ಡೇನಿಯಲ್ ಫೆರ್ನಾಡಿಸ್ ಡೋಮಿನಿಕ್ಯೂ ಸ್ಚುಎಲೆನ್ ಸ್ಟೀಲ್ (ಹುಟ್ಟಿದ್ದು ಅಗಸ್ಟ ೧೪ ೧೯೪೭) ಇವರು ಡೇನಿಯಲ್ ಸ್ಟೀಲ್ ಎಂಬ ಹೆಸರಿನಿಂದ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಇವರು ಅಮೇರಿಕದ ಕಾದಂಬರಿರ್ತೀ.ಸದ್ಯಕ್ಕೆ ಬದುಕಿರುವ ಜನಪ್ರಿಯ ಬರಹಗಾರರಲ್ಲಿ ಇವರೂ ಒಬ್ಬರು.ಅತಿ ಉತ್ತಮ ಮಾರಾಟವಾಗುವ ಪುಸ್ತಕಗಳಲ್ಲಿ ಇವರ ಪುಸ್ತಕಗಳು ನಾಲ್ಕನೇ ಸ್ಥಾನವನ್ನು ಪಡೆದಿದೆ.ಇವರ ೮೦೦ ಮಿಲಿಯನ್ ಪುಸ್ತಕಗಳು ಮಾರಾಟಗೊಂಡಿವೆ.

ಡೇನಿಯಲ್ ಸ್ಟೀಲ್
ಜನನಡೇನಿಯಲ್ ಫೆರ್‍ನಾನ್‍ಡೀಸ್ ಡೋಮಿನಿಕ್ಯೂ ಸ್ಚುಎಲೆನ್ ಸ್ಟೀಲ್
ನ್ಯೂ ಯಾರ್ಕ್ ನಗರ, ನ್ಯೂ ಯಾರ್ಕ್, ಯು.ಎಸ್.ಎ.
ಕಾವ್ಯನಾಮಡೇನಿಯಲ್ ಸ್ಟೀಲ್
ವೃತ್ತಿಕಾದಂಬರಿಕಾರ
ರಾಷ್ಟ್ರೀಯತೆಆಂಗ್ಲರು
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆನ್ಯೂ ಯರ್ಕ್ ವಿಶ್ವವಿದ್ಯಾನಿಲಯ
ಕಾಲ೧೯೭೮-ಪ್ರಸ್ತುತ್ತ
ಪ್ರಕಾರ/ಶೈಲಿಮುಖ್ಯವಾಹಿನಿ, ಪ್ರಣಯ
ಬಾಳ ಸಂಗಾತಿಕ್ಲಾಡ್-ಎರಿಕ್ ಲಝಾರ್‍ಡ್ (೧೯೬೫-೧೯೭೪; ವಿಚ್ಛೇದಿತಾ)
ಡ್ಯಾನಿ ಶುಗ್ಲೆಡರ್(೧೯೭೫-೧೯೭೮; ವಿಚ್ಛೇದಿತ)
ವಿಲಿಯಂ ಜಾರ್ಜ್ ತೊತ್ (೧೯೭೮-೧೯೮೧; ವಿಚ್ಛೇದಿತ )
ಜಾನ್ ತ್ರಿನ (೧೯೮೧-೧೯೯೮; ವಿಚ್ಛೇದಿತ)
ಥಾಮಸ್ ಪೆರ್ಕಿನ್ಸ್ (೧೯೯೮-೨೦೦೨; ವಿಚ್ಛೇದಿತಾ)

ಸಹಿ

[<span%20class="url">.daniellesteel.com www.daniellesteel.com/%20www<wbr/>.daniellesteel<wbr/>.com]</span>]

ಇವರು ತಮ್ಮ ವ್ಯಯಕ್ತಿಕ ಜೀವನದ ಬಹು ಭಾಗವನ್ನು ಕ್ಯಾಲಿಫೋನಿಯಾದಲ್ಲಿ ಕಳೆದರು.ಇವರು ಒಂದು ವರ್ಷದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಕಾರ್ಯ ಕೌಶಲ್ಯತೆ ಅತಿ ಮೆಚ್ಚುವಂತದ್ದು. ಇವರ ಪ್ರತಿಯೊಂದು ಕಾದಂಬರಿ ಅತಿ ಉತ್ತಮವಾಗಿ ಮಾರಾಟಗೊಂಡಿದೆ.ಇವರು ಬರೆದ ಕಥೆಗಳು,ಶ್ರೀಮಂತ ಕುಟುಂಬಗಳು ಬಳಲುವ ಕಥೆಗಳನ್ನು ಒಳಗೊಂಡಿರುತ್ತದೆ.ಇವರ ಕಥೆಗಳ ಸೂತ್ರಗಳು ತಕ್ಕ ಮಟ್ಟಿಗೆ ಸ್ಥಿರವಾಗಿರುತ್ತದೆ.ಇವರ ಪುಸ್ತಕಗಳು ೨೮ ಭಾಷೆಗಳಿಗೆ ಅನುವಾದಗೊಂಡಿದೆ.ಡೇನಿಯಲ್ ಅವರು ಕೆಲವು ಕವನಗಳನ್ನು ಹಾಗೂ ಮಕ್ಕಳ ವಿಜ್ಞಾನವನ್ನು ಪ್ರಕಟಿಸಿದ್ದಾರೆ. ಇವರ ಕಥೆಗಳಲ್ಲಿ ೨೨ ಟಿ.ವಿ ಯಲ್ಲಿ ಪ್ರಸಾರಗೊಂಡಿದೆ.