ತಬ್ಬಲಿಯು ನೀನಾದೆ ಮಗನೆ (ಕಾದಂಬರಿ)

ಎಸ್ ಎಲ್ ಬೈರಪ್ಪ ನವರ ಕಾದಂಬರಿ

ಗೋವನ್ನು ಸರ್ವದೇವತೆಗಳ ಸ್ವರೂಪವೆಂದು ಪೂಜಿಸುವ ಕಾಳಿಂಗಜ್ಜ ಮತ್ತು ಅದನ್ನು ಹಾಲು ಮಾಂಸಗಳನ್ನು ಕೊಡುವ ಪ್ರಾಣಿ ಮಾತ್ರ ಎಂದು ಭಾವಿಸುವ ಅಮೇರಿಕೆಯಿಂದ ಹಿಂದಿರುಗಿದ ಮೊಮ್ಮಗ, ಇವರ ಮೌಲ್ಯ ಸಂವೇದನೆಗಳ ನಡುವೆ ನಡೆಯುವ ತಿಕ್ಕಾಟವೇ ಈ ಕಾದಂಬರಿಯ ಕಥಾವಸ್ತು. ಪ್ರಾಯಶಃ ಭಾರತದ ಎಲ್ಲ ಭಾಷೆಗಳಲ್ಲಿಯೂ ಪ್ರಚಲಿತವಿರುವ ಗೋವಿನ ಹಾಡಿನ ಹಿನ್ನೆಲೆಯಲ್ಲಿ ಆರಂಭವಾಗುವ ಕಾದಂಬರಿಯು, ಭಾರತೀಯ ಸಂಸ್ಕೃತಿಯ ಮೂಲ ಬೇರುಗಳನ್ನು ಹಿನ್ನಲೆಯಲ್ಲಿ ಕಾಣಿಸುತ್ತದೆ. ಈ ಕೃತಿಯನ್ನಾಧರಿಸಿ ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಿಸಿರುವ ಚಲನ ಚಿತ್ರಗಳು ರಾಷ್ಟೀಯ ಮತ್ತು ಅಂತರರಾಷ್ಟ್ರಿಯ ಮನ್ನಣೆ ಪಡೆದಿವೆ. ಈ ಕಾದಂಬರಿಯ ಹಿಂದಿ ಅನುವಾದವು ಅಪಾರವಾದ ಮೆಚ್ಚುಗೆ ಪಡೆದಿದೆ. ಇದೊಂದು ಉತ್ಕೃಷ್ಟ ಸಾಹಿತ್ಯಕೃತಿ ಎಂದು ಭಾವಿಸುವವರಿರುವಂತೆಯೆ, ಪ್ರಗತಿವಿರೋಧಿ, ಪ್ರತಿಗಾಮಿ ಮೌಲ್ಯಗಳನ್ನು ಪ್ರತಿಪಾದಿಸುವ ತೀರ ಕಳಪೆ ಕಾದಂಬರಿ ಎಂದು ಇದನ್ನು ದ್ವೇಷಿಸುವವರೂ ಇದ್ದಾರೆ. ಪ್ರೀತಿ ದ್ವೇಷಗಳೆರಡನ್ನು ಪ್ರಚೋದಿಸುವ ಗುಣವು ಈ ಕಾದಂಬರಿಯ ಶಕ್ತಿಯ ಗುರುತಾಗಿದೆ.ಈ ಕಾದಂಬರಿಯ ಕನ್ನಡ ಚಲನಚಿತ್ರ ರೂಪಾಂತರವನ್ನು ( ಕನ್ನಡದಲ್ಲಿ "ತಬ್ಬಲಿಯು ನೀನಾದೆ ಮಗನೆ" ಹಾಗೂ ಹಿಂದಿಯಲ್ಲಿ " ಗೋಧೂಳಿ")ಶ್ರೀ ಬಿ.ವಿ.ಕಾರಂತ ಹಾಗೂ ಶ್ರೀ ಗಿರೀಶ ಕಾರ್ನಾಡ ನಿರ್ದೇಶಿಸಿದ್ದಾರೆ.ಮಾನು ಚಿತ್ರದ ನಾಯಕರು.

ಉಲ್ಲೇಖನಗಳು

ಬದಲಾಯಿಸಿ

[]

ಉಲ್ಲೇಖಗಳು

ಬದಲಾಯಿಸಿ