ಥಾಮಸ್ ಆಂಡ್ರೂ (೧೮೧೩-೧೮೮೫) ಐರ್ಲೆಂಡಿನ ರಸಾಯನಶಾಸ್ತ್ರಜ್ಞ. ಗ್ಲಾಸ್ಗೊ, ಪ್ಯಾರಿಸ್‌ಗಳಲ್ಲಿ ರಸಾಯನಶಾಸ್ತ್ರವನ್ನೂ ಎಡಿನ್‌ಬರೊದಲ್ಲಿ ವೈದ್ಯಶಾಸ್ತ್ರವನ್ನೂ ಅಧ್ಯಯನ ಮಾಡಿದ. ಜನ್ಮಸ್ಥಳವಾದ ಬೆಲ್‌ಫಾಸ್ಟ್‌ನಲ್ಲೇ ೧೮೪೯-೧೮೭೯ರ ವರೆಗೆ ರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿದ್ದ. ಭೌತಶಾಸ್ತ್ರದ ಒಂದು ಪ್ರಮುಖಭಾಗವಾದ ಅನಿಲದ್ರವೀಕರಣವನ್ನು ವಿಶೇಷವಾಗಿ ಅಧ್ಯಯನಿಸಿದ. ಓಜ಼ೋನ್ ಅನಿಲ[] ಮತ್ತು ರಾಸಾಯನಿಕ ದಹನದಿಂದ ಉತ್ಪತ್ತಿಯಾಗುವ ಉಷ್ಣದ ಬಗ್ಗೆ ಹೆಚ್ಚಿನ ಕೆಲಸಮಾಡಿದ.

ಥಾಮಸ್ ಆಂಡ್ರೂ

ರಾಸಾಯನಿಕ ಕ್ರಿಯೆಗಳಲ್ಲಿ ಉಂಟಾಗುವ ಉಷ್ಣದ ಮೇಲಿನ ಕೆಲಸದಲ್ಲಿ ವೈಜ್ಞಾನಿಕ ತನಿಖೆದಾರನಾಗಿ ಆಂಡ್ರೂಸ್ ಮೊದಲು ಪರಿಚಿತನಾದ. ಇದಕ್ಕಾಗಿ ರಾಯಲ್ ಸೊಸೈಟಿ ಅವನಿಗೆ ೧೮೪೪ರಲ್ಲಿ ರಾಯಲ್ ಮೆಡಲ್ ನೀಡಿತು.

ಉಲ್ಲೇಖಗಳು

ಬದಲಾಯಿಸಿ
  1.   One or more of the preceding sentences incorporates text from a publication now in the public domainChisholm, Hugh, ed. (1911). "Andrews, Thomas" . Encyclopædia Britannica. Vol. 1 (11th ed.). Cambridge University Press. p. 974. {{cite encyclopedia}}: Cite has empty unknown parameters: |separator= and |HIDE_PARAMETER= (help); Invalid |ref=harv (help)

ಹೆಚ್ಚಿನ ಓದಿಗೆ

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: