ದಡ್ಡತನ ಎಂದರೆ ಬುದ್ಧಿವಂತಿಕೆ, ತಿಳುವಳಿಕೆ, ವಿವೇಕ, ಬುದ್ಧಿಚಮತ್ಕಾರ, ಅಥವಾ ಲೋಕಜ್ಞಾನದ ಕೊರತೆ. ದಡ್ಡತನವು ಸಹಜವಾಗಿರಬಹುದು, ನಟನೆಯಾಗಿರಬಹುದು ಅಥವಾ ಪ್ರತಿಕ್ರಿಯಾತ್ಮಕವಾಗಿರಬಹುದು - ದುಃಖ ಅಥವಾ ಆಘಾತದ ವಿರುದ್ಧ ರಕ್ಷಣೆಯ ಸಾಧನವಾಗಿರಬಹುದು.

ದಡ್ಡತನ ಎಂದರೆ ದಡ್ಡನಾಗುವ ಗುಣ ಅಥವಾ ದಡ್ಡನಾಗಿರುವ ಸ್ಥಿತಿ, ಅಥವಾ ದಡ್ಡನಾಗಿರುವ ಲಕ್ಷಣಗಳನ್ನು ಪ್ರದರ್ಶಿಸುವ ಕ್ರಿಯೆ ಅಥವಾ ಯೋಚನೆ. ಗ್ರೀಕ್ ತತ್ವಶಾಸ್ತ್ರಜ್ಞ ಥಿಯೊಫ಼್ರಾಸ್ಟಸ್‍ಗೆ ಆರೋಪಿಸಲಾದ "ದ ಸ್ಟುಪಿಡ್ ಮ್ಯಾನ್" ನಲ್ಲಿ, ದಡ್ಡತನವನ್ನು "ಮಾತು ಅಥವಾ ಕ್ರಿಯೆಯಲ್ಲಿ ಮಾನಸಿಕ ಮಂದತ್ವ" ಎಂದು ವ್ಯಾಖ್ಯಾನಿಸಲಾಗಿತ್ತು. "ದಡ್ಡ" ಶಬ್ದವು ಅನ್ವಯದ ವಿಸ್ತಾರವಾದ ವ್ಯಾಪ್ತಿಯನ್ನು ಹೊಂದಿದೆ, ಮನಸ್ಸಿನಿಂದ ನಿಧಾನವಾಗಿರುವುದು (ಬುದ್ಧಿವಂತಿಕೆ, ಯೋಚನೆ ಅಥವಾ ವಿವೇಕದ ಕೊರತೆಯನ್ನು ಸೂಚಿಸುತ್ತದೆ), ಅನಿಸಿಕೆ ಅಥವಾ ಸಂವೇದನೆಯ ಮಂದತೆ (ಜಡತ್ವ, ಬುದ್ಧಿಹೀನತೆ, ಅಸಂವೇದನಶೀಲತೆ), ಅಥವಾ ಆಸಕ್ತಿ ಅಥವಾ ವಿಷಯ ಇಲ್ಲದಿರುವುದು (ಕೆರಳಿಸುವ, ರೇಗಿಸುವ). ಇದು ತರ್ಕದ ಸಾಮರ್ಥ್ಯದ ಜನ್ಮಜಾತ ಅಭಾವ, ಅಥವಾ ಮಂಕು, ಅಥವಾ ನಿಧಾನ ಯೋಚನಾಶಕ್ತಿಯ ತಾತ್ಕಾಲಿಕ ಸ್ಥಿತಿಯನ್ನು ಸೂಚಿಸಬಹುದು.

