ತಾಳಗುಪ್ಪ ರೈಲ್ವೆ ನಿಲ್ದಾಣ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
1940ರಲ್ಲಿ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರು ಮೈಸೂರು ಸಂಸ್ಥಾನದ ದಿವಾನರಾಗಿದ್ದರು. ಶರಾವತಿ ನದಿಯು ದಟ್ಟ ಕಾನನದ ನಡುವೆ 900 ಅಡಿ ಪ್ರಪಾತಕ್ಕೆ ದುಮ್ಮಿಕ್ಕುವ ಗೇರುಸೊಪ್ಪ ಜಲಪಾತ ನೋಡಲು ಜೋಗಕ್ಕೆ ಬಂದಿದ್ದರು. ಜಲಪಾತ ಕಂಡ ಅವರು 'ವಾಟ್ ಎ ವೇಸ್ಟ್' ಎಂದು ಉದ್ಧರಿಸಿದ್ದರು.
ಸೌಂದರ್ಯದ ಬದಲು ಅಘಾದ ಶಕ್ತಿ ಕಂಡು ತಾನೇತಾನಾಗಿ ಬಂದ ಈ ಉದ್ಧಾರ ಶರಾವತಿ ಜಲ ವಿದ್ಯುದ್ಯೋಜನೆಗೆ ನಾಂದಿಯಾಯಿತು. ಸಿರಿ ಬೆಳಕಿನ ಕನಸಿನ ಸಾಕಾರ ಕ್ಕಾಗಿ 1916 ಪ್ರಥಮ ಸರ್ವೇಕ್ಷಣೆ ನಡೆಯಿತು.
ಯೋಜನೆಯ ಅನಿಷ್ಠಾನಕ್ಕೆ ರೈಲ್ವೆ ಮಾರ್ಗ ಅಗತ್ಯವೆಂದು ಪರಿಗಣಿಸಿ ತಾಳಗುಪ್ಪದವರೆಗೆ ರೈಲ್ವೆ ಮಾರ್ಗ ವಿಸ್ತರಣೆಯನ್ನು ಯೋಚಿಸಲಾಯಿತು. ಆ ಸಮಯದಲ್ಲಿ ಶಿವಮೊಗ್ಗದಿಂದ ಭಟ್ಕಳದ ವರೆಗಿನ ಮಾರ್ಗ ಸಮೀಕ್ಷೆಯನ್ನೂ ನಡೆಸಲಾಗಿತ್ತು. ಆದರೆ ಇಂದಿಗೂ ತಾಳಗುಪ್ಪ - ಭಟ್ಕಳ ಸಂಪರ್ಕ ಸಾಧ್ಯವಾಗಿಲ್ಲ.
ಶಿವಮೊದ ತುಂಗಾ ನದಿಯಾಚೆ ಕೊನೆಗೊಂಡಿದ್ದ ರೈಲ್ವೆ ಮಾರ್ಗವನ್ನು ತಾಳಗುಪ್ಪದ ವರೆಗೆ ವಿಸ್ತರಿಸುವ ಅರ್ಧ ವೆಚ್ಚ ಸುಮಾರು 3.28 ಲಕ್ಷ ರೂ. ಅನ್ನು ವಿದ್ಯುದ್ಯೋಜನೆಯ ಅಂದಾಜು ಪಟ್ಟಿಯಲ್ಲಿ ಸೇರಿಸಲಾಯಿತು. 1899ರಲ್ಲಿ ಶಿವಮೊಗ್ಗಕ್ಕೆ ರೈಲು ಬಂದರೂ ಸೇತುವೆ ನಿರ್ಮಾಣಗೊಳ್ಳದ ಕಾರಣ ತುಂಗಾ ನದಿಯ ಆಚೆಗೆ ನಿಲ್ಲುವಂತಾಗಿತ್ತು. ಶರಾವತಿ ಕಾರಣದಿಂದ 1933ರಲ್ಲಿ ಶಿವಮೊಗ್ಗನಗರ, 1938ರಲ್ಲಿ ಸಾಗರ ಜಂಬಗಾರು, 1940ರ ನವೆಂಬರ್ 11ರಂದು ತಾಳಗುಪ್ಪಕ್ಕೆ ರೈಲು ಸಂಚಾರ ಸಾಧ್ಯವಾಯಿತು. ಜೋಗ ಅಭಿವೃದ್ಧಿ ಸಾಧನೆಯೊಂದೇ ಅಲ್ಲದೆ ಈ ಭಾಗದ ಜನರ ಪ್ರಯಾಣ, ವ್ಯಾಪಾರ, ವಹಿವಾಟು, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಪಥವಾಗಿ ಮಲೆನಾಡ . ಚಿತ್ರಣವನ್ನು ಬದಲಾಯಿಸಿದೆ. ಸಮೀಪದ ಸಿದ್ದಾಪುರ, ಸಿರ್ಸಿ, ಹೊನ್ನಾವರ, ರ ಕುಮಟಾ ತಾಲೂಕುಗಳ ಜನರ ರಾಜ್ಯ ರಾಜಧಾನಿ ದ ಸಂಪರ್ಕದ ಕೊಂಡಿಯಾಗಿ ಕಾರ್ಯನಿರ್ವಹಿಸಿದೆ.
