ಏರ್ಯ ಲಕ್ಷ್ಮೀ ನಾರಾಯಣ ಆಳ್ವ

(ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಇಂದ ಪುನರ್ನಿರ್ದೇಶಿತ)

ಸಾಹಿತಿ, ಸಂಘಟಕ, ಸ್ವಾತಂತ್ರ್ಯ ಹೋರಾಟಗಾರ, ಸಮಾಜಸೇವಕ, ಸಹಕಾರ ಧುರೀಣ, ತುಳು ಬರಹಗಾರ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪು ಎಂಬ ಊರಿನ ಹತ್ತಿರದ `ಏರ್ಯ' ಎಂಬ ಸ್ಥಳ. `ಏರ್ಯಬೀಡು' ಎಂಬ ಮನೆತನದಲ್ಲಿ ಹುಟ್ಟಿದರು. ಪ್ರೊ. ಕು.ಶಿ.ಹರಿದಾಸ ಭಟ್ಟರು ಏರ್ಯರ ಕುರಿತಾಗಿ ಹೀಗೆ ಹೇಳಿದ್ದಾರೆ:`ಏರ್ಯರವರ ಏರಿಯಾ ಯಾವುದೆಂದು ಹೇಳಬಲ್ಲವರು ಯಾರು? ಅವರು ಯಾವ ಏರಿಯಾಕ್ಕೆ ಸಲ್ಲದವರೆಂದು ಹೇಳಲಿ? ಇಡಿಯ ತುಳುನಾಡು-ದಕ್ಷಿಣ ಕನ್ನಡ-ಉಡುಪಿ ಕರಾವಳಿ ಎಂಬ ಮಿತಿಯನ್ನು ದಾಟಿ, ಅಖಿಲ ಭಾರತವೂ ಅವರ ಏರಿಯಾವಾಗಿದೆ.' `ಏರ್ಯ'ಎಂಬ ಗ್ರಂಥವು ಏರ್ಯ ಲಕ್ಶ್ಮೀನಾರಾಯಣ ಆಳ್ವರ ಅಭಿನಂದನ ಗ್ರಂಥ.

ಏರ್ಯ ಲಕ್ಷ್ಮೀ ನಾರಾಯಣ ಆಳ್ವ
ಏರ್ಯ ಲಕ್ಷ್ಮೀನಾರಾಯಣ ಆಳ್ವ
ಜನನ೧೯ ಮಾರ್ಚ್ ೧೯೨೬
ಬಂಟ್ವಾಳ ತಾಲೂಕಿನ ಮೊಡಂಕಾಪು
ಮರಣ೨೭ ಜುಲೈ ೨೦೧೯
ಉದ್ಯೋಗಕವಿ

ಏರ್ಯರ ಹುಟ್ಟು ಮತ್ತು ಬಾಲ್ಯ ಬದಲಾಯಿಸಿ

`ಏರ್ಯ ಬೀಡಿನ ಕುಟುಂಬವು ತುಳುನಾಡಿನ ಮಾತೃಮೂಲ ಪದ್ಧತಿ ಅಥವಾ ಅಳಿಯ ಕಟ್ಟಿನ ಕ್ರಮವನ್ನು ಅನುಸರಿಸುವ ಪರಂಪರೆಯನ್ನುಳ್ಳದ್ದು. ಈ ಸಮಾಜದ ಏರ್ಯಬೀಡು ಮನೆತನದ ಮೂಲ ತಾಯಿ ಮೈರಕ್ಕೆ ಪೂಂಜೆದಿ ಎಂಬವರು. ಅವರ ಮಗಳು ಸೋಮಕ್ಕ ಎಂಬವರೇ ಏರ್ಯರ ತಾಯಿ. ಆರು ಗಂಡು ಮಕ್ಕಳೊಂದಿಗೆ ಜನಿಸಿದ ಸೋಮಕ್ಕ ಮಾತ್ರ ಈ ಮನೆಯ ಹೆಣ್ಣು ಸಂತತಿ. ಆ ಮನೆಯ ಮುಂದಿನ ಸಂತತಿ ಆಕೆಯ ಮಕ್ಕಳಿಂದಲೇ ಮುಂದುವ್ರಿಯಬೇಕಾದುದು ಮಾತೃಮೂಲ ಪದ್ಧತಿಯ ನಿಯಮ. ಆಕೆಯನ್ನು ಏರ್ಯಬೀಡಿನಿಂದ ಅನತಿ ದೂರದ ಮಾವಂತೂರು ಕುಟುಂಬದ ಸುಬ್ಬಯ್ಯ ಆಳ್ವರಿಗೆ ಮದುವೆ ಮಾಡಿಕೊಟ್ಟರು. ಇದು ಸುಮಾರು ೧೯೧೫ರ ಹಿಂದೆ ಮುಂದೆ. ಈ ದಂಪತಿಗೆ ಮೊದಲು ಮೂರು ಹೆಣ್ಣು ಮಕ್ಕಳು, ಜನಿಸಿದರು. ೧೯-೩-೧೯೨೬ರಂದು ಲಕ್ಶ್ಮೀನಾರಾಯಣ ಆಳ್ವರು ಜನಿಸಿದರು.