ಅಂಡರ್‌ಸ್ಟ್ಯಾಂಡಿಂಗ್ ಸ್ಟುಪಿಡಿಟಿ ಯಲ್ಲಿ, ಜೇಮ್ಸ್ ವೆಲ್ಸ್ ದಡ್ಡತನವನ್ನು ಹೀಗೆ ವ್ಯಾಖ್ಯಾನಿಸುತ್ತಾರೆ: "ಈ ಪದವನ್ನು ತಿಳಿದ, ಉದ್ದೇಶಪೂರ್ವಕ ಮತ್ತು ಸಾಮರಸ್ಯವಿಲ್ಲದ ಎಂದು ಪರಿಗಣಿಸಲಾದ ಮನಸ್ಥಿತಿಯನ್ನು ಹೆಸರಿಸಲು ಬಳಸಬಹುದು." ವೆಲ್ಸ್ ದಡ್ಡತನ ಮತ್ತು ಅಜ್ಞಾನದ ನಡುವೆ ವ್ಯತ್ಯಾಸ ಮಾಡುತ್ತಾರೆ; ತಾವು ತಮ್ಮ ಸ್ವಂತದ ಅತ್ಯಂತ ಕೆಟ್ಟ ಹಿತದೃಷ್ಟಿಯಿಂದ ವರ್ತಿಸುತ್ತಿದ್ದಾರೆ ಎಂದು ಒಬ್ಬರಿಗೆ ತಿಳಿದಿರಬೇಕು. ಎರಡನೆಯದಾಗಿ, ಅದು ಒಂದು ಆಯ್ಕೆಯಾಗಿರಬೇಕು, ಒತ್ತಾಯದ ಕ್ರಿಯೆ ಅಥವಾ ಆಕಸ್ಮಿಕವಲ್ಲ. ಕೊನೆಯದಾಗಿ, ಚಟುವಟಿಕೆಯು ಸಾಮರಸ್ಯವಿಲ್ಲದ್ದಾಗಿರಬೇಕಾದ ಅಗತ್ಯವಿರುತ್ತದೆ, ಅಂದರೆ ಅದು ನಟನ ಅತ್ಯಂತ ಕೆಟ್ಟ ಹಿತದೃಷ್ಟಿಯಲ್ಲಿರುತ್ತದೆ, ಮತ್ತು ನಿರ್ದಿಷ್ಟವಾಗಿ ಹೊಸ ಮಾಹಿತಿ ಅಥವಾ ಅಸ್ತಿತ್ವದಲ್ಲಿರುವ ಸಂದರ್ಭಗಳಿಗೆ ಹೊಂದಿಕೊಳ್ಳುವಿಕೆಯನ್ನು/ಹೊಂದಾಣಿಕೆಯನ್ನು ತಡೆಯಲು ಮಾಡಿದ್ದಾಗಿರುತ್ತದೆ."[]

ಆರ್ಥಿಕ ಇತಿಹಾಸಕಾರರಾದ ಕ್ಯಾರ್ಲೊ ಚಿಪೋಲಾ ಮಾನವ ದಡ್ಡತನದ ಬಗ್ಗೆ ಇರುವ ತಮ್ಮ ಪ್ರಬಂಧಗಳಿಗಾಗಿ ಪ್ರಸಿದ್ಧರಾಗಿದ್ದಾರೆ, ಉದಾಹರಣೆಗೆ "ದ ಬೇಸಿಕ್ ಲಾಸ್ ಆಫ಼್ ಹ್ಯೂಮನ್ ಸ್ಟುಪಿಡಿಟಿ". ಇವರು ದಡ್ಡ ಜನರನ್ನು ದೊಡ್ಡ ಮಟ್ಟಿಗೆ ಮಾಫ಼ಿಯಾ ಮತ್ತು ಕೈಗಾರಿಕಾ ಸಂಕೀರ್ಣದಂತಹ ಪ್ರಧಾನ ಸಂಸ್ಥೆಗಳಿಗಿಂತ ಹೆಚ್ಚು ಪ್ರಬಲವಿರುವ ಗುಂಪಾಗಿ ಕಂಡರು.

ಉಲ್ಲೇಖಗಳು

ಬದಲಾಯಿಸಿ
  1. James F. Welles, Ph. D. "Understanding Stupidity". Archived from the original on August 24, 2011. Retrieved June 7, 2011. {{cite web}}: Unknown parameter |deadurl= ignored (help)
"https://kn.wikipedia.org/w/index.php?title=ದಡ್ಡತನ&oldid=1007124" ಇಂದ ಪಡೆಯಲ್ಪಟ್ಟಿದೆ