ರಂಧ್ರ

(ತೂತು ಇಂದ ಪುನರ್ನಿರ್ದೇಶಿತ)

ರಂಧ್ರವು ಒಂದು ಟೊಳ್ಳಾದ ಜಾಗ, ಒಂದು ಘನಕಾಯದಲ್ಲಿ/ಘನಕಾಯದ ಮೂಲಕವಿರುವ ತೂತು, ಅಥವಾ ನೆಲದಲ್ಲಿನ ಉತ್ಖನನ. ರಂಧ್ರಗಳು ನೈಸರ್ಗಿಕ ಮತ್ತು ಕೃತಕ ಪ್ರಕ್ರಿಯೆಗಳಿಂದ ಉಂಟಾಗುತ್ತವೆ, ಮತ್ತು ವಿವಿಧ ಉದ್ದೇಶಗಳಿಗೆ ಉಪಯುಕ್ತವಿರಬಹುದು, ಅಥವಾ ಶಿಲ್ಪವಿಜ್ಞಾನದ ಅನೇಕ ಕ್ಷೇತ್ರಗಳಲ್ಲಿ ಪರಿಹರಿಸಬೇಕಾದ ಸಮಸ್ಯೆಯನ್ನು ಪ್ರತಿನಿಧಿಸಬಹುದು. ವಸ್ತು ಮತ್ತು ಸ್ಥಳವನ್ನು ಅವಲಂಬಿಸಿ, ರಂಧ್ರವು ಒಂದು ಮೇಲ್ಮೈಯಲ್ಲಿನ ತಗ್ಗು ಆಗಿರಬಹುದು (ಉದಾಹರಣೆಗೆ ನೆಲದಲ್ಲಿನ ರಂಧ್ರ), ಅಥವಾ ಆ ಮೇಲ್ಮೈಯ ಮುಖಾಂತರ ಸಂಪೂರ್ಣವಾಗಿ ಸಾಗಬಹುದು (ಉದಾಹರಣೆಗೆ ಕಾಗದದ ಚೂರಿನಲ್ಲಿ ರಂಧ್ರಕದಿಂದ ಸೃಷ್ಟಿಯಾದ ತೂತು). ನಿರ್ಮಾಣದಲ್ಲಿ, ಇದು ಕುರುಡು ರಂಧ್ರ ಮತ್ತು ತೂರಿಹೋಗುವ ರಂಧ್ರದ ನಡುವಿನ ವ್ಯತ್ಯಾಸವನ್ನು ವಿವರಿಸುತ್ತದೆ.

