ಎಮ್. ಎಚ್. ಮರಿಗೌಡ

(ಡಾ. ಎಮ್. ಎಚ್. ಮರಿಗೌಡ ಇಂದ ಪುನರ್ನಿರ್ದೇಶಿತ)

(೧೯೧೬-೧೯೯೪)

ಚಿತ್ರ:04.jpg
'ಡಾ. ಎಮ್. ಎಚ್. ಮರಿಗೌಡ'

ಸಸ್ಯವಿಜ್ಞಾನದಲ್ಲಿ ಪ್ರಾರಂಭಿಕ ವಿದ್ಯಾಬ್ಯಾಸ, ತೋಟಗಾರಿಕೆಯಲ್ಲಿ ವಿಶೇಷ ಶಿಕ್ಷಣ ಬದಲಾಯಿಸಿ

ಡಾ.ಮರಿಗೌಡರು,ಮೈಸೂರಿನಲ್ಲಿ ೧೯೧೬ ರಲ್ಲಿ ಜನಿಸಿದರು. ಸಸ್ಯ ವಿಜ್ಞಾನದಲ್ಲಿ ಪ್ರಾರಂಭಿಕ ಶಿಕ್ಷಣದ ನಂತರ, ಹೆಚ್ಚಿನ ಜ್ಞಾನಾರ್ಜನೆಗಾಗಿ ಲಖನೌ ಗೆ ತೆರಳಿ ಅಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ೧೯೪೨ ರಲ್ಲಿ ತಮ್ಮ ವೃತ್ತಿಜೀವನವನ್ನು ಮೈಸೂರು ಸರ್ಕಾರದ ಸರ್ಕಾರಿ ಉದ್ಯಾನವನಗಳ ಇಲಾಖೆಗೆ ಸೂಪರಿಂಟೆಂಟ್ ಆಫ್ ಗಾರ್ಡನ್ಸ್ ಹುದ್ದೆಯಿಂದ ಆರಂಭಿಸಿದರು. ಅಲ್ಲಿ ಹಿರಿಯರಾದ ಜವರಾಯರ ಸಮರ್ಥ ಮಾರ್ಗದರ್ಶನದ ಲಾಭ ಸಿಕ್ಕಿತು. ತೋಟಗಾರಿಕೆಯಲ್ಲಿ ಉನ್ನತ ಶಿಕ್ಷಣ ಪಡೆಯಲು ೧೯೪೭ರಲ್ಲಿ, ಲಂಡನ್ ನ ಕ್ಯೂ ರಾಯಲ್ ಬಟಾನಿಕಲ್ ಗಾರ್ಡನ್ಸ್ ನಲ್ಲಿ ಸಸ್ಯೋದ್ಯಾನಗಳ ನಿರ್ವಹಣೆ ಮತ್ತು ಸುಂದರೀಕರಣೆಯ ಬಗ್ಗೆ ಹೆಚ್ಚಿನ ಜ್ಞಾನವನ್ನು ಸಂಪಾದಿಸಿದರು. ೧೯೪೮ ರಲ್ಲಿ ಲಂಡನ್ ನಿಂದ ಅಮೆರಿಕ ಕ್ಕೆ ಡಾಕ್ಟೊರೇಟ್ ವ್ಯಾಸಂಗಕ್ಕೆಂದು ತೆರಳಿದರು. ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ೧೯೫೧ ರಲ್ಲಿ ಸಸ್ಯವಿಜ್ಞಾನದಲ್ಲಿ ಡಾಕ್ಟೊರೇಟ್ ಸಂಪಾದಿಸಿದರು.

