ತಮಿಳುನಾಡಿನ ಸಾಂಪ್ರದಾಯಿಕ ಉಡುಗೆಗಳು
ಕಲೆ ಮತ್ತು ಸಂಸ್ಕೃತಿ
ಬದಲಾಯಿಸಿಭಾರತದ ದಕ್ಷಿಣ ಭಾಗದಲ್ಲಿ ತಮಿಳುನಾಡು ರಾಜ್ಯ ನೆಲೆಗೊಂಡಿದೆ. ತಮಿಳುನಾಡಿನ ಶ್ರೀಮಂತ ಸಂಸ್ರ್ಕತಿಯ ಒಂದು ಪ್ರಮುಖ ಅಂಶವೆಂದರೆ ಅದರ ಸಾಂಪ್ರದಾಯಿಕ ಉಡುಪು. ಇದು ದಕ್ಷಿಣ ಭಾರತದ ರಾಜ್ಯದ ಸಾಂಸ್ಕೃತಿಕ ಮೂಲತೆಯನ್ನು ಸಂಕೇತಿಸುತ್ತದೆ. ಹತ್ತಿ ಚಿಪೋನ್, ರೇಷ್ಮೆ, ಕ್ರೆಪ್ ಸಿಲ್ಕ್, ಆಗ್ರ್ಜಾ, ಜಿಯರ್ಜಟ್, ಸೂಕ್ಷ್ಮ ರೇಷ್ಮೆ ಮತ್ತು ಪಟೋಲಾ ರೇಷ್ಮೆಯಂತಹ ವಿವಿಧ ರೀತಿಯ ವಸ್ತುಗಳನ್ನು ತಮಿಳುನಾಡಿನ ಉಡುಪುಗಳಲ್ಲಿ ಬಳಸಲಾಗುತ್ತದೆ.
ಮಹಿಳೆಯರ ಸಾಂಪ್ರಾದಾಯಿಕ ಉಡುಪುಗಳು
ಬದಲಾಯಿಸಿತಮಿಳುನಾಡಿನ ಮಹಿಳೆಯರ ಸಾಂಪ್ರಾದಾಯಿಕ ಉಡುಪುಗಳಲ್ಲಿ ಸಾರಿ ಅಪಾರ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಜನಪ್ರಿಯ ತಮಿಳ್ ಕವಿತೆ ಸಿಲಪಟಿಕಾರಮ್ ಹೆಣ್ಣು ಮಕ್ಕಳನ್ನು ಒಂದು ಸೀರೆಯಲ್ಲಿ ಚಿತ್ರಿಸುತ್ತದೆ. ಮಹಿಳೆಯರು ಸೀರೆಯನ್ನು ಹೆಚ್ಚಾಗಿ ಕಚೇರಿಗಳಲ್ಲಿ, ದೇವಾಲಯಗಳು, ಪಕ್ಷಗಳು, ಮತ್ತು ವಿವಾಹಗಳಲ್ಲಿ ಧರಿಸುತ್ತಾರೆ. ದಕ್ಷಿಣ ಭಾರತದ ಸೀರೆಗಳು ತಮ್ಮ ಸಂಕಿರ್ಣವಾದ ಜರಿ ಕೆಲಸಕ್ಕಾಗಿ ಭಾರತದಾದ್ಯಂತ ಪ್ರಸಿದ್ಧವಾಗಿವೆ. ಕಾಂಚೀಪುರಮ್ ಸಾರಿ ವಿಶೇಷವಾಗಿ ತನ್ನ ಸೊಗಾಸದ ಶೈಲಿಗೆ ಹೆಸರುವಾಸಿಯಾಗಿದೆ. ಕಾಂಚೀಪುರಮ್ ಸಾರಿ ಬಣ್ಣ ವಿನ್ಯಾಸವನ್ನು ಮತ್ತು ಶೈಲಿಯು ಉತ್ತರ ಭಾರತೀಯ ಸೀರೆಗಳಿಂದ ಭಿನ್ನವಾಗಿದೆ. ಸಾರಿ ಉದ್ದ ಸಾಮಾನ್ಯವಾಗಿ ಐದರಿಂದ ಆರು ಗಜಗಳಷ್ಟು ಇರುತ್ತದೆ.
