ಡ್ಯಾನಿಯಲ್ ಸ್ಯಾಂಡರ್ಸನ್
ಡೇನಿಯಲ್ ಸ್ಯಾಂಡರ್ಸನ್ ಅವರು ವೆಸ್ಲಿಯನ್ ಮಿಷನರಿ ಆಗಿದ್ದರು. ೧೮೪೨-೧೮೬೭ ರ ನಡುವೆ ಬೆಂಗಳೂರು ಪೇಟೆ, ಮೈಸೂರು, ತುಮಕೂರು ಮತ್ತು ಗುಬ್ಬಿಯಲ್ಲಿ ವೆಸ್ಲಿಯನ್ ಕೆನರೀಸ್ ಮಿಷನ್‌ನಲ್ಲಿ ಸೇವೆ ಸಲ್ಲಿಸಿದರು. [೧] [೨] ಸ್ಯಾಂಡರ್ಸನ್ ಭಾಷಾಶಾಸ್ತ್ರಜ್ಞ ಮತ್ತು ಕನ್ನಡ ವಿದ್ವಾಂಸರಾಗಿದ್ದರು. ಸರ್ ಮಾರ್ಕ್ ಕಬ್ಬನ್ ಅವರ ಆರ್ಥಿಕ ಬೆಂಬಲದೊಂದಿಗೆ ವೆಸ್ಲಿಯನ್ ಮಿಷನ್ ಪ್ರೆಸ್ ೧೮೫೮ ರಲ್ಲಿ ಪ್ರಕಟಿಸಿದ ಮೊದಲ ಕನ್ನಡ-ಇಂಗ್ಲಿಷ್ ನಿಘಂಟಿನ ಸಹ-ಲೇಖಕರೂ ಆಗಿದ್ದಾರೆ. [೩] ಅವರು ಲಕ್ಷ್ಮೀಶನ ಅದ್ಭುತ ಕೃತಿಯಾದ ಜೈಮಿನಿ ಭಾರತವನ್ನು ಇಂಗ್ಲಿಷ್‌ಗೆ ಅನುವಾದಿಸಿದರು. ಇಂಗ್ಲೆಂಡಿಗೆ ಹಿಂದಿರುಗಿದ ನಂತರ, ಅವರನ್ನು ರಿಚ್ಮಂಡ್ ಥಿಯೋಲಾಜಿಕಲ್ ಕಾಲೇಜಿನ ನಿರ್ದೇಶಕರಾಗಿ ನೇಮಿಸಲಾಯಿತು. [೪] [೫] [೬] [೭]
ಹತ್ತೊಂಬತ್ತನೆಯ ಶತಮಾನದಲ್ಲಿ ಕರ್ನಾಟಕಕ್ಕೆ ಬಂದು ಪರಿಶ್ರಮಿಸಿದ ಮಿಶನರಿಗಳು ನೂರಾರು ಜನ. ಅವರುಗಳಲ್ಲಿ ಮೆಥಾಡಿಸ್ಟ್ ಮಿಶನ್ನಿನವರು ಸಂಖ್ಯಾಮಾನದಿಂದ ಕಡಿಮೆ ಇದ್ದರೂ, ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಹೆಸರಿನಲ್ಲಿದ್ದ ಮುದ್ರಣಲಯವು (ವೆಸ್ಲಿಯನ್ ಮಿಶನ್ ಪ್ರೆಸ್ )೧೯೩ಂರ ದಶಕದವರೆಗೂ ಅಸ್ತಿತ್ವದಲ್ಲಿತ್ತು.[೯]
ಆದರೆ ಈ ಮೆಥಾಡಿಸ್ಟ್ ಮಿಶನ್ ಜನರಲ್ಲಿ ಸಾಹಿತ್ಯಿಕವಾಗಿ ಕೆಲಸ ಮಾಡಿದವರು ನಾಲ್ಕೋ ಐದು ಜನ. ಅವರುಗಳಲ್ಲಿ ಡ್ಯಾನಿಯಲ್ ಸ್ಯಾಂಡರ್ಸನ್ನರ ಹೆಸರು ಪ್ರಥಮ ಸ್ಥಾನದಲ್ಲಿದೆ.