’ತೋಟಗಾರಿಕೆಯ ಹವ್ಯಾಸ,’ ಬದಲಾಯಿಸಿ

ತೋಟಗಾರಿಕೆಯ ಹವ್ಯಾಸ,’ ಮೊದಲು, ಸ್ಥಿತಿವಂತರಿಗೆ ಮಾತ್ರ ಮೀಸಲಾಗಿತ್ತು ಮರಿಗೌಡರು ತಮ್ಮ ಚಿಕ್ಕವಯಸ್ಸಿನಲ್ಲಿ ಬಡರೈತರ ಕಡುಬಡತನವನ್ನು ಸಂಕಷ್ಟದ ಸ್ಥಿತಿಯನ್ನು ಕಂಡಿದ್ದರು. ಮುಂದೆ ಅಮೆರಿಕಕ್ಕೆ ಹೋದಾಗಲೂ, ಅಲ್ಲಿ ಅನೇಕ ಹುದ್ದೆಗಳು ಸಿಕ್ಕಾಗಲೂ ಇಷ್ಟಪಡದೆ, ಮತ್ತೆ ವಾಪಸ್ ಭಾರತಕ್ಕೆ ಮರಳಿದರು. ಹಳ್ಳಿಯ ಬಡರೈತರಿಗೆ ತಮ್ಮ ಕೈಲಾದ ಸಹಾಯವನ್ನು ಹೇಗಾದರೂ ಮಾಡಬೇಕೆಂಬುದು ಅವರ ಆಸೆಯಾಗಿತ್ತು. ಹಾಗೆ ವಾಪಸ್ಸಾದ ಮರಿಗೌಡರು ಬೆಂಗಳೂರಿನ ಲಾಲ್ ಬಾಗಿನಲ್ಲಿ ಹುದ್ದೆಯಲ್ಲಿ ಕಾರ್ಯೋನ್ಮುಖರಾದರು.

'ತೋಟಗಾರಿಕೆ ಇಲಾಖೆ ನೇಮಕ'; 'ಅದರ ನಿರ್ದೇಶಕರಾಗಿ' ಬದಲಾಯಿಸಿ

ಸರ್ಕಾರವು ೧೯೬೩ ರಲ್ಲಿ ಮೈಸೂರು-ಸರ್ಕಾರದವರು, ಕೃಷಿ ಇಲಾಖೆಯಿಂದ ತೋಟಗಾರಿಕೆಯನ್ನು ಬೇರ್ಪಡಿಸಿ, ಪ್ರತ್ಯೇಕ ಇಲಾಖೆಯನ್ನು ರಚಿಸಿದರು. ಆಗ ಡಾ.ಮರಿಗೌಡರು ತೋಟಗಾರಿಕೆ ಇಲಾಖೆಗೆ ನಿರ್ದೇಶಕರಾಗಿ, ನೇಮಿಸಲ್ಪಟ್ಟರು. ತೋಟಗಾರಿಕೆಯ ಹವ್ಯಾಸ ಮೊದಲು ಸ್ಥಿತಿವಂತರ ಹವ್ಯಾಸ ವೃತ್ತಿಯಾಗಿತ್ತು. ಮರಿಗೌಡರು ಅದನ್ನು ಸಾಮನ್ಯ ಜನರಿಗೆ ಎಟುಕುವಂತೆ ಮಾಡಿದರು. ಆಗ ಅದು ರಾಜ್ಯದ ಪ್ರಮುಖ ವೃತ್ತಿಯಾಯಿತು. ರಾಜ್ಯದ ಉದ್ದಗಲಕ್ಕೂ ತೋಟಗಾರಿಕೆ ಬೆಳೆಗಳ ಬೇಸಾಯವು ವಿಸ್ತರಿಸಿ ಹಣ್ಣು, ತರಕಾರಿ, ಫಲಪುಷ್ಪಗಳು ಜನಸಾಮಾನ್ಯರಿಗೂ ಸುಲಭವಾಗಿ ಸಿಗುವಂತಾಯಿತು. ಅನೇಕ ಹೊಸ ಸೊಪ್ಪಿನ ಜಾತಿಯ ಬೀಜಗಳನ್ನೂ, ಗಿಡಗಳನ್ನೂ ರೈತರಿಗೆ ಉಚಿತವಾಗಿ ದೊರಕುವಂತೆ ವ್ಯವಸ್ಥೆಮಾಡಿದರು. ರೈತ ಸಮುದಾಯಕ್ಕೆ ಇದರಿಂದ ಬಹಳ ಉಪಕಾರವಾಯಿತು. ಅವರು ತಮ್ಮ ಆದಾಯವನ್ನು ಹೆಚ್ಚಿಸಿಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಂಡರು. ತೋಟಗಾರಿಲೆ ಬೆಳವಣಿಗೆಗೆ ಹೊಸಆಯಾಮವನ್ನು ನೀಡಲು, "ತೋಟಗಾರಿಕೆಯ ೪ ಅಂಗಗಳ ಅಭಿವೃದ್ಧಿ," ಎಂಬ ಮಾದರಿ ಕಲ್ಪನೆಗೆ ಮೂರ್ತರೂಪ ನೀಡಿದರು. ಈ ಚಿಂತನೆಯ ಅಂಗವಾಗಿ ಅವರು ತೋಟಗಾರಿಕೆ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ, ಬೆಂಗಳೂರು ನರ್ಸರಿದಾರರ ಸಹಕಾರಿ ಸಂಘಗಳನ್ನು ಹುಟ್ಟುಹಾಕಿದರು.