ತಮಿಳುನಾಡಿನ ಸಾಂಪ್ರಾದಾಯಿಕ ಉಡುಗೆಯ ಮೂಲ
ಬದಲಾಯಿಸಿತಮಿಳುನಾಡಿನಲ್ಲಿ ಬ್ರಾಹ್ಮಣ ಹುಡುಗಿಯರು ಸಾಮಾನ್ಯವಾಗಿ ಮದುವೆಯ ಸಂದರ್ಭದಲ್ಲಿ ಪಾವಡಾ ಎಂಬ ಅಲಂಕಾರಿಕಾ ಉಡುಪನ್ನು ಧರಿಸುತ್ತಾರೆ. ಈ ಅರ್ಧ ಸೀರೆ ಉಡುಗೆಯು ಒಂದು ಸಣ್ಣ ಕುಪ್ಪಸ ಮತ್ತು ಶಾಲಿನೊಂದಿಗೆ ಸಂಯೋಜನೆಗೊಂಡಿರುವ ಪೂರ್ಣ ಉದ್ದದ ಸ್ಕರ್ಟ ತರಹದ ಉಡುಗೆಯಾಗಿದೆ ಇದನ್ನು ದಾವನಿ ಎಂದು ಕರೆಯುತ್ತಾರೆ. ಇದು ತಮಿಳು ನಾರಿಯರ ಸೌಂದರ್ಯದ ಸಂಕೇತವಾಗಿದೆ. ಈ ದಿನಗಳಲ್ಲಿ ಸಲ್ವಾರ್ ಕಮೀಜ್ ಕೂಡ ತಮಿಳುನಾಡಿನಲ್ಲಿ ಜನಪ್ರಿಯವಾಗಿದೆ. ಸಲ್ವಾರ್ ಕುರ್ತಿ ಅಥವಾ ಕಮೀಜ್ ಎಂದು ಕರೆಯಲ್ಪಡುವ ಸುಧಿರ್ಘವಾದ ಮೇಲಿರುವ ಒಂದು ರೀತಿಯ ಸಡಿಲವಾದ ಟ್ಯೂಸರ್ ಆಗಿದೆ.
ಪುರುಷರ ಸಾಂಪ್ರಾದಾಯಿಕ ಉಡುಗೆಗಳು
ಬದಲಾಯಿಸಿತಮಿಳು ಪುರುಷರ ಸಾಂಪ್ರಾದಾಯಿಕ ಉಡುಪು ಮಹಿಳೆಯರ ಉಡುಗೆಗಳಂತೆ ಸುಂದರವಾಗಿರುತ್ತದೆ. ತಮಿಳುನಾಡಿನಲ್ಲಿ ಪುರುಷರಿಗೆ ಸಾಮಾನ್ಯವಾಗಿ ಲುಂಗಿ ಉಡುಪು ಧರಿಸುತ್ತಾರೆ. ಇದು ಸೊಂಟ ಮತ್ತು ತೊಡೆಯ ಸುತ್ತಲೂ ಸುತ್ತುತ್ತದೆ. ಲುಂಗಿ ವಿವಿಧ ಬಣ್ಣಗಳಲ್ಲಿ ಬರುತ್ತದೆ. ಈ ಉಡುಗೆಯನ್ನು ಮದುವೆಗಳಲ್ಲಿಯೂ ಪುರುಷರು ಸಾಂಪ್ರಾದಾಯಿಕವಾಗಿ ಧರಿಸುತ್ತಾರೆ. ಈ ಆಯತಾಕಾರದ ಆಕಾರ ಬಟ್ಟೆಯನ್ನು ಸಾಮಾನ್ಯವಾಗಿ ಹತ್ತಿಯಿಂದ ತಯಾರಿಸಲಾಗುತ್ತದೆ. ಇದನ್ನು ಹೆಚ್ಚಾಗಿ ಶರ್ಟ್ ಅಥವಾ ಅಂಗಾವಸ್ತ್ರದೊಂದಿಗೆ ಧರಿಸಲಾಗುತ್ತದೆ. ಅಂಗವಸ್ತ್ರಂ ತಮಿಳು ಉಡುಗೆಯ ಇನ್ನೋಂದು ಪ್ರಮುಖ ಭಾಗವಾಗಿದೆ. ಇದು ಭುಜದ ಸುತ್ತಲೂ ಸುತ್ತುವ ಬಟ್ಟೆಯ ತುಂಡು. ಆರಂಭಿಕ ದಿನಗಳಲ್ಲಿ ಅಂಗವಸ್ರ್ತವನ್ನು ಮೇಲ್ಬಾಗದ ಬಟ್ಟೆಯಾಗಿ ಬಳಸಲಾಗುತ್ತಿತ್ತು. ಆದರೆ ಈಗ ಅದನ್ನು ಶರ್ಟ್ ಮೇಲೆ ಬಳಸಲಾಗುತ್ತದೆ.