೧೯೦೨ರಲ್ಲಿ ಇವರು ಮೊದಲು ಬೆಂಗಳೂರಿಗೆ ಬಂದರು. ಅಲ್ಲಿಂದ ಗುಬ್ಬಿ, ಮೈಸೂರು, ತುಮಕೂರುಗಳಲ್ಲಿ ಕ್ರೈಸ್ತ ಮತ ಪ್ರಸಾರದ ಕಾರ್ಯದಲ್ಲಿ ಒಟ್ಟಿಗೆ ಕಾಲು ಶತಮಾನದವರೆಗೆ ನಮ್ಮವರಾಗಿಯೇ ಇದ್ದುಕೊಂಡು ೧೮೬೬ ರಲ್ಲಿ ಸ್ವದೇಶಕ್ಕೆ ಹಿಂತಿರುಗಿದರು. ೧೯ಂ೨ರಲ್ಲಿ ದೇವರ ಪಾದ ಸೇರಿದರು.
ಅವರು ಹೆಚ್ಚು ಕಾಲ ಇದ್ದದ್ದು ಮೈಸೂರಿನಲ್ಲಿ. ಅಲ್ಲಿಯ ರಾಜಾಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಬೆಂಗಳೂರಲ್ಲಿ ಇದ್ದಾಗಲೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮನಗೊಟ್ಟರು. ಸ್ವಾತಂತ್ರ್ಯ ಪೂರ್ವದಲ್ಲಿ ಬದುಕಿದ್ದ ಹಿಂದಿನ ತಲೆಮಾರಿನವರು ಅವರ ಹೆಸರನ್ನೂ ಶೈಕ್ಷಣಿಕ ಕಾರ್ಯವನ್ನೂ ಬಲ್ಲವರಾಗಿದ್ದರು. ಧಾರ್ಮಿಕ ರಂಗದ ಬಗ್ಗೆ ಹೇಳುವುದಾದರೆ, ಲಂಡನ್, ವೆಸ್ಲಿಯನ್ ಮತ್ತು ಬಾಸೆಲ್ ಮಿಶನರಿಗಳ ಜಂಟಿ ಸಮಿತಿಯೊಂದು ಬೈಬಲಿನ ಎರಡನೆಯ ಪರಿಷ್ಕ್ರತ ಅನುವಾದದಲ್ಲಿ ತೊಡಗಿದ್ದಾಗ, ಸ್ಟಾಂಡರ್ಸನ್ ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ’ಯೇಸುವಿನ ಬಳಿಗೆ ಬಾ’ ಎಂಬ ಚಿಕ್ಕ ಅನುವಾದವೂ ಇದೆ. (ಮೂಲ: ಸಿ.ಎನ್ ಹಾಲ್ ).
ಕನ್ನಡ ಭಾಷೆ, ಸಾಹಿತ್ಯಗಳ ಪರಿಣಿತಿಯನ್ನು ಪಡೆದಿರುವುದರ ಜೊತೆಗೆ ಆ ಕುರಿತು ಅವರಲ್ಲಿ ನಿಜವಾದ ಒಲವಿದ್ದಿತು. ಅವರು ಮಾಡಿದ ಮೊದಲ ಮಹತ್ವದ ಕಾರ್ಯಾವೆಂದರೆ, ಅನವಶ್ಯಕ ವಿವರಗಳನ್ನು ತುಂಬಿಕೊಂಡು ಭಾರವಾಗಿದ್ದ ರೀವ್ಹ ಕ್ತೃತ ಕನ್ನಡ-ಇಂಗ್ಲಿಷ್ ಮತ್ತು ಇಂಗ್ಲಿಷ್-ಕನ್ನಡ ಕೋಶಗಳನ್ನು ಉಚಿತ ರೀತಿಯಲ್ಲಿ ಪರಿಷ್ಕರಿಸಿ ಆಧುನಿಕ ಬಳಕೆದಾರರಿಗೆ ನೀಡಿದರು.
