ಥ್ರಾಶ್ ಮೆಟಲ್
ಥ್ರಾಶ್ ಮೆಟಲ್ ಹೆವಿ ಮೆಟಲ್ ಸಂಗೀತದ ಒಂದು ಉಪವಿಭಾಗವಾಗಿದ್ದು, ವೇಗವಾದ ಗತಿ, ಆಕ್ರಮಣಕಾರಿ ಶೈಲಿಯ, ರೌದ್ರ ಹಾಗೂ ಭಯಾನಕ ರಸಗಳುಳ್ಳ ಸಂಗೀತವಾಗಿದೆ. ಇದರ ಸಾಹಿತ್ಯದಲ್ಲಿ ಪ್ರಚಲಿತ ಸಾಮಾಜಿಕ ಸಮಸ್ಯೆಗಳು ಹಾಗೂ ಇಂದಿನ ಸಾಮಾಜಿಕ ವ್ಯವಸ್ಥೆಯ ವಿರುದ್ಧವಾಗಿರುವ ಅಂಶಗಳು ಕಂಡು ಬರುತ್ತವೆ. ಈ ಒಂದು ಲಕ್ಷಣವನ್ನು ಹಾರ್ಡ್ಕೊರ್ ಮತ್ತು ಪಂಕ್ ಸಂಗೀತದಲ್ಲೂ ಕೂಡ ಕಾಣಬಹುದು.
ಥ್ರಾಶ್ ಮೆಟಲ್ | |
---|---|
Stylistic origins | NWOBHM, hardcore punk, punk rock, speed metal |
Cultural origins | Late 1970s/early 1980s, ಅಮೇರಿಕ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್‌ಡಂ and ಜರ್ಮನಿ |
Typical instruments | Rhythm guitar, lead guitar, bass guitar, drums, vocals |
Derivative forms | ಡೆತ್ ಮೆಟಲ್, ಬ್ಲ್ಯಾಕ್ ಮೆಟಲ್, ಗ್ರೂವ್ ಮೆಟಲ್, ಇಂಡಸ್ಟ್ರಿಯಲ್ ಮೆಟಲ್ |
Fusion genres | |
Crossover thrash, metalcore, nu metal | |
Regional scenes | |
ಜರ್ಮನಿ – Brazil – United Kingdom – Poland – Australia – Canada – United States: Bay Area & East Coast – Japan – Mexico | |
Other topics | |
ಥ್ರಾಶ್ ಮೆಟಲ್ ಬ್ಯಾಂಡ್ ಗಳ ಪಟ್ಟಿ |
ಮೆಟಾಲಿಕಾ, ಸ್ಲೇಯರ್, ಮೆಗಾಡೆಟ್ ಮತ್ತು ಆನ್ಥ್ರಕ್ಸ್ ಥ್ರಾಶ್ ಮೆಟಲ್ಲಿನ ನಾಲ್ಕು ಖ್ಯಾತ ಬ್ಯಾಂಡ್ ಗಳು. ಇವು ಥ್ರಾಶ್ ಮೆಟಲ್ಲಿನ ಅಗ್ರಗಾಮಿಗಳೆಂದು ಹೇಳಬೊಹುದು.
ಥ್ರಾಶ್ ಮೆಟಲ್ ಪ್ರತ್ಯೇಕವಾಗಿ ಮೊದಲು ಅಭಿವ್ಯಕ್ತವದದ್ದು ೧೯೭೦ರ ದಶಕದ ಅಂತ್ಯದಲ್ಲಿ ಮತ್ತು ೧೯೮೦ರ ಆರಂಭದಲ್ಲಿ. ಅಂದಿನ ದಿನಗಳಲ್ಲಿ ಹಲವಾರು ಅಮೇರಿಕದ ಬ್ಯಾಂಡ್ ಗಳು ಬ್ರಿಟೀಷ್ ಹೆವಿ ಮೆಟಲ್ಲಿನ ಹೊಸ ಅಲೆ ಸಂಗೀತದ ಅಂಶಗಳನ್ನು ಹಾರ್ಡಕೋರ್ ಪಂಕ್ ಸಂಗೀತದ ವೇಗ, ಗತಿ, ಮತ್ತು ಶೈಲಿಯೊಂದಿಗೆ ಸೇರಿಸುವ ಪ್ರಯತ್ನವನ್ನು ಮಾಡುತ್ತಿದ್ದವು. ಈ ಪ್ರಯತ್ನದ ಫಲಿತಾಂಶವಾಗಿ ಥ್ರಾಶ್ ಮೆಟಲ್, ಸಂಗೀತ ಲೋಕದಲ್ಲಿ ತನ್ನದೇ ಆದ ಒಂದು ಸ್ಥಾನ ಪಡೆಯಿತು.[೧]
ಉಲ್ಲೇಖಗಳು
ಬದಲಾಯಿಸಿ- ↑ "Thrash Metal history ,metaldescent.com". Archived from the original on 2013-05-09. Retrieved 2017-03-22.