ಸಾಂಪ್ರಾದಾಯಿಕ ಪರಿಕರಗಳು
ಬದಲಾಯಿಸಿತಮಿಳುನಾಡಿನಲ್ಲಿ ಪುರುಷರು ಮತ್ತು ಮಹಿಳೆಯರ ಸಾಂಪ್ರಾದಾಯಿಕ ಉಡುಗೆ ತೊಡುಗೆಗಳು ಚಿನ್ನದ ಆಭರಣಗಳಾದ ನೆಕ್ಲೆಸ್, ಚೈನ್, ಬಳೆಗಳು, ಕಿವಿಯೊಲೆಗಳು ಮತ್ತು ನೆತ್ತಿ ಬೊಟ್ಟು ಇಲ್ಲದೆ ಅಪೂರ್ಣವಾಗಿರುತ್ತದೆ. ತಮಿಳರು ಚಿನ್ನವನ್ನು ಅಧಿಕವಾಗಿ ಪ್ರೀತಿಸುತ್ತಾರೆ ಮತ್ತು ತಮ್ಮಲ್ಲಿ ದೊಡ್ಡ ಪ್ರಮಾಣದ ಚಿನ್ನದ ಆಭರಣಗಳನ್ನು ಹೊಂದಿರುತ್ತಾರೆ. ಆಭರಣಗಳನ್ನು ಹೊರತುಪಡಿಸಿ ತಮಿಳುನಾಡಿನಲ್ಲಿ ಮಹಿಳೆಯರು ತಮ್ಮ ಕೂದಲನ್ನು ಹೂವಿನ ಹೂಮಾಲೆಗಳಿಂದ ಅಲಂಕರಿಸಲು ಪ್ರಿತಿಸುತ್ತಾರೆ ಮತ್ತು ಹೀಗೆ ಅಲಂಕರಿಸುವುದನ್ನು ಗಜ್ರಾಸ್ ಎಂದು ಕರೆಯುತ್ತಾರೆ. ಪುರುಷರು ಮತ್ತು ಮಹಿಳೆಯರು ತಮ್ಮ ಅಲಂಕಾರವನ್ನು ಪೂರ್ಣಗೊಳಿಸಲು ತಮ್ಮ ಕೈಗಳಿಗೆ, ಪಾದಗಳಿಗೆ ಮತ್ತು ಹಣೆಯ ಮೇಲೆ ಕುಂಕುಮ, ವಿಭೂತಿಗಳನ್ನು ಲೇಪಿಸುತ್ತಾರೆ.
ತಮಿಳುನಾಡಿನ ಸಾಂಪ್ರಾದಾಯಿಕ ಉಡುಪುಗಳು ಜಗತ್ತಿನಲ್ಲಿ ತಮ್ಮ ಅನುಪಮ ಸೌಂದರ್ಯಕ್ಕಾಗಿ ಪ್ರಸಿದ್ಧಿಯಾಗಿದೆ. ಆಧುನಿಕ ಯುಗದಲ್ಲಿ ಜೀನ್ಸ್, ಟೀ ಶರ್ಟ್, ಶರ್ಟ್ ಸ್ಕಟ್ರ್ಗಗಳು ತಮಿಳುನಾಡಿನ ಉಡುಗೆ ಸಂಸ್ಕಂತಿ ಯೊಳಗೆ ದಾರಿ ಮಾಡಿಕೊಂಡಿದೆ.ಅದಾಗ್ಯೂ ಉತ್ಸವಗಳು ಅಥವಾ ಆಚರಣೆಯ ಸಮಯದಲ್ಲಿ ತಮಿಳರು ಸಾಂಪ್ರದಾಯಿಕ ಉಡುಗೆಗಳಿಗೆ ಆಧ್ಯತೆ ನೀಡುತ್ತಾರೆ.
