ತೂಕಡಿಕೆ
ತೂಕಡಿಕೆಯು (ಜೋಂಪು, ಜೊಂಪು, ಮಂಪರು) ನಿದ್ರೆಯ ಪ್ರಬಲ ಬಯಕೆಯ ಸ್ಥಿತಿ, ಅಥವಾ ಅಸಾಮಾನ್ಯವಾಗಿ ದೀರ್ಘ ಅವಧಿಗಳವರೆಗೆ ಮಲಗುವುದು. ಇದು ವಿಶಿಷ್ಟ ಅರ್ಥಗಳು ಮತ್ತು ಕಾರಣಗಳನ್ನು ಹೊಂದಿದೆ. ಇದು ಮಲಗುವ ಮೊದಲಿನ ಸಾಮಾನ್ಯ ಸ್ಥಿತಿಯನ್ನು[೧], ದಿನಕ್ಕೊಮ್ಮೆಯ ಗತಿಯ ಅಸ್ವಸ್ಥತೆಗಳ ಕಾರಣದಿಂದ ಮಂಪರಿನ ಸ್ಥಿತಿಯಲ್ಲಿರುವ ಸಂದರ್ಭವನ್ನು, ಅಥವಾ ಇತರ ಆರೋಗ್ಯ ಸಮಸ್ಯೆಗಳ ಲಕ್ಷಣವನ್ನು ಸೂಚಿಸಬಹುದು. ಇದರ ಜೊತೆಗೆ ಜಡತೆ, ದುರ್ಬಲತೆ, ಮತ್ತು ಮಾನಸಿಕ ಚುರುಕುತನದ ಅಭಾವವಿರಬಹುದು.
ಜೋಂಪನ್ನು ಹಲವುವೇಳೆ ಸ್ವತಃ ಒಂದು ಅಸ್ವಸ್ಥತೆಯ ಬದಲು ಲಕ್ಷಣವಾಗಿ ಕಾಣಲಾಗುತ್ತದೆ. ಆದರೆ, ನಿರ್ದಿಷ್ಟ ಸಮಯಗಳಲ್ಲಿ ನಿರ್ದಿಷ್ಟ ಕಾರಣಗಳಿಂದ ಪುನರಾವರ್ತಿಸುವ ಜೋಂಪಿನ ಪರಿಕಲ್ಪನೆಯು ವಿವಿಧ ಕಾಯಿಲೆಗಳ ಭಾಗವಾಗಿದೆ, ಉದಾಹರಣೆಗೆ, ಅತ್ಯಧಿಕ ಹಗಲಿನ ತೂಕಡಿಕೆ, ಪಾಳಿ ಕೆಲಸ ನಿದ್ರಾ ಅಸ್ವಸ್ಥತೆ, ಇತ್ಯಾದಿ; ಮತ್ತು ಅಸ್ವಸ್ಥತೆಯಾಗಿ ಕಾಣಲಾದಾಗ ಜೋಂಪಿಗೆ ವೈದ್ಯಕೀಯ ಸಂಕೇತಗಳಿವೆ.
ಉಲ್ಲೇಖಗಳು
ಬದಲಾಯಿಸಿ- ↑ Bereshpolova, Y.; Stoelzel, C. R.; Zhuang, J.; Amitai, Y.; Alonso, J.-M.; Swadlow, H. A. (2011). "Getting Drowsy? Alert/Nonalert Transitions and Visual Thalamocortical Network Dynamics". Journal of Neuroscience. 31 (48): 17480–7. doi:10.1523/JNEUROSCI.2262-11.2011. PMID 22131409.