ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟ


ತೋಟಗಾರಿಕೆಯು ಕೃಷಿಯ ಪ್ರಮುಖ ಭಾಗ. ದೇಶ ಹಾಗೂ ರಾಜ್ಯದಲ್ಲಿ ತೋಟಗಾರಿಕೆ ಕ್ಷೇತ್ರದ ಕೊಡುಗೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ. ಜನರಲ್ಲಿ ಆರೋಗ್ಯ ಹಾಗೂ ಪೌಷ್ಠಿಕತೆಗೆ ಸಂಬಂಧಿಸಿದ ಅರಿವು ಹೆಚ್ಚುತ್ತಿರುವುದರಿಂದ ಸಹಜವಾಗಿ ತೋಟಗಾರಿಕೆ ಬೆಳೆಗಳ ಬೇಡಿಕೆಯೂ ಹೆಚ್ಚುತ್ತಿದೆ. ತೋಟಗಾರಿಕೆಯ ಪ್ರಾಮುಖ್ಯತೆಯನ್ನು ಅರಿತು ಅದರ ಸರ್ವೋತೋನ್ಮುಖ ಅಭಿವೃದ್ಧಿಗಾಗಿ ಕರ್ನಾಟಕ ಘನ ಸರ್ಕಾರವು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಬಾಗಲಕೋಟೆಯಲ್ಲಿ ದಿನಾಂಕ: ೨೨-೦೮-೨೦೦೮ ರಂದು ಸ್ಥಾಪಿಸಿತು. ಕರ್ನಾಟಕ ರಾಜ್ಯದ ಮಂಜೂರಾತಿ ಆದ್ಯಾದೇಶ ಸಂ. (ನಂ. ೨, ೨೦೦೮) ಮತ್ತು ಕರ್ನಾಟಕ ಸರ್ಕಾರದ ಅಧಿನಿಯಮ ಸಂ. ೧೧, ೨೦೧೦ ದಿನಾಂಕ: ೧೩-೦೫-೨೦೧೦ ರನ್ವಯ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಈ ವಿಶ್ವವಿದ್ಯಾಲಯವು ಕರ್ನಾಟಕದ ಏಕೈಕ ಹಾಗೂ ಭಾರತದ ಮೂರನೆಯ ತೋಟಗಾರಿಕೆಯ ವಿಶ್ವವಿದ್ಯಾಲಯವಾಗಿರುವುದು ವಿಶೇಷವಾಗಿದೆ. ದೇಶದಲ್ಲಿಯೇ ಕರ್ನಾಟಕ ರಾಜ್ಯವು ತೋಟಗಾರಿಕೆ ಉತ್ಪನ್ನಗಳ ಉತ್ಪಾದನೆಯಲ್ಲಿ, ಅದರಲ್ಲಿಯೂ ತೋಟಪಟ್ಟಿ ಬೆಳೆಗಳಲ್ಲಿ ೧ನೇ ಸ್ಥಾನ, ಹೂವಿನ ಬೆಳೆಗಳಲ್ಲಿ ೨ನೇ ಸ್ಥಾನ, ಹಣ್ಣಿನ ಬೆಳೆಗಳಲ್ಲಿ ೬ನೇ ಸ್ಥಾನ, ಸಾಂಬಾರು ಪದಾರ್ಥಗಳ ಉತ್ಪಾದನೆಯಲ್ಲಿ ೭ನೇ ಸ್ಥಾನ ಮತ್ತು ತರಕಾರಿ ಬೆಳೆಗಳಲ್ಲಿ ೮ನೇ ಸ್ಥಾನಗಳನ್ನು ಪಡೆದಿರುತ್ತವೆ

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ
ಸ್ಥಾಪನೆ೨೦೦೮
ಪ್ರಕಾರಸಾರ್ವಜನಿಕ
ಉಪಕುಲಪತಿಗಳುಡಾ. ಇಂದಿರೇಶ ಕೆ. ಎಮ್.‌
ಪದವಿ ಶಿಕ್ಷಣತೋಟಗಾರಿಕೆ

ಉಲ್ಲೇಖಗಳು ಬದಲಾಯಿಸಿ