ತಾಯಿನಾಡು (ಮಾತೃಭೂಮಿ) ಒಂದು ಸಾಂಸ್ಕೃತಿಕ, ರಾಷ್ಟ್ರೀಯ, ಅಥವಾ ಜನಾಂಗೀಯ ಅನನ್ಯತೆಯು ರೂಪಗೊಂಡಿರುವ ಸ್ಥಳದ ಪರಿಕಲ್ಪನೆಯಾಗಿದೆ (ಸಾಮಾನ್ಯವಾಗಿ ಒಳಗೊಂಡಿರುವ ಜನಾಂಗೀಯ ಗುಂಪುಗಳನ್ನು ಸೂಚಿಸುತ್ತದೆ). ಈ ವ್ಯಾಖ್ಯಾನವು ಕೇವಲ ಒಬ್ಬರು ಹುಟ್ಟಿದ ದೇಶ ಎಂಬ ಅರ್ಥವನ್ನೂ ನೀಡಬಹುದು.[]

ಮಾತೃಭೂಮಿ

ಬದಲಾಯಿಸಿ
 
ಭಾರತ ಮಾತೆಯ ಪ್ರತಿಮೆ

ಮಾತೃಭೂಮಿ ಪದವು ಒಬ್ಬರು ಹುಟ್ಟಿದ ಸ್ಥಳ, ಒಬ್ಬರ ಪೂರ್ವಜರ ಸ್ಥಳ, ಒಂದು ಜನಾಂಗೀಯ ಗುಂಪು ಅಥವಾ ಪರದೇಶವಾಸಿಯ ಮೂಲಸ್ಥಳ, ಅಥವಾ ಅದರ ವಸಾಹತುಗಳಿಗೆ ವ್ಯತಿರಿಕ್ತವಾಗಿ ಪೋಷಕ ರಾಜ್ಯವನ್ನು ಸೂಚಿಸುತ್ತದೆ. ಉದಾಹರಣೆಗೆ ಹಲವುವೇಳೆ ಜನರು ಮದರ್ ರಷ್ಯಾವನ್ನು ರಷ್ಯಾ ರಾಷ್ಟ್ರದ ವ್ಯಕ್ತೀಕರಣವೆಂದು ಭಾವಿಸುತ್ತಾರೆ. ಬ್ರಿಟೀಷ್ ಸಾಮ್ರಾಜ್ಯದೊಳಗೆ, ವಸಾಹತುಗಳಲ್ಲಿನ ಅನೇಕ ಸ್ಥಳೀಯರು ಬ್ರಿಟನ್ ಒಂದು ದೊಡ್ಡ ರಾಷ್ಟ್ರದ ತಾಯಿ ದೇಶವೆಂದು ಭಾವಿಸಿದ್ದರು. ಭಾರತವನ್ನು ಹಲವುವೇಳೆ ಭಾರತ ಮಾತೆ ಎಂದು ಮೂರ್ತೀಕರಿಸಲಾಗುತ್ತದೆ. ಫ಼್ರೆಂಚರು ತಮ್ಮ ದೇಶ ಫ಼್ರಾನ್ಸನ್ನು ಸಾಮಾನ್ಯವಾಗಿ "ಲಾ ಮೇರೆ ಪಾಟ್ರಿ" ಎಂದು ಸೂಚಿಸುತ್ತಾರೆ.[]

ಉಲ್ಲೇಖಗಳು

ಬದಲಾಯಿಸಿ
  1. "Definition of HOMELAND". www.merriam-webster.com (in ಇಂಗ್ಲಿಷ್). Retrieved 2018-12-23.
  2. "Ces tirailleurs sénégalais qui ont combattu pour la France". lexpress.fr. 14 July 2010. Archived from the original on 3 January 2015. {{cite web}}: Unknown parameter |dead-url= ignored (help)