ತೇಲುವ ಜಾರುವ ಜೀವಿಗಳು

(ತೇಲುವ/ಜಾರುವ ಜೀವಿಗಳು ಇಂದ ಪುನರ್ನಿರ್ದೇಶಿತ)

ತೇಲುವ/ಜಾರುವ ಜೀವಿಗಳು ಆಕಾಶದ ಒಡೆತನ ಹಕ್ಕಿಗಳದಾಗಿದ್ದು ಅವನ್ನು ಖಗಸಿರಿ ಎಂದು ಹೆಸರಿಸಲಾಗಿದೆ.ಹಕ್ಕಿಗಳ ಉಗಮಕ್ಕೆ ಎಷ್ಟೊ ಹಿಂದೆಯೇ ಕೀಟಗಳು ಈ ಒಡೆತನವನ್ನು ತಮ್ಮದಾಗಿಸಿಕೊಂಡಿದ್ದವು.ಸ್ತನಿಗಳಲ್ಲಿ ಬಾವುಲಿ ಹಾರಾಡಬಲ್ಲದು.ನೈಜ ಹಾರುವಿಕೆಯನ್ನು ಕೀಟ,ಹಕ್ಕಿ ಮತ್ತು ಬಾವುಲಿ ತೋರುತ್ತವೆ.ಈ ಹಾರುವಿಕೆ ಯಂತ್ರ-ನಿಯಂತ್ರಿತ ಏರೋಪ್ಲೇನ್ ಹಾರಾಟಕ್ಕೆ ಸ್ಪೂತಿ೯ಯೆನ್ನಬಹುದು.ಈ ಜೀವಿಗಳು ಬಳಸುವ ತಂತ್ರಗಳನ್ನು ಮಾನವ ಅನುಕರಿಸಿದ್ದಾನೆ. ಪ್ಯಾರಾಚ್ಯೂಟ್ ಮತ್ತು ಹ್ಯಾಂಡ್ ಗ್ಲೈಡರ್ ಗಳ ತಂತ್ರವನ್ನು ಅಳವಡಸಿಕೊಂಡಿರುವ ಜೀವಿಗಳೂ ಈ ಜಗತ್ತಿನಲ್ಲಿವೆ.ಅವೇ ಹಾರುವ ಮೀನು,ಕಪ್ಪೆ,ಹಲ್ಲಿ,ಹಾವು ಮತ್ತು ಅಳಿಲುಗಳು.

Flying fish mudskipper
Malabar Flying Frog - ഇളിത്തേമ്പൻ 02
Draco lineatus 1831

ಹಾರುವ ಮೀನು:ಸುಮಾರು ೫೦ ಪ್ರಭೇದಗಳ ಹಾರುವ ಮೀನುಗಳಿವೆ.ಉಷ್ಣವಲಯದ ಸಾಗರಗಳಲ್ಲಿ ಇವುಗಳ ರೆಕ್ಕೆಗಳು ಗಾಳಿಯಲ್ಲಿ ತೇಲಿಸಲು ಅಗಲವಾಗಿ ಹರಡಿವೆ.ತೇಲುವಾಗ ಗ್ಲೈಡರ್ ಗಳ ರೆಕ್ಕೆಯಂತೆಯೇ ಇವುಗಳ ರೆಕ್ಕೆಗಳೂ ಅನಮ್ಯವಾಗಿವೆ.ದೇಹದ ತೂಕವನ್ನು ತಗ್ಗಿಸಲು ಇವುಗಳ ಹೊಟ್ಟೆ ಮತ್ತು ಕರುಳು ಸಣ್ಣ ಗಾತ್ರದವು. ಬಾಲದ ರೆಕ್ಕೆಯು ಮೀನನ್ನು ಮೇಲೆತ್ತಲು ಸಹಾಯ ಮಾಡುತ್ತದೆ.ಇವು ಶತ್ರುಗಳಿಂದ ಪಾರಾಗಲು ಗಾಳಿಯಲ್ಲಿ ತೇಲುತ್ತವೆ.ಸುಮಾರು ೧೮೦-೨೭೦ ಮೀಟರ್ ಗಳವರೆಗೂ ತೇಲುತ್ತಾ ಅವು ಕ್ರಮಿಸಬಲ್ಲವು.ನಂತರ ಅವು ನೀರಿಗೇ ಬೀಳುವುವು.

ಹಾರುವ ಕಪ್ಪೆ(ರಾಕೋಫೋರಸ್):ಭಾರತ ಮತ್ತು ಚೀನಾಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮರವಾಸಿ ಕಪ್ಪ್ಪೆ .ಸಣ್ಣ ದೇಹದ ಇವುಗಳ ಮುಂಗಾಲಿನ ಮತ್ತು ಹಿಂಗಾಲಿನ ಬೆರಳುಗಳ ತುದಿಗಳಲ್ಲಿ ಮೆತ್ತೆಗಳಿದ್ದು,ಬೆರಳುಗಳು ತೆಳುವಾದ ಪೊರೆಯಿಂದ ಬಂಧಿತವಾಗಿವೆ.ಈ ತೆಳುಪೊರೆಯ ಪಾದಗಳು ಗಾಳಿಯಲ್ಲಿ ತೇಲುವಾಗ ಪ್ಯಾರಾಚ್ಯೂಟ್ ನಂತೆ ಹರಡಿಕೊಂಡು ಮರದ ಮೇಲಿಂದ ಜಿಗಿಯಲು ಸಹಾಯ ಮಾಡುತ್ತವೆ.

ಹಾರುವ ಹಲ್ಲಿ(ಡ್ರಾಕೊ):ಭಾರತ ,ಬರ್ಮ ಮತ್ತು ಮಲೇಷಿಯಾ ಕಾಡುಗಳಲ್ಲಿ ವಾಸಿಸುವ ಇವು ಮರವಾಸಿಗಳು.ಮುಡದ ಪಾಶ್ವ೯ದಲ್ಲಿ ಹಾಗೂ ಎರಡು ಕಾಲುಗಳ ಮಧ್ಯದಲ್ಲಿ ತೊಗಲಹಾಸು ರೆಕ್ಕೆಯಂತೆ ಹರಡಿಕೊಂಡು ಪ್ಯಾರಾಚ್ಯೂಟ್ ನಂತೆ ಗಾಳಿಯಲ್ಲಿ ತೇಲಲು ಸಹಾಯ ಮಾಡುತ್ತದೆ.ಈ ತೊಗಲಿನ ಹಾಸು ಬಳಸದಿದ್ದಾಗ ಛತ್ರಿಯಂತೆ ಮಡಿಚಿಟ್ಟು ಕೊಳ್ಳಬಹುದು ಹಾಗೂ ಛತ್ರಿಯ ಕಡ್ಡಿಯಂತೆಯೇ ಪಕ್ಕೆಲಬುಗಳು ಇದರ ತೊಗಲಿಗೆ ಆಧಾರ ನೀಡುತ್ತವೆ.

ಮತ್ತೊಂದು ಹಾರುವ ಹಲ್ಲಿ-( ಫ್ಲೈಯಿಂಗ್ ಗೆಕೋ):ಇದರಲ್ಲಿ ಚಮ೯ದ ಮಡಿಕೆಯೊಂದಿಗೆ,ಮುಂಗಾಲು ಮತ್ತು ಹಿಂಗಾಗಳೂ ತೆಳುವಾದ ಚಮ೯ದ ಪೊರೆಯಿಂದ ಆವೃತವಾಗಿವೆ.ಹಾರುವ ಲೆಮುರ್ ಮತ್ತು ಹಾರುವಾ ಅಳಿಲುಗಳು ಪ್ಯಾರಾಚೂಟ್ ತಂತ್ರದಿಂದ ಗಾಳಿಯಲ್ಲಿ ತೇಲುವ ಸ್ತನಿಗಳು. ಹಾರವು ಲೆಮುರ್,ಮಲೇಷಿಯಾ ಮತ್ತು ಫಿಲಿಪೈನ್ ದ್ವೀಪಗಳ ಕಾಡುಗಳಲ್ಲಿ ವಾಸಿಸುವ ಮರವಾಸಿ.ಇದು ಸಸ್ಯಾಹಾರಿ.ತೊಗಲ ಮಡಿಕೆ ಕತ್ತಿನಿಂದ ಹೊರಟು ಮುಂಗೈ,ಪಾಶ್ವ್ಶ೯,ಹಿಂಗಾಲು ಮತ್ತು ಬಾಲದ ಸುತ್ತಲೂ ಹರಡಿಕೊಂಡು ಮರದಿಂದ ಮರಕ್ಕೆ ಹಾರಲು ಸಹಾಯಕವಾಗಿದೆ;

ಹಾರುವ ಅಳಿಲು:ಹಾರುವ ಅಳಿಲುಗಳಲ್ಲಿ ಅನೇಕ ಪ್ರಭೇದಗಳಿವೆ.ಉತ್ತರ ಮತ್ತು ಈಶಾನ್ಯ ಏಷಿಯಾದಲ್ಲಿ ವಾಸಿಸುವ ದೈತ್ಯ ಹಾರುವ ಅಳಿಲುಗಳು ೧೦೦ ಮೀಟರ್ ಗೂ ಹೆಚ್ಚುದೂರ ತೇಲಬಲ್ಲವು.ನೀಲಗಿರಿ,ಪಳನಿ ಮತ್ತು ಮಲಬಾರಿನ ಕಾಡುಗಳಲ್ಲಿರುವ ಹಾರುವ ಅಳಿಲು ದೈತ್ಯಾಕಾರದ್ದು.ಕಾಶ್ಮೀರದಲ್ಲೂ ಮತ್ತು ಉತ್ತರ ಅಮೆರಿಕಾದಲ್ಲೂ ಕೆಲವು ಜಾತಿಯ ಹಾರುವು ಅಳಿಲುಗಳಿವೆ.ಹಾರುವ ಲೆಮುರ್ ಗಳಲ್ಲಿರುವಂತೆ ತೊಗಲ ಮಡಿಕೆಪೊರೆ ಹಾರುವ ಅಳಿಲುಗಳಿಗಿಲ್ಲ.ಈ ವ್ಯತ್ಯಾಸದಿಂದ ಇವೆರಡು ಜೀವಿಗಳನ್ನು ಸುಲಭವಾಗಿ ಗುರುತಿಸಬಹುದು.