ತನ್ಯತೆ
ವಸ್ತು ವಿಜ್ಞಾನದಲ್ಲಿ.ತನ್ಯತೆಯು ಘನವಸ್ತುಗಳ ಒಂದು ಸಾಮರ್ಥ್ಯವಾಗಿದ್ದು ಕರ್ಷಕ ಒತ್ತಡದಲ್ಲಿ ವಿರೂಪಗೊಳ್ಳುವ ಒಂದು ಗುಣವಾಗಿದೆ.;ಅಲ್ಲದೇ ತನ್ಯತೆಯು ಅನೇಕಸಾರಿ ವಸ್ತುಗಳನ್ನು ತಂತಿಯ ರೂಪಗಳ ರೂಪದಲ್ಲಿ ಹಿಗ್ಗಿಸುವ ಒಂದು ವಿಶಿಷ್ಠ ಗುಣವಾಗಿದೆ ತನ್ಯತೆಯನ್ನು ತಂತುಶೀಲತೆ ಎಂತಲೂ ಕರೆಯಬಹುದಾಗಿದೆ.ಕುಟ್ಯತೆಯು ಸಹ ಇಂತಹ ಒಂದು ಸಾಮರ್ಥ್ಯವಾಗಿದ್ದು ಒತ್ತಡದಗಳಲ್ಲಿ ವಸ್ತುಗಳು ವಿರೂಪಗೊಳ್ಳುವ ಗುಣವಾಗಿದೆ.ಅನೇಸಲ ಈ ಗುಣವನ್ನು ವಸ್ತುಗಳನ್ನು ಒತ್ತಡದಲ್ಲಿ ವಿರೂಪಗೊಳಿಸುವ ಹಾಗು ಅವುಗಳುನ್ನು ಹಾಳೆಯಂತೆ ಮಾಡಬಹುದಾದ ಮತ್ತು ಸುರುಳಿಸುತ್ತಬಹುದಾದ ಗುಣವೆಂದೂ ಸಹ ಹೇಳಬಹುದು. ವಸ್ತುಗಳ ಈ ಎರಡೂ ಯಾಂತ್ರಿಕಗುಣಗಳು ಪ್ಲಾಸ್ಟಿಸಿಟಿಯ ಅಂಶಗಳಾಗಿದ್ದು,ಒಂದು ಘನ ವಸ್ತುವನ್ನು ಅದು ಮುರಿಯದಂತೆ ವಿರೂಪಗೊಳಿಸುವದಾಗಿದೆ.ಅಲ್ಲದೇ ಮತ್ತೊಂದು ಅಂಶವೆಂದರೆ,ಈ ಎರಡೂ ಗುಣಗಳೂ ಉಷ್ಣತೆ ಮತ್ತು ಒತ್ತಡದ ಮೇಲೆಅವಲಂಬಿತವಾಗಿವೆ ಎಂದು ನೋಬೆಲ್ ಪ್ರಶಸ್ತಿ ವೀಜೆತರಾದ ಪರ್ಸಿ ವಿಲಿಯಮ್ಸ್ ಬ್ರಿಡ್ಜ್ ಮ್ಯಾನ್ಅವರು ಅಭಿಪ್ರಾಯಪಟ್ಟಿರುತ್ತಾರೆ. ತಂತುಶೀಲತೆ ಮತ್ತು ಪತ್ರಶೀಲತೆಗಳು ಯಾವಾಗಲು ಸಮವ್ಯಾಪಕವಾಗಿರುವುದಿಲ್ಲ. ಉದಾ,ಚಿನ್ನವು ಅತ್ಯಂತ ಹೆಚ್ಚು ತಂತುಶೀಲತೆ ಮತ್ತು ಪತ್ರಶೀಲತೆಗಳನ್ನು ಹೊಂದಿದ ಲೋಹವಾಗಿದ್ದು ಶೀಸವು ಅತ್ಯಂತ ಕಡಿಮೆ ತಂತುಶೀಲತೆ ಮತ್ತು ಪತ್ರಶೀಲತೆಗಳನ್ನು ಹೊಂದಿದೆ.
ವಸ್ತು ವಿಜ್ಞಾನ
ಬದಲಾಯಿಸಿತನ್ಯತೆಯು ಬಹುಮುಖ್ಯವಾಗಿ [೧] ಉಪಯುಕ್ತವಾಗಿದೆ.ಯಾವ ಲೋಹಗಳು ಬಡಿಯುವಿಕೆಯಿಂದ,ಸುತ್ತುವಿಕೆಯಿಂದ,ಮತ್ತು ಎಳೆಯುವಿಕೆಯಿಂದ ಸೀಳುತ್ತವೆಯೋ,ಒಡೆದುಹೊಗುತ್ತವೆಯೋ ಹಾಗೂ ತುಂಡುತುಂಡಾಗುವೆಯೋ ಅಂತಹ ಲೋಹಗಳನ್ನು ಲೋಹಿಯ ಕಾರ್ಯಗಳಲ್ಲಿ ಬಳಸಲಾಗುವುದಿಲ್ಲ.ತಂತುಶೀಲ ವಸ್ತುಗಳನ್ನು ಒತ್ತಡಕ್ಕೊಳಪಡಿಸುವ ಮೂಲಕ ಹಾಗು ಶೀತದಲ್ಲಿ ತುಳಿತಕ್ಕೊಳಪಡಿಸುವ ಮೂಲಕ ತಯಾರಿಸಬಹುದು. ಅದರಂತೆ ಸುಲಭಾಗಿ ಮುರಿಯುವ ವಸ್ತುಗಳನ್ನು ಎರಕಹೊಯ್ಯುವ ಮೂಲಕ ತಯಾರಿಸಬಹುದು. ಗರಿಷ್ಠ ಮಟ್ಟದ ತನ್ಯತೆಯು ಲೋಹಿಯ ಬಂಧಗಳಿಂದಾಗಿ ಉಂಟಾಗುತ್ತದೆ.ಇದಕ್ಕೆ ಪ್ರಮುಖ ಕಾರಣವೆಂದರೆ ಹೊರಕವಚದಲ್ಲಿರುವ ಎಲೆಕ್ಟ್ರಾನ್ಸ್ಗಗಳು ಪಲ್ಲಟಗೊಂಡು ಬೇರೆ ಮೂಲವಸ್ತುಗಳೊಂದಿಗೆ ಹಂಚಿಕೊಳ್ಳುತ್ತವೆ.
ಸ್ಟೀಲ್ ನ ತಂತುಶೀಲತೆಯು ಅದರಲ್ಲಿರುವ ಮಿಶ್ರಲೋಹದ ಘಟಕಾಂಶಗಳ ಮೇಲೆ ಅವಲಂನೆಯಾಗಿರುತ್ತದೆ. ಇಂಗಾಲ ನ ಪ್ರಮಾಣವು ಹೆಚ್ಚಾದಂತೆ ಸ್ಟೀಲ್ ನ ತಂತುಶೀಲತೆಯು ಕಡಿಮೆಯಾಗುತ್ತದೆ.ಅತ್ಯಂತ ಹೆಚ್ಚುತಂತುಶೀಲತೆಯನ್ನು ಹೊಂದಿದ ಮತ್ತು ಅತ್ಯಂತ ಹೆಚ್ಚು ಪತ್ರಶೀಲತೆಯನ್ನು ಹೊಂದಿದ ಲೋಹಗಳಂದರೆ ಕ್ರಮವಾಗಿ ಪ್ಲಾಟಿನಂ ಮತ್ತು ಚಿನ್ನ.
