ಪ್ರೀತ ರೆಡ್ಡಿ
ಪ್ರೀತ ರೆಡ್ಡಿ | |
---|---|
Born | ಪ್ರೀತ ರೆಡ್ಡಿ |
Nationality | ಇಂಡಿಯನ್ |
Occupation(s) | ವ್ಯವಸ್ಥಾಪಕ ನಿರ್ದೇಶಕಿ, ಅಪೋಲೋ ಆಸ್ಪತ್ರೆ |
ಜನನ
ಬದಲಾಯಿಸಿಅವರು ೧೯೫೭ರಂದು ಜನಿಸಿದರು. ಅವರ ತಂದೆ ಪ್ರತಾಪ್ ಸಿ ರೆಡ್ಡಿ, ತಾಯಿ ಸುಚರಿತ ಹಾಗೂ ಅವರ ಪತಿ ವಿಜಯ್ ಕುಮಾರ್ ರೆಡ್ಡಿ.
ಶಿಕ್ಷಣ
ಬದಲಾಯಿಸಿಪ್ರೀತ ರೆಡ್ಡಿ ಅವರು ಪ್ರಕಾಶಮಾನವಾದ ವಿದ್ಯಾರ್ಥಿಯಾಗಿದ್ದರು. ಅವರು ಚೆನೈ ವಿಶ್ವವಿದ್ಯಾಲಯದಿಂದ ತಮ್ಮ ಬ್ಯಾಚುಲರ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹತ್ತೊಂಬತ್ತರ ಎಳೆಯ ವಯಸ್ಸಿನಲ್ಲಿಯೇ ತಮ್ಮ ವ್ಯಾಸಂಗ ಮುಗಿಸಿದ ತಕ್ಷಣವೇ ಕೈಗಾರಿಕೋದ್ಯಮಿಯಾದ ವಿಜಯ್ ಕುಮಾರ್ ರೆಡ್ಡಿ ಅವರೊಂದಿಗೆ ವಿವಾಹರಾದರು. ನಂತರ, ಅವರು ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಪ್ರೀತ ರೆಡ್ಡಿ ಅವರ ತಂದೆಯಾದ ಡಾ.ಪ್ರತಾಪ್ ಸಿ ರೆಡ್ಡಿ ತಾನು ಹೆಣ್ಣು ಎಂದು ಭಯ ಪಡಬಾರದೆಂದು ಹಾಗೂ ಸಮಾಜವು ಒಡ್ಡುವ ಸವಾಲುಗಳನ್ನು ಎದುರಿಸಬೇಕೆಂದು ಹೇಳಿಕೊಟ್ಟರು. ಪ್ರೀತ ರೆಡ್ಡಿ ಅವರಿಗೆ ವಿಜ್ಞಾನ ಮತ್ತು ನಿರ್ವಹಣೆ ಪಾತ್ರಗಳಲ್ಲಿ ಆಸಕ್ತಿ ಇದ್ದುದರ ಕಾರಣ ಆಕೆ ಮದ್ರಾಸ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ಟೆಲ್ಲಾ ಮೇರಿಸ್ ಕಾಲೇಜ್ ಚೆನೈ ಮತ್ತು ಕೆಮಿಸ್ಟ್ರಿಯಲ್ಲಿ ಬ್ಯಾಚುಲರ್ ಡಿಗ್ರಿ ಮುಗಿಸಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ನಂತರ, ಅವರು ಆರೋಗ್ಯ ಕೇಂದ್ರದಲ್ಲಿ ನೀಡಿದ ಅದ್ಭುತ ಕೊಡಿಗೆಗಳಿಗಾಗಿ ವೈದ್ಯಕೀಯ ವಿಶ್ವವಿದ್ಯಾಲಯವಾದ ಡಾ. ಎಂ.ಜಿ.ಆರ್, ವಿಜ್ಞಾನ ಪದವಿಯನ್ನು ಪ್ರೀತ ರೆಡ್ಡಿ ಅವರಿಗೆ ನೀಡಿ ಅವರನ್ನು ಡಾಕ್ಟರ್ ಎಂದು ಗೌರವಿಸಲಾಯಿತು.