ಮುಂದಿನ ಮೂರು ನಾಲ್ಕು ದಶಕಗಳವರೆಗೆ ಮೈಸೂರು ಕಡೆಗಳಲ್ಲಿ ಅವೇ ಪ್ರಮುಖ ಕೋಶಗಳೆನಿಸಿ ಬಳಕೆಯಲ್ಲಿ ಇದ್ದವು.
ಅವರ ಇನ್ನೊಂದು ಮಹತ್ವದ ಕನ್ನಡ ಸಾಹಿತ್ಯ ವಿಷಯಕ ಕಾರ್ಯ ಎಂದರೆ ಲಕ್ಷ್ಮೀಶನ ಜೈಮಿನಿ ಭಾರತದ ಇಂಗ್ಲಿಷ್ ಅನುವಾದ , ಜೊತೆಗೆ ಟಿಪ್ಪಣಿಗಳು, ೧೮೫೨ರಷ್ಟು ಹಿಂದೆಯೇ ಅದನ್ನೂ ಪ್ರಕಟಿಸಿದ್ದಾರೆ ಎನ್ನುವುದು ಅವರ ಸಾಹಿತ್ಯಾಸಕ್ತಿಯ ಬಗೆಯನ್ನು ಸೂಚಿಸುತ್ತದೆ. ಜೈಮಿನಿ ಭಾರತದ ೧೨ ಸಂಧಿಗಳ ಅನುವಾದವಷ್ಟೇ ಇದೆ. (ಆ ಮುಂದೆ ೧೮೭೩-೭೪ರಲ್ಲಿ ಡಾ. ಮೋಗ್ಲಿಂಗ್ ಜರ್ಮನ್ ಭಾಷೆಗೆ ಅನುವಾದಿಸಿದನ್ನೂ ಉಲ್ಲೇಖಿಸಬಹುದು. ಅಷ್ಟರ ಮಟ್ಟಿಗೆ ಆ ಕಾವ್ಯ ವಿದೇಶೀಯರ ಜನಮನ್ನಣೆಗಳಿಸಿದ್ದಿತು.
ಆದರೆ ಸ್ಯಾಂಡರ್ ಸನ್ ತಮ್ಮ ಕಥಾಸಂಗ್ರಹದ ಮೂಲಕವೇ ವ್ಯಾಪಕವಾದ ಜನಪ್ರಿಯತೆಯನ್ನು ಗಳಿಸಿದ್ದರೆನ್ನಬೇಕು. (೧೮೬೩) ೫೬೦ ಪುಟಗಳ ಈ ಕ್ರತಿಯನ್ನು ಎರಡು ಭಾಗಗಳಾಗಿ ಪ್ರಕಟಿಸಿದ್ದರು.
ಕೆಲವು ಮಿಶನರಿಗಳ ಈ ಕಡುನೀತಿ ಮತ್ತೆಯ ನಿಲುವಿನಿಂದ ಕನ್ನಡ ಸಾಹಿತ್ಯಕ್ಕೆ ಹಾನಿಯಾಗಿದೆ. ಸ್ಟೀವನ್ ಸನ್ ಎಂಬಾತ ಸುಪ್ರಸಿದ್ದ ಮುದ್ರಾ ಮಂಜೂಷವನ್ನು ಒಂದು ಹಸ್ತಪ್ರತಿಯಿಂದ ನಕಲು ಮಾಡಿ, ಮುದ್ರಿಸಿ ಪ್ರಕಟಿಸಿದನಷ್ಟೇ. ಅದರಲ್ಲಿಯ ಪ್ರಸ್ತಾಪ ಎಲ್ಲ -ಎಲ್ಲವನ್ನೂ ತೆಗೆದು ಹಾಕಿದ! ಅದಕ್ಕೇನೆ ಆಗಿನ ಮುದ್ರಾಮಂಜೂಷವು ಶುಷ್ಕವಾಯಿತು.
