ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ

(ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮ ಇಂದ ಪುನರ್ನಿರ್ದೇಶಿತ)

ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ, ಹಿಂದೀ ಭಾಷೆಯ ಒಂದು ಜನಪ್ರಿಯ ಹಾಸ್ಯ ಧಾರಾವಾಹಿ.[] ಮೊದಲ ಸಂಚಿಕೆ  ಜುಲೈ 28, 2008 ರಂದು ಪ್ರಸಾರವಾಯಿತು. ಇದು ಸಬ್ ಟಿವಿ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತದೆ. ಈ ಧಾರಾವಾಹಿಯು ಚಿತ್ರಲೇಖ ಸಾಪ್ತಾಹಿಕದಲ್ಲಿನ ಗುಜರಾತಿ ಪತ್ರಕರ್ತ ತಾರಕ್ ಮೆಹ್ತಾ ರವರ ದುನಿಯಾ ನೆ ಊಂಧಾ ಚಶ್ಮಾ ಎಂಬ ಅಂಕಣದ ಆಧಾರವಾಗಿದೆ. 

ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ
ಶೈಲಿ
ರಚನಾಕಾರರು
ಬರೆದವರು
  • ರಾಜು ಒಡೆದ್ರಾ
  • ನಿರೆನ್ ಭಟ್
  • ಜಿತೇಂದ್ರ ಪರ್ಮಾರ್
  • ಅಬ್ಬಾಸ್ ಹಿರಾಪುರ್ವಾಲಾ
ನಿರ್ದೇಶಕರು
  • ಹರ್ಷದ್ ಜೋಷಿ
  • ಮಾಲಾವ್ ಸುರೇಶ್ ರಾಜ್ಡಾ
ನಿರೂಪಣಾ ಗೀತೆತಾರಕ್ ಮೆಹ್ತಾ ಕಾ ಉಲ್ತಾ ಚಶ್ಮಾ
ದೇಶಭಾರತ
ಭಾಷೆ(ಗಳು)ಹಿಂದಿ
ಒಟ್ಟು ಸರಣಿಗಳು1
ಒಟ್ಟು ಸಂಚಿಕೆಗಳು3981+
ನಿರ್ಮಾಣ
ನಿರ್ಮಾಪಕ(ರು)
  • ನೀಲಾ ಅಸಿತ್ ಮೋದಿ
ಸಮಯ20-22 ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ನೀಲಾ ಟೆಲಿ ಫಿಲ್ಮ್ಸ್
ವಿತರಕರುನೀಲಾ ಟೆಲಿ ಫಿಲ್ಮ್ಸ್
ಪ್ರಸಾರಣೆ
ಮೂಲ ವಾಹಿನಿಸೋನಿ ಸಬ್
ಮೂಲ ಪ್ರಸಾರಣಾ ಸಮಯ28 ಜುಲೈ 2008 (2008-07-28) – ಪ್ರಸ್ತುತ
ಹೊರ ಕೊಂಡಿಗಳು
ತಾಣ

ಕಥಾ ವಸ್ತು

ಬದಲಾಯಿಸಿ

ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ, ಹಿಂದಿ ಧಾರಾವಾಹಿ ಸೀರಿಯಲ್, ಮುಂಬಯಿ ನಗರದ ಗೋರೆಗಾವ್ ಉಪನಗರದ 'ಪೌಡರ್ ಗಲ್ಲಿ'ಯಲ್ಲಿರುವ ಗೋಕುಲ್ ಧಾಮ್ ಹೌಸಿಂಗ್ ಕೋ. ಆಪ್. ಸೊಸೈಟಿ,ಯ ನಿವಾಸಿಗಳ ಜೀವನದ ಮೇಲೆ ಆಧರಿಸಿ ರಚಿಸಲಾದ ಕಥೆಯಾಗಿದೆ. ಈ ಸೊಸೈಟಿಯಲ್ಲಿ ೪ ವಿಂಗ್ ಗಳಿವೆ.  ೧. ಎ. ವಿಂಗ್, ೨. ಬಿ. ವಿಂಗ್, ೩. ಸಿ. ವಿಂಗ್, ೪. ಡಿ. ವಿಂಗ್. ಹೌಸಿಂಗ್ ಸೊಸೈಟಿಯಲ್ಲಿ ಒಟ್ಟಾರೆ ೫೦ ಫ್ಲ್ಯಾಟ್ ಗಳಿದ್ದಾಗ್ಯೂ, ಧಾರಾವಾಹಿಯಲ್ಲಿ [] ಕಥೆಯ ಪಾತ್ರಗಳು ಸನ್ನಿವೇಶಗಳು ಸೊಸೈಟಿಯ ಕೇವಲ ೮ ಪರಿವಾರಗಳ ಜೀವನದ ಕಥೆಯನ್ನು ಹೆಚ್ಚಾಗಿ ಒಳಗೊಂಡಿವೆ.

