ಡೈನಮೊ (ಜಾದೂಗಾರ) ಡೈನಮೊ ಎಂದೇ ಹೆಸರಾಗಿರುವ ಸ್ಟೀವನ್ ಫ್ರೈನ್ ಒಬ್ಬ ಖ್ಯಾತ ಆಂಗ್ಲ ಜಾದೂಗಾರ. ಇವರು ಜನಿಸಿದ್ದು ೧೯೮೨ ರ ಡಿಸೆಂಬರ್ ೧೭ ರಂದು. ಇಂಗ್ಲೀಷ್ ದೂರದರ್ಶನದಲ್ಲಿ ಪ್ರಸಾರವಾಗುವ 'ಡೈನಮೊ: ಮ್ಯಾಜಿಷಿಯನ್ ಇಂಪಾಸಿಬಲ್' ಎಂಬ ಕಾರ್ಯಕ್ರಮದಿಂದಲೇ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಈ ಕಾರ್ಯಕ್ರಮ ಜುಲೈ ೨೦೧೧ ರಿಂದ ಸೆಪ್ಟೆಂಬರ್ ೨೦೧೪ ರ ವರೆಗೆ ಪ್ರಸಾರವಾಗುತ್ತಿತ್ತು[].

ಡೈನಮೊ
೨೦೧೪ರಲ್ಲಿ ಡೈನಮೊ
Born೧೭ನೇ ಡಿಸೆಂಬರ್ ೧೯೮೨
ಬ್ರಾಡ್ ಫೋರ್ಡ್, ಪಶ್ಚಿಮ ಯಾರ್ಕ್ ಶೈರ್, ಇಂಗ್ಲೆಂಡ್
Occupationಜಾದೂಗಾರ
Years active೨೦೦೨ - ಹಾಲಿ
Known forಜಾದೂ, ಡೈನಮೊ: ಮ್ಯಾಜಿಷಿಯನ್ ಇಂಪಾಸಿಬಲ್- ಆಂಗ್ಲ ದೂರದರ್ಶನ ಕಾರ್ಯಕ್ರಮ
Websitedynamoworld.com

ಆರಂಭಿಕ ದಿನಗಳು

ಬದಲಾಯಿಸಿ

ಫ್ರೈನ್ ಜನಿಸಿದ್ದು ಇಂಗ್ಲೆಂಡ್ ಪಶ್ಚಿಮ ಯಾರ್ಕ್ ಶೈರ್ ನ ಬ್ರಾಡ್ ಫೋರ್ಡ್ ನಲ್ಲಿ. ಇವರ ತಾಯಿ ಇಂಗ್ಲೀಷ್ ಮೂಲದವರೇ ಆದರೆ ತಂದೆ ಪಾಕಿಸ್ತಾನ ಮೂಲದವರು.ಕರುಳು ಸಂಬಂಧಿ ಕಾಯಿಲೆಯೊಂದರಿಂದ ನರಳಿದ ಫ್ರೈನ್ ಜೀವನ ಪರ್ಯಂತ ಸಣ್ಣ ದೇಹವನ್ನು ಹೊಂದಿರುವಂತಾಗಿದೆ. ಇವರೇ ಹೇಳುವ ಪ್ರಕಾರ ಇವರು ಮೊದಲು ಜಾದೂ ಕಲಿತಿದ್ದು ಇವರ ಅಜ್ಜನಿಂದ[].

ಮಾಧ್ಯಮಗಳಲ್ಲಿ ಕಾರ್ಯಕ್ರಮಗಳು

ಬದಲಾಯಿಸಿ
  • ಡೈನಮೊ ಎರಡನೇ ಸರಣಿ ಕಾರ್ಯಕ್ರಮ, 'ಡೈನಮೊ: ದಿ ಮ್ಯಾಜಿಷಿಯನ್ ಇಂಪಾಸಿಬಲ್'.
  • ಡೈನಮೊ ಮೂರನೇ ಸರಣಿ ಕಾರ್ಯಕ್ರಮ, 'ಡೈನಮೊ: ದಿ ಮ್ಯಾಜಿಷಿಯನ್ ಇಂಪಾಸಿಬಲ್'. ೨೦೧೩ರ ಜುಲೈ ೧೧ ರಂದು ಪ್ರಸಾರವಾಯಿತು.
  • ೨೦೧೩ರ ಆಗಸ್ಟ್ ೧ ರಂದು ಡೈನಮೊ 'ನಥಿಂಗ್ ಐಸ್ ಇಂಪಾಸಿಬಲ್' ಎನ್ನುವ ತಲೆ ಬರಹವಿರುವ ತಮ್ಮ ಆತ್ಮ ಚರಿತ್ರೆಯನ್ನು ಬಿಡುಗಡೆ ಮಾಡಿದರು.

ಜಾದೂ ಪ್ರಶಸ್ತಿಗಳು

ಬದಲಾಯಿಸಿ
  • 'ಡೈನಮೊ: ದಿ ಮ್ಯಾಜಿಷಿಯನ್ ಇಂಪಾಸಿಬಲ್' ಆಂಗ್ಲ ಕಾರ್ಯಕ್ರಮವು 'ಬ್ರಾಡ್ಕ್ಯಾಸ್ಟ್ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ಅತ್ಯುತ್ತಮ ಮನರಂಜನೆ ಕಾರ್ಯಕ್ರಮದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು[].
  • 'ಡೈನಮೊ: ಮ್ಯಾಜಿಷಿಯನ್ ಇಂಪಾಸಿಬಲ್' ಎರಡನೇ ಆವೃತ್ತಿಯೂ ಅತ್ಯತ್ತಮ ಮನರಂಜನೆ ಕಾರ್ಯಕ್ರಮಕ್ಕಾಗಿ ಸತತ ಎರಡನೇ ಬಾರಿಗೆ ವರ್ಜಿನ್ ಮೀಡಿಯಾ ಅವಾರ್ಡ್ ಪಡೆಯಿತು.
  • ಜಾದೂ ಕಲಾ ಅಕಾಡೆಮಿಯ ೪೮ ನೇ ವಾರ್ಷಿಕ ಪ್ರಶಸ್ತಿ ಪ್ರದರ್ಶನದಲ್ಲಿ ವರ್ಷದ ಜಾದೂಗಾರ ಪ್ರಶಸ್ತಿ.

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಸೆಲೆಬ್ರಿಟಿಗಳ ಕುರಿತಾದ ಪ್ರಶ್ನೋತ್ತರ ಮಾಲಿಕೆ ವೆಬ್ ಪುಟ". Archived from the original on 2015-06-22. Retrieved 2018-10-28.{{cite web}}: CS1 maint: bot: original URL status unknown (link)
  2. "ಡೈನಮೊ ಆತ್ಮ ಚರಿತ್ರೆ".
  3. "ಟಿ.ವಿ ಅವಾರ್ಡುಗಳ ಕುರಿತಾದ ಬಿ.ಬಿ.ಸಿ ಆಂಗ್ಲ ವರದಿ".