ಡೊನ್ನಾ ಸ್ಟ್ರಿಕ್ ಲೆಂಡ್

ಕೆನಡಾದ ಭೌತಶಾಸ್ತ್ರಜ್ಞೆ ಹಾಗೂ ನೋಬೆಲ್ ಪ್ರಶಸ್ತಿ ಪುರಸ್ಕೃತರು

ಡೊನ್ನಾ ಥಿಯೋ ಸ್ಟ್ರಿಕ್ ಲೆಂಡ್ ಒಬ್ಬರು ಕೆನಡಿಯನ್ ಆಪ್ಟಿಕಲ್ ಭೌತಶಾಸ್ರ್ತಜ್ಞರು ಮತ್ತು ನೊಬೆಲ್ ಪ್ರಶಸ್ತಿ ವಿಜೇತರಾಗಿದ್ದಾರೆ. ಪಲ್ಸ್ ಲೇಸರ್ ಗಳ ಕ್ಷೇತ್ರದಲ್ಲಿ ಪ್ರವರ್ತಕರಾಗಿದ್ದ ಇವರು, ೨೦೧೮ರ ಭೌತಶಾಸ್ರ್ತದ ನೊಬೆಲ್ ಪ್ರಶಸ್ತಿಯನ್ನು ಗೆರಾರ್ಡ್ ಮೌರೊ ಜೊತೆಯಲ್ಲಿ ಚಿರ್ಪ್ಡ್ ಪಲ್ಸ್ ಆಂಪ್ಲಿಫ಼ಿಕೇಶನ್ ಆವಿಷ್ಕಾರಕ್ಕಾಗಿ ಪಡೆದರು. ಅಮೇರಿಕಾದ ಆರ್ಥರ್ ಅಶ್ಕಿನ್ ಪ್ರಶಸ್ತಿಯ ಅರ್ಧದಷ್ಟು ಭಾಗವನ್ನು ಪಡೆದರು.[೧] ಡೊನ್ನಾ ಅವರು ಪ್ರಸ್ತುತ ವಾಟರ್ಲೂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

ಡೊನ್ನಾ ಸ್ಟ್ರಿಕ್ ಲೆಂಡ್
Donna Strickland in 2017
ಜನನDonna Theo Strickland
(1959-05-27) ೨೭ ಮೇ ೧೯೫೯ (age ೬೧)
Guelph, Canada
ಕಾರ್ಯಕ್ಷೇತ್ರ
ಸಂಸ್ಥೆಗಳುUniversity of Waterloo
ವಿದ್ಯಾಭ್ಯಾಸ
ಮಹಾಪ್ರಬಂಧDevelopment of an ultra-bright laser and an application to multi-photon ionization (1988)
ಡಾಕ್ಟರೇಟ್ ಸಲಹೆಗಾರರುGérard Mourou
ಪ್ರಸಿದ್ಧಿಗೆ ಕಾರಣ
ಗಮನಾರ್ಹ ಪ್ರಶಸ್ತಿಗಳು
ಸಂಗಾತಿDoug Dykaar
ಮಕ್ಕಳು2
ಜಾಲತಾಣ
University website

ಆರಂಭಿಕ ಜೀವನ ಮತ್ತು ಶಿಕ್ಷಣಸಂಪಾದಿಸಿ

ಡೊನ್ನಾ ಸ್ಟ್ರಿಕ್ ಲೆಂಡ್ ಕೆನಡಾದ ಒಂಟಾರಿಯೊದ ಗುಲ್ಫ‍್ ನಲ್ಲಿ ಮೇ ೨೭ ೧೯೫೯ ರಂದು ಎಡಿತ್ ಜೆ. ಮತ್ತು ಲಾಯ್ಡ್ ಸ್ಟ್ರಿಕ್ ಲೆಂಡ್ ದಂಪತಿಗಳಿಗೆ ಜನಿಸಿದರು. ಅವರು ಇಂಜಿನಿಯರಿಂಗ್ ಭೌತಶಾಸ್ರ್ತದಲ್ಲಿನ ಲೇಸರ್ ಗಳು ಮತ್ತು ಎಲೆಕ್ಟ್ರೋ-ಆಪ್ಟಿಕ್ಸ್ ಬಗ್ಗೆ ನಿರ್ದಿಷ್ಟ ಆಸಕ್ತಿ ಹೊಂದಿದ್ದರಿಂದ ಮ್ಯಾಕ್ಮಾಸ್ಟರ್ ವಿಶ್ವವಿದ್ಯಾನಿಲಯಕ್ಕೆ ಸೇರಿದ್ದರು. ಮ್ಯಾಕ್ಮಾಸ್ಟರ್ ನ ಆ ೨೫ ವಿದ್ಯಾರ್ಥಿಗಳ ತರಗತಿಯಲ್ಲಿ ಮೂವರು ಮಹಿಳೆಯರಲ್ಲಿ ಅವರೂ ಒಬ್ಬರಾಗಿದ್ದರು. ೧೯೮೧ ರಲ್ಲಿ ಅವರು ಇಂಜಿನಿಯರಿಂಗ್ ಭೌತಶಾಸ್ರ್ತದಲ್ಲಿ ಬ್ಯಾಚುಲರ್ ಆಫ಼್ ಇಂಜಿನಿಯರಿಂಗ್ ಪದವಿಯನ್ನು ಪಡೆದರು.