ಹವ್ಯಾಸಗಳು
ಬದಲಾಯಿಸಿಪ್ರೀತ ರೆಡ್ಡಿ ಅವರ ತಾಯಿ ಸುಚರಿತ ಅವರಿಗೆ ಮೃದು ಕೌಶಲ್ಯವನ್ನು ಹಾಗೂ ನೃತ್ಯವನ್ನು ತರಬೇತಿ ನೀಡಿದ್ದರು. ಪ್ರೀತ ರೆಡ್ಡಿ ಅವರು ಭರತನಾಟ್ಯ ನೃತ್ಯಗಾರ್ತಿಯಾಗಿ ನಿಪುಣರಾಗಿದ್ದರು ಹಾಗೂ ತಮ್ಮ ನಾಲ್ಕು ಸಹೋದರಿಯರು ಇಂದಿಗೂ ಪರಸ್ಪರ ಸನಿಹವಾಗಿದ್ದಾರೆ.
ಉದ್ಯೋಗ
ಬದಲಾಯಿಸಿ೧೯೮೯ರವರೆಗೆ, ಪ್ರೀತ ರೆಡ್ಡಿ ಅವರು ತಮ್ಮ ಇಬ್ಬರ ಪುತ್ರರಿಗೆ ಪೂರ್ಣಾವಧಿಯ ತಾಯಿಯ ಪಾತ್ರವನ್ನು ವಹಿಸಿದರು. ಅವರು ಜಾಹಿರಾತು ಸಂಸ್ಥೆಯಲ್ಲಿ ತಮ್ಮ ಕೆಲಸವನ್ನು ಆರಂಭಿಸಿದರು. ಅವರ ತಂದೆ ಡಾ.ರೆಡ್ಡಿ ಅವರು ವಯಸ್ಸಾದ ಕಾರಣ ಅವರಿಗೆ ಬೆಂಬಲವನ್ನು ನೀಡುವುದು ಅಗತ್ಯವೆಂದು ಅರಿತುಕೊಂಡು ಪ್ರೀತ ರೆಡ್ಡಿ ಅವರು ಅಪೋಲೋ ಕುಟುಂಬ ಸೇರಿದರು. ೧೯೯೪ರಂದು, ವ್ಯವಸ್ಥಾಪಕ ನಿರ್ದೇಶಕರಾದ ತನ್ನ ತಂದೆಯೂ ಉತ್ತರಾಧಿಕಾರಿಯಾಗಿ ಪ್ರೀತ ರೆಡ್ಡಿ ಅವರನ್ನು ಘೋಷಿಸಿದರು. ಡಾ.ಪ್ರೀತ ರೆಡ್ಡಿ ಅವರಿಗೆ ತಮ್ಮ ಉದ್ದೇಶ ಹಾಗೂ ತನ್ನ ಗುರಿಗಳಿಗೆ ಹೆಚ್ಚು ಒತ್ತನ್ನು ನೀಡಿರುವ ಕಾರಣ ಅವರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಿದ್ದಾರೆ. ಅವರು ಭಾರತದಲ್ಲಿ ಆರೋಗ್ಯ ಕ್ಷೇತ್ರವನ್ನು ಹೆಚ್ಚಿಸಲು ನಿರ್ಧಾರಗೊಂಡರು. ಯಶಸ್ಸು ಗಳಿಸಿದ ನಂತರ, ಅವರು ಸಮಾಜದಲ್ಲಿರುವ ಅನಾಥರನ್ನು ಹಾಗೂ ಬಡವರನ್ನು ಮರೆಯಲಿಲ್ಲ, ಆದ್ದರಿಂದ ಅವರು ರೋಗಗಳ ಬಗ್ಗೆ ಸ್ವಸ್ಥ ಆರೋಗ್ಯ ಉಪಕ್ರಮಗಳನ್ನು ಹೊಂದಿದ್ದರು. ಹಾಗೂ ಬಡವರಿಗಾಗಿಯೇ ಆರೋಗ್ಯ ಕೇಂದ್ರಗಳನ್ನು ಶೈಕ್ಷಣಿಕ ಕಾರ್ಯಕ್ರಮಗಳನ್ನು ಸ್ಥಾಪಿಸಿದರು. ಈ ಎಲ್ಲಾ ವಿಷಯಗಳನ್ನು ಡಾ.ಪ್ರೀತ ರೆಡ್ಡಿ ಅವರು ತಮ್ಮ ವೃತ್ತಿ ಜೀವನದಲ್ಲಿ ಕಲಿತುಕೊಂಡರು. ಡಾ.ಪ್ರೀತ ರೆಡ್ಡಿ ಅವರು ತಮ್ಮ ಮುಂದಿನ ಹಂತಕ್ಕೆ ತಮ್ಮ ಹೆತ್ತವರ ಉದ್ಯಮಶೀಲತಾ ಸಾಹಸೋದ್ಯಮ ಉದ್ಯೋಗಗಳನ್ನು ಕೈಗೊಂಡ ಎರಡನೇ ತಲೆಮಾರಿಗೆ ಅವರು ಯಶಸ್ವಿ ಹಾಗೂ ಪ್ರಮುಖ ಉದಾಹರಣೆಯಾಗಿದ್ದಾರೆ.