ತೋಟಗಾರಿಕೆಯ ಬಗ್ಗೆ ಸಮಗ್ರ ಅಭಿವೃದ್ಧಿ ವ್ಯವಸ್ಥೆ ಬದಲಾಯಿಸಿ

ಉತ್ತಮ ಜಾತಿಯ ತೋಟಗಾರಿಕಾ ಬೆಳೆಗಳನ್ನು ಪ್ರಾತ್ಯಕ್ಷಿಕೆಯ ರೂಪದಲ್ಲಿ ರೈತರಿಗೆ ಪರಿಚಯಿಸುವುದು, ಜೊತೆಗೆ ಬೆಳೆಗಳ ಸಸ್ಯಾಭಿವೃದ್ಧಿ ಮಾಡಿ, ರೈತರಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಸಸಿ, ಕಸಿ ಬೀಜಗಳನು ವಿತರಿಸುವುದೆ ಅದರ ಅ ಮುಖ್ಯ ಧ್ಯೇಯ. "ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘ,"ಗಳ ಸಹಯೋಗದೊಡನೆ ತೋಟಗಾರಿಕೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಪ್ರಾರಂಭಿಸಿದವು. ತಮ್ಮ ಜೀವಾವಧಿಯಲ್ಲಿ ಕರ್ನಾಟಕದ ರಾಜ್ಯದಾಂತ ೩೮೦ ಕ್ಕೂ ಹೆಚ್ಚು, 'ತೋಟಗಾರಿಕೆ ಕ್ಷೇತ್ರ,' ಹಾಗೂ 'ನರ್ಸರಿ'ಗಳನ್ನು ಸ್ಥಾಪಿಸಿದರು.

