ಡಿರೈವೇಟಿವ್ಸ್(ಉತ್ಪನ್ನ)
ಘಟಕದ ಆಧಾರವಾಗಿರುವ ಮೌಲ್ಯ ಪ್ರದರ್ಶನವು ಹುಟ್ಟಿಕೊಂಡು ಒಪ್ಪಂದವಾಗಿರುವುದನ್ನು ಡಿರೈವೇಟಿವ್ಸ್(ಉತ್ಪನ್ನ) ಎಂದು ಕರೆಯುತ್ತಾರೆ. ಈ ಘಟಕದ ಆಧಾರವು ಆಸ್ತಿ, ಸೂಚ್ಯಂಕ ಅಥವಾ ಬಡ್ಡಿದರವೂ ಆಗಿರಬಹುದು. ಉತ್ಪನ್ನಗಳನ್ನು ವಿಮೆಯ ವಿರುದ್ಧದ ಬೆಲೆಯ, ಊಹಾಪೋಹಗಳು ಹೆಚ್ಚುತ್ತಿರುವ ಮಾನ್ಯತೆಗಳಿಗೆ ಬಹಳಷ್ಟು ಉದ್ದೇಶ ಪೂರ್ವಕವಾಗಿ ಬಳಸುತ್ತಾರೆ. ಉತ್ಪನ್ನಗಳಲ್ಲಿ ಮುಂದಕ್ಕೆ(ಫಾರ್ವರ್ಡ್),[೧] ಭವಿಷ್ಯದ(ಫ್ಯೂಚರ್), ಆಯ್ಕೆಗಳು(ಆಪ್ಷನ್ಸ್) ಮತ್ತು ವಿನಿಮಯ(ಸ್ವ್ಯಾಪ್ಸ್) ಬಹಳ ಸಹಜವಾಗಿ ಒಳಗೊಂಡಿರುವಂತವುಗಳಾಗಿವೆ. ಬಹಳ ಉತ್ಪನ್ನಗಳು ಓವರ್ ದಿ ಕೌಂಟರ್ ಗಳ ಮೂಲಕ ಅಥವಾ ವಿನಿಮಯಗಳ ಮೂಲಕ ವ್ಯಾಪಾರವಾಗುತ್ತದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್‍ಗಳಂತಹ ವಿನಿಮಯಗಳ ಮೂಲಕ ಉತ್ಪನ್ನಗಳನ್ನು ವ್ಯಾಪಾರ ಮಾಡಲಾಗುವುದು. ಉತ್ಪನ್ನಗಳನ್ನು ಹಣಕಾಸು, ಷೇರುಗಳು ಹಾಗೂ ಸಾಲ ಎಂಬ ಮೂರು ಭಾಗಗಳಾಗಿ ವಿಭಾಗಿಸಬಹುದು. ಷೇರುಗಳು ಸರ್ವಸಮತೆ ಹಾಗೂ ಷೇರುಗಳ ಸಾಲುಗಳೆಂದರೆ ಅಡಮಾನಗಳು ಹಾಗೂ ಬಂಧಗಳು.
