ತುಳಸಿ ಗೆಬಾರ್ಡ್
ತುಳಸಿ ಗೆಬಾರ್ಡ್ (ಜನನ:ಏಪ್ರಿಲ್ 12, 1981)ಅಮೆರಿಕದ ಸೈನ್ಯದಲ್ಲಿ ಮಹತ್ವದ ಸೇವೆಯನ್ನು ಮಾಡಿದರು. 'ಭಗವದ್ಗೀತೆ'ಯನ್ನು ಸತತವಾಗಿ ಪಠಿಸಿ, ಅದನ್ನು ತಮ್ಮ ಜೀವನದ ದಾರಿದೀಪವಾಗಿ ಪರಿಗಣಿಸಿದ ಹಿಂದು ಮತದ ಅನುಯಾಯಿಯಾಗಿ ಒಬ್ಬ ವಿಶಿಷ್ಠವ್ಯಕ್ತಿಯಾಗಿ ಜನಪ್ರಿಯರಾಗಿದ್ದಾರೆ. [೨] [೩]
ತುಳಸಿ ಗೆಬಾರ್ಡ್ | |
---|---|
ಹಾಲಿ | |
ಅಧಿಕಾರ ಸ್ವೀಕಾರ ಜನವರಿ,೩,೨೦೧೩ | |
ಪೂರ್ವಾಧಿಕಾರಿ | Mazie Hirono |
Member of the Honolulu City Council
from the Sixth District | |
ಅಧಿಕಾರ ಅವಧಿ January 2, 2011 – August 16, 2012 | |
ಪೂರ್ವಾಧಿಕಾರಿ | Rod Tam |
ಉತ್ತರಾಧಿಕಾರಿ | Carol Fukunaga |
Member of the Hawaii House of Representatives
from the 42nd district | |
ಅಧಿಕಾರ ಅವಧಿ 2002 – 2004 | |
ಪೂರ್ವಾಧಿಕಾರಿ | Mark Moses |
ಉತ್ತರಾಧಿಕಾರಿ | Rida Cabanilla |
ವೈಯಕ್ತಿಕ ಮಾಹಿತಿ | |
ಜನನ | ಟೆಂಪ್ಲೇಟು:ಹುಟ್ಟಿತ ತಾರೀಖು, ವಯಸ್ಸು(ಏಪ್ರಿಲ್ 12, 1981) ಲೆಲೋಲ, ಅಮೆರಿಕನ್ ಸಮೊವ, ಅಮೆರಿಕ[೧] |
ರಾಜಕೀಯ ಪಕ್ಷ | Democratic |
ಸಂಗಾತಿ(ಗಳು) | ಎಡ್ಯಾರ್ಡೊ ಟಮಯೊ(Divorced) |
ಅಭ್ಯಸಿಸಿದ ವಿದ್ಯಾಪೀಠ | ಹವಾಯಿ ಪೆಸಿಫಿಕ್ ವಿಶ್ವವಿದ್ಯಾಲಯ Officer Candidate School, Army |
ಧರ್ಮ | ಹಿಂದು |
ಜಾಲತಾಣ | Representative Tulsi Gabbard |
ಮಿಲಿಟರಿ ಸೇವೆ | |
ಸೇವೆ/ಶಾಖೆ | ಅಮೆರಿಕೆಯ ಸೇನೆ |
ವರ್ಷಗಳ ಸೇವೆ | ೨೦೦೪–ಇದುವರೆವಿಗೂ |
Rank | Captain |