ಶಾಲಾ ದಿನಗಳು ಬದಲಾಯಿಸಿ

ಏರ್ಯ ಬೀಡಿನಿಂದ ಸುಮಾರು ಎರಡು ಕಿಲೋಮೀತರ್ ದೂರದಲ್ಲಿ ಬಂಟ್ವಾಳದ ಪೇಟೆ. ಅಲ್ಲಿಯ ಬೋರ್ಡ್ ಎಲೆಮೆಂಟರಿ ಶಾಲೆಯಲ್ಲಿ ಮತ್ತು ವೆಂಕಟರಮಣ ಸ್ವಾಮಿ ಹೈಸ್ಕೂಲಿನಲ್ಲಿ ಹತ್ತನೆಯ ತರಗತಿಯವರೆಗೆ ಕಲಿತರು. ಏರ್ಯರು ಔಪಚಾರಿಕ ಶಿಕ್ಷಣ ಮುಂದುವರಿಯಲಿಲ್ಲ. ಬಂಟ್ವಾಳದಲ್ಲಿ ಆರನೆಯ ತರಗತಿಯಲ್ಲಿರುವಾಗಲೇ ಓದಿನ ಆಸಕ್ತಿ ಬೆಳೆದಿತ್ತು. ಮೊದಮೊದಲಿಗೆ ಕತೆಗಳು, ಪತ್ತೇದಾರಿ ಕಾದಂಬರಿಗಳು, ಕಾದಂಬರಿಗಳು -ಹೀಗೆ ಮುಂದುವರಿದು ಗಂಭೀರ ಗ್ರಂಥಾಲಯದ ಈ ಓದು ಹಿನ್ನೆಲೆಯಾಯಿತು. ನಿರಂತರವಾಗಿ ಓದುವ ಹವ್ಯಾಸಕ್ಕೆ ಬಾಲ್ಯವಿದ್ಯಾಭ್ಯಾಸದಲ್ಲಿಯೇ ಬೀಜಾಂಕುರವಾಗಿತ್ತು. ಕನ್ನಡದೊಂದಿಗೆ ಹಿಂದಿಯನ್ನು ಒಂದಿಷ್ಟು ಕಲಿತು ಏರ್ಯರು ರಾಷ್ಟ್ರಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮುಂದೆ ಏರ್ಯರ ಭಾವ ಹಿರಿಯಡಕದ ಡಾ. ಬಿ.ಚಂದಯ್ಯ ಹೆಗ್ಡೆಯವರ ಮಿತ್ರ ಇಂಗ್ಲಿಷ್ ಅಧ್ಯಾಪಕ ರಘುನಾಥ ಹೆಗ್ಡೆಯವರ್೫ಅ ಜೊತೆಗೆ ಅಂದಿನ ಮಣಿಪಾಲದಲ್ಲಿ ಅವರೊಡನಿದ್ದು ಶೇಕ್ಸಪಿಯರ್ ಮತ್ತು ರವೀಂದ್ರನಾಥ ಟಾಗೋರರ ಗ್ರಂಥಗಳನ್ನು ಇಂಗ್ಲಿಷ್ ನಲ್ಲಿ ಅಧ್ಯಯನ ಮಾಡಿದರು. ಮುಂದೆ ಗುರುಗಳಾಗಿ ದೊರೆತವರು ಸೇಡಿಯಾಪು ಕೃಷ್ಣ ಭಟ್ಟರು. ಅವರೇ ಏರ್ಯರ ಸಾಹಿತ್ಯಾಭಿರುಚಿಯನ್ನು ಬೆಳೆಸಿದವರು.ಏರ್ಯರ ಸಾಹಿತ್ಯಾಭಿರುಚಿ ಮೂಡಿ ಬೆಳೆಯಲು ಅವರ ತಂದ್ಯವರ ಪುರಾಣ ಪ್ರವಚನ ಒಂದು ಕಾರಣ. ತಂದೆ ಸುಬ್ಬಯ್ಯ ಆಳ್ವರು ನಡುಗನ್ನಡದ ತೊರವೆ ರಾಮಾಯಣ, ಜೈಮಿನಿ ಭಾರತ, ಕನ್ನಡ ಭಾಗವತ ಗ್ರಂಥಗಳನ್ನು ಗುರು ಮುಖೇನ ಅಧ್ಯಯನ ಮಾಡಿ ಪಾಂಡಿತ್ಯಗಳಿಸಿದ್ದರು. ಈ ಗ್ರಂಥಗಳನ್ನು ಓದಿ ಅವರು ಕನ್ನಡ, ತುಳು ಭಾಷೆಗಳಲ್ಲಿ ವಿವರಣೆ ಮಾಡುತ್ತಿದ್ದರು. ಸುಬ್ಬಯ್ಯ ಆಳ್ವರು ಮಕ್ಕಳಿಗೆ ಗಮಕ ಕಲಿಸಿದರು.