ವ್ಯಾಪ್ತಿ ಪ್ರದೇಶ | ವಿಶ್ವದಾದ್ಯಂತ |
---|---|
ಉತ್ಪನ್ನ | ಇನ್ಸ್ಟ್ರುಮೆಂಟ್ಸ್(ಉಪಕರಣ) ಅಥವಾ ಸೆಕ್ಯೂರಿಟಿಸ್(ಭದ್ರತಾ) |
ಮೂಲಭೂತ
ಬದಲಾಯಿಸಿಉತ್ಪನ್ನವೆಂದರೆ ಎರಡು ಪಕ್ಷಗಳು ಅಥವಾ ಇಬ್ಬರ ನಡುವಿನ ಒಂದು ಒಪ್ಪಂದ. ಈ ಒಪ್ಪಂದವೂ ಇಬ್ಬರ ನಡುವಿನ ಪಾವತಿಯ ಪರಿಸ್ಥಿತಿಗಳನ್ನು ಸೂಚಿಸಲು. ಇದರ ಮೊತ್ತ ಆಸ್ತಿಯಲ್ಲಿ ಸರಕುಗಳು, ಷೇರುಗಳು, ಬಂಧಗಳು ಹಾಗೂ ಹಣ ಎಲ್ಲವೂ ಒಳಗೊಂಡಿರುತ್ತವೆ. ಸಂಕೀರ್ಣತೆಯ ಸರಿಯಾದ ಮೌಲ್ಯ ಮಾಪನಕ್ಕೂ ಈ ಎಲ್ಲಾ ಉತ್ಪನ್ನಗಳು ಮತ್ತೊಂದು ಪದವಾಗಿರುತ್ತದೆ. ಸಂಸ್ಥೆಯ ಬಂಡವಾಳದ ರಚನೆಯ ಘಟಕಗಳನ್ನು ಉತ್ಪನ್ನಗಳನ್ನಾಗಿ ಪರಿಗಣಿಸಬಹುದು. ಉದಾಹರಣೆಗೆ ಬಂಧಗಳು ಮತ್ತು ಷೇರುಗಳು. ಆರ್ಥಿಕ ನೋಟದ ಪ್ರಕಾರ ಆರ್ಥಿಕ ಉತ್ಪನ್ನಗಳನ್ನು ನಗದು ಹರಿವುದು ಎಂದು ಪರಿಗಣಿಸುತ್ತಾರೆ. ಅಂತರ್ಗತವು ಮಾರುಕಟ್ಟೆಯ ಅಪಾಯದ ಆಧಾರವಾಗಿರುವ ಆಸ್ತಿಯಾಗಿದೆ. ಅದು ಕರಾರಿನ ಒಪ್ಪಂದಗಳ ಮೂಲಕ ಆರ್ಥಿಕ ಉತ್ಪನ್ನಗಳಿಗೆ ಲಗತ್ತಿಸಿದೆ. ಆದ್ದರಿಂದ ಅವುಗಳನ್ನು ಪ್ರತ್ಯೇಕವಾಗಿ ವ್ಯಾಪಾರ ಮಾಡಬಹುದು. ಆಧಾರವಾಗಿರುವ ಆಸ್ತಿಯನ್ನು ಸ್ವಾಧೀನಪಡಿಸುವ ಅವಶ್ಯಕತೆ ಇಲ್ಲ. ಆದ್ದರಿಂದ ಉತ್ಪನ್ನವು ಮಾಲೀಕತ್ವದ ಬಿರುಕಿ ಹಾಗೂ ಆಸ್ತಿಯ ಮಾರುಕಟ್ಟೆ ಮೌಲ್ಯದಲ್ಲಿನ ಭಾಗವಹಿಸುವಿಕೆಗಳಿಗೆ ಅವಕಾಶ ಕೊಡಿತ್ತದೆ. ಒಪ್ಪಂದದ ವಿನ್ಯಾಸಕ್ಕೆ ಸಂಬಂಧಿಸಿದಂತೆ ಗಮನಾರ್ಹ ಸ್ವಾತಂತ್ರ್ಯ ಪ್ರಮಾಣವನ್ನೂ ಸಹ ಉತ್ಪನ್ನವು ಒದಗಿಸಿಕೊಳ್ಳುತ್ತದೆ. ಉತ್ಪನ್ನ ಒಪ್ಪಂದಗಳಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ ಓವರ್ ದಿ ಕೌಂಟರ್[೨] ಮತ್ತು ಎಕ್ಸ್ಚೇಂಜ್ ಟ್ರೇಡೆಡ್ ಡಿರೈವೇಟಿವ್ಸ್. ಉತ್ಪನ್ನಗಳು ಆಧುನಿಕ ಯುಗದಲ್ಲಿ ಬಹಳ ಸಹಜವಾಗಿದೆ. ಬಹಳ ಹಳೆಯ ಉತ್ಪನ್ನವೆಂದರೆ 'ರೈಸ್ ಫ್ಯೂಚರ್' ಇದನ್ನು ೧೮ನೇ ಶತಮಾನದಲ್ಲಿ ಡೊಇಮ ರೈಸ್ ಎಕ್ಸ್ಚೇಂಜ್ ನಲ್ಲಿ ವ್ಯಾಪಾರ ಮಾಡಿದರು. ಉತ್ಪನ್ನಗಳು ಮೂಖ್ಯವಾಗಿ ಸಂಬಂಧಗಳ ಆಧಾರದ ಮೇಲೆ ವಿಭಾಗಿಸಿದ್ದಾರೆ. ಉತ್ಪನ್ನಗಳನ್ನು ಮುಖ್ಯವಾಗಿ ಅಪಾಯ ಅಥವಾ ಊಹಾಪೋಹಗಳಿಗೆ ಉಪಯೋಗಿಸುತ್ತಾರೆ. ಹಲವು ಆರ್ಥಿಕ ಸರಕುಗಳು ಹಾಗೂ ಸೇವೆಗಳ ಜೊತೆಗೆ ಉತ್ಪನ್ನವು ಸುಧಾರಣೆಯ ಅಂಶವಾಗಿದ್ದು ಡೊಡ್ಡ್ ಫ್ರ್ಯಾಂಕ್ ವಾಲ್ ಸ್ಟ್ರೀಟ್ ರೀಫಾರ್ಮ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ ಆಕ್ಟ್ ಆಫ್ ೨೦೧೦ರಲ್ಲಿ ಸೇರ್ಪಡೆಯಾಗುತ್ತದೆ.
ಮಾರುಕಟ್ಟೆಯ ಗಾತ್ರ
ಬದಲಾಯಿಸಿಉತ್ಪನ್ನ ಮಾರುಕಟ್ಟೆಯ ಗಾತ್ರವನ್ನು ಕಲ್ಪನೆ ಮಾಡಿಕೊಳ್ಳಬೇಕೆಂದರೆ, ಅರ್ಥಶಾಸ್ತ್ರ ಜೂನ್ ೨೦೧೧ರ ಓವರ್ ದಿ ಕೌಂಟರ್ ಉತ್ಪನ್ನ ಮಾರುಕಟ್ಟೆಯೂ ಸರಿಸಮವಾಗಿ $೪೦೦ ಟ್ರಿಲಿಯನ್ ಅಷ್ಟು ದಾಟಿತು ಮತ್ತು ಮಾರುಕಟ್ಟೆಯ ಗಾತ್ರದಲ್ಲಿ ವ್ಯಾಪಾರದ ಮೊತ್ತವು $೮೩ ಟ್ರಿಲಿಯನ್ ಆಗಿತ್ತು. ಈಗ ಉತ್ಪನ್ನಗಳನ್ನು ಕಾಜನಿಕ ಮೌಲ್ಯಗಳನ್ನಾಗಿ ಪರಿಗಣಿಸಿದ್ದಾರೆ. ಒಟ್ಟು ಉತ್ಪನ್ನವು (ಜಿ.ಡಿ.ಪಿ) $೬೫ ಟ್ರಿಲಿಯನ್ ಅಷ್ಟಿದೆ.
ಉತ್ಪನ್ನಗಳ ವಿಧಗಳು
ಬದಲಾಯಿಸಿವಿಷಾಲವಾಗಿ ಹೇಳಬೇಕಾದರೆ ಉತ್ಪನ್ನಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದಾರೆ.
೧. ಓವರ್ ದಿ ಕೌಂಟರ್: ಉತ್ಪನ್ನವೆಂದರೆ ಎರಡು ಪಕ್ಷಗಳು ಅಥವಾ ಇಬ್ಬರ ನಡುವಿನ ಒಂದು ಒಪ್ಪಂದ, ಈ ಎರಡೂ ಪಕ್ಷಗಳು ಯಾವುದೇ ಕಾರಣಕ್ಕೂ ಬೇರೆ ರೀತಿಯ ಒಪ್ಪಂದ ಅಥವಾ ಯಾವುದೇ ವಿನಿಮಯಗಳನ್ನು ಮಾಡಿಕೊಳ್ಳುವುದಿಲ್ಲ. ವಿನಿಮಯ ಮುಂಗಡದ ದರ ಒಪ್ಪಂದವು, ವಿಲಕ್ಷಣ ಆಯ್ಕೆಗಳು, ವಿಲಕ್ಷಣ ಉತ್ಪನ್ನಗಳು ಇವೆಲ್ಲಾ ಸರಕುಗಳು ಬಹುತೇಕ ಇದೇ ರೀತಿ ವ್ಯಾಪಾರವಾಗುತ್ತಿವೆ. ಓ.ಟಿ.ಸಿ ಉತ್ಪನ್ನ ಮಾರುಕಟ್ಟೆಯು ಉತ್ಪನ್ನಗಳಿಗೆ ಅತಿ ದೊಡ್ಡ ಮಾರುಕಟ್ಟೆಯಾಗಿದೆ.