ಪ್ರಶಸ್ತಿಗಳು | Meritorious Service Medal Army Commendation Medal Army Achievement Medal with Oak leaf cluster Army Good Conduct Medal Combat Medical Badge German Armed Forces Badge for Military Proficiency in Gold |
ಜನನ,ಬಾಲ್ಯ,ವೃತ್ತಿಜೀವನ
ಬದಲಾಯಿಸಿಅಮೆರಿಕದ 'ಸಮೋವಾ' ಎಂಬ ದ್ವೀಪದಲ್ಲಿ. ಗೆಬಾರ್ಡ್ ದಂಪತಿಗಳ ನಾಲ್ಕನೇ ಮಗಳಾಗಿ ಏಪ್ರಿಲ್, ೧೨, ೧೯೮೧ ರಲ್ಲಿ, ಜನಿಸಿದಳು. ತಂದೆ, 'ಮೈಕ್ ಗೆಬಾರ್ಡ್,' ತುಳಸಿ ಇನ್ನೂ ಎರಡು ವರ್ಷದವಳಾಗಿದ್ದಾಗ, ಹ'ವಾಯಿ ದ್ವೀಪ ಸಮೂಹ'ಕ್ಕೆ ಕುಟುಂಬ ಸಮೇತ ವಲಸೆ ಹೋದರು. ತಂದೆ-ತಾಯಿ ಮೂಲತಃ ಕ್ರೈಸ್ತರು. ಆದರೆ ತಂದೆಗೆ ಮಂತ್ರ ಪಠನೆ, ಧ್ಯಾನ ಹಾಗೂ ಕೀರ್ತನೆಗಳಲ್ಲಿ ಅತೀವ ಆಸಕ್ತಿ. ಅವರು ಕ್ರೈಸ್ತರಾಗಿಯೇ ಉಳಿದರು, ತಾಯಿ 'ಕಕೇಶಿಯನ್'. ಹಿಂದೂ ಧರ್ಮದ ಅನುಯಾಯಿಯಾದರು. ಈ ದಂಪತಿಗಳ ಐದೂ ಮಕ್ಕಳ ಹೆಸರು ಕ್ರಮವಾಗಿ :
- ಭಕ್ತಿ,
- ಜೈ,
- ಆರ್ಯನ್,
- ತುಳಸಿ
- ವೃಂದಾವನ್
'ತುಳಸಿ ಗೆಬಾರ್ಡ್' ರ ತಾಯಿ, ಭಗವದ್ಗೀತೆಯನ್ನು ಪ್ರತಿದಿನ ಪಠಿಸುತ್ತಿದ್ದರಲ್ಲದೆ ಮಕ್ಕಳಿಗೂ ಅದರ ಮಹತ್ವವನ್ನು ಪರಿಚಯಿಸಿದರು. ಐದು ಮಕ್ಕಳಲ್ಲಿ ಭಗವದ್ಗೀತೆಯ ಮಹತ್ವವನ್ನು ಹೆಚ್ಚಾಗಿ ಅರಿತವರು 'ತುಳಸಿ'.ಇನ್ನೂ ಹದಿಹರೆಯ ವಯಸ್ಸಿನಲ್ಲಿ ಇದೇ ಧರ್ಮದ ಮಾರ್ಗದಲ್ಲಿ ನಡೆಯುತ್ತೇನೆ ಮನಸ್ಸಿನಲ್ಲಿ ನಿಶ್ಚಯಿಸಿದರು. ಹಿಂದೂವಾಗಿ, ವೈಷ್ಣವಳಾಗಿ, ವಿಷ್ಣುವಿನ ಅವತಾರಗಳ ಬಗ್ಗೆ ಸಾಕಷ್ಟು ಅರಿತು, ರಾಮಾಯಣ ಮಹಾಭಾರತಗಳನ್ನೂ ಮನನಮಾಡಿಕೊಂಡಳು. ಈ ಮಹಾನ್ ಗ್ರಂಥಗಳು ತುಳಸಿ ಗೆಬಾರ್ಡ್ ಮನಸ್ಸಿನಲ್ಲಿ ಅದ್ಭುತ ಪರಿಣಾಮವನ್ನು ಉಂಟುಮಾಡಿತು.
