ಡಿಎಸ್‌ಎಲ್‌ಆರ್ ಕ್ಯಾಮರ

ಕ್ಯಾಮರಾದಲ್ಲಿ ಚಿತ್ರ ತೆಗೆಯುವ ವಸ್ತುವನ್ನು ನೋಡಲು ಮತ್ತು ಚಿತ್ರೀಕರಣ ಮಾಡಲು ಒಂದೇ ಮಸೂರ (ಲೆನ್ಸ್) ಬಳಸುವ ಕ್ಯಾಮರಾಗಳನ್ನು ಎಸ್‌ಎಲ್‌ಆರ್ ಕ್ಯಾಮರಾ ಎನ್ನುತ್ತಾರೆ.ಸರಳವಾಗಿ ಹೇಳುವುದಾದರೆ ಇಂತಹ ಕ್ಯಾಮರಾಗಳಲ್ಲಿ ದೇಹ ಮತ್ತು ಲೆನ್ಸ್ ಪ್ರತ್ಯೇಕ ವಾಗಿ ದೊರೆಯುತ್ತವೆ.

ಡಿಎಸ್‌ಎಲ್‌ಆರ್ ಕ್ಯಾಮರ
ಡಿಎಸ್‌ಎಲ್‌ಆರ್ ಕ್ಯಾಮರಫ್ಲ್ಯಾಶ್

ಸಂವೇದಕ (ಸೆನ್ಸರ್) ಗಾತ್ರ ಬದಲಾಯಿಸಿ

ಇದು ಬಹಳ ಮುಖ್ಯವಾದುದು. ಇದು ದೊಡ್ಡದಿದ್ದಷ್ಟೂ ಒಳ್ಳೆಯದು. ಕ್ಯಾಮರಾದ ಗುಣವೈಶಿಷ್ಟ್ಯಗಳ ಪಟ್ಟಿಯಲ್ಲಿ ಇದನ್ನು ನೀಡಿರುತ್ತಾರೆ. ಅದನ್ನು ಹುಡುಕಿ ನೋಡಿ. ಸಾಮಾನ್ಯವಾಗಿ ಇದು ಸಿಗಬೇಕಾದರೆ ಕ್ಯಾಮರಾದ ಪುಸ್ತಕವನ್ನು ಪೆಟ್ಟಿಗೆಯಿಂದ ಹೊರತೆಗೆಯಬೇಕು. ಅದಕ್ಕೆ ಅವಕಾಶವಿಲ್ಲದಿದ್ದಲ್ಲಿ ಅಂತರಜಾಲದಲ್ಲಿ ಹುಡುಕಬೇಕು. ಸಂವೇದಕಗಳಲ್ಲಿ ಪ್ರಮುಖವಾಗಿ ಎರಡು ವಿಧ. ಸಿಸಿಡಿ (CCD) ಮತ್ತು ಸಿಮೋಸ್ (CMOS).