ವೈಜ್ಞಾನಿಕ ತೋಟಗಾರಿಕೆಗೆ ಒತ್ತು ಕೊಟ್ಟರು ಬದಲಾಯಿಸಿ

ಮರಿಗೌಡರು ಕನಸು ಕಂಡಿದ್ದು, ಎಲ್ಲಾ ಜಿಲ್ಲೆಗಳ ಎಲ್ಲಾ ತಾಲ್ಲೂಕಿನಲ್ಲಿ ಕನಿಷ್ಠ ಒದು ಕ್ಷೇತ್ರ ಅಥವಾ ನರ್ಸರಿಯಿಂದಾಗಿ ರಾಜ್ಯದ ತೋಟಗಾರಿಕಾ ಆಸಕ್ತರಿಗೆ ಸುಲಭವಾಗಿ ಸಸಿಗಳು ದೊರೆಯುವಂತಾಯಿತು. ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯಲ್ಲಿ, ಬೆಳ್ಳಾರ ಮತ್ತು ಮಂಡ್ಯ, ಜಿಲ್ಲೆಯ ಕೃಷ್ಣರಾಜಸಾಗರದಲ್ಲಿ, ತೆಂಗಿನ ಸಂಕರಣತಳಿಗಳ ಉತ್ಪದನಾ ತಾಕನ್ನು ನಿರ್ಮಿಸಿದರು. ಆಧುನಿಕ ತೋಟಗಾರಿಕೆಗೆ ವೈಜ್ಞಾನಿಕ ತಳಹದಿಯ ಆವಶ್ಯಕತೆಯನ್ನು ಮನಗಂಡಿದ್ದ ಅವರು, ಸಂಶೋಧನೆಯ ಬೆಂಬಲ ವನ್ನು ನೀಡಲು ಎಲ್ಲಾ ಸಂಶೋಧನಾಕೇಂದ್ರಗಳ ಜೊತೆ ನಿಕಟ ಸಂಪರ್ಕವನ್ನು ಇಟ್ಟುಕೊಂಡಿದ್ದರು.

ಲಾಲ್ ಬಾಗ್ ಉದ್ಯಾನವನದಲ್ಲಿ, ಸಸ್ಯ ಸಂರಕ್ಷಣೆಯ ವಿಭಾಗ, ಮತ್ತು ಕೃತಕ ಒಣಗಿಸುವ ಘಟಕದ ಸ್ಥಾಪನೆ ಬದಲಾಯಿಸಿ

ತೋಟಗಾರಿಕೆ ಇಲಾಖೆಯಲ್ಲಿ ಸುಸಜ್ಜಿತ ಮಣ್ಣು-ನೀರು ಪರೀಕ್ಷಾ ಪ್ರಯೋಗಾಲಯ, ಮತ್ತು ಸಸ್ಯ ಸಂರಕ್ಷಣೆ ಪ್ರಯೋಗಶಾಲೆಗಳನ್ನು ಸ್ಥಾಪಿಸಿದರು. "ಸುಸಜ್ಜಿತ ಹಣ್ಣು ಮತ್ತು ತರಕಾರಿ ಸಂರಕ್ಷಣೆ," ಮತ್ತು "ಸಂರಕ್ಷಣಾ ವಿಭಾಗ,"ವನ್ನು ಲಾಲ್ ಬಾಗ್ ನಲ್ಲಿ ತೆರೆದರು. ಈ ವಿಭಾಗದಲ್ಲಿ ಒಂದು ಕೃತಕ ಹಣ್ಣು ತರಕಾರಿಗಳನ್ನು ಒಣಗಿಸಿ ಸಂರಕ್ಷಿಸುವ ಉದ್ದೇಶ್ಯದಿಂದ ಒಂದು 'ಕೃತಕ ಒಣಗಿಸುವ ಘಟಕ" ವನ್ನು ಅಳವಡಿಸಿದರು. ಇಲ್ಲಿ ತರಬೇತಿಯನ್ನು ರೈತರು, ಆಸಕ್ತರು, ನಗರ, ಹಳ್ಳಿಗಳ ಯುವಕ ಯುವತಿಯರಿಗೆ, ಉದ್ಯೋಗಾವಕಾಶದ ಅನುಕೂಲವಾಯಿತು.

