ತ್ರಿಪುರ ಸುಂದರಿ (ಕನ್ನಡ ಧಾರಾವಾಹಿ)

ತ್ರಿಪುರ ಸುಂದರಿ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ. ಇದು 2023 ರ ಜನವರಿ 2 ರಿಂದ 7 ಅಕ್ಟೋಬರ್ 2023ರವೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಂಡಿತು.[೧]

ತ್ರಿಪುರ ಸುಂದರಿ (ಕನ್ನಡ ಧಾರಾವಾಹಿ)
ಶೈಲಿದೈನಂದಿನ ಧಾರಾವಾಹಿ
ನಿರ್ದೇಶಕರುವಿನೋದ್ ದೊಂಡಾಲೆ
ನಟರು
  • ದಿವ್ಯ ಸುರೇಶ್
  • ಅಭಿನವ್ ವಿಶ್ವನಾಥನ್
ದೇಶಭಾರತ
ಭಾಷೆ(ಗಳು)ಕನ್ನಡ
ಒಟ್ಟು ಸಂಚಿಕೆಗಳು199
ನಿರ್ಮಾಣ
ನಿರ್ಮಾಪಕ(ರು)ವೃದ್ಧಿ ಕ್ರಿಯೆಷನ್ಸ್
ಕ್ಯಾಮೆರಾ ಏರ್ಪಾಡುಮಲ್ಟೀಕ್ಯಾಮೆರಾ
ಸಮಯ22 ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ವೃದ್ಧಿ ಕ್ರಿಯೆಷನ್ಸ್
ಪ್ರಸಾರಣೆ
ಮೂಲ ವಾಹಿನಿಕಲರ್ಸ್ ಕನ್ನಡ
ಮೂಲ ಪ್ರಸಾರಣಾ ಸಮಯ2 ಜನವರಿ 2023 (2023-01-02) – 6 ಅಕ್ಟೋಬರ್ 2023 (2023-10-06)
ಕಾಲಕ್ರಮ
ನಂತರಬಿಗ್‌ಬಾಸ್ ಕನ್ನಡ ಸೀಸನ್ 10


ಕಥಾವಸ್ತು ಬದಲಾಯಿಸಿ

ಗಂಧರ್ವ ಲೋಕದ ಸುಂದರವಾದ ಹುಡುಗಿಯಾದ ಆಮ್ರಪಾಲಿ (ಅಮ್ಮು), ಗಂಧರ್ವ ಲೋಕದ ಏಕೈಕ ರಕ್ಷಕನಾದ ಗಂಧರ್ವ ರಾಜಕುಮಾರನನ್ನು(ಪ್ರದ್ಯುಮ್ನ) ಹುಡುಕುವ ಕಾರ್ಯಾಚರಣೆಯಲ್ಲಿದ್ದಾಳೆ. ಆಕೆಯ ಉದ್ದೇಶವು ಆಕೆಯನ್ನು ಅನಾನುಕೂಲ ಸ್ಥಳವಾದ ಭೂಲೋಕಕ್ಕೆ ಕರೆದೊಯ್ಯುತ್ತದೆ. ಅಮ್ಮು, ಪ್ರದ್ಯುಮ್ನನ ಕುಟುಂಬದೊಂದಿಗೆ ವಾಸಿಸಲು ಪ್ರಾರಂಭ ಮಾಡುತ್ತಾಳೆ. ಪ್ರದ್ಯುಮ್ನ ಈ ಕುಟುಂಬದ ವಾರಸುದಾರನಾಗಿರುತ್ತಾನೆ. ಸ್ವಲ್ಪ ದಿನಗಳ ನಂತರ ಪ್ರದ್ಯುಮ್ನನೇ ಗಂಧರ್ವ ರಾಜಕುಮಾರನೆಂದು ಅವಳಿಗೆ ಗೊತ್ತಾಗುತ್ತದೆ.

ಪಾತ್ರವರ್ಗ ಬದಲಾಯಿಸಿ

  • ದಿವ್ಯಾ ಸುರೇಶ್[೨]: ಆಮ್ರಪಾಲಿ / ಅಮ್ಮು ಪಾತ್ರದಲ್ಲಿ, ಗಂಧರ್ವ ರಾಜಕುಮಾರಿಯಾಗಿ.
  • ಅಭಿನವ್ ವಿಶ್ವನಾಥನ್[೩]: - ಪ್ರದ್ಯುಮ್ನ ಪಾತ್ರದಲ್ಲಿ ಗಂಧರ್ವ ರಾಜಕುಮಾರನಾಗಿ. ಸತ್ಯಜಿತ್ ಮತ್ತು ದೇವಯಾನಿಯ ದತ್ತು ಮಗ.
  • ರೇಖಾ ಪ್ರಸಾದ್[೪]: ದೇವಯಾನಿಯಾಗಿ, ಬದಲಿಗೆ ಸಂಗೀತಾ ಭಟ್
  • ಹರ್ಷ ನಾಗ್ಪಾಲ್: ನೀನಾದ್ ಪಾತ್ರದಲ್ಲಿ, ಪ್ರದ್ಯುಮ್ನ್, ಛಾಯಾ , ಅನ್ಯಾ ಮತ್ತು ಬೃಂದಾಳ ಸಹೋದರನಾಗಿ.
  • ಪೃಥ್ವಿ: ಬ್ರುಂಡನಾಗಿ
  • ಹರ್ಷಿತಾ ಛಾಯಾ ಪಾತ್ರದಲ್ಲಿ
  • ರೋಹಿತ್ ಶ್ರೀನಾಥ್

ವಿಶೇಷಪಾತ್ರದಲ್ಲಿ ಬದಲಾಯಿಸಿ

  • ದಿಶಾ ಮದನ್[೫]: ಪ್ರದ್ಯುಮ್ನನ ಹೆತ್ತತಾಯಿ ಪಾತ್ರದಲ್ಲಿ

ನಿರ್ಮಾಣ ಬದಲಾಯಿಸಿ

ಈ ಕಾರ್ಯಕ್ರಮವು ಕಲರ್ಸ್ ಕನ್ನಡದಲ್ಲಿ ವೃದ್ಧಿ ಕ್ರಿಯೇಷನ್ಸ್ ನ ಮೊದಲ ಕಾಲ್ಪನಿಕ ನಿರ್ಮಾಣವಾಗಿದೆ. ಮೊದಲ ಪ್ರೊಮೊವನ್ನು 12 ಡಿಸೆಂಬರ್ 2022 ರಂದು ಪ್ರಾರಂಭಿಸಲಾಯಿತು. ಮೊದಲ ಪ್ರದರ್ಶನವು 2 ಜನವರಿ 2023 ರಂದು ಪ್ರಸಾರವಾಯಿತು.[೬]

ಉಲ್ಲೇಖಗಳು ಬದಲಾಯಿಸಿ

  1. "Daily soap 'tripura sundari' completes 100 episodes - Times of India". The Times of India.
  2. "Will Divya Suresh act in the TV show tripura sundari? - Times of India". The Times of India.
  3. "Abhinav Vishwanathan to play the lead role in upcoming daily soap 'tripura sundari' - Times of India". The Times of India.
  4. "Rekha to make her small screen debut with fantasy drama - Times of India". The Times of India.
  5. "Disha Madan to play a cameo in upcoming daily soap 'tripura sundari' - Times of India". The Times of India.
  6. "Kannada TV show 'tripura sundari' gets dubbed in Bengali - Times of India". The Times of India.

ಬಾಹ್ಯಕೊಂಡಿಗಳು ಬದಲಾಯಿಸಿ