ತೊರ್ತೀಯಾ ನಯವಾಗಿ ಪುಡಿಮಾಡಿದ ಗೋಧಿ ಹಿಟ್ಟಿನಿಂದ ತಯಾರಿಸಲಾದ ಒಂದು ಪ್ರಕಾರದ ಮೃದು, ತೆಳು ಫ಼್ಲ್ಯಾಟ್‍ಬ್ರೆಡ್. ಮೂಲತಃ ಮೆಕ್ಕೆ ಜೋಳದ ತೊರ್ತೀಯಾದಿಂದ ಹುಟ್ಟಿಕೊಂಡ ಗೋಧಿ ಹಿಟ್ಟಿನ ತೊರ್ತೀಯಾ ಗಡಿಪಾರಾದ ಸ್ಪ್ಯಾನಿಶ್ ಯಹೂದ್ಯರ ಹೊಸಶೋಧವಾಗಿತ್ತು. ಇದನ್ನು ಹುದುಗು ಸೇರಿಸದ, ನೀರು ಆಧಾರಿತ ಕಣಕವನ್ನು ಲಟ್ಟಿಸಿ, ಮೆಕ್ಕೆ ಜೋಳದ ತೊರ್ತೀಯಾಗಳಂತೆ ಬೇಯಿಸಿ ತಯಾರಿಸಲಾಗುತ್ತದೆ.