ನಿವಾಸಿಗಳು

ಬದಲಾಯಿಸಿ

ಎ ವಿಂಗ್ ನಿವಾಸಿಗಳು

ಬದಲಾಯಿಸಿ
  1. ಆತ್ಮಾರಾಮ್ ತುಕಾರಾಂ ಭಿಡೆ, ಸೊಸೈಟಿಯ ಸೆಕ್ರೆಟರಿ, ಮನೆಯಲ್ಲೇ ಮಕ್ಕಳಿಗೆ ಪಾಠಹೇಳಿಕೊಡುತ್ತಾರೆ. ಮಹಾರಾಷ್ಟ್ರದ ರತ್ನಗಿರಿಯಿಂದ ಬಂದವರು. ಮಾಧವಿ ಪತ್ನಿ, ಚಿಕ್ಕಪುಟ್ಟ ಲೇವಾದೇವಿ ಮಾಡಬಲ್ಲಳು. ಮಗಳು,ಸೋನು (ಸೋನಾಲಿಕ) 
  2. ಡಾ ಹಂಸ್ರಾಜ್ ಹಾಥಿ, ಒಬ್ಬ ರೆಸಿಡೆಂಟ್ ಡಾಕ್ಟರ್. ಯು.ಪಿ.ಯವರು, ಕೋಮಲ್ ಪತ್ನಿ, ಮಗ ಗೋಲಿ, (ಗುಲಾಬ್ ಕುಮಾರ್),
  3. ರೋಷನ್ ಸಿಂಗ್ ಸೋಧಿ, ಕಾರ್ ಮೆಕಾನಿಕ್, ಪಂಜಾಬ್ ರಾಜ್ಯದ ಅಮೃತ್ ಸರ್ ನಗರದವರು. ಪಾರ್ಸಿ ಪತ್ನಿ, ರೋಷನ್. ಮಗ ಗೋಗಿ (ಗುರುಚರಣ್)

ಬಿ ವಿಂಗ್ ನಿವಾಸಿಗಳು

ಬದಲಾಯಿಸಿ
  1. ಜೇಠ ಲಾಲ್ ಚಂಪಕ್ ಗಡ, ಎಲೆಕ್ಟ್ರಾನಿಕ್ ಶಾಪ್ ಮಾಲೀಕರು. ಗುಜರಾತಿನ ಕಚ್ ಡಿಸ್ಟ್ರಿಕ್ಟ್ ನವರು ಪತ್ನಿ, ದಯಾ, ತಂದೆ, ಚಂಪಕ್ ಲಾಲ್ ಜಯಂತಿಲಾಲ್ ಗಡ  ಮಗ, ತಿಪೇಂದ್ರ ಟಪ್ಪು,
  2. ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮ ಕಥೆಯ ಪಾತ್ರಗಳು ಹಾಗೂ ಸನ್ನಿವೇಶಗಳ ನಿರೂಪಕ, ಹಾಗೂ ಪತ್ರಿಕಾ ಅಂಕಣಕಾರ. ಪತ್ನಿ ಅಂಜಲಿ, ಉತ್ತರ ಭಾರತದವರು.