೨.ಎಕ್ಸ್ಚೇಂಜ್ ಟ್ರೇಡೆಡ್ ಡಿರೈವೇಟಿವ್ಸ್: ಈ ಉತ್ಪನ್ನಗಳನ್ನು ವಿಶೇಷ ವಿನಿಮಯದ ರೀತಿಯಲ್ಲಿ ವ್ಯಾಪಾರ ಮಾಡುತ್ತಾರೆ. ಉತ್ಪನ್ನ ವಿನಿಮಯವು ಒಂದು ಮಾರುಕಟ್ಟೆ. ಈ ಮಾರುಕಟ್ಟೆಯಲ್ಲಿ ವ್ಯಕ್ತಿಗಳು ವ್ಯಾಪಾರವನ್ನು ವಿನಿಮಯ ಮಾಡುತ್ತಾರೆ. ಉತ್ಪನ್ನ ವಿನಿಮಯವು ಎಲ್ಲಾ ವ್ಯವಹಾರಗಳಿಗೂ ಮಧ್ಯವರ್ತಿ ಸಂಬಂಧಿತ ಕೃತ್ಯವಾಗಿರುತ್ತದೆ ಅಥವಾ ಕೆಲಸ ಮಾಡುತ್ತದೆ. ಪ್ರಪಂಚದ ಅತಿ ದೊಡ್ಡ ಉತ್ಪನ್ನ ವಿನಿಮಯವೆಂದರೆ 'ಕೊರಿಯ ಎಕ್ಸ್ಚೇಂಜ್', 'ಯೂರೆಕ್ಸ್',ಸಿ.ಎಮ್.ಈ. ಗ್ರೂಪ್', 'ನ್ಯೂಯಾರ್ಕ್' ಇತ್ಯಾದಿ.
ಉತ್ಪನ್ನದ ವಾದ್ಯಗಳು
ಬದಲಾಯಿಸಿ೧. ಫಾರ್ವರ್ಡ್ಸ್(ಮುಂದಕ್ಕೆ): ಫಾರ್ವಡ್ ಎಂಬ ಒಪ್ಪಂದವು ಪ್ರಮಾಣಿಕೃತ. ಇದರಲ್ಲಿ ಎರಡು ಪಕ್ಷಗಳು ಒಂದು ಆಸ್ತಿಯನ್ನು ಕೊಳ್ಳುಕೊಡುವಿಕೆಯ ಚಟುವಟಿಕೆಯನ್ನು ನಿರ್ದಿಷ್ಟವಾದ ಭವಿಷ್ಯದ ಸಮಯದಲ್ಲಿ ಒಪ್ಪಂದವನ್ನು ಮಾಡಿಕೊಂಡಿರುತ್ತಾರೆ. ಭವಿಷ್ಯದ ಒಪ್ಪಂದವು ನಿಕಟ ಸಂಬಂಧ ಹೊಂದಿರುವಂತದ್ದು. ಫಾರ್ವರ್ಡ್ ಒಪ್ಪಂದವು ಭವಿಷ್ಯದ ಒಪ್ಪಂದಕ್ಕೆ ಬಹಳ ಸವೃಶವಾಗುತ್ತದೆ.
