ಅಯ್ಯಪ್ಪ ದೊರೆ

(ಡಾ. ಅಯ್ಯಪ್ಪ ದೊರೆ ಇಂದ ಪುನರ್ನಿರ್ದೇಶಿತ)

ಅಯ್ಯಪ್ಪ ದೊರೆಯವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮದವರಾದ ಅವರು ಶಿಕ್ಷಣ ತಜ್ಞರಾಗಿದ್ದರು.

ಅಯ್ಯಪ್ಪ ದೊರೆ
ಜನನಫೇಬ್ರವರಿ 11ನೇ, 1965
ಸರೂರ, ಮುದ್ದೇಬಿಹಾಳ, ವಿಜಯಪುರ
ಮರಣಅಕ್ಟೋಬರ್ 15, 2019
ವೃತ್ತಿಉಪನ್ಯಾಸಕ, ಉಪ ಕುಲಪತಿ ಹಾಗೂ ಹೋರಾಟಗಾರ

ವಿದ್ಯಾಭ್ಯಾಸ

ಬದಲಾಯಿಸಿ

ಪ್ರಾಥಮಿಕ ಶಿಕ್ಷಣವನ್ನು ಸರೂರ ಗ್ರಾಮದಲ್ಲಿ ಮುಗಿಸಿ, ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ಬಾಗಲಕೋಟ ಜಿಲ್ಲೆಯ ಹಳ್ಳೂರಿನಲ್ಲಿ ಪೂರೈಸಿ ನಂತರ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ಸೇರಿದರು.

ಗ್ರಾಮೀಣಾಭಿವೃದ್ಧಿ, ಗ್ರಂಥಾಲಯ, ಮಾಹಿತಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವ್ಯವಹಾರ ನಿರ್ವಹಣೆಯಲ್ಲಿ ಡಾಕ್ಟರೇಟ್ ಗಳಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಕಾರ್ಯದರ್ಶಿ ಮತ್ತು ಸಿಂಡಿಕೇಟ್ ಸದಸ್ಯರಾಗಿ ಕೂಡಾ ಕಾರ್ಯನಿರ್ವಹಿಸಿದ್ದರು. ಎನ್ ಸಿಸಿ ಮತ್ತು ಆರ್ಮಿ ಅಟ್ಯಾಚ್ಮೆಂಟ್ ಟ್ರಕಿಂಗ್ ನಲ್ಲಿ ಚಿನ್ನದ ಪದಕ ಪಡೆದಿದ್ದರು.

ತಮ್ಮ ಸೇವಾವಧಿಯಲ್ಲಿ ಪಡೆದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸಿದ ಮಾದರಿ ವ್ಯಕ್ತಿಯಾಗಿದ್ದಾರೆ.[]

ಉಪ ಕುಲಪತಿ

ಬದಲಾಯಿಸಿ

ನಾಲ್ಕು ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಅಲಾಯನ್ಸ್ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದ ಇವರು, ಸಾರ್ವಜನಿಕ ಸೇವೆಗೆ ಧುಮುಕುವ ಇಚ್ಛೆಯಿಂದ ವಿವಿ ಉಪ ಕುಲಪತಿ ಹುದ್ದೆಯನ್ನು ತೊರೆದರು.

ಮಹಾದಾಯಿ ನೀರನ್ನು ಕಳಸಾ ಬಂಡೂರಿ ನಾಲೆ ಮೂಲಕ ಮಲಪ್ರಭೆಗೆ ಹರಿಸಲೇಬೇಕು ಎಂದು ಪಣತೊಟ್ಟು, ರೈತರ ಹೋರಾಟದಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದಾರೆ. ಇದಲ್ಲದೆ, ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಕೈಜೋಡಿಸಿದ್ದಾರೆ.

ಶಿವರಾಮ ಕಾರಂತ ಡಿನೋಟಿಫಿಕೇಷನ್ ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಎಸಿಬಿಗೆ ದೂರು ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ಈ ಮೂಲಕ ಭ್ರಷ್ಟಾಚಾರ ವಿರೋಧಿ ಹೋರಾಟ ಮುಂದುವರೆಸಿದ್ದಾರೆ.

ರಾಜಕೀಯ

ಬದಲಾಯಿಸಿ

೨೦೧೮ ರಲ್ಲಿ ಕರ್ನಾಟಕ ವಿಧಾನ ಸಭೆಯ ಚುಣಾವನೆಯ ಸಂದರ್ಭದಲ್ಲಿ ಜನ ಸಾಮನ್ಯರ ಪಕ್ಷ ಸ್ಥಾಪಿಸಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು.[]h

ಅಲಾಯನ್ಸ್ ವಿಶ್ವವಿದ್ಯಾಲಯದ ಸಹೋದರರ ವ್ಯಾಜ್ಯದಲ್ಲಿ ಅಯ್ಯಪ್ಪ ದೊರೆಯವರು ೧೫ನೇ ಅಕ್ಟೋಬರ್ ೨೦೧೯ರಲ್ಲಿ ಕೊಲೆಯಾದರು. []

ಉಲ್ಲೇಖ

ಬದಲಾಯಿಸಿ
  1. https://www.prajavani.net/district/ayyappa-murder-674331.html
  2. "ಆರ್ಕೈವ್ ನಕಲು". Archived from the original on 2019-11-07. Retrieved 2019-10-18.
  3. https://kannada.oneindia.com/news/bengaluru/dr-ayyappa-dore-murder-case-sudhir-g-angur-arrested-177614.html

ವಿಜಯಪುರ

ಕರ್ನಾಟಕ