ತನ್ಯತೆ-ಸುಲಭ ಪರಿವರ್ತನಾ ಉಷ್ಠತೆ
ಬದಲಾಯಿಸಿತನ್ಯತೆ ಸುಲಭ ಪರಿವರ್ತನಾ ಉಷ್ಠತೆಯು ಒಂದು ಮಹತ್ವದ ಅಂಶವಾಗಿದ್ದು ಒಂದು ಸಾರಿ ವಸ್ತುವು ತಂಪುಗೊಳಿಸಲ್ಪಟ್ಟಾಗ ಅದು ವಿಶೇಷ ಗುಣವನ್ನು ಹೊಂದಿ ಒಡೆದು ಹೋಗುವ ಅಥಾ ಬಾಗುವ ಅಥವಾ ವಿರೂಪಗೊಳ್ಳುವ ಗುಣವನ್ನು ಪಡೆದುಕೊಳ್ಳುತ್ತದೆ. ಉದಾಹರಣೆಗೆ [೨] ಇದು ಕೊಠಡಿ ಉಷ್ಠತೆಯಲ್ಲಿ ಉತ್ತಮ ತಂತು ಶಿಲತೆಯನ್ನು ಪ್ರದರ್ಶಿಸುತ್ತದೆ ಆದರೆ ಸಬ್ ಝಿರೋ ಉಷ್ಣತೆಯಲ್ಲಿ ಒಡೆದು ಹೋಗುತ್ತದೆ.ತನ್ಯತೆ ಸುಲಭ ಪರಿವರ್ತನಾ ಉಷ್ಠತೆಯು ವಸ್ತುಗಳ ಆಯ್ಕೆಯಲ್ಲಿ ಅತ್ಯಂತ ಪ್ರಮುಖವಾದ ಘಟಕವಾಗಿದೆ. ಅದರಲ್ಲೂ ಪ್ರಮುಖವಾಗಿ ಯಾಂತ್ರಿಕ ಒತ್ತಡದಲ್ಲಿ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಈ ಅಂಶವು ಪ್ರಮುಖವಾಗಿದೆ. ಅದರಂತೆ ಗಾಜು ಸಂಕ್ರಮಣ ಉಷ್ಣತೆಯಲ್ಲಿ ಇದೇ ರೀತಿ ವಿದ್ಯಮಾನಗಳು ಕಂಡುಬರುತ್ತವೆ. ಇನ್ನು ಕೆಲವು ವಸ್ತುಗಳಲ್ಲಿ ಪರಿವರ್ತನಾ(ಸಂಕ್ರಮಣ)ಶಿಲತೆಯು ಅತ್ಯಂತ ತೀಕ್ಷ್ಣವಾಗಿರುತ್ತದೆ. ಉದಾಹರಣೆಗೆ; ಪರಿವರ್ತನಾ(ಸಂಕ್ರಮಣ)ಶಿಲತೆಯು [೩]ಗಳಿಗಿಂತ [೪]ಗಳಲ್ಲಿ ತೀಕ್ಷ್ಣವಾಗಿರುತ್ತದೆ. ತನ್ಯತೆ ಸುಲಭ ಪರಿವರ್ತನಾ ಉಷ್ಠತೆಯ ಅತ್ಯಂತ ನಿಖರವಾದ ಅಳತೆ ವಿಧಾನವೆಂದರೆ ಮುರಿಯುವಿಕೆ ಪರೀಕ್ಷೆ ಮಾಡುವದು. ಸಾಮಾನ್ಯವಾಗಿ [೫]ಯನ್ನು ಮೊದಲೇ ಸೀಳಿರಿಉವ ಹೊಳಪುಳ್ಳ ವಸ್ತುಗಳ ಮೇಲೆ ಪರೀಕ್ಷಿಸಬಹುದು. ಉನ್ನತ ಉಷ್ಣತೆಗಳಲ್ಲಿ ಮಾಡಿದ ಪ್ರಯೋಗಗಳಿಂದ ಕಂಡು ಬಂದ ಅಂಶಗಳೆಂದರೆ ಸ್ಥಾನಾಂತರ ಚಟುವಟಿಕೆಗಳು ಹೆಚ್ಚುತ್ತವೆ. ಈ ಉಷ್ಣತೆಯಲ್ಲಿ ನಡೆದಿರುವ ಈ ಚಟುವಟಿಕೆಯನ್ನು ತನ್ಯತೆ ಸುಲಭ ಪರಿವರ್ತನಾ ಉಷ್ಠತೆಯೆಂದು ಕರೆಯುತ್ತವೆ.