ತಾಳಗುಪ್ಪರೈಲ್ವೆ ನಿಲ್ದಾಣ : ಸುಮಾರು 70 ಎಕರೆ ವಿಶಾಲ ಭೂಮಿ ಹೊಂದಿರುವ ತಾಳಗುಪ್ಪ ರೈಲ್ವೆ ನಿಲ್ದಾಣ ಸ್ವಾತಂತ್ರ್ಯ ಪೂರ್ವದ ಮೈಸೂರು ಸ್ಟೇಟ್ ರೈಲ್ವೆ ನಂತರ ದಕ್ಷಿಣ ರೈಲ್ವೆಯ ಮಹತ್ವದ ನಿಲ್ದಾಣವಾಗಿದೆ. ಇಟಾಲಿಯನ್ ವಾಸ್ತು ವಿನ್ಯಾಸದಲ್ಲಿ ನಿರ್ಮಿಸಿದ ಕಟ್ಟಡ ವೃತ್ತಾಕಾರದ ಕಂಬ, ಕಮಾನು, ಜಾಲಂದ್ರಗಳನ್ನು ಹೊಂದಿದೆ.
ಇಡೀ ಕಟ್ಟಡವನ್ನು ಸುರ್ಕಿ ಗಾರೆಯಲ್ಲಿ ಕಟ್ಟಲಾಗಿದೆ. ಇತ್ತೀಚೆಗೆ ರೈಲ್ವೆ ನಿಲ್ದಾಣದ ವಿಸ್ತರಣೆ ನಡೆದಿದ್ದರೂ ಮೂಲ ಕಟ್ಟಡವನ್ನು ಮೂಲ ಸ್ವರೂಪದಲ್ಲಿಯೇ ಉಳಿಸಿ, ಎಡ-ಬಲದಲ್ಲಿ ಹೊಸ ಕಟ್ಟಡ ಕಟ್ಟಲಾಗಿದೆ.
ಗಣ್ಯಾತಿಗಣ್ಯರ ಭೇಟಿ : ವಿದ್ಯುದೋಜನೆಯ ಶಂಕುಸ್ಥಾಪನೆಗೆ 1939ರ ಫೆಬ್ರವರಿ 5ರಂದು ಜೋಗಕ್ಕೆ ಆಗಮಿಸಿದ ಅಂದಿನ ಮಹಾರಾಜ ಶ್ರೀಕೃಷ್ಣ ರಾಜೇಂದ್ರ ಒಡೆಯರ್ ಸಾಗರದವರೆಗೆ ರೈಲಿನಲ್ಲಿ ಪ್ರಯಾಣಿಸಿದ್ದರೆ, ನಂತರ 1948 ಫೆಬ್ರವರಿ 21ರಂದು ಮಹಾತ್ಮಾ ಗಾಂಧಿ ವಿದ್ಯುದಾಗರವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಜಯಚಾಮರಾಜೇಂದ್ರ ಒಡೆಯರ್ ವಿಶೇಷ ರೈಲು ಬೋಗಿಯಲ್ಲಿ ತಾಳಗುಪ್ಪ ನಿಲ್ದಾಣಕ್ಕೆ ಬಂದಿಳಿದಿದ್ದರು. 1964ರಲ್ಲಿ ಶರಾವತಿ ಜಲ ವಿದ್ಯುದಾಗರವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಅಂದಿನ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿ, ಅಮೆರಿಕದ ರಾಯ್ ಭಾರಿ ಚೆಸ್ಟರ್ ಬೌಲರೊಡನೆ ಈ ನಿಲ್ದಾಣದಲ್ಲಿಳಿದು ತೆರೆದ ಕಾರಿನಲ್ಲಿ ಜೋಗಕ್ಕೆ ತೆರಳಿದ್ದರು. ದೇಶದ ಪ್ರಧಾನ ಮಂತ್ರಿಗಳಾಗಿದ್ದ ಜವಾಹರಲಾಲ್ ನೆಹರು, ಕುವೈತ್ ಅರಸ, ಮೊದಲಾದ ದೇಶ ವಿದೇಶದ ಗಣ್ಯಾತಿಗಣ್ಯರು ಈ ನಿಲ್ದಾಣದಲ್ಲಿಳಿದು ವಿಶ್ವವಿಖ್ಯಾತ ಜೋಗ ಜಲಪಾತ ಹಾಗೂ ವಿದ್ಯುದ್ಯೋಜನೆ ವೀಕ್ಷಿಸಿದ್ದಾರೆ.