ಶೂಟಿಂಗ್ ಆಯ್ಕೆಗಳು ಬದಲಾಯಿಸಿ

ಹೆಚ್ಚಿನ ಕ್ಯಾಮರಾಗಳು ಹಲವು ನಮೂನೆಯ ಶೂಟಿಂಗ್ ಆಯ್ಕೆಗಳನ್ನು ನೀಡುತ್ತವೆ. ಉದಾ -ವ್ಯಕ್ತಿ, ಸೀನರಿ, ರಾತ್ರಿ, ಕ್ಲೋಸಪ್ (ಹೂವು), ಇತ್ಯಾದಿ. ಇವೆಲ್ಲದರ ಹೊರತಾಗಿ ಎಲ್ಲ ಡಿಎಸ್‌ಎಲ್‌ಆರ್‌ಗಳು ಷಟರ್ ಆಯ್ಕೆ, ಅಪೆರ್ಚರ್ ಆಯ್ಕೆ ಅಥವಾ ಸಂಪೂರ್ಣ ಮಾನ್ಯುವಲ್ ಆಯ್ಕೆಗಳ ಸ್ವಾತಂತ್ರ್ಯ ನೀಡುತ್ತವೆ. ಷಟರ್ ವೇಗ ಅಧಿಕ ಎಂದರೆ ಸಾಮಾನ್ಯವಾಗಿ ೪೦೦೦ ತನಕವೂ ಇರತ್ತವೆ. ಇದರರ್ಥ ಒಂದು ಸೆಕೆಂಡಿನ ೪೦೦೦ನೆ ಒಂದು ಭಾಗದಷ್ಟು ಕಡಿಮೆ ಸಮಯದಲ್ಲಿ ಷಟರ್ ತೆರೆದು ಮುಚ್ಚುತ್ತದೆ ಎಂದು. ಈ ವೇಗದಲ್ಲಿ ಅತಿ ವೇಗವಾಗಿ ರೆಕ್ಕೆ ಬಡಿಯುವ ಜೇನು ನೊಣದ ರೆಕ್ಕೆಗಳ ಚಿತ್ರವೂ ಸ್ಪಷ್ಟವಾಗಿ ಮೂಡಿಬರುವುದು. ಷಟರ್‌ನ ವೇಗ ಅತಿ ಕಡಿಮೆ ಅಂದರೆ ೩೦ ಸೆಕೆಂಡು ಇರುತ್ತದೆ. ಈ ವೇಗದಲ್ಲಿ ಫೋಟೋ ತೆಗೆಯಬೇಕಾದರೆ ಕ್ಯಾಮರಾವನ್ನು ಸ್ಟ್ಯಾಂಡ್ ಮೇಲೆ ಭದ್ರಪಡಿಸಿರಬೇಕು. ಇದರ ಜೊತೆ “ಬಲ್ಬ್” ಎಂಬ ಆಯ್ಕೆಯೂ ಇರುತ್ತದೆ. ಇದರಲ್ಲಿ ಕ್ಲಿಕ್ ಮಾಡುವ ಬಟನ್ ಒತ್ತಿ ಹಿಡಿದಷ್ಟು ಸಮಯ ಷಟರ್ ತೆರೆದೇ ಇರುತ್ತದೆ. ಕೆಲವು ಕ್ಯಾಮರಾಗಳಲ್ಲಿ ಕಂಟಿನ್ಯೂಯಸ್ ಶೂಟಿಂಗ್ ಎಂಬ ಆಯ್ಕೆ ಇರುತ್ತದೆ. ಇದನ್ನು ಆಯ್ಕೆ ಮಾಡಿಕೊಂಡರೆ ಕ್ಲಿಕ್ ಮಾಡುವ ಬಟನ್ ಒತ್ತಿ ಹಿಡಿದರೆ ನಿರಂತರವಾಗಿ ಒಂದರ ನಂತರ ಒಂದರಂತೆ ಫೋಟೋ ತೆಗೆಯಬಹುದು. ನಾಟ್ಯ, ವನ್ಯಜೀವಿ, ಆಟ, ಇತ್ಯಾದಿ ಸಂದರ್ಭಗಳಲ್ಲಿ ಈ ಸವಲತ್ತು ಉಪಯುಕ್ತ.

ಫ್ಲ್ಯಾಶ್ ಬದಲಾಯಿಸಿ

ಬಹುಪಾಲು ಡಿಎಸ್‌ಎಲ್‌ಆರ್‌ಗಳಲ್ಲಿ ಫ್ಲ್ಯಾಶ್ ಇರುತ್ತದೆ. ಇದು ನಿಜಕ್ಕೂ ಉಪಯುಕ್ತ. ಇದು ಎಷ್ಟು ದೂರದ ತನಕ ಬೆಳಕು ನೀಡಬಲ್ಲುದು ಎಂಬುದನ್ನು ಗಮನಿಸಬೇಕು. ಈ ದೂರ ಹೆಚ್ಚಿದ್ದಷ್ಟೂ ಒಳ್ಳೆಯದು. ಕೆಲವು ಕ್ಯಾಮರಗಳು ಈ ಫ್ಲ್ಯಾಶ್‌ನ ತೀಕ್ಷ್ಣತೆಯನ್ನು ನಿಯಂತ್ರಿಸುವ ಸವಲತ್ತು ನೀಡಿರುತ್ತಾರೆ.ಕ್ಯಾಮರಾದಲ್ಲೇ ಇರುವ ಫ್ಲ್ಯಾಶ್ ಜೊತೆ ಹೊರಗಡೆಯಿಂದ ಇನ್ನೊಂದು ಫ್ಲ್ಯಾಶ್ ಜೋಡಿಸುವ ಸವಲತ್ತು (ಇದಕ್ಕೆ hot-shoe ಎಂಬ ಹೆಸರಿದೆ) ಇದ್ದರೆ ಒಳ್ಳೆಯದು.

