ರಾಮಲಿಂಗಪ್ಪ ಟಿ.ಬೇಗೂರು

(ಡಾ.ರಾಮಲಿಂಗಪ್ಪ ಟಿ.ಬೇಗೂರು ಇಂದ ಪುನರ್ನಿರ್ದೇಶಿತ)

ಕನ್ನಡ ಸಾಹಿತ್ಯದಲ್ಲಿ ಹೆಸರು ಮಾಡಿರುವ ಡಾ.ರಾಮಲಿಂಗಪ್ಪ ಟಿ. ಬೇಗೂರು ಇವರು ಬೆಂಗಳೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕನ್ನಡ ಕಾವ್ಯ, ವಿಮರ್ಶೆ, ಅನುವಾದ, ವಿಚಾರ ಸಾಹಿತ್ಯ, ಸಂಪಾದನೆ ಕ್ಷೇತ್ರದಲ್ಲಿ ಪರಿಶ್ರಮ ಇರುವ ಇವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ನುಡಿ ನಾಡಿ ಬಳಗ, ಪರಸ್ಪರ ಬಳಗ, ಡಾ.ಎಲ್.ಬಸವರಾಜು ಟ್ರಸ್ಟ್ ಹೀಗೆ ಹಲವು ಕಡೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೊಸತು (ನವಕರ್ನಾಟಕ ಪಬ್ಲಿಕೇಶನ್ಸ್) ಮಾಸಪತ್ರಿಕೆಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಲಿಪಿಲಿ ಮಕ್ಕಳ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಬಾಲ್ಯ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

ನೆಲಮಂಗಲ ತಾಲ್ಲೂಕಿನ ತೆಪ್ಪದ ಬೇಗೂರು ಗ್ರಾಮದಲ್ಲಿ ಜನಿಸಿದ ಡಾ.ರಾಮಲಿಂಗಪ್ಪ. ಟಿ. ಬೇಗೂರು ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟಿದ ಊರಿನಲ್ಲೆ ಮಾಡಿದರು. ಪದವಿಯನ್ನು ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ಮುಗಿಸಿದರು. ನಂತರ ಎಂ.ಎ. ಪದವಿಯನ್ನು ಪ್ರಥಮ ರಯಾಂಕ್ ಮತ್ತು ಆರು ಚಿನ್ನದ ಪದಕಗಳೊಂದಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು. ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಇರುವಾಗ ಕ್ರೈಸ್ತ್ ಕಾಲೇಜು ಕನ್ನಡ ಸಂಘದ ರಾಜ್ಯ ಮಟ್ಟದ ಕವಿತಾ ಸ್ಪರ್ಧೆಯಲ್ಲಿ ನಿರಂತರ ಬಹುಮಾನ ಗಳಿಸಿದರು. ಕನ್ನಡ ವಿಶ್ವವಿದ್ಯಾಲಯ ಹಂಪಿ ಇಲ್ಲಿನಿಂದ ಕನ್ನಡ ವಿಮರ್ಶೆಯ ವಿನ್ಯಾಸ[] ಮತ್ತು ತಾತ್ವಕತೆ ಎಂಬ ವಿಷಯದಲ್ಲಿ ಸಂಶೋದನೆ ನಡೆಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ.

ವೃತ್ತಿ ಜೀವನ

ಬದಲಾಯಿಸಿ

ಬೆಂಗಳೂರಿನ ಕ್ರೈಸ್ತ್ ಕಾಲೇಜಿನಲ್ಲಿ ಮೊದಲಿಗೆ ಕನ್ನಡ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದರು. ಆನಂತರ ಕರ್ನಾಟಕ ಲೋಕ ಸೇವಾ ಆಯೋಗದಿಂದ ಆಯ್ಕೆ ಆಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ ಇಲ್ಲಿ ಉಪನ್ಯಾಸಕರಾಗಿ ಸೇರಿದರು. ಆನಂತರ ಕುಕನೂರು (ಕೊಪ್ಪಳ ಜಿಲ್ಲೆ), ಕೋಲಾರ, ಚಿಂತಾಮಣಿಗಳಲ್ಲಿ ಸೇವೆ ಸಲ್ಲಿಸಿ ಸದ್ಯ ಬೆಂಗಳೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾರೋಹಳ್ಳಿಯಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವು ಪದವಿ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಬೆಂಗಳೂರಿನ ಕಾವ್ಯಮಂಡಲ (ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಸಂಶೋಧನಾ ಸಂಸ್ಥೆ) ಇಲ್ಲಿ ಎಂ. ಫಿಲ್. ಮತ್ತು ಪಿಎಚ್. ಡಿ. ಬೋಧಕರಾಗಿ ಮತ್ತು ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. [ಸೂಕ್ತ ಉಲ್ಲೇಖನ ಬೇಕು]