ಉಳಿವಿಗಾಗಿ ನಡೆದಿತ್ತು ಹೋರಾಟ
ಮೀಟರ್ ಗೇಜಿನಿಂದ ಬ್ಯಾಡ್ ಗೇಜ್ ಪರಿವರ್ತನೆಯ ಅವಧಿ ಯಲ್ಲಿ ಸುಮಾರು 17 ವರ್ಷಗಳಷ್ಟು ಸುದೀರ್ಘ ಕಾಲ ತಾಳಗುಪ್ಪರೈಲ್ವೆ ಮಾರ್ಗ ನಿರ್ಲಕ್ಷ್ಯಕ್ಕೆ ಳಗಾಯಿತು. 1994ರಲ್ಲಿ ಬೀರೂರಿನಿಂದ ತಾಳಗುಪ್ಪದವರೆಗಿನ ಮಾರ್ಗ ಪರಿವರ್ತನೆಗಾಗಿ 432 ಕೋಟ ರೂ.ವೆಚ್ಚದ ಯೋಜನೆ ರೂಪುಗೊಂಡಿದ್ದರೂ ಬ್ರಾಡ್ ಗೇಜ್ ಕಾಮಗಾರಿ ಶಿವಮೊಗ್ಗದವರೆಗೆ ನಡೆದು ಉಳಿದ ಮಾರ್ಗ ಮೀಟರ್ ಗೇಜಿನಲ್ಲಿ ಉಳಿಯಿತು. 10 ವರ್ಷ ಎರಡು ಬೋಗಿಗಳ ರೈಲು ಬಸ್ ಶಿವಮೊಗ್ಗ-ತಾಳಗುಪ್ಪಮಧ್ಯೆ ಸಂಚರಿಸಿದರೂ ನಂತರ ಆದಾಯ ಕುಂಠಿತದ ನೆಪದಲ್ಲಿ ನಿಲ್ಲಿಸಲಾಯಿತ [[೧]]ರ ರೈಲ್ವೆ ಬಜೆಟ್ಟಿನಲ್ಲಿ ತಾಳಗುಪ್ಪದವರೆಗಿನ ರೈಲ್ವೆ ಮಾರ್ಗ ಪ್ರಸ್ತಾಪವಾಗಿ, ರೈಲ್ವೆ ಕಾಮಗಾರಿ ನಕ್ಷೆಯಲ್ಲಿ ಗುರುತಿಸಿದ್ದರೂ ಕೆಲಸ ನಡೆಯಲಿಲ್ಲ. ಈ ಹಿನ್ನೆಲೆಯಲ್ಲಿ ಈ ರೈಲ್ವೆ ಮಾರ್ಗದ ಉಳಿವಿಗಾಗಿ ಮ್ಯಾಗ್ನೆಸೆ ಪ್ರಶಸ್ತಿ ಪುರಸ್ಕೃತ ಕೆ.ವಿ.ಸುಬ್ಬಣ್ಣ, ನಾ.ಡಿಸೋಜ, ಬಿ.ಆರ್. ಜಯಂತ್ ಮೊದಲಾದ ಗಣ್ಯರು ಸಮಿತಿ ರಚಿಸಿಕೊಂಡು ಹೋರಾಟ ನಡೆಸಿದ್ದರು. 2012ರಲ್ಲಿ ರಾಜ್ಯ ಸರಕಾರ ಮ್ಯಾಚಿಂಗ್ ಗ್ಯಾಂಟ್ ನೀಡಿದ್ದರಿಂದ ಮರೀಚಿಕೆಯಾಗಿದ್ದ ತಾಳಗುಪ್ಪ ರೈಲ್ವೆ ಮಾರ್ಗ ಸಾಕಾರಗೊಂಡಿತು.