ತುರಿಕೆಗಿಡ ಎಂಬುದು ಪಶ್ಚಿಮಘಟ್ಟ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಸಸ್ಯ. ಇದರ ಸಸ್ಯಶಾಸ್ತ್ರೀಯ ಹೆಸರು ಲಾಪೋರ್ಟಿಯ ಇಂಟೆರುಪ್ಟ.ಇದಕ್ಕೆ ಪಂಚರಂಗಿ,ಕಾಡು ಚುರುಚುರುಕನ ಗಿಡ ಎಂಬ ಹೆಸರೂ ಇದೆ. ತುಳು ಮತ್ತು ಕೊಡವ ಭಾಷೆಯಲ್ಲಿ ಅಂಗಾರೆ ಎಂಬ ಹೆಸರು ಇದೆ.

ತುರಿಕೆಗಿಡ
Laportea cuspidata
Scientific classification e
Unrecognized taxon (fix): Laportea

ವೈಜ್ಣಾನಿಕ ವರ್ಗೀಕರಣ ಬದಲಾಯಿಸಿ

ಲಾಪೋರ್ಟಿಯ ಯೂರ್ಟಿಕೇಸಿ ಕುಟುಂಬದ ಸಸ್ಯವಾಗಿದೆ.ಇದರಲ್ಲಿ ಅನೇಕ ಪ್ರಭೇದಗಳಿವೆ. ಭಾರತದಲ್ಲಿ ಕಂಡುಬರುವ ಪ್ರಭೇದ ಲಾಪೋರ್ಟಿಯ ಇಂಟರುಪ್ಟ. ಇದರ ಎಲೆಯನ್ನು ಮುಟ್ಟಿದಾಗ ತುರಿಕೆ ಉಂಟಾಗುವುದರಿಂದ ಇದಕ್ಕೆ ತುರಿಕೆಗಿಡ ಎಂಬ ಹೆಸರು ಬಂದಿದೆ. ಯೂರ್ಟಿಕೇಸಿಯ ಹಲವು ಸಸ್ಯಗಳಂತೆ ಇವುಗಳು ಕುಟುಕುವ ಕೂದಲನ್ನು ಹೊಂದಿರುತ್ತವೆ.ಫ್ರೆಂಚ್ ನೈಸರ್ಗಿಕವಾದಿ ಫ್ರಾನ್ಸಿಸ್ ಡಿ ಲ್ಯಾಪೋರ್ಟೆ ಡಿ ಕ್ಯಾಸ್ಟೆಲ್ನೌ ಅವರ ಹೆಸರನ್ನು ಈ ಕುಲಕ್ಕೆ ಇಡಲಾಗಿದೆ.[೧]

ಹರಡುವಿಕೆ ಬದಲಾಯಿಸಿ

ಭಾರತದ ಪಶ್ಚಿಮಘಟ್ಟ ಪ್ರದೇಶದಲ್ಲಿ ಹೆಚ್ಚಾಗಿರುವ ಈ ಸಸ್ಯ ಉಳಿದೆ ಕಡೆಗಳಲ್ಲಿಯೂ ಮಳೆಗಾಲದಲ್ಲಿ ಕಂಡುಬರುತ್ತದೆ. ಹೆಚ್ಚು ಎತ್ತರಕ್ಕೆ ಬೆಳೆಯದೆ ಒಂದು ರೀತಿಯ ಕಳೆಯಂತಿರುವ ಸಸ್ಯದ ಎಲೆ ಹಚ್ಚ ಹಸಿರಾಗಿರುತ್ತದೆ.

=ಉಲ್ಲೇಖಗಳು ಬದಲಾಯಿಸಿ

  1. Weddell, H. A. Chloris Andina. 1857. Essai d'une flore de la region alpine des Cordilleres de l'Amerique du Sud. Vol. 1. Bertrand.