ಸಿ.ವಿಂಗ್ ನಿವಾಸಿಗಳು

ಬದಲಾಯಿಸಿ
  1. ಕೃಷ್ಣನ್ ಸುಬ್ರಮಣಿಯಂ ಅಯ್ಯರ್, ಚೆನ್ನೈ ತಮಿಳುನಾಡಿನ ಒಬ್ಬ ವಿಜ್ಞಾನಿ. ವೆಸ್ಟ್ ಬೆಂಗಾಲ್ ಕೋಲ್ಕತ್ತಾದ ಬೆಂಗಾಲಿ ಪತ್ನಿ ಬಬಿತಾ.
  2. ಪೋಪಟ್ ಲಾಲ್ ಪಾಂಡೆ, ಪತ್ರಿಕಾಕಾರ್ 'ತೂಫಾನ್ ಎಕ್ಸ್ ಪ್ರೆಸ್' 
  3. ಭೂಪೆನ್ ಎಂ.ಪಿ;

ಗುಲ್ಮೊಹರ್ ಅಪಾರ್ಟ್ ಮೆಂಟ್ ವಾಸಿ

ಬದಲಾಯಿಸಿ
  1. ಪಂಕಜ್ ದಿವಾನ್ ಸಹಾಯ್, (ಪಿಂಕು) ಟಪ್ಪು ಸೇನೆಯ ಒಬ್ಬ ಸದಸ್ಯ. ಬೇರೆ ಸೊಸೈಟಿ,
  2. ಸುಂದರ್ ಲಾಲ್ ದಯಾಜಿಯವರ ಸೋದರ, ಅಹ್ಮದಾಬಾದ್ ನ ಗುಜರಾತ್ ನವರು. ಗೆಳೆಯರು :
  3. ಅಬ್ದುಲ್, ಕಿರಾಣಿ ಅಂಗಡಿ ಮಾಲೀಕ ಸೊಸೈಟಿ ಯ ಹೊರಗಡೆ ಹೋಗುವ ಗೇಟ್ ನ ಬಳಿ ತನ್ನ ಶಾಪ್ ನಡೆಸುತ್ತಿದ್ದಾರೆ.
  4. ರೀಟಾ ಶ್ರೀವಾತ್ಸವ್, ರಿಪೋರ್ಟರ್, 'ಕಲ್ ತಕ್ ನ್ಯೂಸ್ ಚಾನೆಲ್'
  5. ಇನ್ಸ್ಪೆಕ್ಟರ್ ಚಾಲು ಪಾಂಡೆ, ಅಸಿತ್ ಕುಮಾರ್ ಮೋದಿ ಜೇತಾ
  6. ಶಾಪ್ ಅಸಿಸ್ಟಂಟ್ಸ್-ನಟ್ವರ್ ಲಾಲ್ ಪ್ರಭಾಶಂಕರ್ ಉಧೈವಾಲಾ, ನಟ್ಟು ಕಾಕ
  7. ಬಾಗೇಶ್ವರ್ ದಾದು ಉಧೈವಾಲಾ ಬಾಘಾ
  8. ಬಾಘಾ ನ ಫಿಯಾನ್ಸಿ, ಬಾವಿರಿ ಧೋಂಡು ಲಾಲ್ ಕಾನ್ಪುರಿಯ,

ಸೊಸೈಟಿಯ ಸದಸ್ಯರೆಲ್ಲ ಅನ್ಯೋನ್ಯವಾಗಿ ಒಂದೇ ಪರಿವಾರದ ಸದಸ್ಯರಂತೆ ಪ್ರೀತಿವಿಶ್ವಾಸಗಳಿಂದ ವಾಸಿಸುತ್ತಿದ್ದಾರೆ. ಪ್ರತಿ ಹಬ್ಬ-ಹರಿದಿನಗಳನ್ನು ಒಟ್ಟಾಗಿ ನೆರವೇರಿಸುತ್ತಾ ಬಂದಿದ್ದಾರೆ. ಅಚ್ಚ ಭಾರತೀಯ ಸಮಾಜದ  ಸಂಪ್ರದಾಯಗಳನ್ನು ಆಚರಿಸುತ್ತಾರೆ. ಜೇಠಲಾಲ್ ಗಡ ಕೆಲವುವೇಳೆ ತನ್ನ ಅವಿವೇಕಯುತ ಕಾರ್ಯವೈಖರಿಯಿಂದ ಸಮಸ್ಯೆಗಳಿಗೆ ಗ್ರಾಸವಾಗುತ್ತಾನೆ. ಧಾರಾವಾಹಿಯ ಹಾಸ್ಯ ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ದಿಶೆಯಲ್ಲಿ ಈ ನಟರೆಲ್ಲಾ ಕಾರ್ಯನಿರ್ವಹಿಸುತ್ತಿದ್ದಾರೆ.

