ಚರ್ಚೆಪುಟ:ಬಿ. ಎ. ವಿವೇಕ್ ರೈ

(ಡಾ. ಬಿ. ಎ. ವಿವೇಕ್ ರೈ ಇಂದ ಪುನರ್ನಿರ್ದೇಶಿತ)
ಡಾ. ಬಿ.ಎ. ವಿವೇಕ್ ರೈ
ಚಿತ್ರ:Vivek rai3.jpg
ಡಾ. ಬಿ.ಎ. ವಿವೇಕ್ ರೈ
Born
ವಿವೇಕ್ ರೈ

ದ. ಜಿಲ್ಲೆಯ ಪುತ್ತೂರಿನ ಸಮೀಪದ ಪುಣಚ
Nationalityಭಾರತೀಯ
Educationಮೈಸೂರು ವಿಶ್ವವಿದ್ಯಾಲಯದ ಪಿ.ಎಚ್.ಡಿ
Alma materಎಂ.ಎಸ್,ಸಿ; ಮಂಗಳೂರು
Known forಜರ್ಮನಿ 'ವ್ಯೂತರ್ಸ್ ಬರ್ಗ್ ವಿಶ್ವವಿದ್ಯಾಲಯ'ದಲ್ಲಿ 'ಇಂಡಾಲಜಿ ವಿಭಾಗ'ದಲ್ಲಿ ಅತಿಥಿ ಪ್ರಾಧ್ಯಪಕರಾಗಿ ಕೆಲಸ ಮಾಡಿದರು. ಕನ್ನಡ ತುಳು ಸಾಹಿತ್ಯದಲ್ಲಿ ಮಹತ್ವದ ಸಾಧನೆಗಳನ್ನು ಮಾಡುತ್ತಿದ್ದಾರೆ.
Websitevivekaraiba.wordpress.com
ಚಿತ್ರ:Dr. VRai.jpg
'ಒಂದು ಕಮ್ಮಟದಲ್ಲಿ ಆಹ್ವಾನಿತರನ್ನು ಉದ್ದೇಶಿಸಿ ಡಾ.ವಿವೇಕ್ ರೈ ಮಾತಾಡುತ್ತಿರುವುದು'

ಡಾ. ಬಿ.ಎ. ವಿವೇಕ ರೈ ಅವರು ಕಳೆದ ೫ ದಶಕಗಳಿಗಿಂತಲೂ ಹೆಚ್ಚು ಕಾಲ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗಳ ಮೂಲಕ ಕರ್ನಾಟಕದಲ್ಲಿ ಕನ್ನಡವನ್ನು ಬೆಳೆಸಿದ ಹಿರಿಯ ವಿದ್ವಾಂಸರಲ್ಲಿ ಮುಖ್ಯರು. ಮನೆಯ ಭಾಷೆ ತುಳು. ಎಳೆಯ ವಯಸ್ಸಿನಿಂದಲೇ ಕಾರಂತರು ಆಯೋಜಿಸುತ್ತಿದ್ದ ಯಕ್ಷಗಾನದ ಆಟದ ಗೆಜ್ಜೆಯ ಹೆಜ್ಜೆಗಳು ಮಂಜಾಗಿ ಕಾಣುತ್ತಾ, ಕಿವಿಯಲ್ಲಿ ಅನಾವರಣಗೊಳ್ಳುತ್ತಾ, ಬುದ್ಧಿ ಬಂದ ಕಾಲಕ್ಕೆ ಅದು ಕನ್ನಡಭಾಷೆ ಎಂದು ಗೊತ್ತಾಗಿ, ಮುಂದೆ ಅದು ಮಾತನಾಡುವ ಭಾಷೆಯಾಗಿ, ಓದುವ ಸಂಗಾತಿಯಾಗಿ, ಕೊನೆಗೆ ಬರೆಯುವ ಸಾಹಸವಾಗಿ, ಜೀವನಪಥದಲ್ಲಿ ಸಾಗುತ್ತಾ ಬಂತು. ತಮ್ಮ ಬದುಕು ಬರಹಗಳಿಂದ ತಮ್ಮ ಹೆಸರು ಕಸುವುಗಳನ್ನು ಸಮರ್ಥವಾಗಿ ರೂಪಿಸುತ್ತಾ ಬಂದಿದ್ದಾರೆ.

ಬರವಣಿಗೆಯಲ್ಲಿನ ಆಸಕ್ತಿ ಬದಲಾಯಿಸಿ

ಡಾ. ಬಿ.ಎ.ವಿವೇಕರೈರವರು, ಹುಟ್ಟಿ, ಬೆಳೆದು ಬಂದ ಪರಿಸರ ಸಾಹಿತ್ಯಿಕವಾಗಿ ಸಮೃದ್ಧವಾಗಿತ್ತು. ಕನ್ನಡ ಮತ್ತು ತುಳು ಭಾಷೆಯ ಬಗ್ಗೆ ದಣಿವರಿಯದ ಅಧ್ಯಯನ, ಅಧ್ಯಾಪನ, ಉಪನ್ಯಾಸ ಮತ್ತು ಕ್ಷೇತ್ರಕಾರ್ಯಾಧರಿತವಾದ ಸಂಶೋಧನೆ ನಡೆಸುತ್ತಾ ಬಂದಿರುವ ವಿವೇಕ ರೈ ಅವರು ಕರ್ನಾಟಕ ಕಂಡ ಅಪೂರ್ವ ಸಂಸ್ಕೃತಿ ಚಿಂತಕರಲ್ಲೊಬ್ಬರು. ತಮ್ಮ ನೇರ ನಡೆ, ನುಡಿ ಮತ್ತು ಜಾತ್ಯಾತೀತ ನಿಲುವುಗಳಿಂದ ಹಾಗೂ ವೈವಿಧ್ಯಮಯ ಬರಹಗಳ ಮೂಲಕ ಅವರು ಕನ್ನಡದ ಆಂತರಿಕ ಶಕ್ತಿಯನ್ನು ಸಂವರ್ಧಿಸಿದ ರೀತಿ ಅನುಪಮವಾದುದು. ಕನ್ನಡ ಮತ್ತು ತುಳು ಭಾಷೆಯ ಸಂಪತ್ತನ್ನು ವಿಶ್ವಕ್ಕೆ ತಿಳಿಸಿ ಹೇಳಲು ಅವರು ಪಟ್ಟ ಶ್ರಮ ಚಾರಿತ್ರಿಕವಾದುದು. ಡಾ| ರೈ ಅವರ ಕೆಲವು ನಿಲುವುಗಳು ನಮ್ಮ ಅಧ್ಯಯನ ಮಾದರಿಗಳನ್ನೇ ಬದಲಾಯಿಸುವುದರಲ್ಲಿ ಪ್ರಮುಖ ಪಾತ್ರವಹಿಸಿವೆ.[೧]

