ಡಿಗ್ಗಿ ಪ್ಯಾಲೇಸ್ ರಾಜಸ್ಥಾನದ ಜೈಪುರದಲ್ಲಿರುವ ಒಂದು ಅರಮನೆ. [] [] ಇದನ್ನು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದ್ದು ರಾಜಮನೆತನದವರು ಈಗಲೂ ಅರಮನೆಯ ಒಂದು ಭಾಗದಲ್ಲಿ ವಾಸವಾಗಿದ್ದಾರೆ. ೨೦೦೬ ರಿಂದ, ಇಲ್ಲಿ ಪ್ರತಿ ವರ್ಷವೂ ಜೈಪುರ ಸಾಹಿತ್ಯ ಉತ್ಸವವನ್ನು ನಡೆಯುತ್ತದೆ. [] []

ಇತಿಹಾಸ

ಬದಲಾಯಿಸಿ

ಡಿಗ್ಗಿ ಒಂದು ಕಾಲದಲ್ಲಿ ಠಾಕುರ್ (ಖಂಗರಾತ್ ರಜಪೂತ) ಅವರಿಗೆ ಸೇರಿದ ಹವೇಲಿ ಆಗಿತ್ತು. ಜೈಪುರದ ನೈರುತ್ಯ ಭಾಗಕ್ಕೆ ೪೦ ಕಿ.ಮೀ. ದೂರದಲ್ಲಿರುವ ಒಂದು ಠಿಕಾನಾ ಅಥವಾ ಎಸ್ಟೇಟ್ ಆಗಿದೆ.[] ಈಗಿನ ಮಾಲೀಕರಾದ ಠಾಕೂರ್ ರಾಮ್ ಪ್ರತಾಪ್ ಸಿಂಗ್ ಡಿಗ್ಗಿ ಮತ್ತು ಅವರ ಪತ್ನಿ ಜ್ಯೋತಿಕಾ ಕುಮಾರಿ ಡಿಗ್ಗಿ ಅವರು ೧೯೯೧ ರಲ್ಲಿ ಇದನ್ನು ಭಾಗಶಃ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಿದರು. [] ೧೮೬೦ ರಲ್ಲಿ ನಿರ್ಮಾಣಗೊಂಡಿರುವ ಈ ಅರಮನೆಯನ್ನು ಆಯಾಯಾ ಕಾಲ ಘಟ್ಟದಲ್ಲಿ ಪ್ರತಿಯೊಬ್ಬ ಠಾಕೂರ್‌ರು ತಮಗೆ ಬೇಕಾದ ರೀತಿಯಲ್ಲಿ ವಿಸ್ತರಿಸುತ್ತಾ ಬಂದಿದ್ದಾರೆ. ಡಿಗ್ಗಿ ಅರಮನೆಯ ಇತಿಹಾಸವು ನಮ್ಮನ್ನು ೧೯ ನೇ ಶತಮಾನದಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ಈ ಅರಮನೆಯನ್ನು ೧೮೬೦ ರಲ್ಲಿ ಶ್ರೀ ಠಾಕೂರ್ ಸಾಹೇಬ್ ಪ್ರತಾಪ್ ಸಿಂಗ್ ಡಿಗ್ಗಿ ಅವರು ನಿರ್ಮಿಸಿದರು. ಇದಕ್ಕೂ ಕೆಲವು ವರ್ಷಗಳ ಮೊದಲು ಜೈಪುರ ಪಟ್ಟಣವನ್ನು 9 ಚೌಕಗಳಲ್ಲಿ ನಿರ್ಮಿಸಿದ್ದರು. ಮೊದಲು ಈ ಡಿಗ್ಗಿ ಅರಮನೆಯು ಇಂದಿನ 'ಆಲ್ಬರ್ಟ್ ಹಾಲ್ ಮ್ಯೂಸಿಯಂ' ನ ಸ್ಥಳದಲ್ಲಿತ್ತು. ನಂತರ ಅದನ್ನು ಈಗಿರುವ ಸ್ಥಳಕ್ಕೆ ವರ್ಗಾಯಿಸಲಾಯಿತು. ೧೯೯೧ ರಲ್ಲಿ, ಅರಮನೆಯನ್ನು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಿ, ಅದನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Not being at Diggi Palace". The Week. Retrieved 28 January 2012.
  2. "Review:Diggi Palace". The New York Times. Archived from the original on 2010-04-29.
  3. "Rushdie gag order highlights India's battle for free speech". Sydney Morning Herald. Retrieved 28 January 2012.
  4. "Jaipur Literature Festival: Literati glitterati weekend in India". CNNGo. 18 January 2010.
  5. George Michell; Aman Nath (2005). Palaces of Rajasthan. Frances Lincoln. p. 55.
  6. "History". Archived from the original on 2012-01-05.