ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನ

ಪುರಾಣದಲ್ಲಿ ಉಲ್ಲೇಖಗೊಂಡಂತೆ ರೇಣುಕಾದೇವಿಯ ಮೋಹದ ಕಾರಣದಿಂದಾಗಿ ಮಡಕೆ ಮಾಡುವುದು ಅಸಾಧ್ಯವಾಗುತ್ತದೆ. ಇದನ್ನು ತನ್ನ ದಿವ್ಯದೃಷ್ಠಿಯಿಂದ ಅರಿತ ಜಮದಗ್ನಿ ಮಹರ್ಷಿಯು ತನ್ನ ಮಕ್ಕಳನ‍್ನು ಕರೆದು ಆಕೆಯನ್ನು ಸಂಹರಿಸುವಂತೆ ತಿಳಿಸುತ್ತಾನೆ. ಆಗ ಮಾತೃಹತ್ಯೆ ಪಾಪ ಎಂದು ಅರಿತ ಸುತರು ತಂದೆ ನುಡಿದದ್ದನ್ನು ಅನುಸರಿಸಲು ನಿರಾಕರಿಸಿದಾಗ ಕೋಪಗೊಂಡ ಜಮದಗ್ನಿಯು ತನ್ನ ಕೊಪದ ಜ್ವಾಲೆಯಿಂದ ಮಕ್ಕಳನ್ನು ಸುಡುತ್ತಾನೆ. ನಂತರ ತನ್ನ ಕೊನೆಯ ಮಗನಾದ ಪರಶುರಾಮನನ್ನು ಕರೆದು ಆಕೆಯನ್ನು ಸಂಹರಿಸಲು ತಿಳಿಸುತ್ತಾನೆ. ತಂದೆಯ ಆಜ್ಞೆಯನ್ನು ಪರಶುರಾಮ ಪಾಲಿಸಲು ಸಮ್ಮತಿಸುತ್ತಾನೆ. ತಾಯಿ ರೇಣುಕಾದೇವಿಯ ಶಿರಸ್ಸನ್ನು ತನ್ನ ಪರಶುವಿನಿಂದ ಛೇದಿಸುತ್ತಾನೆ. ತಂದೆಯ ಕೋಪವನ್ನು ತಣಿಸುತ್ತಾನೆ. ತಾನು ಬಯಸಿದ್ದನ್ನು ಮಗನು ಪೂರೈಸಿದ್ದನ್ನು ಕಂಡು ಸಂತಸಗೊಂಡ [] ಮೂರು ವರಗಳನ್ನು ನೀಡುವುದಾಗಿ ತಿಳಿಸುತ್ತಾನೆ. ಆಗ ಮೊದಲನೆಯದಾಗಿ ತನ್ನ ತಾಯಿಗೆ ಮರುಜೀವ ನೀಡಬೇಕಾಗಿ ಕೋರಿಕೊಳ್ಳುತ್ತಾನೆ. ನಂತರ ಸುಟ್ಟುಹೋದ ತನ್ನ ಸಹೊದರರನ್ನು ಬದುಕಿಸುವಂತೆ ಕೇಳುತ್ತಾನೆ. ಕೊನೆಯದಾಗಿ ಜಮದಗ್ನಿಗೆ ಆತನ ಕೋಪವನ್ನು ತೊರೆಯುವಂತೆ ಬೇಡುತ್ತಾನೆ. ಇದೆಲ್ಲದಕ್ಕು ಜಮದಗ್ನಿ ಸಮ್ಮತಿಸುತ್ತಾನೆ.