ಸುದೈವಕ್ಕೆ ಅದರ ಕಥಾನಕವು ಕುತೂಹಲಕಾರಿಯಾಗಿದ್ದರಿಂದ ವಾಚನ ಯೋಗ್ಯವಾಗಿದ್ದಿತು. ಆ ರೀತಿ ಕೈಬಿಟ್ಟ ಅಂಶಗಳನೆಲ್ಲ ಈಚೆಗೆ ಕಂಡು ಹಿಡಿಯಲಾಗಿದ್ದು ಸುಬ್ರಹ್ಮಣ್ಯದ ಡಾ. ಶಂಕರನಾರಯಣ ಉಡುಪರು ಈ ಕುರಿತು ಪ್ರಬಂಧವನ್ನೂ ರಚಿಸಿದ್ದಾರೆ.
ಅದೇನೆ ಇರಲಿ, ಅನೇಕ ಕತೆಗಳನ್ನು ಸರಳಗೊಳಿಸಿ ಬರೆದಿದ್ದಾರೆ. ಅದರಿಂದಾಗಿ ಆರಂಭ ಘಟ್ಟದ ಕನ್ನಡ ವಾಚಕರ ಮೇಲೆ ಉಪಕಾರ ಮಾಡಿದಂತಾಗಿದೆ.ಇದರಲ್ಲಿ ಬಂದಿರುವ ಕಥೆಗಳನ್ನು ಈ ರೀತಿಯಾಗಿ ಆಯ್ದುಕೊಂಡಿದ್ದಾರೆ.
ಡೇನಿಯಲ್ ಅವರು ಕಥಾ ಸಂಗ್ರಹ ಅಥವಾ ಕೆನರೀಸ್ ಸೆಲೆಕ್ಷನ್ಸ್: ಗದ್ಯವನ್ನು ಬರೆದರು, ಇದನ್ನು ವೆಸ್ಲಿಯನ್ ಮಿಷನ್ ಪ್ರೆಸ್ 1863 ರಲ್ಲಿ ಪ್ರಕಟಿಸಿತು. ಕೆಲಸವು 6 ಭಾಗಗಳನ್ನು ಒಳಗೊಂಡಿದೆ
- ಭಾಗ I: ಪಂಚತಂತ್ರ ಮತ್ತು ಇತರ ಹಲವಾರು ಮೂಲಗಳಿಂದ ಕಥೆಗಳು
- ಭಾಗ II: ಶಿವ ಪುರಾಣದ ಸಾರಗಳು
- ಭಾಗ III: ಮಹಾ ಭಾರತದಿಂದ ಸಾರಗಳು
- ಭಾಗ IV: ರಾಮಾಯಣದ ಸಾರಗಳು
- ಭಾಗ V: ವಿಷ್ಣುವಿನ ಹತ್ತು ಅವತಾರಗಳು
- ಭಾಗ VI: ಗಾದೆಗಳು
ಮದ್ರಾಸ್ ಯುನಿವರ್ಸಿಟಿಯವರು ತಮ್ಮ ಆಗಿನ (೧೮೭೭) ಕನ್ನಡ ಮೆಟ್ರಿಕ್ಯುಲೇಶನ್ ಪಠ್ಯದಲ್ಲಿ, ಒಂದು ಭಾಗ ಇನ್ನೊಂದು ಗದ್ಯ ಎಂಬ ಎರಡೇ ಕ್ರತಿಗಳನ್ನು ಇಟ್ಟುಕೊಂಡು ಪದ್ಯಭಾಗದಲ್ಲಿ ಕುಮಾರವ್ಯಾಸ ಭಾರತದ ಕೆಲ ಪದ್ಯಕಥಾನಕ ಮತ್ತು ಗದ್ಯಭಾಗದಲ್ಲಿ "ಕಥಾಸಂಗ್ರಹ"ವೊಂದರದೇ ೫೦ ಕತೆಗಳನ್ನು ಕೊಡಮಾಡಿದ್ದಾರೆ.