’ಒಣತೋಟಗಾರಿಕೆ ಪ್ರವರ್ತಕ” ; ’ಬಹುಮಹಡಿವ್ಯವಸಾಯ ಪದ್ಧತಿ”ಯಲ್ಲಿ ಪ್ರಮುಖ ಆಸಕ್ತ’ ಬದಲಾಯಿಸಿ

ತೋಟಗಾರಿಕೆಯ ಮೂಲಕ, ಒಣ ಭೂಮಿಯಲ್ಲಿ ಬರಗಾಲದ ಬವಣೆ ಮತ್ತು ಅರ್ಥಿಕ ಸಂಕಷ್ಟಗಳಿಂದ ತಪ್ಪಿಸಬಹುದೆಂದು ಯೋಚಿಸಿ, ರಾಜ್ಯದಾದ್ಯಂತ ಅದಕ್ಕೆ ಒತ್ತು ಕೊಟ್ಟರು. ಈಗ ಕರ್ನಾಟಕದಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಕಂಡುಬರುತ್ತದೆ. ಸೊಪ್ಪುಗಳನ್ನು, ಅದರಲ್ಲೂ "ಚಕ್ರಮುನಿ," ಯೆಂಬ ಸಸ್ಯವನ್ನು ಜನಪ್ರಿಯ ಮಾಡಲು ಅವರ ಮಾಡಿದ ಪ್ರಯತ್ನ ಅಸಾಧಾರಣವಾದುದು. ಜಿಲ್ಲೆಗಳಲ್ಲೆಲ್ಲಾ ತೋಟಗಾರಿಕ ತರಭೇತಿ ಕೆಂದ್ರಗಳ ಸ್ಥಾಪನೆ. ನಿರುದ್ಯೋಗಿಗಳಿಗೆ ತೋಟಗಾರಿಕೆ ನರ್ಸರಿ ಮಾಡಲು ಸಲಹೆಮಾಡಿದರು. ೬ ಸುಸಜ್ಜಿತ ನರ್ಸರಿಗಳು ಅಸ್ತಿತ್ವದಲ್ಲಿವೆ. ತೋಟಗಾರಿಕಾ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ರಾಜ್ಯದ ಹಿತದೃಷ್ಟಿಯಿಂದ ತಮಗೆ ಸರಿ ಕಂಡಿದ್ದನ್ನು ಕೃತಿಗಿಳಿಸಲು ಹಿಂಜರಿಯದ ನಿಷ್ಠುರ ಸ್ವಭಾವದವರು. ಸ್ವತಃ ಪ್ರಾಮಾಣಿಕರಾದ ಮರಿಗೌಡರು, ಎಲ್ಲರಿಗೂ ಅದನ್ನೆ ಬೋಧಿಸುತ್ತಿದ್ದರು. ಹೊಗಳಿಕೆ, ಸನ್ಮಾನ, ಪ್ರಶಸ್ತಿಗಳಿಂದ ದೂರವಿರುವ ಸ್ವಭಾವ ಅವರದು. ಅಧಿಕಾರಿಗಳು, ಯುವಕರುಗಳಿಗೆ ಜೀವನದಲ್ಲಿ ಶಿಸ್ತು, ಕಠಿಣ ಪರಿಶ್ರಮ, ಪ್ರಾಮಾಣಿಕತೆಗಳ ಅಗತ್ಯತೆಗಳನ್ನು ಒತ್ತಿ ಹೇಳುತ್ತಿದ್ದರು.

ತೋಟಗಾರಿಕೆ ಅವರ ಜೀವನದ ಉಸಿರಾಗಿತ್ತು ಬದಲಾಯಿಸಿ

೧೯೭೪ರಲ್ಲಿ, ಮರಿಗೌಡರು ನಿವೃತ್ತರಾದರು. ತೋಟಗಾರಿಕೆಯ ಅಭಿವೃದ್ಧಿಗಾಗಿ ಅನಂತರವೂ ತಮ್ಮನ್ನು ತಾವೇ ಸದಾ ತೊಡಗಿಸಿಕೊಂಡಿದ್ದರು. ಅವರು ನಡೆದುಕೊಂಡ ರೀತಿ, "ತೋಟಗಾರಿಕೆಯೇ ಅವರ ಉಸಿರು ಎಂಬಂತಿತ್ತು". ಇಂತಹ ಕರ್ತವ್ಯಶಾಲಿ ಮರಿಗೌಡರು, ೧೯೯೪ ರಲ್ಲಿ ಅಸ್ತಂಗತರಾದರು.

ಉಲ್ಲೇಖಗಳು ಬದಲಾಯಿಸಿ