ತಮಿಳುನಾಡಿನ ಸಾಂಪ್ರಾದಾಯಿಕ ವೇಷಭೂಷಣಗಳು ಪ್ರತಿಯೊಂದು ಸಾಂಪ್ರಾದಾಯಿಕ ಚಟುವಟಿಕೆಗಳಲ್ಲೂ ಪ್ರಸಿದ್ಧವಾಗಿದೆ. ತಮಿಳುನಾಡಿನ ಶ್ರೀಮಂತ ಸಂಸ್ಕøತಿಯನ್ನು ಎಲ್ಲಾ ಭಾರತಿಯರು ಗೌರವಿಸುತ್ತಾರೆ. ದೇವಾಲಯಗಳ ಭೇಟಿಗೆ ವಿಶೇಷವಾಗಿ ತಮಿಳು ಜನರು ತಮ್ಮ ಸಾಂಪ್ರಾದಾಯಿಕ ವಸ್ತ್ರಗಳನ್ನು ಧರಿಸುತ್ತಾರೆ. ತಮಿಳುನಾಡಿನ ಪುರುಷರ ಸಾಂಪ್ರಾದಾಯಿಕ ಉಡುಗೆ ಪಂಚೆ ಅಗಿದೆ. ಅವರು ಧೋತಿಯ ಜೊತೆ ಅಂಗವಸ್ತ್ರ ಹಾಗೂ ಶರ್ಟ್‍ನ್ನು ಧರಿಸುತ್ತಾರೆ. ಮಹಿಳೆಯರು ಸಾಂಪ್ರಾದಾಯಿಕವಾದ ಸೀರೆ ಮತ್ತು ಕುಪ್ಪಸ ಧರಿಸುತ್ತಾರೆ. ತಮಿಳುನಾಡು ಜನರ ಉಡುಗೆ ಪ್ರತಿಯೊಬ್ಬರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.[೧]
ಕಾಂಚಿಪುರಮ್ ಸೀರೆಗಳು
ಬದಲಾಯಿಸಿತಮಿಳುನಾಡಿನ ಸೀರೆಗಳು ದೇಶದಾದ್ಯಂತ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಸೀರೆ ನೇಯ್ಗೆಗೆ ಹತ್ತಿ, ರೇಷ್ಮೆ, ಕ್ರೇಪ್ ಸಿಲ್ಕ್, ಆರ್ಗನಾ ಜಿಯರ್ಗೆಟ್‍ಗಳನ್ನು ಬಳಸುತ್ತಾರೆ. ಸೀರೆಗಳು ತಮಿಳುನಾಡಿನ ಶ್ರೀಮಂತ ಸಂಸ್ಕøತಿಯ ಭಾಗವಾಗಿದೆ. ಇಲ್ಲಿನ ಮಹಿಳೆಯರು ಝರಿ ಕೆಲಸದೊಂದಿಗೆ ಇರುವ ಸಾಂಪ್ರಾದಾಯಿಕ ಸೀರೆಯನ್ನು ಹೆಚ್ಚು ಇಷ್ಟ ಪಡುತ್ತಾರೆ. ಮದುವೆಯ ಸಂಧರ್ಭಗಳು, ದೇವಾಲಯ ಭೇಟಿಗಳಿಗೆ, ಮತ್ತು ಶುಭ ದಿನಗಳಲ್ಲಿ ಕಾಂಚಿಪುರಂ ಸೀರೆಗೆ ಪ್ರಮುಖ ಆಧ್ಯತೆ. ಈ ಸೀರೆಯ ಬಣ್ಣ ವಿನ್ಯಾಸ ಮತ್ತು ಶೈಲಿ ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ಈ ಸೀರೆಯು ಸಿಲ್ಕ್ ಮತ್ತು ಕಾಟನ್‍ನೂರಿನ ಸಂಯೋಜನೆಯೊಂದಿಗೆ ಸೀರೆ ನೆಯ್ಗೆಯನ್ನು ಮಾಡಲಾಗಿದೆ.[೨]
ಉಲ್ಲೆಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2018-03-14. Retrieved 2018-03-25.
- ↑ https://indiathedestiny.com/india-society/costumes/tamil-nadu-traditional-costumes/