ಅಪೋಲೋ ಆಸ್ಪತ್ರೆಯಲ್ಲಿ ಅವರ ವೃತ್ತಿ ಜೀವನ
ಬದಲಾಯಿಸಿ೧೯೮೩ರಲ್ಲಿ, ಡಾ.ಪ್ರೀತ ರೆಡ್ಡಿ ಅವರ ತಂದೆ ಡಾ.ಪ್ರತಾಪ್ ಸಿ ರೆಡ್ಡಿಯ ಕನಸಿನಂತೆ ಅಪೋಲೋ ಆಸ್ಪತ್ರೆಗೆ ಆಕಾರವನ್ನು ನೀಡಲಾಯಿತು. ಇಂದು, ೫೦ ಆಸ್ಪತ್ರೆಗಳು ಮತ್ತು ವೈದ್ಯಕೀಯ ಮೌಲ್ಯ ಸರಪಳಿಯ ಪ್ರತಿ ಹಂತದಲ್ಲಿಯೂ ಅಡ್ಡವಾಗಿ ೮೫೦೦ ಹಾಸಿಗೆಗಳಿವೆ ಹಾಗೂ ಅಪೋಲೋ ಆಸ್ಪತ್ರೆಯೂ ಏಷ್ಯಾದ ಅತಿ ದೊಡ್ಡ ಆರೋಗ್ಯ ಗುಂಪುಗಳಲ್ಲಿ ಒಂದಾಗಿದೆ[೨]. ಭಾರತವು ಮಹಾನ್ ಉದ್ಯಮಿಗಳಿಗೆ ಹಾಗೂ ವ್ಯಾಪಾರಿ ಮಹಿಳೆಯರಿಗೆ ಜನ್ಮ ನೀಡಿದೆ. ಅವರಲ್ಲಿ ಡಾ.ಪ್ರೀತ ರೆಡ್ಡಿಯೂ ಒಬ್ಬರಾಗಿದ್ದಾರೆ. ಅವರು ಕೇವಲ ಅಪೋಲೋ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಆಗಿಯೂ ಕಾರ್ಯನಿರ್ವಹಿಸುವುದಲ್ಲದೆ ಅದರ ಜೊತೆಯಲ್ಲಿ ಭಾರತದ ಆರೋಗ್ಯ ಉದ್ಯಮ ಪ್ರವರ್ತಕ ವ್ಯಾಪಾರಿ ಮಹಿಳೆಯಾಗಿದ್ದಾರೆ. ಡಾ.ಪ್ರೀತ ರೆಡ್ಡಿಯೂ ಅಪೋಲೋ ಹಾಸ್ಪಿಟಲ್ಸ್ ಗುಂಪಿನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು ಹಾಗೂ ತಮ್ಮ ಸಮಕಾಲೀನ ಮಂದಿಯೊಂದಿಗೆ ಪ್ರೋಟೋಕಾಲ್ಗಳ ಹಾಗೂ ಕ್ಲಿನಿಕಲ್ ಔಟ್ಕಮ್ಸ್ಗಳ ಮೇಲೆ ಬಾರ್ ಸಂಗ್ರಹಿಸಲು ಅಪೋಲೋ ಆಸ್ಪತ್ರೆಯ ಆರೋಗ್ಯ ವೃತ್ತಿಗಾರರೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ.ಪ್ರೀತ ರೆಡ್ಡಿ ತನ್ನ ತಂದೆಯಾದ ಡಾ.ಪ್ರತಾಪ್ ಸಿ ರೆಡ್ಡಿ ಅವರಿಂದ ಮಾರ್ಗದರ್ಶನ ಪಡೆದುಕೊಂಡರುವ್[೩]. ಅವರ ತಂದೆ ಮೊದಲಿಗೆ ಕಾರ್ಪೊರಟೈಸ್ ಆರೋಗ್ಯ ಸಂಸ್ಥೆಯಲ್ಲಿ ಪ್ರವರ್ತಕರಾಗಿದ್ದು ನಂತರ ೧೯೮೯ರಲ್ಲಿ ಅಪೋಲೋ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸ್ಥಿತಿಯಲ್ಲಿ, ಪ್ರೀತ ರೆಡ್ಡಿ ಅವರು ಅಪೋಲೋ ಆಸ್ಪತ್ರೆಯ ಸ್ಪರ್ಧಾತಕತೆಯನ್ನು ಹೆಚ್ಚಿಸಲು ಕಠಿಣವಾದ ಕೆಲಸಗಳನ್ನು ಐದು ವರ್ಷಗಳಲ್ಲಿ ಅಪೋಲೋ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿಯಾದರು. ವ್ಯವಸ್ಥಾಪಕ ನಿರ್ದೇಶಕಿಯಾಗಿ ಅವರು ಚತುಷ್ಕ ಹಾಗೂ ಮೂರನೇ ಮಟ್ಟದ ಚಿಕಿತ್ಸೆ ಆಸ್ಪತ್ರೆಗಳನ್ನು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, ರೋಗ-ನಿರ್ಣಯದ ಆರೋಗ್ಯ ಕೇಂದ್ರಗಳನ್ನು ಹಾಗೂ ಅಪೋಲೋ ಆಸ್ಪತ್ರೆಯ ಬೆಳವಣಿಗೆಗಾಗಿ ಒಂದು ಸಂಪೂರ್ಣ ಹೊಸ ಮಟ್ಟಕ್ಕೆ ಆರೋಗ್ಯ ಸಲಹಾ ವ್ಯಾಪಾರ ಪ್ರಕ್ರಿಯೆ ಕಾರ್ಯಾಚರಣೆಗಳನ್ನು ಹಾಗೂ ಆರೋಗ್ಯ ತಂತ್ರಜ್ಞಾನ ಸೇವೆಗಳನ್ನು ತೆಗೆದುಕೊಂಡರು. ಇದಲ್ಲದೆ ಅಪೋಲೋ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕರಾಗಿ ಪ್ರೀತ ರೆಡ್ಡಿ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸಿಕೊಂಡು ಹೋಗುವಲ್ಲಿ ಯಶಸ್ವಿಯಾದರು ಹಾಗೂ ಆರೋಗ್ಯ ಸಮಸ್ಯೆಗಳ ನೀತಿಗಳು ಮತ್ತು ಸಂಬಂಧಿತ ನಿರ್ಧಾರಗಳನ್ನು ಮತ್ತು ಉದ್ಯಮ ಸಂಸ್ಥೆಗಳಲ್ಲಿ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಡಾ.ಪ್ರೀತ ರೆಡ್ಡಿಯ ನಾಯಕತ್ವದಲ್ಲಿ ಅಪೋಲೋ ಆಸ್ಪತ್ರೆಯೂ, 'ಒಂದು ಮಗುವಿನ ಹೃದಯ ಉಳಿಸಿ' ಎಂಬ ೫೦೦೦ ಶಸ್ತ್ರಚಿಕಿತ್ಸೆಗಳನ್ನು ಹೃದಯದ ರೋಗಗಳಿಂದ ಬಳಲುತ್ತಿದ್ದ ಮಕ್ಕಳಿಗೆ ಶಸ್ತ್ರಚಿಕಿತ್ಸೆಯನ್ನು ಕೊಡಲಾಗಿತ್ತು. ಡಾ.