ತುಳಸಿ ಗೆಬಾರ್ಡ್ ರ ವ್ಯಕ್ತಿತ್ವ
ಬದಲಾಯಿಸಿ'ತುಳಸಿ,' ಚಿಕ್ಕಪ್ರಾಯದಲ್ಲೇ ತಂದೆಯ ವ್ಯಾಪಾರದಲ್ಲಿ ಚಿಕ್ಕ ಪುಟ್ಟ ಸಹಾಯಗಳನ್ನು ಮಾಡಿಕೊಡುತ್ತಿದ್ದಳು. ಅವಳಿಗೆ ಪ್ರಿಯವಾದ ಮತ್ತೊಂದು ಕಲೆಯೆಂದರೆ ಸಮರ ಕಲೆ. ಇದರಲ್ಲಿ ನಿಷ್ಣಾತಳದಳು. ವಿಚಾರಗಳ ಮಂಥನದಿಂದ ಮನಸ್ಸನ್ನು ಗಟ್ಟಿಮಾಡಿಕೊಂಡಳು. ದೇಹಧಾರಡ್ಯಕ್ಕೂ ಅತಿಹೆಚ್ಚಿನ ಗಮನ ಕೊಟ್ಟಳು. ಜವಾಬ್ದಾರಿಗಳು, ಸವಾಲುಗಳು ಮತ್ತು ಅವನ್ನು ಎದುರಿಸುವಾಗ ಮನಗಂಡ ಅಪಾಯಗಳನ್ನು ಸಂತೋಷದಿಂದ ಆಹ್ವಾನಿಸಿದಳು. ಸಮಾಜಸೇವೆಯನ್ನು ಮಾಡುವುದರಲ್ಲಿ ಆಕೆಗೆ ಅತ್ಯಂತ ಪ್ರೀತಿ ಇತ್ತು. ಅಂತಾರಾಷ್ಟ್ರೀಯ ವ್ಯಾಪಾರದ ವಿಷಯದಲ್ಲಿ ಪದವಿ ಗಳಿಸಿದಳು. ೨೦೦೨ ರಲ್ಲಿ, ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲೇ ಹವಾಯಿಯ ಶಾಸಕಾಂಗಕ್ಕೆ ಮೊದಲ ಬಾರಿ ಅತಿ ಕಿರಿಯ ವ್ಯಕ್ತಿಯಾಗಿ ಆಯ್ಕೆಯಾದಳು. ಅಮೆರಿಕನ್ ಸೇನೆಯನ್ನು ಸೇರಿಕೊಂಡುಬಿಟ್ಟಳು. ೨೦೦೪ ರಲ್ಲಿ ಇರಾಕ್‍ನ ಯುದ್ಧ ವಲಯಕ್ಕೆ ಹೋಗಿ ಒಂದು ವರ್ಷ ಸೈನ್ಯದ ಜೊತೆ ದುಡಿದು ತನ್ನ ತುಕಡಿಯೊಂದಿಗೆ ಹಿಂದಿರುಗಿದಳು. ಮುಂದೆ ಸೇನಾಧಿಕಾರಿಗಳಿಗೆ ಸೀಮಿತವಾಗಿದ್ದ ಉನ್ನತ ತರಬೇತಿಯನ್ನು ಪಡೆದು, ತನ್ನ ಕೇಂದ್ರಕ್ಕೇ ಪ್ರಥಮ ವ್ಯಕ್ತಿಯಾಗಿ ಹೆಸರು ಗಳಿಸಿದಳು.೨೦೦೮ ರಲ್ಲಿ ತುಳಸಿ ಕುವೈತ್‍ನ ಯುದ್ಧ ಭೂಮಿಗೆ ಪಾದಾರ್ಪಣೆಮಾಡಿದಳು. ಕುವೈತ್‍ನ ಸೇನಾಧಿಕಾರಿಗಳು ತುಳಸಿಯ ಸಾಹಸ, ಶೌರ್ಯ, ಸಮಯಪ್ರಜ್ಞೆಗಳನ್ನು ಕಂಡು ಪ್ರಭಾವಿತರಾಗಿ ಪ್ರಶಸ್ತಿಯನ್ನೇ ನೀಡಿ ಸನ್ಮಾನಿಸಿದರು. ಮಹಿಳೆಯೊಬ್ಬಳ ಸಾಹಸಕ್ಕೆ ಪ್ರಶಸ್ತಿ ಕೊಡಮಾಡಿದ್ದು ಕುವೈತ್‍ನ ಇತಿಹಾಸದಲ್ಲೇ ಮೊಟ್ಟಮೊದಲು.