ಸ್ಯಾಂಡರ್ಸನ್ ವಿದೇಶಿಯರ ಕನ್ನಡ ಕಲಿಕೆಗಾಗಿ , ಒಟ್ಟು ನಾಲ್ಕೂ ಸಂಪುಟಗಳ ಹೊಳಹು ಹಾಕಿಕೊಂಡದ್ದು, ಒಂದಂತೂ ಈ ಕಥಾ ಸಂಗ್ರಹ ಅದನ್ನು ಅವನು ’ಸಿಂಪಲ್ ಪ್ರೋಸ್ ’ ಸದರಿನಲ್ಲಿ ಎಣಿಸಿದ್ದರು. ಇನ್ನು ಮೂರು ಯಾವುದೆಂದರೆ: ಸಿಂಪಲ್ ಪೋಯೆಟ್ರಿ : ಮೇಲ್ದರ್ಜೆಯ ಗದ್ಯ ಸಂಪುಟ: ಅದರಂತೆ ಮೇಲ್ಮಟ್ಟದ ಪದ್ಯ ಸಂಪುಟ. ಘನವಾದ ಉದ್ದೇಶ : ಆದರೆ ಕೈಗೂಡಲಿಲ್ಲ.
ಪ್ರಮುಖ ಕೃತಿಗಳು
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ Karttunen, Klaus (2018). Persons of Indian Studies. Retrieved 12 August 2019.
- ↑ Sanderson, Daniel (1847). "Continental India - Mysore". The Wesleyan Missionary Notices. V. London: Wesleyan Methodist Missionary Society: 24–26. Retrieved 12 August 2019.
- ↑ Reeve, William (1858). Sanderson, Daniel (ed.). A Dictionary, Canarese and english. Bangalore: Wesleyan Mission Press. Retrieved 18 January 2017.
- ↑ Sanderson, Daniel (1852). The Jaimini Bharata: A Celebrated Canarese Poem, with Translations and Notes. Bangalore: Wesleyan Mission Press. Retrieved 3 March 2017.
- ↑ Findlay, George Gillanders; Holdsworth, William West (1921). The history of the Wesleyan Methodist Missionary Society. London: Epworth Press. Retrieved 12 August 2019.
- ↑ Anandan, A J (2018). The Kingdom in a kingdom: English Methodist Mission in Mysore State 1813-1913. SAIACS Press. p. 53,93.
- ↑ "India within the Ganges: Survey of Missionary Stations". Missionary Register. 31: 209. April 1843. Retrieved 12 August 2019.
- ↑ Sanderson, Sarah (March 1859). "Wesleyan Village Chapel and School Near Bangalore - 24 November 1858". Wesleyan Juvenile Offering. XVL: 24. Retrieved 10 November 2015.
- ↑ ಹೊಂಬಿದಿರು, ಲೇಖಕರು - ಬೆನೆಟ್ಪ್ ಅಮನ್ನ, ಪ್ರಧಾನ ಸಂಪಾದಕರು ಡಾ. ನಾ ದಾಮೋದರ ಶೆಟ್ಟಿ, ಸ್ವಾಗತ ಸಮಿತಿ, ಅಖಿಲಭಾರತ ೭೧ನೆಯ ಸಾಹಿತ್ಯ ಸಮ್ಮೇಳನ, ಮೂಡುಬಿದಿರೆ ೨೦೦೩
- ↑ Reeve, William (1858). Sanderson, Daniel (ed.). A Dictionary, Canarese and english. Bangalore: Wesleyan Mission Press. Retrieved 18 January 2017.
- ↑ Sanderson, Daniel (1852). The Jaimini Bharata: A Celebrated Canarese Poem, with Translations and Notes. Bangalore: Wesleyan Mission Press. Retrieved 3 March 2017.
- ↑ Shrinivasiah, Munshi; Hodson, Richard G (1865). Sanderson, Daniel (ed.). Dialogues in Canarese. Bangalore: Wesleyan Mission Press. Retrieved 12 August 2019.
- ↑ Sanderson, Daniel (1863). Katha sangraha or Canarese Selections: Prose. Bangalore: Wesleyan Mission Press. Retrieved 12 August 2019.