ತಮ್ಮಟಕಲ್ಲು ಶಾಸನ ಚಿತ್ರದುರ್ಗ ತಾಲ್ಲೋಕು 'ತಮ್ಮಟಕಲ್ಲು' ಎಂಬ ಹಳ್ಳಿಯಲ್ಲಿ ದೊರೆತಿದೆ. ಗುಣಮಧುರಾಂಕನನ್ನು ಹೊಗಳಿ ಬರೆದ ಶಾಸನವಿದು. ಇವನು ರತ್ನದಂತೆ ತೇಜಸ್ಸುಳ್ಳವನು. ಯುದ್ದಭೂಮಿಯಲ್ಲಿ ರಣ ಉತ್ಸಾಹಿ. ಇವನು ಅನಂತ ಗುಣನು, ಪುರುಷಶ್ರೇಷ್ಠನು.[]

ಶಾಸನದ ಇತಿವೃತ್ತ

ಬದಲಾಯಿಸಿ

ಬಿನಮಣಿಅನ್ತುಭೋಗಿಬಿಣದುಳ್ಮಣಿಲ್ಮನದೋನ್
ರಣಮುಖದುಳ್ಳಕೋಲಂನೆರಿಯರ್ಕುಮನಿನ್ದ್ಯಗುಣನ್
ಪ್ರಣಯಿಜನಕ್ಕೆ ಕಾಮನರಸಿ ತೋತ್ಪಲವರ್ಣ್ಣನವನ್
ಗುಣಮಧುರಾಂಕೃದಿವುಪುರುಷನ್ಪುರುಷಪ್ರವರನ್||

ಗುಣಮಧುರಾಂಕ ಎಂಬುವವನು ರತ್ನದಂತೆ ತೇಜಸ್ವಿಯಾಗಿದ್ದಾನೆ. ಇವನು ರಣರಂಗದಲ್ಲಿ ಬಿಲ್ಲು ಹಿಡಿದು ನಿಂತನೆಂದರೆ ಯಾರೂ ತಡೆಯಲಾಗದು. ಇವನು ಅನಂತ ಗುಣವಂತನಾಗಿಯೂ, ಪ್ರಣಯಿಜನಕ್ಕೆ ಕಾಮನ ಬಿಳಿಯ ತಾವರೆಯ ಬಾಣದಂತಹವನೂ, ಪುರುಷ ಶ್ರೇಷ್ಠನೂ ಆದ ಇವನೂ ಪುರುಷರಲ್ಲೆ ಉತ್ಕೃಷ್ಠನಾದವನಾಗಿದ್ದಾನೆ ಎಂದು ಗುಣಮಧುರಾಂಕನನ್ನು ಹೊಗಳಲಾಗಿದೆ. ಈ ಸಾಸನ ಭಾಷಾದೃಷ್ಟಿಯಿಂದ ಬಹಳ ಮುಖ್ಯವಾದುದು.

ಉಲ್ಲೇಖ

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2015-05-14. Retrieved 2016-02-16.

<referebces />