ಜನನ/ಬಾಲ್ಯ ಬದಲಾಯಿಸಿ

ಡಾ ಬಿ.ಎ. ವಿವೇಕ್ ರೈ ಪುತ್ತೂರು ತಾಲೂಕಿನ 'ಪುಣಚಾ' ದಲ್ಲಿ ಡಿಸೆಂಬರ್ 8, 1946 ರಂದು ಜನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ 'ಪುಣಚಾ' ಎನ್ನುವ ಸಣ್ಣ ಹಳ್ಳಿಯಲ್ಲಿ ಬೆಳೆದವರು. ಅವರು ಪುತ್ತೂರಿನಲ್ಲಿ ಪಿಯು ಮತ್ತು ಬಿ.ಎಸ್ಸಿ ಮುಗಿಸಿ, ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತಮ್ಮ ಕನ್ನಡ ಎಂ.ಎ. ಮತ್ತು ಪಿಎಚ್ ಡಿ ಪೂರ್ಣಗೊಳಿಸಿದರು. ವಿವೇಕ್‌ ರೈ ರವರ ತಂದೆ ಅಗ್ರಾಳ ಪುರಂದರ ರೈ. ಅವರು ಶಿವರಾಮ ಕಾರಂತರ ಶಿಷ್ಯ ಮತ್ತು ಪರಮ ಅಭಿಮಾನಿ. ಹೀಗೆ ತಂದೆಯ ಸಾಹಿತ್ಯ ಸ್ಪಂದನೆಗಳನ್ನು ಬಾಲ್ಯದಲ್ಲೇ ಕಂಡು ಕೊಂಡು ಬೆಳೆದ ವಿವೇಕ ರೈ ತಮ್ಮ ಜೀವನದುದ್ದಕ್ಕೂ ಕನ್ನಡ ತುಳು ಸಾಹಿತ್ಯದಲ್ಲಿ ಮಹತ್ವದ ಸಾಧನೆಗಳನ್ನು ಮಾಡುವಷ್ಟು ಎತ್ತರಕ್ಕೆ ಬೆಳೆಯುತ್ತಾ ಹೋದರು.

ವಿದ್ಯಾಭ್ಯಾಸ ಬದಲಾಯಿಸಿ

ದಕ್ಷಿಣ ಜಿಲ್ಲೆಯ ಪುತ್ತೂರಿನ ಬಳಿಯ ಪುಣಚ ವಾಸಿಯಾದ ವಿವೇಕ್ ರೈ, ಮಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ, ವಿಭಾಗದ ಮುಖ್ಯಸ್ಥ- ಹೀಗೆ ಹಲವಾರು ಹುದ್ದೆಗಳಲ್ಲಿ ಸುಮಾರು ೩೪ ವರ್ಷ ಅಧ್ಯಾಪನ, ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರಸ್ತುತ ಜರ್ಮನಿ 'ವ್ಯೂತರ್ಸ್ ಬರ್ಗ್ ವಿಶ್ವವಿದ್ಯಾಲಯ'ದಲ್ಲಿ 'ಇಂಡಾಲಜಿ ವಿಭಾಗ'ದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು.[೨]

ಕಾರ್ಯ/ಸೇವಾ ವ್ಯಾಪ್ತಿ ಬದಲಾಯಿಸಿ

  • ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿ ಸೇವೆ ಸಲ್ಲಿಸಿದರು.[೩]
  • ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸ್ಥಾಪಕ ಅಧ್ಯಕ್ಷರು
  • ಕೆಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ
  • ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
  • ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ
  • ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೆಂದ್ರ
  • ಮಂಗಳೂರಿನ ಪಿಲಿಕುಳ ನಿಸರ್ಗಧಾಮ ಟ್ರಸ್ಟ್

ಮೊದಲಾದ ಪ್ರತಿಷ್ಥಿತ ಸಂಸ್ಥೆಗಳ ಸದಸ್ಯತ್ವ ಹೊಂದಿದ್ದಾರೆ.

ಕೃತಿಗಳು ಬದಲಾಯಿಸಿ

  1. ತುಳು ಗಾದೆಗಳು
  2. ತುಳು ಒಗಟುಗಳು,
  3. ತೌಲವ ಸಂಸ್ಕೃತಿ,
  4. ತುಳು ಜಾನಪದ ಸಾಹಿತ್ಯ ಅನ್ವಯಿಕ ಜಾನಪದ,
  5. ಭಾರತಿಯ ಪರಂಪರೆ ಮತ್ತು ಸಾಹಿತ್ಯದಲ್ಲಿ ಒಗಟು,
  6. ಗಿಳಿಸೂವೆ,
  7. ಇರುಳಕಣ್ಣು,
  8. ಹಿಂದಣ ಹೆಜ್ಜೆ,
  9. ರಂಗದೊಳಗಣ ಬಹಿರಂಗ,
  10. ಬಾಗಿಲನು ತೆರೆದು,
  11. ಜರ್ಮನಿಯ ಒಳಗಿನಿಂದ, ಬರಹಗಳು ಪ್ರಕಟಿತವಾಗಿವೆ.
  12. 'Siri Epic', as performed by Gopala Naika
  13. ೧೫ ಕ್ಕೂ ಹೆಚ್ಚು ಕೃತಿ ಸಂಪಾದನೆ, ತುಳು ಸಾಹಿತ್ಯ ಚರಿತ್ರೆ ಮತ್ತು ಸಮಗ್ರ ಕನ್ನಡ ಜೈನ ಸಂಪುಟಗಳ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಮಾರ್ಗದರ್ಶಕರಾಗಿ ಬದಲಾಯಿಸಿ