ತನ್ನ ಕುಟುಂಬವನ್ನು ಮರುಪಡೆದ ನಂತರ ಪರಶುರಾಮನು ಕೊಡಲಿಗೆ ಅಂಟಿದ್ದ ರಕ್ತದ ಕಲೆ ಅಳಿಸಲು ಅದನ್ನು ತೊಳೆಯುತ್ತಾನೆ. ಆದರೆ ಯಾವ ನದಿಯ ನೀರಿನಿಂದ ತೊಳೆದರು ಕಲೆ ಹೊಗುವುದಿಲ್ಲ. ಕೊನೆಗೆ ಪವಿತ್ರ ತೀರ್ಥರಾಜಪುರ ಕ್ಷೇತ್ರ ಅಂದರೆ ಇಂದಿನ []ಗೆ ಬಂದು ಅಲ್ಲಿನ ಪವಿತ್ರ ನದಿಯಾದ ತುಂಗಾನದಿಯ ತೀರದಲ್ಲಿ ಧ್ಯಾನ ಮಾಡುತ್ತಿದ್ದಾಗ ಕೈನಲ್ಲಿದ್ದ ಕೊಡಲಿ ಜಾರಿ ಬಂಡೆಯ ಮೇಲೆ ಬಿತ್ತು. ಆಗ ಬಂಡೆ ಒಡೆದುನೀರು ಚಿಮ್ಮಿ ಆ ನೀರು ಕೊಡಲಿಯ ಕಲೆಯನ್ನು ಅಳಿಸುತ್ತದೆ. ಆ ಕಾರಣದಿಂದಾಗಿ ಕೊಡಲಿ ತೊಳೆದ ಸ್ಥಳವು ಪವಿತ್ರವೆನಿಸುತ್ತದೆ. ಆ ಸ್ಥಳವನ್ನು ಪರಶುರಾಮಕುಂಡವೆಂದು ಕರೆಯಲಾಗುತ್ತದೆ. ಈ ನೀರಿನಲ್ಲಿ ಸ್ನಾನ ಮಾಡಿದರೆ ಪಾಪ ನಾಶವಾಗುತ್ತದೆ ಎಂಬ ನಂಬಿಕೆ ಇದೆ. ಪರಶುರಾಮಕುಂಡದ ಹತ್ತಿರ ನದಿಯ ಪಕ್ಕದ ಬಂಡೆಯ ಮೇಲೆ ಕಲ್ಲಿನಲ್ಲಿ ಕಟ್ಟಿದ ರಾಮಮಂಟಪ ಇದೆ. ಆ ಮಂಟಪದ ಒಳಗಿನ ಲಿಂಗವನ್ನು ಪರಶುರಾಮನೆ ಸ್ಥಾಪಿಸಿದನು ಎಂಬ ಪ್ರತೀತಿ ಇದೆ. ನದಿಯ ದಡದಲ್ಲಿ ಕಲ್ಲಿನಿಂದ ಕಟ್ಟಲ್ಪಟ್ಟ ರಾಮೇಶ್ವರ ದೇವಾಲಯವಿದೆ. ಕೊಡಲಿಯನ್ನು ತೊಳೆದ ದಿನ ಮಾರ್ಗಶಿರ ಅಮಾವಾಸ್ಯೆಯಾದ ಕಾರಣ ಎಳ್ಳಮಾವಾಸ್ಯೆ ಎಂದು ಪ್ರತಿವರ್ಷ ಆಚರಿಸಲಾಗುತ್ತದೆ. ಆ ದಿನ ಉತ್ಸವ ಮೂರ್ತಿಯನ್ನು ಹೊಳೆಗೆ ತೆಗೆದುಕೊಂಡು ಹೋಗಿ ಅಭಿಷೇಕ ಪೂಜೆಗಳನ್ನು ಮಾಡಿ ದೇವಾಲಯಕ್ಕೆ ತಂದು ಪೂಜಿಸುತ್ತಾರೆ. ಮಾರನೆಯ ದಿನ ಉತ್ಸವ ಮೂರ್ತಿಯನ್ನು ಅಲಂಕರಿಸಿ ದೇವಸ್ಥಾನದ ರಥದಲ್ಲಿ ಕೂರಿಸಿ ರಥೋತ್ಸವ ಆಚರಿಸಲಾಗುತ್ತದೆ. ಮಾರನೆಯ ದಿನ ತೆಪ್ಪೋತ್ಸವ ಆಚರಿಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. ಜಮದಗ್ನಿಯು
  2. ತೀರ್ಥಹಳ್ಳಿ