ಡಿ.ಎನ್.ನಗರ್ ಮೆಟ್ರೋ ರೈಲ್ವೆ ನಿಲ್ದಾಣ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(July 2013) |
ಡಿ.ಎನ್.ನಗರ್,ಮುಂಬಯಿ ಮಹಾನಗರದ ಪಶ್ಚಿಮ ರೈಲ್ವೆ ಭಾಗದಲ್ಲಿರುವ ಅಂಧೇರಿ ಉಪನಗರದ ಒಂದು ಭಾಗವಾಗಿದೆ-ಇದು,ಮಹಾರಾಷ್ಟ್ರದ ಮುಂಬಯಿನಗರದ ಒಂದು ಅತಿದೊಡ್ಡ ಉಪನಗರಗಳಲ್ಲೊಂದಾಗಿದೆ. ದಾದಾ ಭಾಯಿ ನವರೋಜಿಯವರ ಹೆಸರಿನಲ್ಲಿ 'ಲೋಖಂಡ್ ವಾಲ ಕಾಂಪ್ಲೆಕ್ಸ್' ನಲ್ಲಿದೆ. ಸೆವೆನ್ ಬಂಗಲೋಸ್, ಮತ್ತು ಜುಹು ವಿಲೆಪಾರ್ಲೆ ಡೆವೆಲಪ್ಮೆಂಟ್ ಸ್ಕೀಮ್ (JVPD)ವಲಯದ ಇದಕ್ಕೆ ತೀರ ಸಮೀಪ. ೧೯೮೦ ರ ನಂತರ ಡಿ.ಎನ್.ನಗರ್ ವಿಶಾಲವಾಗ ತೊಡಗಿತು. ಡಿಎನ್ ನಗರದ ನಿವಾಸಿಗಳು ಹೆಚ್ಚಾಗಿ ಮದ್ಯವರ್ಗದ ಜನ. ಕೆಲವರು ಹೆಚ್ಚು ವರಮಾನದಾರರೂ ವಾಸಿಸುತ್ತಿದ್ದಾರೆ. ಡಿ.ಎನ್.ನಗರದ ಕೆಲವು ಪ್ರಮುಖ ವಿದ್ಯಾಸಂಸ್ಥೆಗಳು,ಮತ್ತಿತರ ಸಾರ್ವಜನಿಕ ಸಂಸ್ಥೆಗಳು :
- ಪ್ರಗತಿವಿದ್ಯಾಲಯ ಮಂದಿರ್,
- ಭವನ್ಸ್ ಕಾಲೇಜ್,
- ಭವನ್ಸ್ ಎ.ಎಚ್. ಡಿಯ ಹೈಸ್ಕೂಲ್,
- ಭವನ್ಸ್ ಸರ್ದಾರ್ ಪಟೇಲ್ ಕಾಲೇಜ್ ಆಫ್ ಇಂಜಿನಿಯರಿಂಗ್,
- ಭವನ್ಸ.ಎಸ್.ಪಿ.ಜೈನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್,
- ಎಸ್.ಸಿ.ಡಿ ಬರ್ಫಿವಾಲ ಹೈಸ್ಕೂಲ್ ಅಂಡ್ ವಾಲಿಯ ಕಾಲೇಜ್,
D.N. Nagar
डी एन नगर | |
---|---|
Neighbourhood | |
Country | India |
State | ಮಹಾರಾಷ್ಟ್ರ |
Metro | Mumbai |
Languages | |
• Official | Marathi |
Time zone | UTC+5:30 (IST) |
PIN | 400053[೧] |
Area code | 022 |
Vehicle registration | MH 02 |
Civic agency | BMC |
ಮೆಟ್ರೋ ರಲ್ವೆಮಾರ್ಗ
ಬದಲಾಯಿಸಿಮೆಟ್ರೋ ರಲ್ವೆ ಸಂಚಾರ ಶುರುವಾದ ಮೇಲೆ ಡಿ.ಎನ್.ನಗರ ಘಾಟ್ಕೋಪರ್-ಅಂಧೇರಿ ಮೆಟ್ರೊ ದಾರಿಯಲ್ಲಿ ಸ್ವಲ್ಪ ಎತ್ತರದಲ್ಲಿರುವ ಒಂದು ಪ್ರಮುಖ ನಿಲ್ದಾಣವಾಗಿದೆ. ಅದೇಹೆಸರಿನ ಜಾಗ, ಇಂಡಿಯನ್ ಆಯಿಲ್ಸ್ ಕಾಲೋನಿಯ ಜಂಕ್ಷನ್ಸ್ ನಲ್ಲಿದೆ.
ಉಲ್ಲೇಖಗಳು
ಬದಲಾಯಿಸಿ- ↑ "Pin code : Breach Candy, Mumbai". pincode.org.in. Retrieved 9 February 2015.