ರಾಜಕೀಯ ಕ್ಷೇತ್ರದಲ್ಲಿ
ಬದಲಾಯಿಸಿಕಾಲಕ್ರಮದಲ್ಲಿ ೨೦೧೦ ರಲ್ಲಿ 'ಹೊನೊಲುಲು ನಗರ ಸಭೆಗೆ ಆಯ್ಕೆ'ಯಾಗಿ ಅಲ್ಲಿ ಗಮನಾರ್ಹ ಸೇವೆಯನ್ನು ಮಾಡಿದಳು. ೨೦೧೨ ರಲ್ಲಿ ಅಮೆರಿಕದ ಕೆಳಮನೆ, ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ ಗಾಗಿ ನಡೆದ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದಿಂದ ಗೆದ್ದರು. ಇದೊಂದು ದಾಖಲೆ. [೪] ೩೧ ವಯಸ್ಸಿನಲ್ಲಿ ಅಮೆರಿಕದ ಕಾಂಗ್ರೆಸ್ ಸೇರಿದ ಮೊತ್ತ ಮೊದಲ ಹಿಂದೂ ಮಹಿಳೆಯಾಗಿದ್ದಳು. ಇದಲ್ಲದೆ, ಇತಿಹಾಸದಲ್ಲೇ ಪ್ರಪ್ರಥಮವಾಗಿ ಆಯ್ಕೆಯಾದ ಸೇನಾ ಹಿನ್ನೆಲೆಯುಳ್ಳ ಇಬ್ಬರು ಮಹಿಳೆಯರಲ್ಲಿ ಒಬ್ಬಳೆಂಬ ಹೆಗ್ಗಳಿಕೆ. ಅಮೆರಿಕದ ಸಂಸತ್ತಿನಲ್ಲಿ ಭಗವದ್ಗೀತೆಯನ್ನು ಸಾಕ್ಷಿಯಾಗಿಟ್ಟುಕೊಂಡೇ ಪ್ರಮಾಣ ವಚನ ಸ್ವೀಕಾರ ಮಾಡಿದ ಮೊದಲ ಮಹಿಳೆಯೆಂಬ ಶ್ರೇಯಸ್ಸು.
‘ನಾನು ಸೇನೆಯನ್ನು ಸೇರುವಾಗ, ಯಾವ ಧರ್ಮದವಳು ಎಂದು ಯಾರೂ ಕೇಳಲಿಲ್ಲವಲ್ಲ, ಈಗ ಅದೇಕೆ ಅಳತೆಗೋಲಾಗಬೇಕು? ಎಂದು ನೇರವಾಗಿಯೇ ಕೇಳಿದವಳು. ಆದ್ದರಿಂದಲೇ ಇಂದು ಅಮೆರಿಕದಲ್ಲಿರುವ ಹಿಂದೂಗಳಿಗೆ ತುಳಸಿಯೇ ಆಪ್ತಳಾಗಿದ್ದಾಳೆ.
