ತುಳು ನಾಡಿನ ಜನಪದ ಕ್ರೀಡೆ

ತುಳು ನಾಡಿನ ಜನರ ಪ್ರಸಿದ್ಧ ಜಾನಪದ ಕ್ರೀಡೆ ಎಂದರೆ "ಕಂಬಳ"(ಕಂಬುಳ) ಹಾಗು ಕೋಳಿ ಅಂಕ (ಕೋರಿತ ಕಟ್ಟ).

ಕಂಬಳ

ಈ ಕ್ರೀಡೆಯಲ್ಲಿ ೨ ಬಲಿಷ್ಟವಾದ ಕೋಣ ಗಳನ್ನು ನೊಗಕ್ಕೆ ಕಟ್ಟಿ ಕೆಸರು ಗದ್ದೆಯಲ್ಲಿ ಓಡಿಸುತ್ತಾರೆ. ಈ ಪಂದ್ಯಕ್ಕೆ ಹಲವಾರು ಕೋಣಗಳ ಜೋಡಿ ಬರುತ್ತದೆ. ಗೆದ್ದ ಕೋಣಗಳಿಗೆ ವಿಷೇಷ ವಾಗಿ ಗೌರವಿಸಲಾಗುತ್ತದೆ. ಮುಖ್ಯವಾಗಿ ಹುರುಳಿ ಕಾಳು ಬಹುಮಾನ ಇರುತ್ತದೆ.

ಕೋಳಿ ಅಂಕ

ತುಳು ನಾಡಿನ ಹಳ್ಳಿಗಳಲ್ಲಿ ವಾರದ ಕೆಲವೊಂದು ನಿಗದಿತ ದಿನಗಳಂದು ಸಂಭ್ರಮದ ವಾತಾವರಣ(?). ಸೂರ್ಯ ಮುಳುಗುವ ಹೊತ್ತಿಗೆ ಸುತ್ತಮುತ್ತಲಿನ ಯೆಲ್ಲಾ ಊರುಗಳಿಂದ ಜನರು ತಮ್ಮ ಕೋಳಿಗಳೊಂದಿಗೆ "ಕಣ"ಕ್ಕೆ ಆಗಮುಸುತ್ತಾರೆ. ಎರಡು ಕೋಳಿಗಳ ಯಜಮಾನರ ನಡುವೆ ಮಾತುಕತೆ ನಡೆದು ಕೋಳಿಗಳಿಗೆ ಕಿರು ಕತ್ತಿ(ಬಾಳ್) ಕಾಲಿಗೆ ಹಿಮ್ಮುಖ್ವಾಗಿ ಕಟ್ಟಿ ಅಖಾಡದಲ್ಲಿ ಬಿಡುತ್ತಾರೆ. ಆ ಎರಡು ಕೋಳಿಗಳು ಕಾದಾಡಿ ಅವುಗಳಲ್ಲಿ ಒಂದು ಕೋಳಿ ಪ್ರಜ್ನಾಹೀನ(ಸಾಯುತ್ತದೆ)ಆಗುತ್ತದೆ. ಹೀಗೆ ಸತ್ತ(ಸೋತ) ಕೋಳಿ ಯನ್ನು "ಒಟ್ಟೆ" ಎಂದೂ ಗೆದ್ದ ಕೋಳಿ ಯನ್ನು "ಬಂಟ" ಎಂದೂ ಕರೆಯುತ್ತಾರೆ. ಆದರೆ ಈಗ ಕಾನೂನು ಕ್ರಮದಿದಿಂದಾಗಿ ಕೋಳಿ ಅಂಕ ನಡೆಯುತ್ತಿಲ್ಲ ಯೆಂಬುದು ಬೇಸರದ ಸಂಗತಿ.