ತೇಟ್ಲದ ಗಸಿ ಅಂದರೆ ಕೆಸುವಿನ ಎಲೆಯಿಂದ ತಯಾರಿಸಿದ ಪದಾರ್ಥ .ಇದನ್ನು ತಯಾರಿಸಲು ಮುಖ್ಯವಾಗಿ ಕೆಸುವಿನ ಎಲೆ ಇರಲೇ ಬೇಕಾಗುತ್ತದೆ ಬೋಡಾಪುಂಡು.[] ಕೆಸುವಿನ ಗಿಡ ಆರೋಗ್ಯೊಕ್ಕೆ ತುಂಬಾ ಉಪಯೋಗಕಾರಿ ಗಿಡ .ಇದು ಮಳೆಗಾಲದಲ್ಲಿ ಹೇರಳವಾಗಿ ದೊರೆಯುತ್ತದೆ .ಆಟಿ(ಆಷಾಡ ) ತಿಂಗೊಳಿನಲ್ಲಿ ಇದರಿಂದ ತಯಾರಿಸಿದ ಖಾದ್ಯ ಬಹಳ ವಿಶೇಷವಾಗಿರುತ್ತದೆ ತೇವುದ ಪಲ್ಯ ಆರೋಗ್ಯಕ್ಕೆ ಒಳ್ಳೆಯದು[].

ತೇಟ್ಲ ಗಸಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು

ಬದಲಾಯಿಸಿ

ಮಾಡುವ ವಿಧಾನ

ಬದಲಾಯಿಸಿ
ತೇಟ್ಲ ಕಟ್ಟುನೆ

ಕೆಸುವಿನ ಎಲೆಯನ್ನು ಒಂದು ದಿವಸ ಮೊದಲು ಕಿತ್ತು ತಂದು ನೆಲದ ಮೇಲೆ ಹರಡ ಬೇಕು .ಅದು ಎಲ್ಲವು ಚೆನ್ನಾಗಿ ಬಾಡಿದ ನಂತರ ಮರುದಿವಸ ಒಂದು ಎಲೆಯನ್ನು ಕೈಯಲ್ಲಿ ತೆಗೆದುಕೊಂಡು ಒಂದು ಬದಿಯಿಂದ ಗಟ್ಟಿಯಾಗಿ ಬತ್ತಿ ತಯಾರಿಸುವ ರೀತಿ ಸುತ್ತಿಕೊಂಡು ಬರಬೇಕು .ಸುತ್ತಿ ಆದ ಮೇಲೆ ನಮಗೆ ತಿಳಿಯುವ ರೀತಿ ಒಂದು ಗಂಟು ಹಾಕಬೇಕು. ಎಲ್ಲಾ ಎಲೆಯನ್ನು ಸುತ್ತಿದ ನಂತರ ಸ್ವಲ್ಪ ಹಲಸಿನ ಬೀಜ ಸುಳಿದು ಹಾಕಿ ಬೇಯಿಸಲು ಒಲೆಯ ಮೇಲೆ ಇಡ ಬೇಕು ಮೊದಲು ಹಲಸಿನ ಬೀಜ ಬೇಯಲು ಇಡ ಬೇಕು ಆಮೇಲೆ ಮಸಾಲ ಸೇರಿಸಿದ ಮೇಲೆ ತೇಟ್ಲ ಹಾಕುವ ಕ್ರಮ .ಬೆಯಿಸಿದಾಗ ಜೀರಿಗೆ, ಬೆಳ್ಳುಳ್ಳಿ, ಮೆಂತೆ ,ಕೊತ್ತಂಬರಿ ಬೇವುಸೊಪ್ಪು ,ಒಣ ಮೆಣಸು ,ಹುಳಿ, ಎಲ್ಲವನ್ನು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಅದಕ್ಕೆ ಸ್ವಲ್ಪ ಹುಣಸೆ ಹುಳಿ ಸೇರಿಸಿ,ತುರಿದ ತೆಂಗಿನ ಕಾಯಿ ಸೇರಿಸಿ ನುಣ್ಣಗೆ ಅರೆದು ಅದನ್ನು ಬೇಯಿಸಿದ ಹಲಸಿನ ಬೀಜಕ್ಕೆ ಹಾಕಿ ಆಮೇಲೆ ಕುದಿಯಲು ಸುರುವಾಗುವಾಗ ತೇಟ್ಲ ಹಾಕ ಬೇಕು ಚೆನ್ನಾಗಿ ಕುದಿಸಿ ಒಗ್ಗರಣೆ ಕೊಟ್ಟರೆ ತೇಟ್ಲ ಗಸಿ ತಯಾರು.

ಉಲ್ಲೇಖ

ಬದಲಾಯಿಸಿ