೨. ಫ್ಯೂಚರ್(ಭವಿಷ್ಯ): ಭವಿಷ್ಯ ಎಂಬ ಒಪ್ಪಂದವು ಅತಿ ಪ್ರಮಾಣೀಕೃತ. ಇದು ಎರಡು ಪಕ್ಷಗಳು ಒಂದು ನಿರ್ದಿಷ್ಟ ಆಸ್ತಿಯನ್ನು ಪ್ರಮಾಣೀಕೃತ ಪ್ರಮಾಣ ಹಾಗೂ ಗುಣಮಟ್ಟದಿಂದ ಇಂದಿನ ಬೆಲೆಗೆ ಕೊಳ್ಳುಕೊಡುವಿಕೆ ಮಾಡುವ ಒಪ್ಪಂದವು ಇದಾಗಿದೆ. ಒಂದು ಪಕ್ಷವು ಆಧಾರಿತವಾದ ಆಸ್ತಿಯನ್ನು ಭವಿಷ್ಯದಲ್ಲಿ ಕೊಳ್ಳುವುದಕ್ಕೆ ನಿರ್ಧಾರ ಮಾಡಿದಲ್ಲಿ ಅದನ್ನು ಲಾಂಗ್ ಎಂದು ಕರೆಯುತ್ತಾರೆ. ಒಂದು ಪಕ್ಷವು ಆಧಾರಿತವಾದ ಆಸ್ತಿಯನ್ನು ಭವಿಷ್ಯದಲ್ಲಿ ಮಾರುವುದಕ್ಕೆ ನಿರ್ಧಾರ ಮಾಡಿದಲ್ಲಿ ಅದನ್ನು ಶಾರ್ಟ್ ಎಂದು ಕರೆಯುತ್ತಾರೆ. ಹಾಗೆಯೆ ಭವಿಷ್ಯದ ಒಪ್ಪಂದವು ಭವಿಷ್ಯದಲ್ಲಿ ವ್ಯಾಪಾರವಾಗುವ ಸ್ಥಳವನ್ನು ಸೂಚಿಸುತ್ತದೆ. ಇದರ ಉದ್ದೇಶವು ಭವಿಷ್ಯದ ವಿನಿಮಯವು ಆ ಅವಧಿಯಲ್ಲಿ ಮಧ್ಯವರ್ತಿಯಾಗಿ ಹಾಗೂ ಅಪಾಯವನ್ನು ತಗ್ಗಿಸುವುದು.
೩. ಆಪ್ಷನ್(ಆಯ್ಕೆ): ಆಯ್ಕೆ ಎಂದರೆ ಸರಕುಗಳನ್ನು ಭವಿಷ್ಯದಲ್ಲಿ ಖರೀದಿಸಲು ಅಥವಾ ಮಾರಾಟ ಮಾಡಲು ಆಯ್ಕೆದಾರರಿಗೆ ನೀಡುವ ಆಯ್ಕೆ. ಆಯ್ಕೆಗಳು ಉತ್ಪನ್ನ ವಾದ್ಯಗಳು ಅಂದರೆ ನಿರ್ದಿಷ್ಟ ಸರಕುಗಳನ್ನು ನಿರ್ದಿಷ್ಟ ಭವಿಷ್ಯ ಅಥವಾ ಸಮಯದಲ್ಲಿ ಮತ್ತು ನಿರ್ದಿಷ್ಟ ಬೆಲೆಗೆ ಖರೀದಿಸಲು ಅಥವಾ ಮಾರಾಟ ಮಾಡಲು ಆಯ್ಕೆದಾರರಿಗೆ ನೀಡಿರುವ ಆಯ್ಕೆ. ಆಯ್ಕೆಧಾರನು ಆಯ್ಕೆಯ ಬರಹಗಾರನಿಗೆ ಕೆಲವು ಪ್ರೀಮಿಯಂನ್ನು ಪಾವತಿಸಿ ಆಯ್ಕೆಯನ್ನು ಖರೀದಿಸುತ್ತಾರೆ.