ತುಳಸಿ ದಿಟ್ಟಸ್ವಭಾವದ ಮಹಿಳೆ
ಬದಲಾಯಿಸಿತುಳಸಿಯದ್ದು ನೇರ, ದಿಟ್ಟ ಮಾತು. ಆಗ ಇನ್ನೂ ಪ್ರಧಾನಿಯ ಪದವಿಯಲ್ಲಿಲ್ಲದ ಮೋದಿಯವರಿಗೆ ವೀಸಾ ನಿರಾಕರಿಸಿ ಅಮೆರಿಕ ದೊಡ್ಡ ತಪ್ಪು ಮಾಡುತ್ತಿದೆ ಎಂದು ಖಂಡಿಸಿದ್ದಳು ಅಮೆರಿಕ ತನ್ನ ಯೋಧರನ್ನು ಕಂಡ ಕಂಡ ದೇಶಗಳಿಗೆ ಯುದ್ಧದ ಸಲುವಾಗಿ ಅಟ್ಟುವುದನ್ನು ಕಟುವಾಗಿ ವಿರೋಧಿಸಿದ್ದಳು. ಕಳೆದ ಸೆಪ್ಟೆಂಬರ್‍ನಲ್ಲಿ ಮೋದಿಯವರು ಮ್ಯಾಡಿಸನ್ ಚೌಕಕ್ಕೆ ಬಂದಿದ್ದಾಗ ತುಳಸಿಯನ್ನು ಭೇಟಿಯಾಗಿದ್ದರು. ಭಾರತಕ್ಕೆ ಬರುವಂತೆ ಅಕ್ಕರೆಯ ಆಮಂತ್ರಣವನ್ನೂ ನೀಡಿದ್ದರು. ಬರ್ಖಾ ದತ್ ತುಳಸಿಯ ಸಂದರ್ಶನಕ್ಕೆಂದು ಓಡೋಡಿ ಹೋಗಿ, ವಿಚಿತ್ರವಾದ ವ್ಯಂಗ್ಯ ಬೆರೆಸಿ ‘ಇಡೀ ಸಂಸತ್ತಿನಲ್ಲಿ ನೀವೊಬ್ಬರೇ ಹಿಂದೂ. ಏನನಿಸುತ್ತದೆ ನಿಮಗೆ’ ಎಂದು ಕೇಳಿದಾಗ ತುಳಸಿ ಕೊಟ್ಟ ಅಭಿಮಾನದ ಉತ್ತರ ದಿವ್ಯವಾಗಿತ್ತು. ನವೆಂಬರ್‍ನಲ್ಲಿ ನಡೆದ ಚುನಾವಣೆಯಲ್ಲಿ ಎರಡನೆಯ ಅವಧಿಗೆ ಮತ್ತೆ ಆಯ್ಕೆಯಾಗಿದ್ದಾಳೆ.
ಭಗವದ್ಗೀತೆ ಅವರ ಜೀವನದಲ್ಲಿ ಹಾಸುಹೊಕ್ಕಿದೆ
ಬದಲಾಯಿಸಿ‘ನನ್ನ ಬದುಕಿನ ಸ್ಫೂರ್ತಿ ಹಾಗೂ ಜೀವಾಳವೇ ಭಗವದ್ಗೀತೆ’ ಎಂದು ದಿಟ್ಟ ಉತ್ತರ ಕೊಡುತ್ತಾರೆ. ಧೈರ್ಯ, ಶಾಂತಿ, ನೆಮ್ಮದಿ, ತಾಳ್ಮೆ ಹಾಗೂ ಸಮಾಜ ಸೇವೆಯ ಗುಣಗಳನ್ನು ಬೆಳೆಸಿದ್ದೇ ಗೀತೆಯಿಂದ ಎನ್ನುವ ಮಾತು ಅವರ ಹೃದಯದ ಆಂತರ್ಯದಿಂದ ಹೊರಹೊಮ್ಮುತ್ತದೆ. ಭಕ್ತಿ ಹಾಗೂ ಕರ್ಮ ಯೋಗಗಳು ಮೆಚ್ಚಿನವೇ ಆದರೂ ಸಾಂಖ್ಯಯೋಗದ ೨೩ ನೆಯ ಶ್ಲೋಕ ಅತ್ಯಂತ ಪ್ರೀತಿಯದ್ದಂತೆ. ಅದು ಹೀಗಿದೆ :
ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ
ಅರ್ಥ : 'ಆತ್ಮನನ್ನು ಶಸ್ತ್ರಗಳು ತುಂಡರಿಸಲಾರವು', 'ಬೆಂಕಿಯು ಸುಡಲಾರದು', 'ನೀರು ನೆನೆಸಲಾರದು' ಹಾಗೂ 'ಗಾಳಿಯು ಒಣಗಿಸಲಾರದು' ಎಂಬುದು ಇದರ ತಾತ್ಪರ್ಯ.‘. ಈಗ ವ್ಯಕ್ತಿತ್ವ ವಿಕಸನದ ಪಾಠಗಳಲ್ಲಿ ಹೇಗೆ ಗೀತೆಯನ್ನು ಅಳವಡಿಸುತ್ತಿದ್ದಾರೋ ಹಾಗೇ ತುಳಸಿಯೂ ತನ್ನ ಜೀವನದಲ್ಲಿ ಅದನ್ನು ಅಳವಡಿಸಿಕೊಂಡಿರುವುದು. ಅದರ ಫಲವೇ ಈ ಯಶಸ್ಸು ಹಾಗೂ ಸಾರ್ಥಕ್ಯ.
