ಥೇಪಲಾ ಚಪಾತಿಯಂಥ ಒಂದು ಭಾರತೀಯ ಮೃದು ಖಾದ್ಯವಾಗಿದೆ ಮತ್ತು ಗುಜರಾತಿ ಪಾಕಪದ್ಧತಿಯಲ್ಲಿ ವಿಶಿಷ್ಟವಾಗಿದೆ[೧] ಮತ್ತು ವಿಶೇಷವಾಗಿ ಜೈನರಲ್ಲಿ ಜನಪ್ರಿಯವಾಗಿದೆ.

ಮೊಸರು ಮತ್ತು ಉಪ್ಪಿನಕಾಯಿಯೊಂದಿಗೆ ಥೇಪಲಾ.

ಇದನ್ನು ಸಾಮಾನ್ಯವಾಗಿ ಬೆಳಗಿನ ತಿಂಡಿಯಾಗಿ ತಿನ್ನಲಾಗುತ್ತದೆ, ಅಥವಾ ಲಘು ಆಹಾರವಾಗಿ ಬಿಸಿ ಚಹಾದೊಂದಿಗೆ ಅಥವಾ ಮಧ್ಯಾಹ್ನದ ಊಟವಾಗಿ, ಊಟದೊಂದಿಗೆ ಪಕ್ಕ ಖಾದ್ಯವಾಗಿ ಕೂಡ ತಿನ್ನಬಹುದು.[೨] ಥೇಪಲಾವನ್ನು ಗೋಧಿ ಹಿಟ್ಟು, ಕಡಲೆ ಹಿಟ್ಟು (ಬೇಸನ್), ಮೆಂತ್ಯದ ಸೊಪ್ಪು ಮತ್ತು ಇತರ ಸಂಬಾರ ಪದಾರ್ಥಗಳಿಂದ ತಯಾರಿಸಬಹುದು. ಥೇಪಲಾವನ್ನು ಮೊಸರು, ಕೆಂಪು ಬೆಳ್ಳುಳ್ಳಿ ಚಟ್ನಿ ಮತ್ತು ಛೂಂದೊದೊಂದಿಗೆ (ಸಿಹಿ ಮಾವಿನಕಾಯಿ ಉಪ್ಪಿನಕಾಯಿ) ತಿನ್ನಬಹುದು.

ಉಲ್ಲೇಖಗಳು ಬದಲಾಯಿಸಿ

  1. "Thepla Recipe: How to Make Thepla". recipes.timesofindia.com (in ಇಂಗ್ಲಿಷ್). Retrieved 2018-04-28.
  2. "mooli thepla recipe, how to make mooli thepla recipe | radish thepla recipe". www.vegrecipesofindia.com (in ಅಮೆರಿಕನ್ ಇಂಗ್ಲಿಷ್). Retrieved 2018-05-01.
"https://kn.wikipedia.org/w/index.php?title=ಥೇಪಲಾ&oldid=994746" ಇಂದ ಪಡೆಯಲ್ಪಟ್ಟಿದೆ