ಷಣಗಳು ದೇಹಕ್ಕೆ ಸಂಪೂರ್ಣ ಪೋಷಣೆಯನ್ನು ಒದಗಿಸುತ್ತದೆ.[]

ದೊಣ್ಣೆ ಮೆಣಸಿನಕಾಯಿ

ಇತರ ಹೆಸರುಗಳು

ಬದಲಾಯಿಸಿ

ಕ್ಯಾಪ್ಸಿಕಂ, ಇದನ್ನು ದೊಣ್ಣೆ ಮೆಣಸಿನಕಾಯಿ ಅಥವಾ ಶಿಮ್ಲಾ ಮಿರ್ಚಿ ಅಂತಲೂ ಕರೆಯುತ್ತಾರೆ.

ಆರೋಗ್ಯ ಉಪಯೋಗಗಳು

ಬದಲಾಯಿಸಿ

ರಕ್ತ ಹೀನತೆ

ಬದಲಾಯಿಸಿ

ಕ್ಯಾಪ್ಸಿಕಂನಲ್ಲಿ (Capsicum) ಕಬ್ಬಿಣದಾಂಶ ಮತ್ತು ವಿಟಮಿನ್ ಯಥೇಚ್ಛ ಪ್ರಮಾಣದಲ್ಲಿರುತ್ತದೆ. ಕ್ಯಾಪ್ಸಿಕಂ ತಿಂದರೆ ದೇಹದಲ್ಲಿ ಕಬ್ಬಿಣದಾಂಶದ ಕೊರತೆ ಉಂಟಾಗುವುದಿಲ್ಲ. ಹಾಗಾಗಿ, ರಕ್ತ ಹೀನತೆ ಅಥವಾ ಅನಿಮೀಯಾ (anemia) ಉಂಟಾಗುವ ಸಾಧ್ಯತೆಯೇ ಇಲ್ಲ.

ಕಣ್ಣುಗಳಿಗೆ

ಬದಲಾಯಿಸಿ

ಕ್ಯಾಪ್ಸಿಕಂನಲ್ಲಿ ಲ್ಯೂಟಿನ್ ಮತ್ತು ಜೆಕ್ಸಾಥಿನ್ ಎಂಬ ಪೋಷಕಾಂಶಗಳಿವೆ. ಇವು ಕಣ್ಣಿನ ಆರೋಗ್ಯಕ್ಕೆ (Eye care benefits) ಸಾಕಷ್ಟು ಹಿತಕಾರಿ. ಹಾಗಾಗಿ, ಕಣ್ಣಿನ ಆರೋಗ್ಯಕ್ಕೆ ಕ್ಯಾಪ್ಸಿಕಂ ತಿನ್ನಲೇಬೇಕು.

ಕ್ಯಾಪ್ಸಿಕಂನಲ್ಲಿ ಕೆಪ್ಸಾಯಿಸಿನ್ ಎಂಬ ಹೆಸರಿನ ಪೋಷಕಾಂಶ ಸಿಗುತ್ತದೆ. ಇದು ಚರ್ಮವನ್ನು ಹಲವಾರು ಸಮಸ್ಯೆಗಳಿಂದ ರಕ್ಷಿಸುತ್ತದೆ. ಕ್ಯಾಪ್ಸಿಕಂ ತಿಂದರೆ ಸ್ಕಿನ್ ಹೆಲ್ತಿ (Skin health)ಇರುತ್ತದೆ. []

ಉಲ್ಲೇಖಗಳು

ಬದಲಾಯಿಸಿ
  1. "Capsicum Benefits: ದೊಣ್ಣೆ ಮೆಣಸಿನಕಾಯಿ ತಿನ್ನೋರ ಹೃದಯ ಹ್ಯಾಪಿಯಾಗಿರುತ್ತಂತೆ!". News18 ಕನ್ನಡ. 11 September 2022. Retrieved 31 August 2024.
  2. "Health benefits of capsicum : ದೊಣ್ಣೆ ಮೆಣಸಿನಕಾಯಿ ಯಾಕೆ ತಿನ್ನಬೇಕು..? ಇಲ್ಲಿದೆ ನಾಲ್ಕು ಕಾರಣ". 6 June 2021.