ಠೇವಣಿ ಎಂದರೆ ಯಾವುದೇ ಸಂಸ್ಥೆಯಲ್ಲಿ ಇರಿಸಲಾದ ವಿತ್ತೀಯ ಮೊತ್ತ.

ಠೇವಣಿಯು ಯಾರಿಂದ ಇರಿಸಲ್ಪಟ್ಟಿರುತ್ತದೆಯೊ ಆ ಪಕ್ಷದ (ವ್ಯಕ್ತಿ ಅಥವಾ ಸಂಸ್ಥೆ) ಜಮಾ ಆಗಿರುತ್ತದೆ, ಮತ್ತು ಅದನ್ನು ಹಿಂದೆ ತೆಗೆದುಕೊಳ್ಳಬಹುದು (ವಾಪಸು ತೆಗೆದುಕೊಳ್ಳುವುದು), ಯಾವುದೋ ಇತರ ಪಕ್ಷಕ್ಕೆ ಹಸ್ತಾಂತರಿಸಬಹುದು, ಅಥವಾ ಮುಂದಿನ ದಿನಾಂಕದಲ್ಲಿ ಖರೀದಿಗೆ ಬಳಸಬಹುದು.

ಈ ಹಣಕಾಸು ಪರಿಕಲ್ಪನೆಯನ್ನು ಹಲವುವೇಳೆ ಬ್ಯಾಂಕ್‍ಗಳ ಸಂಬಂಧ ಬಳಸಲಾಗುತ್ತದೆ, ಏಕೆಂದರೆ ಬ್ಯಾಂಕ್‍ಗಳಲ್ಲಿ ಠೇವಣಿಗಳು ಸಾಮಾನ್ಯವಾಗಿ ಹಣ ಬರುವ ಮುಖ್ಯ ಮೂಲವಾಗಿರುತ್ತವೆ.

ಬಗೆಗಳು

ಬದಲಾಯಿಸಿ

ಠೇವಣಿಗಳ ಬಗೆಗಳೆಂದರೆ:

  • ವಹಿವಾಟು ಖಾತೆ (ದೇಶದನುಸಾರ ಚೆಕಿಂಗ್ ಖಾತೆ ಅಥವಾ ಚಾಲ್ತಿ ಖಾತೆ), ಠೇವಣಿದಾರನಿಗೆ ಹಣವನ್ನು ಯಾವುದೇ ಸಮಯದಲ್ಲಿ ಬಳಸಲು ಹಕ್ಕಿರುತ್ತದೆ, ಕೆಲವೊಮ್ಮೆ ಅಲ್ಪ ನೋಟೀಸು ಅವಧಿಗಳಿಗೆ ಒಪ್ಪಲಾಗುತ್ತದೆ; ಕಾಲ್ ಡಿಪಾಸಿಟ್ ಅಥವಾ ಸೈಟ್ ಡಿಪಾಸಿಟ್ ಎಂದೂ ಕರೆಯಲ್ಪಡುತ್ತದೆ
  • ಸ್ಥಿರಾವಧಿಯ ಠೇವಣಿ (ಅಥವಾ ಕಾಲ ಠೇವಣಿ), ಇವು ನಿಶ್ಚಿತ ಅವಧಿ ಮತ್ತು ನಿರ್ದಿಷ್ಟ ಬಡ್ಡಿ ದರವನ್ನು ಹೊಂದಿರುತ್ತವೆ[]
  • ರಾತ್ರೋರಾತ್ರಿಯ ಸಾಲ, ಸಾಮಾನ್ಯವಾಗಿ ಮಧ್ಯಾಹ್ನದಿಂದ ಮಧ್ಯಾಹ್ನದ ವರೆಗೆ ನಡೆಯುತ್ತದೆ, ಮತ್ತು ವಿಶೇಷ ದರವನ್ನು ಬಳಸುತ್ತದೆ. ಇದರ ಮುಖ್ಯ ಉದ್ದೇಶ ಭದ್ರತೆಯಾಗಿ ಒದಗಿಸುವುದು ಅಥವಾ ಭಾಗಶಃ ಪಾವತಿಯಾಗಿ ಒದಗಿಸುವುದು.

ಉಲ್ಲೇಖಗಳು

ಬದಲಾಯಿಸಿ
  1. term deposit, Investopedia, accessed 2012-05-14.
  2. [೧], Deposit your trust in Fixed Deposits, siliconindia.com


"https://kn.wikipedia.org/w/index.php?title=ಠೇವಣಿ&oldid=842153" ಇಂದ ಪಡೆಯಲ್ಪಟ್ಟಿದೆ