ಟಪ್ಪು ಸೇನಾ

ಬದಲಾಯಿಸಿ

ಗೋಕುಲ್ ಧಾಮ್ ಹೌಸಿಂಗ್ ಸೊಸೈಟಿಯ, ಒಟ್ಟು ೫ ಜನ ಮಕ್ಕಳು ಗೋಕುಲ್ ಧಾಮ್ ಸೊಸೈಟಿಯಲ್ಲಿ ಗೋಲಿ, ಗೋಗಿ, ಪಿಂಕು, ಸೋನು, ಸೀರಿಯಲ್ ನ ಹಾಸ್ಯ ಪ್ರಸಂಗದಲ್ಲಿ ಇವರ ಪಾತ್ರ ಹೆಚ್ಚಾಗಿದೆ. ಈ ಮಕ್ಕಳ ತುಂಟತನ, ಸೊಸೈಟಿಯ ಇತರ ಸದಸ್ಯರಿಗೆ ಸರಿ ಬರುವುದಿಲ್ಲ. ಕೆಲವು ಸಮಯದಲ್ಲಿ ಇವರ ಕೆಲಸ ಶ್ಲಾಘನೆಗೆ ಒಳಪಡುತ್ತದೆ. ಭಿಡೆಯವರಿಗೆ ಮಾತ್ರ, ಇವರ ಬಗ್ಗೆ ಬೇಸರ. ಸೊಸೈಟಿಯ ಕಾಂಪೌಂಡ್ ಒಳಗೆ ಕ್ರಿಕೆಟ್ ಆಡುವುದು, ಕಿಟಕಿಯ ಗಾಜು ಒಡೆಯುವುದು, ಕೂಗಾಟ, ಮೊದಲಾದ ಕಾರ್ಯಗಳನ್ನು ಶುರುವಿನಿಂದಲೂ ಈ ಮಕ್ಕಳು ಮಾಡುತ್ತಾ ಬಂದಿದ್ದಾರೆ. ಆಗಾಗ, ಏನಾದರೊಂದು ಗೊಂದಲ, ಸಮಸ್ಯೆಗಳಿಗೆ ಗ್ರಾಸವಾಗುವುದು ಇವರ ಸ್ವಭಾವ. ಅವರು ದೊಡ್ಡವರಾದಂತೆ ಅವರ ತುಂಟತನ ಬೇರೆ ತರಹ ಬದಲಾಗುತ್ತಾ ಹೋಗುತ್ತದೆ.

ಧಾರಾವಾಹಿಯ ಪ್ರಮುಖ ಪಾತ್ರಗಳ ನಿರ್ವಾಹಕರು:

ಬದಲಾಯಿಸಿ
  1. 'ದಿಲೀಪ್ ಜೋಶಿ, ಜೆಠಾಲಾಲ್ ಚಂಪಕ್ಲಾಲ್ ಗಡ ಆಗಿ,
  2. ದಿಶಾ ವಕಾನಿ, ದಯಾ ಜೆಠಾಲಾಲ್ ಚಂಪಕ್ಲಾಲ್ ಗಡ ಆಗಿ,
  3. ಭವ್ಯಾ ಗಾಂಧಿ, ಟಿಪೇಂದ್ರ ಜೆಥಾಲಾಲ್ ಗಡ ಟಪು (೨೦೧೭ ರಿಂದ ಇದುವರೆವಿಗೆ)
  4. ರಾಜ್ ಆನಂದ್ ಕತ್ ತಿಪೇಂದ್ರ ಜಥಾಲಾಲ್ ಗಡ (ಟಪ್ಪು) ೨೦೧೭
  5. ಅಮಿತ್ ಭಟ್, ಚಂಪಕ್ಲಾಲ್ ಜಯಂತಿಲಾಲ್ ಗಡ ಆಗಿ,
  6. ಶೈಲೇಶ್ ಲೋಧ ತಾರಕ್ ಮೆಹ್ತಾ ಆಗಿ,
  7. ನೇಹಾ ಮೆಹ್ತಾ ಅಂಜಲಿ ತಾರಕ್ ಮೆಹ್ತಾ ಆಗಿ,
  8. ತನುಜ್  ಮಹಾಶಬ್ದೆ ಕೃಷ್ಣನ್ ಸುಬ್ರಮಣಿಯನ್ ಅಯ್ಯರ್ ಆಗಿ,
  9. ಮೂನ್ ಮೂನ್ ದತ್ತ ಬಬಿತಾ ಕೃಷ್ಣಅಯ್ಯರ್ ಆಗಿ,
  10. ಮಂದಾರ್ ಚಂದಾವಡ್ಕರ್ ಆತ್ಮಾರಾಮ್ ತುಕಾರಾಂ ಭಿಡೆ ಆಗಿ,
  11. ಸೋನಾಲಿಕ ಜೋಶಿ ಮಾಧ್ವಿ ಆತ್ಮಾರಾಮ್ ಭಿಡೆ ಆಗಿ,
  12. ಜೀಲ್ ಮೆಹ್ತಾ ಸೋನಾಲಿಕ ಆತ್ಮಾರಾಮ್ ಭಿಡೆ (೨೦೦೮-೨೦೧೨)
  13. ನಿಧಿ ಭಾನುಶಾಲಿ ಸೋನಾಲಿಕ ಆತ್ಮಾರಾಮ್ ಭಿಡೆ ಸೋನು (೨೦೧೨- ಇದುವರೆಗೂ)
  14. ಗುರುಚರಣ ಸಿಂಗ್ ರೋಶನ್ ಸಿಂಗ್ ಹರ್ಜಿತ್ ಸೋಧಿ (೨೦೦೮-೨೦೧೩, ೨೦೧೪ ಇದುವರೆಗೂ
  15. ಲಾಡ್ ಸಿಂಗ್ ಮಾನ್ ರೋಷನ್ ಸಿಂಗ್ ಹರ್ಮಿತ್ ಸಿಂಗ್ ಸೋಧಿ (೨೦೧೩-೨೦೧೪)
  16. ಜೆನಿಫರ್ ಮಿಸ್ತ್ರಿ ಬಂಸಿವಾಲ್ ರೋಷನ್ ಕೌರ್ ರೋಶನ್ ಸೋಧಿ (೨೦೦೮-೨೦೧೩, ೨೦೧೬-ಇದುವರೆಗೂ )
  17. ದಿಲ್ ಖುಷ್ ರಿಪೋರ್ಟರ್ ರೋಶನ್ ಕೌರ್ ರೋಶನ್  ಸಿಂಗ್ ಸೋಧಿ (೨೦೧೩-೨೦೧೬)
  18. ಸಮಯ್ ಶಾ ಗುರುಚರಣ್ ಸಿಂಗ್ ರೋಶನ್ ಸಿಂಗ್ ಸೋಧಿ (ಗೋಗಿ )
  19. ನಿರ್ಮಲ್ ಸೋನಿ ಡಾ. ಹಂಸ್ ರಾಜ್ ಹಾಥಿ (೨೦೦೮-೨೦೦೯)
  20. ಆಝಾದ್ ಕವಿ ಡಾ. ಹಂಸ್ರಾಜ್ ಹಾಥಿ (2009–೨೦೧೮)
  21. ಅಂಬಿಕಾ ರಂಜನ್ ಕರ್ ಕೋಮಲ್ ಹಂಸ್ ರಾಜ್ ಹಾಥಿ ಆಗಿ,
  22. ಕುಶ್ ಶಾ ಗುಲಾಬ್ ಕುಮಾರ್ ಹಂಸ್ ರಾಜ್ ಹಾಥಿ (ಗೋಲಿ) ಆಗಿ,
  23. ಶ್ಯಾಮ್ ಪಾಠಕ್ ಪೋಪಟ್ ಲಾಲ್ ಪಾಂಡೆಯಾಗಿ,
  24. ಶರದ್ ಸಂಕಿಯ ಅಬ್ದುಲ್ ಆಗಿ,

