ಡೇವಿಡ್ ಸಸೂನ್ ಲೈಬ್ರರಿ, ಮುಂಬಯಿ

(ಡೇವಿಡ್ ಸಸೂನ್ ಲೈಬ್ರರಿ, ಮುಂಬೈ ಇಂದ ಪುನರ್ನಿರ್ದೇಶಿತ)

ಡೇವಿಡ್ ಸಸೂನ್ ಲೈಬ್ರರಿ,[] ಮುಂಬಯಿನ ಒಂದು ಅತಿ ಪ್ರಶಸ್ಥ್ಯವಾದ 'ಹೆರಿಟೇಜ್ ಪುಸ್ತಕಭಂಡಾರ', ಹಾಗೂ ಕಟ್ಟಡ. 'ಡೇವಿಡ್ ಸಸೂನ್' ರವರ ಮಗ, 'ಆಲ್ಬರ್ಟ್ ಸಸೂನ್,' ರವರು, ಒಂದು ಸರ್ವೋಪಯೋಗಿ ಪುಸ್ತಕ ಭಂಡಾರವನ್ನು ತಮ್ಮ ತಂದೆಯವರ ಹೆಸರಿನಲ್ಲಿ, ನಗರದ ಪ್ರಮುಖ, ಹಾಗೂ ಮಧ್ಯಭಾಗದಲ್ಲಿ ನಿರ್ಮಿಸುವ ಕನಸು ಕಂಡಿದ್ದರು.

'ಡೇವಿಡ್ ಸಸೂನ್ ಲೈಬ್ರರಿ'

'ಡೇವಿಡ್ ಸಸೂನ್,ಆಗಿನ ಕಾಲದ ಮುಂಬಯಿನ ಹೆಸರಾಂತ ಉದ್ಯೋಗಪತಿ'

ಬದಲಾಯಿಸಿ

'ಡೇವಿಡ್ ಸಸೂನ್,' ರವರು, ಆಗಿನ ಕಾಲದಲ್ಲಿ ಮುಂಬಯಿನ ಪ್ರತಿಷ್ಠಿತ ಹತ್ತಿ ಕಾರ್ಖಾನೆಗಳ ಮಾಲೀಕರಾಗಿದ್ದರು. ಇಂಗ್ಲೀಷರಿಂದ ಆದಿಯಾಗಿ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು. 'ಬಾಗ್ ದಾದ್,' ನ 'ಯಹೂದಿ ಮತಸ್ಥ'ರಾಗಿದ್ದ, 'ಡೇವಿಡ್ ಸಸೂನ್, ರವರು, ಅತ್ಯಂತ ಜನಪ್ರಿಯ ಧರ್ಮಸೇವಾಪ್ರವರ್ತಕ,ರೆಂದು ಹೆಸರಾದವರು. ಆಗಿನ ಕಾಲದಲ್ಲಿ ಅವರು ಮುಂಬಯಿನ ಪ್ರತಿಷ್ಠಿತ ಹತ್ತಿ ಕಾರ್ಖಾನೆಗಳ ಮಾಲೀಕರಾಗಿದ್ದರು. ಮುಂಬಯಿನ ವಲಯದಲ್ಲಿ ಅತಿ ಧನವಂತ ವರ್ತಕರಲ್ಲಿ ಅವರೂ ಒಬ್ಬರಾಗಿದ್ದರು. ಕಟ್ಟಡ ಶಿಲ್ಪಿಗಳಾದ, 'ಜೆ. ಕ್ಯಾಂಬೆಲ್', ಮತ್ತು, 'ಜಿ. ಇ. ಗಾಸ್ಲಿಮ್ಗ್' ರವರು, 'ಡೇವಿಡ್ ಸಸೂನ್ ಲೈಬ್ರರಿ,' ಯನ್ನು 'ಸ್ಕಾಟ್ ಮ್ಯಾಕ್ಲೆಂಡ್ ಮತ್ತು ಕಂ,' ಯವರಿಗಾಗಿ, ಸಂಯೋಜಿಸಿದರು. ಇದಕ್ಕೆ ತಗುಲಿದ ಖರ್ಚು, ೧,೨೫೦೦೦ ರೂಪಾಯಿಗಳು. 'ಡೇವಿಡ್ ಸಸೂನ್' ರವರು, ೬೦,೦೦೦, ರೂಪಾಯಿ, ದೇಣಿಗೆ ಕೊಟ್ಟರು. ಉಳಿದ ಹಣವನ್ನು ಆಗಿನ 'ಬಾಂಬೆ ಪ್ರೆಸಿಡೆನ್ಸಿ ಸರ್ಕಾರ,' ವಹಿಸಿಕೊಂಡಿತು. ಲೈಬ್ರರಿ, 'ಕಾಲಾಘೋಡ ಪ್ರದೇಶ'ದ ಎದುರಿಗೇ, 'ರ್ಯಾಮ್ ಪಾರ್ಟ್ ರೊ' ನಲ್ಲಿದೆ. ೧೮೭೦ ರಲ್ಲಿ ಕಟ್ಟಡದ ಕೆಲಸ ಮುಗಿಯಿತು.

ವಿಕ್ಟೋರಿಯ ಸಾಮ್ರಾಜ್ಞಿಯ ಪುತ್ರ, '೭ ನೇ ಎಡ್ವರ್ಡ್' ರವರ ಕುದುರೆಯ ಮೇಲೆ ಕುಳಿತ ಭಂಗಿಯ ಒಂದು ಭವ್ಯ ಪುಥಳಿಯನ್ನು 'ಡೇವಿಡ್ ಸಸೂನ್ ಲೈಬ್ರರಿ' ಎದುರಿಗೆ ಅಂದರೆ, ಇಂದಿನ 'ರಿಥಮ್ ಹೌಸ್' ಮಧ್ಯೆ, ನಿರ್ಮಿಸಲಾಗಿತ್ತು. ಮುಂಬಯಿ ಶಹರ್ ಬೆಳೆದಂತೆ, ವಾಹನಗಳ ಸಂಚಾರಕ್ಕೆ ರಸ್ತೆ ಸಾಲದ್ದಕ್ಕೆ ಆ ಪುಠಳಿಯನ್ನು ಬೈಖಲ್ಲಾ'' ಉಪನಗರದಲ್ಲಿರುವ ರಾಣಿಬಾಗ್ ನಲ್ಲಿ ಜಾಗ ಕಲ್ಪಿಸಿ ಸ್ಥಾಪಿಸಲಾಯಿತು. ಪಕ್ಕದ, 'ಎಲ್ಫಿನ್ ಸ್ಟನ್ ಕಾಲೇಜ್ ಕಟ್ಟಡ', 'ಆರ್ಮಿ ಅಂಡ್ ನೇವಿ ಬಿಲ್ಡಿಂಗ್', ಹಾಗೂ 'ವ್ಯಾಟ್ಸನ್ ಹೋಟೆಲ್,' ತರಹವೇ ಹಳದಿ ಬಣ್ಣದ ಮಲಾಡ್ ಕಲ್ಲುಗಳಿಂದ ನಿರ್ಮಾಣ ಕಾರ್ಯವನ್ನು ಮಾಡಲಾಯಿತು. ಪೋರ್ಟಿಕೊನಿಂದ ಮೆಟ್ಟಿಲನ್ನೆರುತ್ತಿರುವಂತೆ, ಅಮೃತಶಿಲೆಯ ಡೇವಿಡ್ ಸಸೂನ್' ರವರ, 'ಎದೆಮಟ್ಟದ ಪುಥಳಿ,' ಯನ್ನು ಕಾಣುತ್ತೇವೆ. ಇದೇ ಕಟ್ಟಡದಲ್ಲಿ ಕೆಳಗಡೆ,(ಗ್ರೌಂಡ್ ಫ್ಲೋರ್ ನಲ್ಲಿ) ಪ್ರಖ್ಯಾತ 'ಲಂಡ್ ಅಂಡ್ ಬ್ಲಾಕ್ಲಿ ಆಪ್ಟೀಶಿಯನ್ಸ್,' ರವರ, ಮಾರಾಟದ ಮಳಿಗೆ ಇದೆ. ಡೇವಿಡ್ ಸಸೂನ್ ಲೈಬ್ರೆರಿಯ ವಿಶೇಷ ಫೋಟೋಗಳು []

ಉಲ್ಲೇಖಗಳು

ಬದಲಾಯಿಸಿ
  1. "'David Sasoon Library'". Archived from the original on 2017-12-01. Retrieved 2015-04-18.
  2. "ವಿಶೇಷ ಫೋಟೋಗಳು". Archived from the original on 2014-08-28. Retrieved 2015-04-18.