೧೯೮೯ರಲ್ಲಿ ರೋಚೆಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಲ್ಯಾಬೋರೇಟರಿ ಫ಼ಾರ್ ಲೇಸರ್ ಎನರ್ಜೆಟಿಕ್ಸ್ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಪಿ.ಹೆಚ್ಡಿ ಪದವಿಯನ್ನು ಪಡೆದರು. ಇವರು "ಡೆವಲಪ್ ಮೆಂಟ್ ಆಫ಼್ ಆನ್ ಅಲ್ಟ್ರಾ-ಬ್ರೈಟ್ ಲೇಸರ್ ಆಂಡ್ ಆನ್ ಅಪ್ಪ್ಲಿಕೇಶನ್ ಟು ಮಲ್ಟಿ-ಫ಼ೊಟೋನ್ ಅಯೋನಿಜೇಶನ್" ಎಂಬ ಪ್ರಬಂಧವನ್ನು ಗೆರಾರ್ಡ್ ಮೊರೊ ಅವರ ಮೇಲ್ವಿಚಾರಣೆಯಲ್ಲಿ ನಡೆಸಿದ್ದರು. ೧೯೮೫ ರಲ್ಲಿ ರಾಚೆಸ್ಟರ್ ನಲ್ಲಿ, ಮೌರೊ ಮತ್ತು ಸ್ಟ್ರಿಕ್ಲಾಂಡ್ ಲೇಸರ್ ಗಳಿಗೆ ನಾಡಿ ವರ್ಧಕವನ್ನು ಸಂಶೋಧಿಸಿದ್ದರು. ಇದು ಅತ್ಯಂತ ಕಡಿಮೆ ಪ್ರಮಾಣದ ಮತ್ತು ಅಧಿಕ ತೀವ್ರತೆಯ ಲೇಸರ್ ಕಿರಣಗಳ ಕಂಪನವಾಗಿದ್ದು, ನಂತರದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲು ಅನುಕೂಲವಾಯಿತು.[೨] ಮುಂದೆ ಅವರು ಇದೇ ಸಂಶೋಧನೆಗಾಗಿ ಭೌತಶಾಸ್ರ್ತದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.

ವೈಯಕ್ತಿಕ ಜೀವನಸಂಪಾದಿಸಿ

ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪಿ.ಹೆಚ್ಡಿ. ಪದವಿ ಪಡೆದು ದೃಗ್ವಿಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ಲೇಸರ್ ವಿಜ್ಞಾನಿ ಡೌಗಲ್ಸ್ ಆರ್. ಡಿಕಾರ್ ರನ್ನು ಸ್ಟ್ರಿಕ್ ಲೆಂಡ್ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ವೃತ್ತಿ ಜೀವನಸಂಪಾದಿಸಿ