ಸ್ವಾತಂತ್ರ್ಯ ಚಳುವಳಿ ಬದಲಾಯಿಸಿ

ಏರ್ಯರು ಹುಟ್ಟಿ ಬೆಳೆದ ಕಾಲವೆಂದರೆ ಸ್ವಾತಂತ್ರ್ಯಕ್ಕಾಗಿ ಚಳುವಳಿಗಳು ಜೋರಾಗಿ ನಡೆಯುತ್ತಿದ್ದ್ಸ ಸಮಯ. ಆದುದರಿಂದಲೇ ಸ್ವಾತಂತ್ರ್ಯಪೂರ್ವದ ಆದರ್ಶಗಳು ಅವರ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಪಾತ್ರವಹಿಸಿವೆ. ಏರ್ಯರು ನೇರವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಚಳುವಳಿಯಲಿಲ್ಲದಿದ್ದರೂ ಚಳುವಳಿಗಾರರ ಉತ್ಸಾಹ ಅವರ ರಕ್ತದಲ್ಲಿತ್ತು. `ಭಾರತಬಿಟ್ಟು ತೊಲಗಿ' ಎಂಬ ಗಾಂಧೀಜಿಯವರು ಕರೆಯನ್ನು ದೇಶಬಾಂಧವರಿಗೆ ನೀಡಿ ಚಳುವಳಿಯನ್ನು ಅಂತಿಮ ಹಂತಕ್ಕೆ ನಡೆಸುತ್ತಿದ್ದಾಗ ಏರ್ಯರು ವಿದ್ಯಾರ್ಥಿ. ಅಂದಿನ ಆ ದಿನಗಳ ನೆನಪನ್ನು ಅವರು ಮಾಡಿಕೊಂಡಿರುವುದು ಹೀಗಿದೆ:``ನಾನು ಆರನೆಯ ತರಗತಿಯಲ್ಲಿ ಕಲಿಯುತ್ತಿದ್ದಾಗ ೧೯೪೨ರಲ್ಲಿ ದೇಶದಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆಯಿತು. ಆ ದಿನಗಳಲ್ಲಿ ಎರಡು ದಿನಗಳ ಕಾಲ ಶಾಲೆಗೆ ಬಹಿಷ್ಕಾರ ಹಾಕಿ ಮಾರ್ಗದಲ್ಲಿ ನಿಂತು `ಭಾರತ್ ಮಾತಾಕಿ ಜೈ' ಎಂದು` ಕ್ವಿಟ್ ಇಂಡಿಯಾ' ಮಹಾತ್ಮಾ ಗಂಧಿಜೀಕಿ ಜೈ' ಎಂದು ಬೊಬ್ಬೆ ಹಾಕಿದ್ದ ನೆನಪು. ಇಂದೂ ಹಚ್ಚ ಹಸುರಾಗಿ ಅಚ್ಚಳಿಯದೇ ನಿಂತಿದೆ. ಆ ದಿನಗಳಲ್ಲಿ ಹೆಚ್ಚಿನ ಅಧ್ಯಾಪಕರು ನಮ್ಮನ್ನು ಕಂಡು ಪ್ರೋತ್ಸಾಹದ ನಸು ನಗು ನಕ್ಕು ಶಾಲೆಯೆಡೆಗೆ ಹೋಗುತ್ತಿದ್ದುದು ನಮಗೆ ಉತ್ಸಾಹದಾಯಿಯಾಗಿತ್ತು. ಎರಡು ದಿನಗಳ ಬಳಿಕ ನಮ್ಮ ಚಳುವಳಿ ಕೊನೆಗೊಂಡು ಯಥಾಪ್ರಕಾರ ನಾವು ಕ್ಲಾಸುಗಳಿಗೆ ಹಾಜರಾದೆವು."