ಪ್ರೀತ ರೆಡ್ಡಿ ಅವರು ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಸಮಗ್ರ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿ ಅದಕ್ಕೆ ಅವರೇ ಜವಾಬ್ದಾರಿಯನ್ನು ವಹಸಿಕೊಂಡರು. ಹಾಗೂ ಅಪೋಲೋ ಈಶ ವಿದ್ಯಾ ಗ್ರಾಮೀಣ ಸ್ಕೂಲ್ನನ್ನು ಅಭಿವೃದ್ಧಿಸಿದರು. ತನ್ನ ಅತ್ಯುತ್ತಮ ಕೆಲಸ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕೊಡಿಗೆಗಾಗಿ ಡಾ. ಪ್ರೀತ ರೆಡ್ಡಿ ಅವರು ಫಾರ್ಚೂನ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ ೫೦ ಪ್ರಭಾವಶಾಲಿ ವ್ಯಾಪಾರಿ ಮಹಿಳೆಯರು ಸತತ ಮೂರು ವರ್ಷಗಳಿಂದ ಅಂದರೆ ೨೦೦೯, ೨೦೧೦ ಮತ್ತು ೨೦೧೧ನಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜೊತೆಗೆ, ೨೦೧೧, ೨೦೧೨ ಮತ್ತು ೨೦೧೩ ರಲ್ಲಿ ಅತ್ಯಂತ ಶಕ್ತಿಶಾಲಿ ಮಹಿಳಾ ಉದ್ಯಮಿ ಎಂದು ಫಾರ್ಚೂನ್ ಭಾರತ ಸಂಗ್ರಹಿಸಿದ ಪಟ್ಟಿಯಲ್ಲಿ ಸೇರಿಸಲಾಯಿತು. ಡಾ.ಪ್ರೀತ ರೆಡ್ಡಿ ಅವರು ಆರೋಗ್ಯ ಮತ್ತು ಸಾಮಾಜಿಕ ವಿಜ್ಞಾನದ ಮುಂಜಾಗೃತೆಯ ಕೊಡುಗೆಗಾಗಿ ಅವರಿಗೆ ಐತಿಹಾಸಿಕ ರಿಸರ್ಚ್ ಲೊಯೋಲಾ ಫಾರಂನಿಂದ ಜೀವಮಾನಸಾಧನೆ ಪ್ರಶಸ್ತಿಯನ್ನು ನೀಡಲಾಯಿತು.
ಅವರ ಕಲಿಕೆ ಹಾಗೂ ನಂಬಿಕೆಗಳು
ಬದಲಾಯಿಸಿನಾವು ಜೀವನದಲ್ಲಿ ಎಷ್ಟೇ ಯಶಸ್ವಿಯಾದರು ಸಮಾಜದಲ್ಲಿರುವ ಅನಾಥ ಹಾಗೂ ಬಡವರ ಬಗ್ಗೆ ಯೋಚಿಸಬೇಕು. ಜೊತೆಗೆ, ನಾವು ನಮ್ಮ ಕನಸನ್ನು ಹಗೂ ಸವಾಲುಗಳನ್ನು ಎದುರಿಸಬೇಕು ಹಾಗೂ ನಮ್ಮ ಗುರಿಯನ್ನು ಮುಟ್ಟಬೇಕು.
ಉಲ್ಲೇಖ
ಬದಲಾಯಿಸಿ- ↑ Preetha Reddy at the World Economic Forum on India 2012.jpg
- ↑ "ಆರ್ಕೈವ್ ನಕಲು". Archived from the original on 2016-09-27. Retrieved 2016-09-16.
- ↑ "ಆರ್ಕೈವ್ ನಕಲು". Archived from the original on 2016-06-08. Retrieved 2016-09-16.