ಮುಖ್ಯ ಮೆನು ತೆರೆ

ತ.ಸು.ಶಾಮರಾಯರುಸಂಪಾದಿಸಿ

            ತ.ಸು.ಶಾಮರಾಯರು 
ಜನನ - ೧೨.ಜೂನ್ -೧೯೦೬ ,ಮರಣ - ೨೧.ಆಗಸ್ಟ್-೧೯೯೮.

ಜೀವನಸಂಪಾದಿಸಿ

ತ.ಸು.ಶಾಮರಾಯರು ಕನ್ನಡದಪ್ರಮುಖ ಸಾಹಿತಿಗಳು ಮತ್ತು ವಿದ್ವಾಂಸರು.

ಶಾಮರಾಯರು ಜನಿಸಿದ್ದು ಚಿತ್ರದುರ್ಗಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳುಕು ಗ್ರಾಮದಲ್ಲಿ. ತಂದೆ ಸುಬ್ಬಣ್ಣ ಮತ್ತು ತಾಯಿ ಲಕ್ಷ್ಮಿದೇವಮ್ಮ.

ಬಿ ಎಂ ಶ್ರೀ, ತೀ ನಂ ಶ್ರೀ, ಕುವೆಂಪು ಅವರ ಶಿಷ್ಯರಾಗಿದ್ದರು. ಬಿ.ಎ.ಆನರ್ಸ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, ಕಾಲೇಜ್ ಅಧ್ಯಾಪಕರಾದರು. ಮುಂದೆ ಕುವೆಂಪು ಅವರ ಮಾರ್ಗದರ್ಶನದಲ್ಲಿ , 'ಕನ್ನಡ ನಾಟಕ ಎಂಬ ಪ್ರಬಂಧ ಮಂಡಿಸಿ ಎಂ.ಎ. ಪದವಿಯನ್ನು ಪಡೆದು, ಪ್ರಾಧ್ಯಾಪಕ ವೃತ್ತಿಯನ್ನು ಕೈಗೊಂಡರು. ಮೈಸೂರು ವಿಶ್ವವಿದ್ಯಾಲಯಪ್ರಸಾರಾಂಗದ ನಿರ್ದೇಶಕ, ಮಹಾ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಇವರ ಜ್ಯೇಷ್ಠ ಪುತ್ರ ಶ್ರೀ ತ ಶಾ ವೆಂಕಣ್ಣಯ್ಯನವರು ಶೃಂಗೇರಿಯ ಜೆ.ಸಿ.ಬಿ.ಎಂ ಕಾಲೇಜಿನಲ್ಲಿ ಸಂಸ್ಕ್ರುತ ಪ್ರಾಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಸಾಹಿತ್ಯಕ್ಕೆ ಮಹತ್ತರ ಸೇವೆಯನ್ನು ಸಲ್ಲಿಸುತ್ತಾ ಸಂಸ್ಕೃತ, ಕನ್ನಡ, ಇಂಗ್ಲೀಷ್ ಮತ್ತು ತೆಲುಗು ಬಾಷೆಗಳಲ್ಲಿ ಪ್ರೌಡಿಮೆ ಹೊಂದಿದ್ದು, ಹಲವಾರು ಅನುವಾದಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ ಅನುವಾದ ಶ್ರೇಷ್ಠರೆಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಇವರ ಇನ್ನೊಬ್ಬ ಪುತ್ರ ಛಾಯಾಪತಿ, ತ ಸು ಶಾಮರಾಯರು ತೆರೆದ ತಳುಕಿನ ವೆಂಕಣ್ನಯ್ಯ ಗ್ರಂಥಮಾಲೆಯನ್ನು ಸಮರ್ಥವಾಗಿ ನಡೆಸಿಕೊಂಡು ಬಂದಿದ್ದು ಸಾವಿರ ಪುಸ್ತಕಗಳ ಸರದಾರ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ.

ಕೃತಿಗಳುಸಂಪಾದಿಸಿ

 • ವ್ಯಾಕರಣ ಕೋಶಕ್ಕೆ ಸಂಬಂಧಿಸಿದ ಐದು ಕೃತಿಗಳು
 • ಕನ್ನಡ ನಾಟಕ
 • ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ
 • ವಿಮರ್ಶಾ ಗ್ರಂಥಗಳು
 • ಅಜಿತ ಪುರಾಣ ಸಂಗ್ರಹ
 • ಅರಣ್ಯ ಪುರಾಣ ಸಂಗ್ರಹ ( ಇದೇ ರೀತಿ ಹನ್ನೊಂದು ಕಾವ್ಯ ಸಂಗ್ರಹಗಳು)
 • ಮಂಕನ ಮಡದಿ (ಕಾದಂಬರಿ)
 • ಕಥಾವಲ್ಲರಿ
 • ಮಹಾವೀರ
 • ಶಿವಶರಣ ಕಥಾರತ್ನ ಕೋಶ
 • ಮೂರು ತಲೆಮಾರು
 • ತಪಸ್ವಿಜಿ ಮಹಾರಾಜ್
 • ಪಂಪ,ಮುದ್ದಣ ,ರತ್ನಾಕರ ವರ್ಣಿ ಕುರಿತ ಸಾಹಿತ್ಯ ಗ್ರಂಥಗಳು... ಇತ್ಯಾದಿ ಒಟ್ಟು 7೦ ಕೃತಿಗಳು ಪ್ರಕಟವಾಗಿವೆ.

ಪ್ರಶಸ್ತಿಗಳುಸಂಪಾದಿಸಿ

 • ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ
 • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
 • ಕನ್ನಡ ಸಾಹಿತ್ಯ ಪರಿಷತ್ತಿನ ಚಾವುಂಡರಾಯ ಪ್ರಶಸ್ತಿ
 • ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್

ಗೌರವಗಳುಸಂಪಾದಿಸಿ

 • ಕನ್ನಡ ಸಾಹಿತ್ಯರತ್ನ
 • ಧೀಶ್ರೀ

ಅಭಿನಂದನಾ ಗ್ರಂಥಸಂಪಾದಿಸಿ

 • ಸ್ವಸ್ತಿ. (ತ ವೆಂ ಸ್ಮಾರಕ ಗ್ರಂಥಮಾಲೆಯಿಂದ ಪ್ರಕಟ).