ಕ್ಯಾಮರಾದಲ್ಲಿ ಫೋಟೋ ಯಾವ ವಿಧಾನದಲ್ಲಿ ಸಂಗ್ರಹಗೊಳ್ಳುತ್ತದೆ ಎಂಬುದರ ಕಡೆಗೆ ಸ್ವಲ್ಪ ಗಮನ ಹರಿಸಬೇಕು. ಸಾಮಾನ್ಯವಾಗಿ ಎಲ್ಲ ಕ್ಯಾಮರಾಗಳೂ JPEG ವಿಧಾನವನ್ನು ನೀಡುತ್ತವೆ. ಆದರೆ ಜೊತೆಗೆ RAW ವಿಧಾನ (ಕಚ್ಚಾ) ಇದ್ದರೆ ಒಳ್ಳೆಯದು. ಇದು ಪರಿಣತರಿಗೆ ಮೂಲ ಫೋಟೋವನ್ನು ಫೋಟೋಶಾಪ್‌ನಲ್ಲಿ ತಿದ್ದಲು ಸಹಾಯಮಾಡುತ್ತದೆ. ಯಾವ ಮೆಮೊರಿ ಕಾರ್ಡ್ ಎಂಬುದೂ ಮುಖ್ಯವಾಗುತ್ತದೆ. ಕೆಲವು ಕ್ಯಾಮರಾಗಳು ಮೆಮೊರಿ ಸ್ಟಿಕ್ ಬಳಸುತ್ತವೆ.

ಕ್ಯಾಮರಾದ ಎಲ್‌ಸಿಡಿ ಪರದೆ ಚೆನ್ನಾಗಿರಬೇಕು ಮತ್ತು ದೊಡ್ಡದಾಗಿರಬೇಕು. ಉತ್ತಮ ಬಣ್ಣದಲ್ಲಿ ಚಿತ್ರ ಮೂಡಿಸುತ್ತಿರಬೇಕು. ಕೆಲವು ಕ್ಯಾಮರಾಗಳಲ್ಲಿ ಈ ಪರದೆಯನ್ನು ತಿರುಗಿಸಬಹುದು. ಇದು ಒಳ್ಳೆಯ ಸೌಕರ್ಯ. ಕ್ಯಾಮರಾವನ್ನು ಜನಜಂಗುಳಿಯ ಮಧ್ಯದಲ್ಲಿ ಎತ್ತಿ ಹಿಡಿದು, ಎಲ್‌ಸಿಡಿ ಪರದೆ ಮೂಲಕ ನೋಡಿ ಕ್ಲಿಕ್ ಮಾಡಬಹುದು. ಹಾಗೆ ಮಾಡಲು ಇನ್ನೂ ಒಂದು ಸೌಕರ್ಯ ಅಗತ್ಯ. ಅದುವೇ ಲೈವ್ ವ್ಯೂ. ಅಂದರೆ ವ್ಯೂ ಫೈಂಡರ್ ಜೊತೆ ಎಲ್‌ಸಿಡಿ ಪರದೆಯಲ್ಲ. ಚಿತ್ರ ಜೀವಂತವಾಗಿ ಮೂಡಿಬರುವುದು. ಕೆಲವು ಎಸ್‌ಎಲ್‌ಆರ್ ಕ್ಯಾಮರಾಗಳು ಮಾತ್ರ ಈ ಸವಲತ್ತು ನೀಡಿವೆ.