ತರ್ಜನಿಯು (ತೋರುಬೆರಳು) ಮಾನವನ ಕೈಯ ಎರಡನೇ ಬೆರಳಾಗಿದೆ. ಇದು ಮೊದಲನೇ ಮತ್ತು ಮೂರನೇ ಬೆರಳುಗಳ ನಡುವೆ, ಹೆಬ್ಬೆರಳು ಮತ್ತು ನಡುಬೆರಳಿನ ನಡುವೆ ಸ್ಥಿತವಾಗಿದೆ. ಇದು ಸಾಮಾನ್ಯವಾಗಿ ಕೈಯ ಅತ್ಯಂತ ಕೌಶಲದ ಮತ್ತು ಸೂಕ್ಷ್ಮವಾದ ಬೆರಳಾಗಿದೆ. ಆದರೆ ಇದು ಕೈಯ ಅತ್ಯಂತ ಉದ್ದನೆಯ ಬೆರಳಲ್ಲ – ಇದು ನಡುಬೆರಳಿಗಿಂತ ಗಿಡ್ಡವಾಗಿದೆ, ಮತ್ತು ಉಂಗುರದ ಬೆರಳಿಗಿಂತ ಗಿಡ್ಡ ಅಥವಾ ಉದ್ದವಿರಬಹುದು.

ಬಳಕೆಗಳುಸಂಪಾದಿಸಿ

ತೋರುಬೆರಳು ಒಂದನ್ನೇ ಲಂಬವಾಗಿ ಹಿಡಿದು ಹಲವುವೇಳೆ ಸಂಖ್ಯೆ ಒಂದನ್ನು ಚಿತ್ರಿಸಲು ಬಳಸಲಾಗುತ್ತದೆ (ಆದರೆ ಬೆರಳೆಣಿಕೆಯು ಸಂಸ್ಕೃತಿಗಳ ನಡುವೆ ಬದಲಾಗುತ್ತದೆ) ಅಥವಾ ಮೇಲಕ್ಕೆ ಹಿಡಿದಾಗ ಅಥವಾ ಪಕ್ಕದಿಂದ ಪಕ್ಕಕ್ಕೆ ಚಲಿಸಿದಾಗ (ಬೆರಳು ಅಲ್ಲಡಿಸುವುದು) ಅದು ಎಚ್ಚರಿಕೆ ನೀಡುವ ಸಂಜ್ಞೆಯಾಗಿರಬಹುದು. ಕೈಯನ್ನು ಅಂಗೈ ಹೊರಗಿರುವಂತೆ ಚಾಚಿ ಹೆಬ್ಬೆರಳು ಮತ್ತು ನಡುಬೆರಳುಗಳು ಒಂದನ್ನೊಂದು ಸ್ಪರ್ಶಿಸಿದಾಗ, ಇದು ಅಮೇರಿಕನ್ ಕಿವುಡರ ಭಾಷೆಯ ಅಕ್ಷರಮಾಲೆಯಲ್ಲಿ d ಅಕ್ಷರವನ್ನು ಚಿತ್ರಿಸುತ್ತದೆ.

ಬೆರಳಿಂದ ತೋರಿಸುವುದುಸಂಪಾದಿಸಿ

ತೋರುಬೆರಳಿನಿಂದ ತೋರಿಸುವುದನ್ನು ಒಂದು ವಸ್ತು ಅಥವಾ ವ್ಯಕ್ತಿಯನ್ನು ಸೂಚಿಸಲು ಬಳಸಬಹುದು.[೧]

ಸುಮಾರು ಒಂದು ವರ್ಷ ವಯಸ್ಸಿಗೆ, ಆಸಕ್ತಿ, ಆಸೆ, ಮಾಹಿತಿ ಸೇರಿದಂತೆ, ತುಲನಾತ್ಮಕವಾಗಿ ಸಂಕೀರ್ಣವಾದ ಯೋಚನೆಗಳನ್ನು ಹಂಚಿಕೊಳ್ಳಲು ಶಿಶುಗಳು ಬೆರಳಿಟ್ಟು ತೋರಿಸುವುದನ್ನು ಪ್ರಾರಂಭಿಸುತ್ತವೆ.

ಉಲ್ಲೇಖಗಳುಸಂಪಾದಿಸಿ

  1. Gary Imai. "Gestures: Body Language and Nonverbal Communication" (PDF). Archived from the original (PDF) on March 31, 2010. Retrieved 12 November 2009.
"https://kn.wikipedia.org/w/index.php?title=ತರ್ಜನಿ&oldid=974963" ಇಂದ ಪಡೆಯಲ್ಪಟ್ಟಿದೆ