ಹರಿಜನ ಸೇವೆ ಬದಲಾಯಿಸಿ

ಏರ್ಯರ ಜೀವನ ಸಾಮಾಜಿಕ ಕ್ಷೇತ್ರದಲ್ಲಿ ಪ್ರವೇಶಿಸಿದ ಒಂದು ಘಟನೆಯನ್ನು ಅವರು ವಿವರವಾಗಿ ನೆನಪು ಮಾಡಿಕೊಳ್ಳುತ್ತಾರೆ. ಆ ಘಟನೆಗೆ ಅವರಲ್ಲಿ ಅಂತರ್ಗತವಾಗ್ಫ಼ಿರುವ ಮಾನವೀಯತೆಯೊಂದ್ಗೆ ಗಾಂಧೀಜಿಯವರ ದಲಿತೋದ್ಧಾರ ತತ್ವ ಅವರ ಮನಸ್ಸಿನಲ್ಲಿತ್ತೆಂಬುದು ಸ್ಪಷ. ತಮ್ಮ ೧೯ನೆ ವಯಸ್ಸಿನಲ್ಲಿ ಹರಿಜನ ಮುದುಕಿಯೊಬ್ಬಳು ಸಮಾರಂಭದ ಊಟಕ್ಕೆ ಬಂದವಳು ಎಲ್ಲರ ಊಟ ಮುಗಿದು ಅವಳಿಗೆ ಬಡಿಸಿದ ಎಲೆಯನ್ನು ಎತ್ತಿಕೊಂಡು ಹೋಗುವಾಗ ಕಾಲು ಜಾರಿ ತೋಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದಾಳೆಂದು ಯಾರೋ ಹೇಳಿದರು. ಈಗ ಆಕೆಯನ್ನು ಎತ್ತುವವರು ಯಾರೂ ಇರಲಿಲ್ಲ. ಯಾಕೆಂದರೆ ಅವಳು ಅಸ್ಪ್ರಶ್ಯಳು. ಆಗ ಆಳ್ವರು ಕೂಡಲೇ ತಮ್ಮ ಒಕ್ಕಲಿನ ಇಬ್ಬರು ಹರಿಜನರನ್ನು ಕರೆದು ಆಕೆಯನ್ನು ಒಂದು ಕಂಬಳಿಯಲ್ಲಿ ಸುತ್ತಿ ಎಚ್ಚರಿಕೆಯಿಂದ ಆ ಕಂಬಳಿಯ ಎರಡೂ ಕಡೆಗಳನ್ನು ಒಂದು ಒನಕೆಗೆ ಕಟ್ಟಿ ಎತ್ತಿಸಿಕೊಂಡು ಲಾಟಿನು ಹಿಡಿಸಿಕೊಂಡು ಮತ್ತೆ ಬಂಟ್ವಾಳಕ್ಕೆ ಹೋಗಿ ಸರಕಾರಿ ಆಸ್ಪತ್ರೆಗೆ ವೈದ್ಯರೊಡನೆ ಸೂಕ್ತ ಶುಶ್ರೂಷೆಯ ವ್ಯ್ವಸ್ಥೆ ಮಾಡಿ ಹಿಂತಿರುಗಿದಾಗ ರಾತ್ರಿ ಹನ್ನೆರಡು ಗಂಟೆ ಕಳೆದಿತ್ತು. ಆ ದಿನಗಳಲ್ಲಿ ಒಂದೆರಡು ದೇವಸ್ಥಾನಗಳ ಹೊಣೆಗಾರಿಕೆಯ ಮನೆತನದ ಮನೆಯ ಒಳಗೆ ದೈವಾರಾಧನೆಯನ್ನು ಬ್ರಾಹ್ಮಣರಿಂದ ನಡೆಸುವ, ಇಡೀ ಊರೇ ಪಾಲುಗೊಳ್ಳುವಂತಹ ದೈವ ದೇವರುಗಳ ಉತ್ಸವಗಳನ್ನು ಜರಗಿಸುವ ಜವಾಬ್ದಾರಿ ಹೊತ್ತ ಮನೆಯ ಉತ್ತರಾಧಿಕಾರಿ ಈ ರೀತಿ ಹರಿಜನರನ್ನು ಮುಟ್ಟುವುದು, ಎತ್ತುವುದು ಆಸ್ಪತ್ರೆಗೆ ಒಯ್ಯುವುದು -ಇದು ಆ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿರಲಿಲ್ಲ. ಆದರೆ ಈ ಎಲ್ಲ ಸಂಪ್ರದಾಯದ ಅಮಾನವೀಯ ಅಡೆತಡೆಗಳನ್ನು ಒಮ್ಮೆಲೇ ಉತ್ತರಿಸಲು ಆ ಮುದುಕಿಯ ಕರುಣಾಕ್ರಂದನ ಒಂದೇ ಸಾಕಾಗಿತ್ತು. ಅದೇ ವರ್ಷದ ಕೊನೆಯೊಳಗೆ ಬಂಟ್ವಾಳದಲ್ಲಿ `ಹರಿಜನ ಸೇವಾ ಸಂಘ'ವನ್ನು ಪ್ರಾರಂಭಿಸಿದರು. ಹಲವು ವಿರೋಧಗಳ ನಡುವೆ ಹರಿಜನ ಬಂಧುಗಳನ್ನು ತಮ್ಮ ಊರಿನ ಆರಾಧನಾ ಕೇಂದ್ರಕ್ಕೆ ಒಳಹೊಗಿಸಿ ಅಲ್ಲಿಂದ ಮೆರವಣಿಗೆಯಲ್ಲಿ ಬಂಟ್ವಾಳಕ್ಕೆ ಹೋಗಿ ಅಲ್ಲಿಯ ಪ್ರಧಾನವಾದ ಮೂರು ದೇವಸ್ಥಾನಗಳ ಒಳಗೆ ಹೋಗಿ ದೇವರಿಗೆ ಕೈಮುಗಿದು ಪೇಟೆಯ ಉತ್ತಮ ಹೊಟೆಲೊಂದಕ್ಕೆ ಹೋಗಿ ಕಾಫಿ ಕುಡಿಸಿ `ಹರಿಜನ ಸೇವಾ ಸಂಘದ ಪ್ರಾರಂಭೋತ್ಸವ ನಡೆಯಿತು. ಬಹಳ ಜನರ ಕೆಂಗಣ್ಣು, ವಿರೋಧಗಳ ನಡುವೆಯೂ ಅತ್ಯಂತ ಅರ್ಥಪೂರ್ಣವಾಗಿ ಹರಿಜನ ಸೇವಾ ಸಂಘ ಕೆಲಸ ಪ್ರಾಆರಂಭಿಸಿತು. ಆದರೂ ಬಹಳ ಕಾಲ ವಿರೋಧಿಗಳು ಅವರನ್ನು `ಹರಿಜನ ಆಳ್ವ' ಎಂದೇ ಅಡ್ಡ ಹೆಸರಿನಿಂದ ಹಿಂದಿನಿಂದ ಕರೆಯುತ್ತಿದ್ದರು. ಎಂದು ಆಳ್ವರು ತಮ್ಮ ಅನುಭವವನ್ನು ನಿರೂಪಿಸುತ್ತಾರೆ. ಈ ಹರಿಜನಸೇವಾ ಸಂಘ ಸುಮಾರು ೧೫ ವರ್ಷಗಳ ಕಾಲ ಹರಿಜನ ಮಕ್ಕಳಿಗೆ ಉಚಿತ ವಸ್ತ್ರ, ಪುಸ್ತಕ, ದೂರದವರಿಗೆ ಮಧ್ಯಾಹ್ನದ ಊಟ ಕೊಟ್ಟು ವಿದ್ಯಾಭ್ಯಾಸ ಕೊಡುವ ಕೆಲಸ ನಡೆಸಿತು. ಬಂಟ್ವಾಳದ ಮೈರಾನ್ ಪಾದೆಯಲ್ಲಿ ಸೋಮಯಾಜಿ ಮನೆತನದ ಪಟ್ಟಾ ಸ್ಥಳದಲ್ಲಿ ವಾಸವಾಗಿದ್ದ ಸುಮಾರು ಒಂಬತ್ತು ಹರಿಜನ ಕುಟುಂಬಗಳಿಗೆ ೪೦ ಸೇಂಟ್ಸಿನಿಂದ ೯೦ ಸೆಂಟ್ಸಿನವರೆಗೆ ಹಣ ಕೊಟ್ಟು ಭೂಮಿ ಖರೀದಿಸಿ ಅವರವರ ಹೆಸರಿನಲ್ಲಿ ಪಟ್ಟಾ ಮಾಡಿಸಿ ಕೊಡಲಾಯಿತು. ಬಂತ್ವಾಳದ ಹರಿಜನ ಕುಟುಂಬಗಳಿಗೆ ಪ್ರತಿ ವರ್ಷ ನೆಡಲು ತೆಂಗಿನ ಸಸಿ ಇತ್ಯಾದಿಗಳನ್ನುಕೊಡಲಾಯಿತು. ವರ್ಷಕ್ಕೆ ಎರಡು ಮೂರು ಸಲ ಹರಿಜನರೊಡನೆ ಸಹಭೋಜನದ ವ್ಯವಸ್ಥೆ ಮಾಡಲ್ಯಿತು. ಅವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಖಾಸಗಿ ವೈದ್ಯರಿಂದ ಮಾಡಲಾಯಿತು. ಈ ವಿಚಾರದಲ್ಲಿ ಅವರಿಗೆ ತುಂಬ ನೆರವಾಗಿ ಬೆಂಬಲವಾಗಿ ನಿಂತವರಲ್ಲಿ ಇಬ್ಬರು ಪ್ರಮುಖರೆಂದರೆ ಡಾ. ವಿಠಲ ಶೆಟ್ಟಿ ಮತ್ತು ಬಂಟ್ವಾಳದ ಗಾಂಧಿ ಎಂದೇ ಹೆಸರಾದ ಬಿ. ಪಾಂಡುರಂಗ ಬಾಳಿಗರು. ದಿ. ಬಿ. ಕೇಶವ ಬಾಳಿಗ, ದಿ. ಎಲ್. ಎನ್. ಬಂಟ್ವಾಳ್ಕರ್ ಮುಂತಾದವರನ್ನು ಆಳ್ವರು ನೆನಪಿಸಿಕೊಆಳ್ಳುತ್ತಾರೆ.

