'ಡಾಲ್ಫಿನ್' ಗಳು ಹಲ್ಲಿನ ತಿಮಿಂಗಿಲ ಉಪವರ್ಗಕ್ಕೆ ಸೇರಿದ ಸಸ್ತನಿಗಳು. ೧೭ ಜಾತಿಯಲ್ಲಿನ ಡಾಲ್ಫಿನ್ ಗಳು ಸುಮಾರು ನಲವತ್ತು ತಳಿಗಳಿವೆ. ಅವು ಪ್ರಪಂಚದಾದ್ಯಂತ ಕಂಡುಬರುತ್ತದೆ, ಹೆಚ್ಚಾಗಿ ಆಳವಿಲ್ಲದ ಸಮುದ್ರದ ಭೂಪದರಗಳಲ್ಲಿ ಕಂಡುಬರುತ್ತದೆ. ಇವುಗಳು ಹೆಚ್ಚಾಗಿ ಮೀನು ಮತ್ತು ಸ್ಕ್ವಿಡ್ ತಿನ್ನುವ ಮಾಂಸಾಹಾರಿಗಳು.[೧]

ಡೊಲ್ಫಿನ್

ಇತಿಹಾಸಸಂಪಾದಿಸಿ

'ಡಾಲ್ಫಿನ್' ಎಂಬ ಪದವನ್ನು ಗ್ರೀಕ್ ಭಾಷೆಯಿಂದ ಆರಿಸಲಾಗಿದೆ, ಇದು 'ಗರ್ಭ' ಎಂಬ ಪದವನ್ನು ಹೋಲುತ್ತದೆ. 'ಡಾಲ್ಫಿನ್' ಎಂಬ ಪದವು ಉಪವರ್ಗ Odontoceti ಅಡಿಯಲ್ಲಿ ಸೂಚಿಸಲು ಬಳಸಬಹುದು. ಸಾಮಾನ್ಯ ಬಳಕೆಯಲ್ಲಿ 'ತಿಮಿಂಗಿಲ' ಪದವನ್ನು, ಕೇವಲ ದೊಡ್ಡ ತಿಮಿಂಗಿಲ ಜಾತಿಗೆ ಬಳಸಲಾಗುತ್ತದೆ. ಡಾಲ್ಫಿನ್ ಗಳು ಒಂದು ಕೊಕ್ಕಿನ ಅಥವಾ ಮುಂದೆ ಮೂಗು ಸಣ್ಣದಾಗಿರುವ ಜಾತಿಗೆ ಪರಿಗಣಿಸಲ್ಪಡುತ್ತವೆ. ಡಾಲ್ಫಿನ್ನಿನ ಒಂದು ಗುಂಪನ್ನು ಒಂದು " ಶಾಲಾ " ಅಥವಾ ಒಂದು "ಪಾಡ್" ಎಂದು ಕರೆಯಲಾಗುತ್ತದೆ. ಪುರುಷ ಡಾಲ್ಫಿನ್ ಗಳನ್ನು "ಬುಲ್ಸ್ " , ಹೆಣ್ಣು ಡಾಲ್ಫಿನ್ ಗಳನ್ನು " ಹಸುಗಳು " ಎಂದು ಕರೆಯಲಾಗುತ್ತದೆ ಮತ್ತು ಯುವ ಡಾಲ್ಫಿನ್ ಗಳನ್ನು " ಮರಿಗಳು " ಎಂದು ಕರೆಯಲಾಗುತ್ತದೆ.

ಉಲ್ಲೇಖಸಂಪಾದಿಸಿ

  1. http://www.defenders.org/dolphin/basic-facts