ಅಂಚೆಚೀಟಿಗಳ ಜೋಡಿಯ ನಡುವಿನ ರಂಧ್ರಗಳು

ರಂಧ್ರಗಳು ನೈಸರ್ಗಿಕ ಪ್ರಕ್ರಿಯೆಗಳು ಮತ್ತು ಮಾನವರು ಅಥವಾ ಪ್ರಾಣಿಗಳ ಉದ್ದೇಶಪೂರ್ವಕ ಕ್ರಿಯೆಗಳು ಸೇರಿದಂತೆ, ಅನೇಕ ಕಾರಣಗಳಿಂದ ಉಂಟಾಗಬಹುದು. ನೆಲದಲ್ಲಿ ಉದ್ದೇಶಪೂರ್ವಕವಾಗಿ ಮಾಡಲಾದ ರಂಧ್ರಗಳನ್ನು ಸಾಮಾನ್ಯವಾಗಿ ಖನನದ ಪ್ರಕ್ರಿಯೆಯಿಂದ ಮಾಡಲಾಗುತ್ತದೆ. ಒಂದು ವಸ್ತುವಿನಲ್ಲಿನ ಅನುದ್ದೇಶಪೂರ್ವಕ ರಂಧ್ರಗಳು ಹಲವುವೇಳೆ ಹಾನಿಯ ಸಂಕೇತವಾಗಿರುತ್ತವೆ. ಗುಂಡಿಗಳು ಮತ್ತು ಬತ್ತುಕುಳಿಗಳು ಮಾನವ ನೆಲಸೆಗಳನ್ನು ನಾಶಗೊಳಿಸಬಲ್ಲವು.[] ರಂಧ್ರಗಳು ವಿವಿಧ ಬಗೆಯ ವಸ್ತುಗಳಲ್ಲಿ, ಮತ್ತು ವ್ಯಾಪಕ ವ್ಯಾಪ್ತಿಯ ಪ್ರಮಾಣಗಳಲ್ಲಿ ಉಂಟಾಗಬಹುದು. ಮಾನವರು ವೀಕ್ಷಿಸಬಹುದಾದಂಥ ಅತಿ ಸಣ್ಣ ರಂಧ್ರಗಳು ಸೂಜಿತೂತುಗಳು ಮತ್ತು ಸಾಲುತೂತುಗಳನ್ನು ಒಳಗೊಂಡಿವೆ, ಆದರೆ ರಂಧ್ರವೆಂದು ವರ್ಣಿಸಲಾದ ಅತ್ಯಂತ ಸಣ್ಣ ವಿದ್ಯಮಾನವೆಂದರೆ ಇಲೆಕ್ಟ್ರಾನ್ ರಂಧ್ರ. ಇಲೆಕ್ಟ್ರಾನ್ ರಂಧ್ರವೆಂದರೆ ಇಲೆಕ್ಟ್ರಾನ್ ಇಲ್ಲದಿರುವ ಅಥವಾ ಕಳೆದುಹೋಗಿರುವ ಪರಮಾಣು ಅಥವಾ ಪರಮಾಣು ಜಾಲರಿಯಲ್ಲಿನ ಸ್ಥಳ. ರಂಧ್ರವೆಂದು ವರ್ಣಿಸಲಾದ ಅತ್ಯಂತ ದೊಡ್ಡ ವಿದ್ಯಮಾನವೆಂದರೆ ಅತಿಬೃಹತ್ ಕಪ್ಪುರಂಧ್ರ. ಕಪ್ಪುರಂಧ್ರವು ಭೂಮಿಯ ಸೂರ್ಯನಿಗಿಂತ ಬಿಲಿಯನ್‍ಗಟ್ಟಲೆ ಹೆಚ್ಚು ಬೃಹತ್ ಗಾತ್ರವನ್ನು ಹೊಂದಿರಬಹುದಾದಂಥ ಬಾಹ್ಯಾಕಾಶ ವಸ್ತು.

ಪ್ರಾಣಿಗಳ ಶರೀರಗಳು ವಿವಿಧ ಜೈವಿಕ ಕಾರ್ಯಗಳನ್ನು ನಿರ್ವಹಿಸುವ ವಿಶೇಷೀಕೃತ ರಂಧ್ರಗಳನ್ನು ಹೊಂದಿರುವ ಪ್ರವೃತ್ತಿ ಇರುತ್ತದೆ, ಉದಾಹರಣೆಗೆ ಆಮ್ಲಜಕನ ಅಥವಾ ಆಹಾರದ ಸೇವನೆ, ತ್ಯಾಜ್ಯವಸ್ತುಗಳ ವಿಸರ್ಜನೆ, ಮತ್ತು ಸಂತಾನೋತ್ಪತ್ತಿಯ ಉದ್ದೇಶಗಳಿಗಾಗಿ ಇತರ ದ್ರವಗಳ ಅಂತಗ್ರಹಣ ಅಥವಾ ಹೊರಹಾಕುವಿಕೆ. ಆದರೆ, ಕೆಲವು ಸರಳ ಪ್ರಾಣಿಗಳಲ್ಲಿ, ಈ ಎಲ್ಲ ಉದ್ದೇಶಗಳನ್ನು ನೆರವೇರಿಸಲು ಏಕಮಾತ್ರ ರಂಧ್ರವಿರುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "The hole story". The Economist. Retrieved 2017-02-11.
"https://kn.wikipedia.org/w/index.php?title=ರಂಧ್ರ&oldid=888178" ಇಂದ ಪಡೆಯಲ್ಪಟ್ಟಿದೆ