ಸಹಕಾರ ಧುರೀಣ ಬದಲಾಯಿಸಿ

ಕರ್ನಾಟಕದ ಕರಾವಳಿ ಪ್ರದೇಶದ ಅಂದಿನ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಸಹಕಾರ ಚಳುವಳಿ ಮುಂಚೂಣಿಯಲ್ಲಿ ನಿಂತು ಹಳ್ಳಿ ಹಳ್ಳಿಯಲ್ಲಿ ಸಹಕಾರ ಸಂಘಗಳ ಸ್ಥಾಪನೆಗೆ ಕಾರಣರಾದವರು ದಿ. ಮೊಳಹಳ್ಳಿ ಶಿವರಾಯರು. ಆದುದರಿಂದಲೇ ಅವರನ್ನು `ಸಹಕಾರಿ ಚಳುವಳಿಯ ಪಿತಾಮಹ' ಎಂದು ಗುರುತಿಸಲಾಗುತ್ತಿದೆ. ಗಾಂಧಿಜೀಯವರ ಪ್ರಭಾವದ ಗುಂಗಿನಲ್ಲಿನಲ್ಲಿದ್ದ ಏರ್ಯರಿಗೆ ಸಹಕಾರಿ ಚಳವಳಿ ಸಹಜವಾಗಿಯೇ ಪ್ರಾಪ್ತವಾಯಿತು. ಏರ್ಯರು ಈ ಕ್ಷೇತ್ರದೊಳಗೆ ಒಂದಿಷ್ಟು ಒತ್ತಾಯದಿಂದಲೇ ಎನ್ನಬಹುದು. ಅದರೆ ಸುಮಾರು ಕಾಲು ಶತ್ಮಾನಗಳ ಕಾಲ ಅವರು ಚಳವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತುಂಬ ಉಪಯುಕ್ತವಾದ ಕೆಲಸಗಳನ್ನು ಮಾಡಿದರು. ಈ ಕ್ಷೇತ್ರಕ್ಕೆ ಏರ್ಯರ ಪ್ರವೇಶ `ಅಮ್ಟಾಡಿ ಗ್ರಾಮ ಸೇವಾ ಸಂಘ' ದ ಮೂಲಕ. ಅವರು ತಮ್ಮ ಸಹಕಾರಿ ಕ್ಷೇತ್ರದ ಜೀವನವನ್ನು ನೆನಪಿಸಿಕೊಂಡಿರುವುದು ಹೀಗೆ: `ನನ್ನ ಇನ್ನೊಂದು ಪ್ರಿಯವಾದ ಕ್ಷೇತ್ರ ಸಹಕಾರಿ ಚಳವಳಿ. ೧೯೬೦ರ ಹೊತ್ತಿಗೆ ನಮ್ಮ ಗ್ರಾಮದಲ್ಲಿ ಒಂದು ಸಹಕಾರಿ ಸಂಘ ಇದ್ದುದು ಕೊಟ್ಟ ಸಾಲಗಳು ವಸೂಲಾಗದೇ ಮುಳುಗಿ ಹೋಗುವ ಹಂತದಲ್ಲಿದ್ದುದನ್ನು ದಿ. ಅಬ್ದುಲ್ ರಜಾಕ್ ಎನ್ನುವ ಕೇಂದ್ರ ಸುಪರ್ ವೈಸರು ಬಂದು ಒತ್ತಾಯದಿಂದಲೇ ನನ್ನ ಹೆಗಲಿನ ಮೇಲೆ ಹೊರೆಸಿದರು. ಆಗ ಕೇಂದ್ರ ಸಹಕಾರಿಸಂಘಗಳು ಅನಿಯಮಿತವಾಗಿದ್ದವು. ಕೊಟ್ಟ ಸಾಲ ವಸೂಲಾಗದಿದ್ದರೆ ಅಧ್ಯಕ್ಷನೇ ಅಥವಾ ಉಳಿದ ಜವಾಬ್ದಾರಿಯುಳ್ಳವರೇ ಹೊರೆ ಹೊಣೆ ಹೊತ್ತುಕೊಳ್ಳಬೇಕಿತ್ತು. ನನ್ನದೇ ಸ್ವಂತಕಟ್ಟಡದಲ್ಲಿ ಬಾಡಿಗೆ ರಹಿತವಾಗಿ ಸೊಸೈಟಿಯ ಹೊಸ ಆಫೀಸು ಮೊದಲಾಯಿತು. ನನ್ನ ಮನೆಯ ದಾಸ್ತಾನು ಕ್ಫ್ಣೆಯೇ ಸೊಸೈಟಿಯ ಗೋಡೌನು ಆಯಿತು. ಹೀಗೆ ಪ್ರಾರಂಭವಾದ ಸೊಸೈಟಿ ಹಲವು ವರ್ಷಗಳಲ್ಲಿ ತನ್ನದೇ ಸ್ಥಳದಲ್ಲಿ ಭದ್ರ ಕಟ್ಟಡದಲ್ಲಿ ವ್ಯವಹಾರ ನಡೆಸುವಂತಾಗಿ ಜಿಲ್ಲೆಯಲ್ಲೇ ಉತ್ತಮ ಸೊಸೈಟಿಯಾಗಿ ಬೆಳೆದು ನಿಂತು ಹಲವು ಪ್ರಶಸ್ತಿಗಳನ್ನು ಪಡೆಯುವಂತಾಯಿತು. ಮುಂದೆ ಬಂಟ್ವಾಳ ತಾಲೂಕು ಮಾರ್ಕೆಟಿಂಗ್ ಸೊಸೈಟಿಯಲ್ಲಿ ೧೩ ವರ್ಷಗಳ ಕಾಲ ಅಧ್ಯಕ್ಷನಾಗಿದ್ದು, ಸ್ವಂತ ನಾಲ್ಕು ಎಕ್ರೆ ಸ್ಥಳ ಪಡೆದು ಅಕ್ಕಿ ಗಿರಣಿ ಗೋಡಾನುಗಳನ್ನು ನಿರ್ಮಿಸಿದೆ. ಮುಂದೆ ಜಿಲ್ಲಾಕೇಂದ್ರ ಸಹಕಾರಿ ಬೇಂಕಿನ ಅಧ್ಯಕ್ಷನಾಗಿ ಆರು ವರ್ಷಗಳ ಕಾಲ ಇದ್ದಾಗ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರಾಜ್ಯದಲ್ಲಿಯೇ ಉತ್ತಮ ಬ್ಯಾಂಕು ಎಂದು ಪರಿಗಣಿತವಾಗಿತ್ತು. ಹಾಗೆಯೇ ಜಿಲ್ಲೆಯ ಮತ್ತು ರಾಜ್ಯದ ಕೆಲವು ಸಹಕಾರಿ ಸಂಸ್ಥೆಗಳಲ್ಲಿ ನಿರ್ದೇಶಕನಾಗಿಯೂ ಸೇವೆ ಸಲ್ಲಿಸಿದ್ದರು.

ಕೃತಿಗಳು ಬದಲಾಯಿಸಿ

  • ಮೊದಲ ಮಳೆ
  • ನೂರರ ನೆನಪು
  • ಪರಿಚಯ
  • ಶ್ರೀರಾಮಾಶ್ವಮೇಧದ ರಸತರಂಗಗಳು
  • ಸ್ನೇಹಸೇತು

ಪತ್ರ ಸಾಹಿತ್ಯ ಬದಲಾಯಿಸಿ

ಪತ್ರಾವಳಿ

ಅಭಿನಂದನ ಗ್ರಂಥ ಬದಲಾಯಿಸಿ

  1. ಏರ್ಯ.

ಪ್ರಶಸ್ತಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