ಅಶೋಕ್ ಕುಮಾರ್ (ವ್ಯಂಗ್ಯ ಚಿತ್ರಕಾರ)
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಮೂಲತಃ ಕಾಸರಗೋಡಿನ ಹತ್ತಿರದ ಅಡೂರಿನವರಾದ ಅಶೋಕರು,ಬಜಪೆ ಸುಂಕದಕಟ್ಟೆ ಪಾಲಿಟೆಕ್ನಿಕ್ ನಲ್ಲಿ ವೃತ್ತಿ ಜೀವನ ಆರಂಭಿಸಿದರು. ಅಶೋಕ್ ಕುಮಾರರು, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುಮಾರು ಎರಡು ದಶಕಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. 'ಉದಯವಾಣಿ ದಿನಪತ್ರಿಕೆಯ ಸೋಮವಾರದ ಅಂಕಣ 'ನಿಸ್ತಂತು ಸಂಸಾರ'ವನ್ನು ಬರೆಯುತ್ತಾ ಬಂದಿದ್ದರು.ಡಾ.ಅಶೋಕ್ ಹಲವಾರು ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಲೇಖನ, ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್ದರು.
ಪರಿವಾರ
ಬದಲಾಯಿಸಿಡಾ.ಅಶೋಕ್ ಅಂಬಲಪಾಡಿ ವಾಸಿ,ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ 'ಎ.ಎಸ್.ಕಲ್ಲೂರರ ಪುತ್ರ'.ಡಾ.ಅಶೋಕರು, ವೈಜ್ಞಾನಿಕ ಲೇಖನಗಳನ್ನು ನಿಯತಕಾಲಿಕೆಗಳಲ್ಲಿ ಬರೆಯುತ್ತಿದ್ದರು.ವ್ಯಂಗ್ಯ ಚಿತ್ರ ಬರೆಯುವುದು ಅವರ ಹಲವಾರು ಹವ್ಯಾಸಗಳಲ್ಲೊಂದಾಗಿತ್ತು.
ನಿಧನ
ಬದಲಾಯಿಸಿ೪೭ ವರ್ಷದ ಹರೆಯದ ಡಾ. ಅಶೋಕ್ ಕುಮಾರ್, ಸ್ವಲ್ಪದಿನಗಳಿಂದ ಅಸ್ವಸ್ಥರಾಗಿದ್ದರು. ಸನ್. ೨೦೧೩ ಏಪ್ರಿಲ್ ೨೭ ರಂದು ನಿಧನರಾದರು[೧]. ಅವರು ಮದುವೆಮಾಡಿಕೊಂಡಿರಲಿಲ್ಲ. ತಂದೆ, ತಾಯಿ, ಅಕ್ಕ, ತಂಗಿ ಮತ್ತು ತಮ್ಮನನ್ನು ಅಗಲಿ ಹೋಗಿದ್ದಾರೆ.
ಬಾಹ್ಯ ಸಂಪರ್ಕ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2013-05-01. Retrieved 2013-04-29.
- ↑ http://ashok567.blogspot.in/
- ↑ "ಆರ್ಕೈವ್ ನಕಲು". Archived from the original on 2013-09-05. Retrieved 2013-04-29.