  • ೧೬ ಮಂದಿ ಪಿ.ಎಚ್.ಡಿ ಸಂಶೋಧಕರು ಮತ್ತು ಎಂ.ಫಿಲ್ ಪದವಿಯ ೧೦ ಸಂಶೋಧನ ವಿದ್ಯಾರ್ಥಿಗಳಿಗೆ, ಮಾರ್ಗದರ್ಶನ ಮಾಡಿದ್ದಾರೆ.

ದೇಶ ವಿದೇಶಗಳಲ್ಲಿ ಸಂಶೋಧನಾ ಕಾರ್ಯ ಬದಲಾಯಿಸಿ

ಜರ್ಮನಿ, ಫಿನ್‍ಲ್ಯಾಂಡ್, ಸ್ವಿಜರ್ಲ್ಯಾಂಡ್, ಜಪಾನ್, ಅಮೆರಿಕ, ಇಂಗ್ಲೆಂಡ್, ಆಸ್ಟ್ರಿಯ, ಫ್ರಾನ್ಸ್, ದುಬೈ, ಅಬುದಾಬಿ, ಶಾರ್ಜಾ ಮೊದಲಾದ ದೇಶಗಳಲ್ಲಿ ಸಂಶೋಧನೆ ಅಧ್ಯಯನ ಕೈಗೊಂಡಿರುವ ಇವರು ಪ್ರಸ್ತುತ ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಸಂಸ್ಕೃತಿ ಗ್ರಾಮದ ನಿರ್ಮಾಣ ಮತ್ತು ನಿರ್ವಹಣೆ ಹಾಗೂ ಕನ್ನಡ ಸಾಹಿತ್ಯದ ಜರ್ಮನ್ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.[೪]

ಪ್ರಶಸ್ತಿಗಳು, ಗೌರವಗಳು ಬದಲಾಯಿಸಿ

  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಕರ್ನಾಟಕ ಜಾನಪದ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ
  • ಸಂದೇಶ ಪ್ರಶಸ್ತಿ
  • ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
  • ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ
  • ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ ,
  • ಕರ್ನಾಟಕ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ
  • ಕರ್ನಾಟಕ ದೇಸಿ ಸಮ್ಮೇಳನದ ಅಧ್ಯಕ್ಷತೆ
  • ಕುವೈಟ್ ನ ವಿಶ್ವತುಳು ಸಮ್ಮೇಳನದ ಅಧ್ಯಕ್ಷತೆ,

ಉಲ್ಲೇಖಗಳು ಬದಲಾಯಿಸಿ

  1. Dr B A Vivek Rai to grace Alva's Vishwa Nudisiri Virasat
  2. B A Viveka Rai
  3. Literature,Culture, Gender Studies, Folklore, Kannada, Tulu
  4. bellevision.com

ಬಾಹ್ಯ ಸಂಪರ್ಕಗಳು ಬದಲಾಯಿಸಿ

  1. ಅವಧಿ, 'ಡಾ.ಬಿ.ಎ.ವಿವೇಕ್ ರೈ ಸ್ಪೀಕ್ಸ್', ಡಿಸೆಂಬರ್, ೧೭, ೨೦೧೩
Return to "ಬಿ. ಎ. ವಿವೇಕ್ ರೈ" page.