ಬೆಂಗಳೂರಿನಲ್ಲಿ
ಬದಲಾಯಿಸಿ'ಪ್ರಧಾನಿ ನರೇಂದ್ರ ಮೋದಿ' ಯವರ ಆಹ್ವಾನದಂತೆ, ಮೊದಲಬಾರಿಗೆ ತನ್ನ ಧರ್ಮದ ಹುಟ್ಟೂರನ್ನು ನೋಡಲು ತುಳಸಿ ಬಂದಿದ್ದಾರೆ. ಬೆಂಗಳೂರಿನ 'ಮಂಥನ' ಹಾಗೂ 'ಮಿಥಿಕ್ ಸೊಸೈಟಿ' ಜಂಟಿಯಾಗಿ ಹಮ್ಮಿಕೊಂಡಿರುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿದ್ದಾಳೆ.[೫] ತುಳಸಿಯವರ 'ಸಂವಾದ ಕಾರ್ಯಕ್ರಮ,'ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ (ಹಿಂದೆ ಈ ರಸ್ತೆಯ ಹೆಸರು 'ಸೆನೊಟಾಫ್ ರಸ್ತೆ'ಯೆಂದು) 'ಮಿಥಿಕ್ ಸೊಸೈಟಿಯ ಸಭಾಂಗಣ'ದಲ್ಲಿ ಆಯೋಜಿಸಲಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑
- United States Congress. "ತುಳಸಿ ಗೆಬಾರ್ಡ್ (id: G000571)". Biographical Directory of the United States Congress.
- ↑ "'ಈ ತುಳಸಿ ಅಮೆರಿಕದ ಹಿತ್ತಲಲ್ಲಿ ಬೆಳೆದಿದ್ದು'! 'ಸಂವಾದ'ಡಿಸೆಂಬರ್,೨೦,೨೦೧೪-ಸಹನಾ ವಿಜಯಕುಮಾರ್,ಬೆಂಗಳೂರು". Archived from the original on 2014-12-26. Retrieved 2014-12-21.
- ↑ "ಆರ್ಕೈವ್ ನಕಲು". Archived from the original on 2017-03-16. Retrieved 2018-09-03.
- ↑ "varta bharathi, ಮೊದಲ ಹಿಂದೂ ಅಮೆರಿಕನ್ ಮಹಿಳೆ ತುಳಸಿ ಗಬಾರ್ಡ್ ಅಮೆರಿಕನ್ ಕಾಂಗ್ರೆಸ್‌ಗೆ ನವೆಂಬರ್ -08-2012". Archived from the original on 2014-09-05. Retrieved 2014-12-23.
- ↑ Hindu, 'Tulsi lists challenges before U.S'. December 22, 2014