೪. ಸ್ವಾಪ್: ಸ್ವಾಪ್ ಎಂದರೆ ಎರಡು ಭವಿಷ್ಯ ಮತ್ತು ಮುಂದೆ(ಫ್ಯೂಚರ್) ಆಯ್ಕೆಯ ಕೊಡುಗೆ ಮತ್ತು ಇದು ಖರೀದಿಗಾರರು ಮತ್ತು ಮಾರಾಟಗಾರರ ನಡುವೆ ಆಗುವ ಬದಲಾವಣೆಗಳು.
ಆಯ್ಕೆಯ ವಿಧಗಳು
ಬದಲಾಯಿಸಿಅಮೇರಿಕಾ ಆಯ್ಕೆ: ಇದು ಒಂದು ಆಅಯ್ಕೆಯಾಗಿದ್ದು ಅದು ಯಾವುದಾದರು ಒಪ್ಪಂದದ ದಿನಾಂಕ ಅಥವಾ ಅವಧಿ ಮುಗಿದ ದಿನಾಂಕಗಳ ಒಳಗೆ ಬಳಕೆಯಾಗಬಹುದು. ಇದನ್ನು ಅಮೇರಿಕಾದ ಆಯ್ಕೆ ಎಂದು ಕರೆಯುತ್ತಾರೆ.
ಯೂರೋಪಿನ ಆಯ್ಕೆ: ಈ ಆಯ್ಕೆಯು ಅವಧಿ ಮುಗಿದ ದಿನಾಂಕಗಳಲ್ಲಿ ಮಾತ್ರ ನಿರ್ವಹಿಸಬಹುದು.
ಕರೆ(ಕಾಲ್) ಆಯ್ಕೆ: ಖರೀದಿದಾರರ ಆಯ್ಕೆಯನ್ನು ಖರೀದಿಸುವ ವೇಳೆಯಲ್ಲಿ ಆ ಆಯ್ಕೆಯನ್ನು ಖರೀದಿಸಬಹುದೋ ಅಥವಾ ಖರೀದಿಸಬಾರದೋ ಎಂಬ ನಿರ್ಧಾರವನ್ನು ಖರೀದಿದಾರನು ತೆಗೆದುಕೊಳ್ಳಬೇಕಾಗುತ್ತದೆ.
ಯೋಜನೆ ವೆನ್ನಿಲಾ ಆಯ್ಕೆ: ಸಾಮಾನ್ಯವಾಗಿ ಆಯ್ಕೆಯು ಮತ್ತೊಂದು ವೈಶಿಷ್ಟ್ಯಗಳ ಜೊತೆ ಸಂಯೋಜಿತವಾಗಿರುತ್ತದೆ ಆದರೆ ಈ ವಿನ್ನಿಲಾ ಆಯ್ಕೆಯು ಬಹಳ ಸರಳವಾದ ಆಯ್ಕೆ ಮತ್ತು ಈ ಆಯ್ಕೆಯು ಯಾವುದೇ ವಿಶೇಷ ಗುಣಲಕ್ಷಣಗಳನ್ನು ಹೊಂದಿಲ್ಲ.
ಸ್ವಾಪ್ ನ ವಿಧಗಳು
ಬದಲಾಯಿಸಿಕಮಾಡಿಟಿ (ಸರಕುಗಳ) ಸ್ವಾಪ್, ಈಕ್ವಿಟಿ ಸ್ವಾಪ್, ಕರೆನ್ಸಿ ಸ್ವಾಪ್, ಬಡ್ಡಿದರ ಸ್ವಾಪ್
ಸ್ವಾಪ್ ನ ಗುಣಲಕ್ಷಣಗಳು
ಬದಲಾಯಿಸಿ೧.ಇದು ಸಾಮಾನ್ಯವಾಗಿ ಫಾರ್ವರ್ಡ್ ಅಥವಾ ಭವಿಷ್ಯದ ಆಯ್ಕೆ
೨. ಎರಡು ಕಾಕತಾಳಿಯ ಬಯಕೆಗಳು
೩.ಮಧ್ಯವರ್ತಿಯ ಅವಶ್ಯಕತೆಗಳು
೪.ವಸಾಹತು
೫.ದೀರ್ಘಕಾಲದ ಒಪ್ಪಂದ
ಉಲ್ಲೇಖಗಳು
ಬದಲಾಯಿಸಿ