೧೯೮೮ ರಿಂದ ೧೯೯೧ ರವರೆಗೆ ಸ್ಟ್ರಿಕ್ ಲೆಂಡ್ ಕೆನಡಾದ ನ್ಯಾಶನಲ್ ರಿಸರ್ಚ್ ಕೌನ್ಸಿಲ್ ನಲ್ಲಿ ಸಂಶೋಧನಾ ಸಹಾಯಕರಾಗಿದ್ದರು. ಅಲ್ಲಿ ಅವರು ಪಾಲ್ ಕಾರ್ಕುಮ್ ಜೊತೆ ಅಲ್ಟ್ರಾಫ಼ಾಸ್ಟ್ ಫ಼ಿನೋಮಿನಾ ವಿಭಾಗದಲ್ಲಿ ಕೆಲಸ ಮಾಡಿದರು ಮತ್ತು ಆ ಸಮಯದಲ್ಲಿ ವಿಶ್ವದ ಅತ್ಯಂತ ಶಕ್ತಿಯುತವಾದ ಚಿಕ್ಕ-ಪಲ್ಸ್ ಲೇಸರ್ ನ್ನು ತಯಾರಿಸಿದರು. ೧೯೯೧ ರಿಂದ ೧೯೯೨ ರವರೆಗೆ ಲಾರೆನ್ಸ್ ಲಿವರ್ ಮೋರ್ ನ್ಯಾಷನಲ್ ಲ್ಯಾಬೊರೇಟರಿಯ ಲೇಸರ್ ವಿಭಾಗದಲ್ಲಿ ಕೆಲಸ ಮಾಡಿದರು ಮತ್ತು ೧೯೯೨ರಲ್ಲಿ ಅವರು ಪ್ರಿನ್ಸ್ ಟನ್ಸ್ ಅಡ್ವಾನ್ಸ್ಡ್ ಟೆಕ್ನೋಲೋಜಿ ಸೆಂಟರ್ ಫ಼ಾರ್ ಫ಼ೋಟಾನಿಕ್ಸ್ ಆಂಡ್ ಆಪ್ಟೋ-ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ನಲ್ಲಿ ತಾಂತ್ರಿಕ ಸಿಬ್ಬಂದಿಯಾಗಿ ಸೇರಿದರು. ೧೯೯೭ ರಲ್ಲಿ ಅವರು ವಾಟರ್ಲೂ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ಸೇರಿದರು. ಸ್ಟ್ರಿಕ್ ಲೆಂಡ್ ಪ್ರಸ್ತುತ ಅಸೋಸಿಯೇಟ್ ಪ್ರಾದ್ಯಾಪಕರಾಗಿದ್ದಾರೆ ಮಾತ್ರವಲ್ಲದೆ, ರೇಖಾತ್ಮಕ ದೃಗ್ವಿಜ್ಞಾನದ ಸಂಶೋಧನೆಗೆ ಉನ್ನತ-ತೀವ್ರತೆಯ ಲೇಸರ್ ವ್ಯವಸ್ಥೆಯನ್ನು ಅಭಿವೃದ್ದಿಪಡಿಸುವ ಒಂದು ಅಲ್ಟ್ರಾಫ಼ಾಸ್ಟ್ ಲೇಸರ್ ಗುಂಪನ್ನು ಮುನ್ನಡೆಸುತ್ತಿದ್ದಾರೆ. ತನ್ನನ್ನು ತಾನೇ ಅವರು ಲೇಸರ್ ಜಾಕ್ ಎಂದು ಹೇಳಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಸ್ಟ್ರಿಕ್ ಲೆಂಡ್, ರಾಮನ್ ಜನರೇಶನ್, ಎರಡು-ಬಣ್ಣ ಅಥವಾ ಬಹು-ಆವರ್ತನ ತಂತ್ರಗಳನ್ನು ಉಪಯೋಗಿಸಿ, ಅಲ್ಟ್ರಾಫ಼ಾಸ್ಟ್ ಆಪ್ಟಿಕಲ್ ಸೈನ್ಸ್ ನ ಹೊಸ ತರಂಗಾಂತರ ಶ್ರೇಣಿಯಾದ ಮಿಡ್-ಇನ್ಫ಼್ರಾರೆಡ್ ಮತ್ತು ಅಲ್ಟ್ರಾವೈಲೆಟ್ ಕೆಲಸದಲ್ಲಿ ತೊಡಗಿಸಿಕೊಂಡ್ಡಿದ್ದಾರೆ. ಕಣ್ಣಿನ ಮಸೂರವನ್ನು ಸೂಕ್ಷ್ಮಗ್ರಾಹಿಗೊಳಿಸುವ ಪ್ರಕ್ರಿಯೆಯ ಸಮಯದಲ್ಲಿ, ಪ್ರಜ್ಞಾಪೂರ್ವಕವಾಗಿ ಗುಣಪಡಿಸುವ ಮಾನವ ಕಣ್ಣಿನ ಮೈಕ್ರೋಕ್ರಿಸ್ಟಲಿನ್ ಲೆನ್ಸ್ ನಲ್ಲಿ ಹೈ-ಪವರ್ ಲೇಸರ್ಗಳ ಪಾತ್ರದ ಬಗ್ಗೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