ಕೆಲವು ಸಾಂದರ್ಭಿಕ ಪಾತ್ರಗಳಲ್ಲಿ

ಬದಲಾಯಿಸಿ
  1. ತರುಣ್ ಉಪ್ಪಲ್ ಪಿಂಕು (ಪಂಕಜ್ ದಿವಾನ್ ಸಹಾಯ್) ಆಗಿ,
  2. ಘನಶ್ಯಾಮ್ ನಾಯಕ್ ನಟವರ್ ಲಾಲ್ ಪ್ರಭಾಶಂಕರ್ ಉಧೈವಾಲಾ ನಟ್ಟು ಕಾಕಾ (ನಟ್ಟುಕಾಕ) ಆಗಿ,
  3. ತನ್ಮಯ್ ವೆಕಾರಿಯ ಬಾಘೆಶ್ವರ್ ದಡುಖ್ ಉಧೈವಾಲಾ (ಬಾಘಾ) ಆಗಿ,
  4. ಮೋನಿಕಾ ಭಾದೊರಿಯ ಬಾವ್ರಿ ಧೋಂಡುಲಾಲ್ ಕಾನ್ಪುರಿಯ ಆಗಿ,
  5. ಮಯೂರ್ ವಕಾನಿ ಸುಂದರ್ ಲಾಲ್ ಆಗಿ,
  6. ಪ್ರಿಯ ಅಹುಜಾ ರಾಜ್ದ ರಿಪೋರ್ಟರ್ ರೀಟಾ ಶ್ರೀವಾಸ್ತವ್ ,ದಯಾ ಶಂಕರ್ ಪಾಂಡೆ ಆಗಿ,
  7. ಇನ್ಸ್ಪೆಕ್ಟರ್ ಚಾಲು ಪಾಂಡೆ ಆಗಿ,

ನಟ ಕವಿಕುಮಾರ್ ಆಝಾದ್ ನಿಧನ

ಬದಲಾಯಿಸಿ

ಈ ಧಾರಾವಾಹಿಯಲ್ಲಿ ಡಾ.ಹಂಸ್ರಾಜ್ ಹಾಥಿ ಪಾತ್ರವಹಿಸುತ್ತಿದ್ದ ನಟ, ಕವಿಕುಮಾರ್ ಆಝಾದ್ ೯, ಜುಲೈ, ೨೦೧೮ ರಂದು ಮೀರಾರೋಡಿನ ವೊಕಾರ್ಡ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. [][]

ಉಲ್ಲೇಖಗಳು

ಬದಲಾಯಿಸಿ
  1. "MUNMUN DUTTA OPENS UP ABOUT THE CONTROVERSY SURROUNDING TAARAK MEHTA KA OOLTAH CHASHMAH; COMES OUT IN SUPPORT OF GURCHARAN SINGH (SODHI)".
  2. "तारक मेहता…. के किरदारों की रियल लाइफ जानकर झटका लगेगा, ಮಾರ್ಚ್ ೨೯, ೨೦೧೭, ವರ್ಲ್ಡ್ ನವ್". Archived from the original on 2017-05-14. Retrieved 2018-05-27.
  3. [TV Actor Kavi kumar Azad passe away, Indian express, 10th, July, 2018
  4. Hathi of Tarak mehta ka oolta chashma ,dies of heart attack, India Times,7th, July, 2018,