ಕೃತಿಗಳು

ಬದಲಾಯಿಸಿ
  1. ಮಾಯಾಪಾತಾಳ (ಕವನಸಂಕಲನ-ಅಭಿನವ ಪ್ರಕಾಶನ. ಬೆಂಗಳೂರು)
  2. . ಎಡ್ವರ್ಡ್ ಸೈದ್ ಮತ್ತು ಆತನ ಇತಿಹಾಸದ ಬರವಣಿಗೆ (ಅನುವಾದ-ಕಾವ್ಯಮಂಡಲ, ಬೆಂಗಳೂರು)
  3. . ಮಾರ್ಗಾಂತರ (ವಿಮರ್ಶಾ ಲೇಖನಗಳ ಸಂಗ್ರಹ-ಸಿ.ವಿ.ಜಿ. ಪ್ರಕಾಶನ, ಬೆಂಗಳೂರು)
  4. . ಸಂಕರ ಬಂಡಿ (ಕವನಸಂಕಲನ-ಮುದ್ದಪ್ಪ ಸ್ಮಾರಕ ಟ್ರಸ್ಟ್, ಬೆಂಗಳೂರು)
  5. . ಪರಕಾಯ[] (ವಿಚಾರಲೇಖನಗಳ ಸಂಕಲನ-ನವಕರ್ನಾಟಕ ಪ್ರಕಾಶನ, ಬೆಂಗಳೂರು)
  6. . ಅಲ್ಲಮಪ್ರಭು : ಆಧುನಿಕ ಪೂರ್ವ ಅನುಸಂಧಾನಗಳು (ಸಂಶೋಧನೆ-ಕನ್ನಡ ವಿ.ವಿ. ಹಂಪಿ)
  7. . ಒಂದು ದಶಕದ ಸಂಶೋಧನೆ: ಕಿರುನೋಟ (ಸಂಶೋಧನೆ-ಕಣಜ ಡಾಟ್ ಕಾಮ್)
  8. . ತೌಲನಿಕ ಸಾಹಿತ್ಯ (ಅನುವಾದ ಮತ್ತು ಸಹಸಂಪಾದನೆ-ಅಧ್ಯಯನ ಮಂಡಲ, ಬೆಂಗಳೂರು)
  9. . ಸಂಗಾತಿ (ಡಾ.ಜಿ.ರಾಮಕೃಷ್ಣ ಅಭಿನಂದನ ಗ್ರಂಥ, ಸಹಸಂಪಾದನೆ, ಅಭಿನಂದನ ಸಮಿತಿ ಬೆಂಗಳೂರು)
  10. . ಕುವೆಂಪು ನೂರು ಮಾಲಿಕೆಯಲ್ಲಿ 120 ಪುಸ್ತಕಗಳಿಗು ಹೆಚ್ಚು ಪುಸ್ತಕಗಳ ಸಹಸಂಪಾದನೆ
  11. . ಮಹಿಳೆ: ಚರಿತ್ರೆ, ಪುರಾಣ (ಸಂಶೋಧನೆ, ವಿಮರ್ಶೆ- ಅಂಕಿತ ಪುಸ್ತಕ, ಬೆಂಗಳೂರು). []
  12. . ನಾಟಕ ದಂಗೆ (ಕುವೆಂಪು ನಾಟಕಗಳ ಕುರಿತ ವಿಮರ್ಶೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು).
  13. . ನುಡಿಯಾಟ (ಸಂಶೋಧನಾ ಲೇಖನಗಳು, ಸಪ್ನ ಬುಕ್ ಹೌಸ್, ಬೆಂಗಳೂರು).
  14. . ಪ್ರಾಚೀನ ಸಾಹಿತ್ಯ (ಕನ್ನಡ ಜಾಣ ಪಠ್ಯ.ಸಂಪಾದಿತ. ಕಸಾಪ, ಬೆಂಗಳೂರು).
  15. . ನಡುಗನ್ನಡ ಸಾಹಿತ್ಯ ( ಕನ್ನಡ ರತ್ನ ಪಠ್ಯಪುಸ್ತಕ, ಕಸಾಪ, ಬೆಂಗಳೂರು).
  16. . ದಾರಿದೀಪ (ಶ್ರೀ ಎ.ಕೆ. ಸುಬ್ಬಯ್ಯ ಅವರ ಅಭಿನಂದನಾ ಗ್ರಂಥ, ಸಹಸಂಪಾದನೆ, ಲಡಾಯಿ ಪ್ರಕಾಶನ, ಗದಗ).
  17. . ವರ್ತಮಾನದ ಕಥೆಗಳು (ಕಥಾಸಂಕಲನ, ಸಹಸಂಪಾದನೆ, ಕಣ್ವ ಪ್ರಕಾಶನ, ಬೆಂಗಳೂರು)
  18. . ಸಂದರ್ಬ ಸಮ್ಮಂದ (ವಿಮರ್ಶಾ ಸಂಕಲನ, ಸಿವಿಜಿ ಬುಕ್ಸ್, ಬೆಂಗಳೂರು).
  19. . ಕಗ್ಗತ್ತಲ ಹೃದಯ[]

ಪ್ರಶಸ್ತಿ

ಬದಲಾಯಿಸಿ
  1. ಡಾ.ಜಿ.ಎಸ್.ಎಸ್.ಕಾವ್ಯ ಪ್ರಶಸ್ತಿ
  2. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ [] (ಪ್ರಶಸ್ತಿ).

ಉಲ್ಲೇಖ

ಬದಲಾಯಿಸಿ
  1. http://kanaja.in/?cat=3087
  2. http://aakarabharati.in/php/journalAuth.php?authorname=%E0%B2%B0%E0%B2%BE%E0%B2%AE%E0%B2%B2%E0%B2%BF%E0%B2%82%E0%B2%97%E0%B2%AA%E0%B3%8D%E0%B2%AA+%E0%B2%9F%E0%B2%BF.+%E0%B2%AC%E0%B3%87%E0%B2%97%E0%B3%82%E0%B2%B0%E0%B3%81&journalid=002
  3. "ದತ್ತಿನಿಧಿ". Retrieved 23 ಏಪ್ರಿಲ್ 2019. {{cite web}}: Text "ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ" ignored (help)
  4. http://www.kuvempubhashabharathi.org/book_detail.php?bookID=304
  5. http://m.varthabharati.in/article/2016_09_26/41635