೨೦೦೮ ರಲ್ಲಿ ಸ್ಟ್ರಿಕ್ ಲೆಂಡ್ ದಿ ಆಪ್ಟಿಕಲ್ ಸೊಸೈಟಿಯ ಫ಼ೆಲೋ ಆಗಿದ್ದರು. ೨೦೧೧ ಮತ್ತು ೨೦೧೩ ರಲ್ಲಿ ಅವರು ಉಪಾಧ್ಯಕ್ಷ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ೨೦೦೪ ರಿಂದ ೨೦೧೦ ರವರೆಗೆ ಅವರ ಜರ್ನಲ್ ಆಪ್ಟಿಕ್ಸ್ ಲೆಟರ್ಸ್ ನ ಪ್ರಚಲಿತ ಸಂಪಾದಕರಾಗಿದ್ದರು. ಆಪ್ಟಿಕಲ್ ಸೊಸೈಟಿಯ ಅಧ್ಯಕ್ಷೀಯ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ನೊಬೆಲ್ ಪುರಸ್ಕಾರಸಂಪಾದಿಸಿ

ಅಕ್ಟೋಬರ್ ೨, ೨೦೧೮ ರಂದು ತನ್ನ ಡಾಕ್ಟರೇಟ್ ಸಲಹೆಗಾರ ಗೆರಾರ್ಡ್ ಮೌರೊ ಜೊತೆಗಿನ ಚಿರ್ಪಿಡ್ ನಾಡಿ ವರ್ಧನೆಯ ಕುರಿತ ಕೆಲಸಕ್ಕೆ ಡೊನ್ನಾ ಸ್ಟ್ರಿಕ್ ಲೆಂಡ್ ಅವರಿಗೆ ಭೌತಶಾಸ್ತ್ರದಲ್ಲಿ ನೊಬೆಲ್ ಪಾರಿತೋಷಕ ಲಭಿಸಿತು.[೩]

೫೫ ವರ್ಷಗಳಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಮತ್ತು ೧೯೦೩ ರಲ್ಲಿ ಮೇರಿ ಕ್ಯೂರಿ ಮತ್ತು ೧೯೬೩ ರಲ್ಲಿ ಮರಿಯಾ ಗೋಯೆಪ್ಪರ್ಟ್-ಮೇಯರ್ ನಂತರ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗೆದ್ದ ಮೂರನೇ ಮಹಿಳೆ ಸ್ಟ್ರಿಕ್ ಲೆಂಡ್.[೪]

ಪ್ರಶಸ್ತಿಗಳುಸಂಪಾದಿಸಿ

  • ೧೯೯೮ - ಆಲ್ಫ಼್ರೆಡ್ ಪಿ. ಸ್ಲೋನ್ ರಿಸರ್ಚ್ ಫ಼ೆಲೋಶಿಪ್
  • ೧೯೯೯ - ಪ್ರೀಮಿಯರ್ ನ ಸಂಶೋಧನಾ ಉತ್ಕೃಷ್ಟ ಪ್ರಶಸ್ತಿ
  • ೨೦೦೦ - ಸಂಶೋಧನಾ ನಿಗಮದಿಂದ ಕಾಟ್ರೆಲ್ ಸ್ಕಾಲರ್ಸ್ ಪ್ರಶಸ್ತಿ
  • ೨೦೦೮ - ಫ಼ೆಲೋ ಆಫ಼್ ದಿ ಆಪ್ಟಿಕಲ್ ಸೊಸೈಟಿ
  • ೨೦೧೮ - ಗೆರಾರ್ಡ್ ಮೌರೊ ಜೊತೆ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ, ಆರ್ಥರ್ ಅಶ್ಕಿನ್ ಜೊತೆಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ.

ಉಲ್ಲೇಖಗಳುಸಂಪಾದಿಸಿ

  1. https://timesofindia.indiatimes.com/world/europe/ashkin-mourou-strickland-win-2018-nobel-physics-prize/articleshow/66040761.cms
  2. https://www.thehindubusinessline.com/news/ashkin-mourou-strickland-win-2018-nobel-physics-prize/article25103453.ece
  3. https://www.udayavani.com/kannada/news/world-news/328558/nobel-prize-in-physics-2018-awarded-to-arthur-ashkin-gerard-mourou-and-donna-strickland-for-inventions-in-laser-physics
  4. https://www.indiatimes.com/technology/science-and-future/meet-donna-strickland-the-1st-female-winner-of-the-nobel-physics-prize-in-55-years-354112.html