ತೂಟೆದಾರ

ತೂಟೆದಾರ ಎಂಬುದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಅರ್ಪಿಸುವ ಒಂದು ರೀತಿಯ ಹರಕೆ ಅಥವಾ ಇದೊಂದು ಸಾಂಕೇತಿಕ ರೀತಿಯಲ್ಲಿ ಬೆಂಕಿಯೊಂದಿಗೆ ಎರಡು ಬಣಗಳ ನಡುವೆ ನಡೆಯುವ ಬೆಂಕಿ ಯುಧ್ಧ ಅಂತ ಹೇಳಿದರೂ ತಪ್ಪಾಗದು. ಇದನ್ನು ಕಟೀಲು ನದಿಯ ತೀರದ ಅಂಚಿನಲ್ಲಿ ಆಡಲಾಗುತ್ತದೆ. ಎರಡು ಮಾಗಣೆ ಗ್ರಾಮಗಳಿಗೆ ಸೇರಿದ ಅತ್ತೂರು ಮತ್ತು ಕೊಡತ್ತೂರಿನ ಜನರ ನಡುವೆ ನಡೆಯುವ ತೂಟೆದಾರ ಸೇವೆ ನೋಡುವ ಸಾವಿರಾರು ಜನರನ್ನು ಇದು ಅಚ್ಚರಿಗೊಳಿಸುತ್ತದೆ.[]

ತೂಟೆದಾರ ಆಡುವ ಸಮಯ

ಬದಲಾಯಿಸಿ

ಪ್ರತಿ ವರ್ಷ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪೂರ್ಣಾಹುತಿ ನಂತರ ಬೆಳಗಿನ ಜಾವ ದೇವಿಯ ಅವಭೃತ ಸ್ನಾನ ನಡೆಯುತ್ತದೆ. ಅವಭೃತ ಸ್ನಾನದ ನಂತರ ಈ ತೂಟೆದಾರ ಆಟ ಪ್ರಾರಂಭವಾಗುತ್ತದೆ.[] ಮೊದಲಿಗೆ ಅಜಾರಿನ ನಂದಿನಿ ನದಿಯಲ್ಲಿ ದೇವಿಯ ಜಳಕೋತ್ಸವ ಆರಂಭವಾಗಿ, ನಂತರ ರಕ್ತೇಶ್ವರಿ ಬೆಟ್ಟದಲ್ಲಿ ಅತ್ತೂರು-ಕೊಡೆತ್ತೂರು ಗ್ರಾಮಸ್ಥರಿಂದ ತೂಟೆದಾರ ನಡೆಯುತ್ತದೆ. ಬಳಿಕ ತೀರ್ಥ ಸ್ನಾನ, ಪ್ರಸಾದ ವಿತರಣೆ ನಡೆಯುತ್ತದೆ.

ತೂಟೆದಾರದಲ್ಲಿ ಭಾಗವಹಿಸುವವರು

ಬದಲಾಯಿಸಿ

ತೂಟೆದಾರ ಎನ್ನುವುದು ತೆಂಗಿನ ಗರಿಗಳನ್ನು ಒಣಗಿಸಿ ಅದರಿಂದ ತೂಟೆ ಅಥಾವ ಸೂಟೆಯನ್ನು ಮಾಡಿ, ಅದಕ್ಕೆ ಬೆಂಕಿ ಕೊಟ್ಟು ನೋಡು ನೋಡುತ್ತಾ ವಿರುದ್ಧ ದಿಕ್ಕಿನಲ್ಲಿ ಇರುವ ಬಣಕ್ಕೆ ಎಸೆಯುವ ಆಟವಾಗಿದೆ. ಕಟೀಲು ಸಮೀಪದ ಅತ್ತೂರು ಮತ್ತು ಕೊಡತ್ತೂರು ಗ್ರಾಮದ ಜನರಿಗೆ ಮಾತ್ರ ಇದರಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ. ಇತರ ಗ್ರಾಮಸ್ಥರಿಗೆ ಈ ಆಟ ಅಥವಾ ಹರಕೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ.[]

ತೂಟೆದಾರ ಸೇವೆ ಮಾಡುವ ಕ್ರಮ

ಬದಲಾಯಿಸಿ

ಪ್ರತಿ ವರ್ಷ ಎಂಟು ದಿನಗಳ ಕಾಲ ಕಟೀಲು ಜಾತ್ರೆ ನಡೆಯುತ್ತದೆ. ಈ ಎಂಟು ದಿನ ಉಪವಾಸ ಪೂಜೆ ಸಲ್ಲಿಸುವ ಎರಡು ಗ್ರಾಮಗಳ ಗ್ರಾಮಸ್ಥರು. ಇದರ ಜೊತೆಗೆ, ಮಾಂಸಾಹಾರ ಮತ್ತು ಕೆಟ್ಟ ಅಭ್ಯಾಸಗಳನ್ನು ಬಿಟ್ಟು, ಸಸ್ಯಾಹಾರವನ್ನು ಮಾತ್ರ ಮಾಡಿ, ಉತ್ಸವದ ಕೊನೆಯ ದಿನ ದೇವಿಯ ಅವಭೃತದ ಕೊನೆಯಲ್ಲಿ ಭಕ್ತರು ತೂಟೆದಾರದ ಹರಕೆಯನ್ನು ನೆರವೇರಿಸುತ್ತಾರೆ. ಬಳಿಕ ಗಂಧ ಪ್ರಸಾದ ವಿತರಿಸಲಾಗುತ್ತದೆ. ಮೊದಲ ಸುತ್ತನ್ನು ದೇವಸ್ಥಾನದ ಬಳಿಯ ರ್ಕತೇಶ್ವರೀ ಬೆಟ್ಟದ ಮೇಲೆ ಆಡಲಾಗುತ್ತದೆ. ಎರಡನೇ ಸುತ್ತಿನ ಆಟವನ್ನು ದೇವಸ್ಥಾನದ ಮುಂಭಾಗದಲ್ಲಿ ಆಡಲಾಗುತ್ತದೆ.

ಪುರಾಣ- ಇತಿಹಾಸ

ಬದಲಾಯಿಸಿ

ಯಾವುದೇ ಪುರಾಣಗಳಲ್ಲಿ ಈ ತೂಟೆದಾರದ ಬಗ್ಗೆ ಮಾಹಿತಿ ಇಲ್ಲ, ಆದರೆ ಪ್ರಾಚೀನ ಕಾಲದಲ್ಲಿ ದುಷ್ಟ ಶಕ್ತಿಗಳನ್ನು ನಾಶಪಡಿಸಿದ ದೇವಿಯನ್ನು ಒಲಿಸಿಕೊಳ್ಳಲು ಮತ್ತು ದೇವಿಯನ್ನು ಒಲಿಸಲು ಇದನ್ನು ಆಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ.

ತೂಟೆದಾರದ ಅಂತ್ಯ

ಬದಲಾಯಿಸಿ

ಅತ್ತೂರು ಮತ್ತು ಕೊಡೆತ್ತೂರು ಎರಡು ಗ್ರಾಮಗಳ ಜನರು ಪರಸ್ಪರ ಮುಖಾಮುಖಿಯಾಗಿ ನಿಂತುಕೊಂಡು ಉರಿಯುತ್ತಿರುವ ದೀಪಗಳನ್ನು ಪರಸ್ಪರ ಎಸೆಯುತ್ತಾರೆ. ಆದರೆ, ಇತಿಹಾಸದಲ್ಲಿ ಇಲ್ಲಿಯವರೆಗೆ ಈ ಬೆಂಕಿಯಿಂದ ಯಾರೂ ಗಾಯಗೊಂಡಿಲ್ಲ. ಕನಿಷ್ಠ ಬಟ್ಟೆಗೆ ಬೆಂಕಿ ಹಚ್ಚುವುದಿಲ್ಲ. ದೇವರ ಅವಭೃತದ ನಂತರ ಜಾತ್ರೆಯ ಸಂದರ್ಭದಲ್ಲಿ ಮಾತ್ರ ನಡೆಯುವ ಈ ಹರಕೆ ರೂಪದ ಕಾಳಗದಲ್ಲಿ ಭಾಗವಹಿಸುವ ಎರಡೂ ತಂಡಗಳಿಗೆ ಪ್ರಸಾದ ನೀಡಲಾಗುತ್ತದೆ. ಭಕ್ತರು ತಮ್ಮ ಚರ್ಮದ ಮೇಲೆ ದೇವಿಯ ಗಂಧವನ್ನು ಹಚ್ಚಿ ಕೊಳ್ಳುತ್ತಾರೆ. ಅಲ್ಲಿಗೆ ತೂಟೆದಾರದ ಹರಕೆ ಮುಗಿಯುತ್ತದೆ.[]

ಉಲ್ಲೇಖಗಳು

ಬದಲಾಯಿಸಿ
  1. Jump up to: ೧.೦ ೧.೧ Bharat, E. T. V. (21 April 2024). "ಶ್ರೀ ಕ್ಷೇತ್ರ ಕಟೀಲಿನಲ್ಲಿ ಪ್ರಸಿದ್ಧ 'ತೂಟೆದಾರ' ಸೇವೆ: ವಿಡಿಯೋ ನೋಡಿ - Kateel Thootedhara Seva". ETV Bharat News.
  2. "2 ಗ್ರಾಮಸ್ಥರ ನಡುವೆ ಬೆಂಕಿಯ ಭೀಕರ ಕಾದಾಟ; ಇದು ಕಟೀಲು ಜಾತ್ರೆಯ 'ತೂಟೆದಾರ'ದ ವಿಶೇಷ | Mangaluru: Thoothedhara Ritual in Kateel Durgaparameshwari Jatre; Fire Fight Between 2 Villagers - Kannada Oneindia".
  3. "2 ಗ್ರಾಮಸ್ಥರ ನಡುವೆ ಬೆಂಕಿಯ ಭೀಕರ ಕಾದಾಟ; ಇದು ಕಟೀಲು ಜಾತ್ರೆಯ 'ತೂಟೆದಾರ'ದ ವಿಶೇಷ | Mangaluru: Thoothedhara Ritual in Kateel Durgaparameshwari Jatre; Fire Fight Between 2 Villagers - Kannada Oneindia".


"https://kn.wikipedia.org/w/index.php?title=ತೂಟೆದಾರ&oldid=1244840" ಇಂದ ಪಡೆಯಲ್ಪಟ್ಟಿದೆ